ಬೇಸಿಗೆ ಬರುತ್ತಿದ್ದಂತೆ ಕಾಟನ್‌ ಹಾಗೂ ತೆಳು ಉಡುಗೆಗಳ ಮಹತ್ವ ಹೆಚ್ಚುತ್ತದೆ. ಇದರ ಬಣ್ಣಗಳಿಗೂ ತನ್ನದೇ ಆದ ಮಹತ್ವವಿದೆ. ಬನ್ನಿ, ಈ ಸಲದ ಬೇಸಿಗೆಗೆ ಯಾವ ಬಣ್ಣಗಳು ನಿಮಗೆ ಕೂಲ್‌ಫ್ರೆಶ್‌ನೆಸ್‌ ನೀಡುತ್ತವೆ ಎಂದು ಗಮನಿಸೋಣ :

ಬೇಸಿಗೆಯ ಕಾಲದ ಉಡುಗೆಗಳನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ. ಉಷ್ಣತೆಯ ಅಂದರೆ ವಾರ್ಮ್ ಟೋನಿನ, ತಂಪಾದ ಅಂದರೆ ಕೂಲ್‌ಟೋನಿನ, ನ್ಯಾಚುರಲ್ ಹಾಗೂ ಸೌಮ್ಯ ಟೋನ್‌ನ ಬಣ್ಣಗಳು.

ವಾರ್ಮ್ ಟೋನ್

ನೀವು ಯಾವುದೇ ಫಂಕ್ಷನ್‌ ಅಥವಾ ಪಾರ್ಟಿಯಲ್ಲಿ ಹಾಟ್‌ ಆಗಿ ಕಂಗೊಳಿಸ ಬಯಸಿದರೆ ಆಗ ನೀವು ಗೋಲ್ಡನ್‌, ಹಳದಿ, ವಾಟರ್‌ಮೆಲನ್‌, ಚೆರ್ರಿ, ರೆಡ್‌, ಆರೆಂಜ್‌ ಅಥವಾ ದಟ್ಟ ಕೇಸರಿ ಬಣ್ಣದ ಉಡುಗೆಗಳನ್ನು ಧರಿಸಿ ಇನ್ನಷ್ಟು ಹಾಟ್‌ ಆಗಿ ಕಾಣಿಸಬಹುದು. ಹಗಲಿನ ಸಮಾರಂಭಕ್ಕಿಂತ ರಾತ್ರಿಯ ಪಾರ್ಟಿಗಳಿಗೇ ಇವು ಹೆಚ್ಚು ಹಿತಕರ.

ಕೂಲ್ಟೋನ್

ಬೆಂಕಿಯಂಥ ಬಿಸಿಲಿನಿಂದ ದಹಿಸಿ ಹೋಗುತ್ತಿರುವಾಗ ಕೂಲ್ ‌ಆಗಿ ಕಾಣಿಸಿಕೊಳ್ಳಲು ಯಾರಿಗೆ ತಾನೇ ಇಷ್ಟವಿಲ್ಲ? ಫ್ರೆಶ್‌ಕೂಲ್ ‌ಆಗಿ ಕಂಡುಬರಲು ನೀವು ಲೆಮನ್‌ ಕಲರ್‌, ಆಕಾಶ ನೀಲಿ, ಹಸಿರು, ಮೆಹೆಂದಿ ಅಥವಾ ನೇವಿ ಬ್ಲೂ ಬಣ್ಣದ ಉಡುಗೆ ಧರಿಸಿ, ನೀವು ಮಾತ್ರವಲ್ಲದೆ ಇತರರನ್ನೂ ಕೂಲ್ ‌ಆಗಿ ಇಡಬಹುದು.

ನ್ಯಾಚುರಲ್ ಟೋನ್

ಈ ನೈಸರ್ಗಿಕ ಬಣ್ಣಗಳ ಉಡುಗೆಗಳು ಸಹ ನಿಮ್ಮನ್ನು ಬೇಸಿಗೆಯಲ್ಲಿ ತಂಪಾಗಿಡಲು ಬಲು ಸಹಾಯಕ. ಬಿಳಿ, ಖಾಕಿ, ಹನೀ, ರಸ್ಟ್, ಬೂದು ಇತ್ಯಾದಿಗಳು ನ್ಯಾಚುರಲ್ ಕಲರ್ಸ್‌ ಎನಿಸುತ್ತವೆ. ಈ ಬಣ್ಣದ ಉಡುಗೆಗಳನ್ನು ಧರಿಸಿದರೆ ನೀವು ಫ್ರೆಶ್‌ ಅನಿಸುತ್ತೀರಿ.

ಸೌಮ್ಯ ಟೋನ್

ಬೇಸಿಗೆಯಲ್ಲಿ ಎಲ್ಲರಿಗೂ ಸೌಮ್ಯ ಬಣ್ಣಗಳ ಲೂಸ್‌ ಫಿಟಿಂಗ್ಸ್ ಧರಿಸಲು ಇಷ್ಟ. ಸೌಮ್ಯ ಬಣ್ಣದ ವಸ್ತ್ರಗಳು ಸಹ ತಂಪಿನ ಅನುಭವ ನೀಡುತ್ತವೆ. ಅಚ್ಚ ಬಿಳಿ, ಬಟರ್‌ ಕ್ರೀಂ, ಪೀಚ್‌, ಆಕಾಶ ನೀಲಿ, ಗುಲಾಬಿ ಇತ್ಯಾದಿ ಬಣ್ಣದ ಡ್ರೆಸ್‌ ಈ ಬೇಸಿಗೆಗೆ ಹೆಚ್ಚು ಅನುಕೂಲಕರ.

ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಎಲ್ಲರೂ ಲೈಟ್‌ ಕಲರ್‌ನ ಉಡುಗೆಗಳನ್ನೇ ಬಯಸುತ್ತಾರೆ. ಆಗ ಸಹಜವಾಗಿ ಅವುಗಳಿಂದ ನಮ್ಮ ದೇಹಕ್ಕೆ ಹೆಚ್ಚು ತಂಪು ದೊರಕಿದಂತೆ ಅನಿಸುತ್ತದೆ. ಕಪ್ಪು ಅಥವಾ ಇನ್ನಾವುದೇ ಡಾರ್ಕ್‌ ಕಲರ್‌ನ ಉಡುಗೆಗಳು ಉಷ್ಣತೆಯನ್ನು ಹೆಚ್ಚಿಸಿದ ಅನುಭವ ನೀಡುತ್ತವೆ, ಇದರಿಂದ ಸಹಜವಾಗಿ ನಮಗೆ ಹೆಚ್ಚು ಸೆಖೆ, ಆಯಾಸ ಎನಿಸುತ್ತದೆ.

ಆದ್ದರಿಂದ ಬೇಸಿಗೆಯಲ್ಲಿ ಇಂಥ ಬಣ್ಣಗಳು ಬೇಡ. ಮದುವೆ ಸಮಾರಂಭ ಅಥವಾ ಪಾರ್ಟಿ ಇದ್ದರೆ, ಸಮ್ಮರ್‌ ಕೂಲ್ ಫಾಬ್ರಿಕ್ಸ್ ನ್ನೇ ಬಳಸಿರಿ. ಕಾಟನ್‌, ಲಿನೆನ್‌, ಬಟರ್‌ ಕ್ರೇಪ್‌ ಅಥವಾ ಜಾರ್ಜೆಟ್‌ನ ಉಡುಗೆಗಳು ಸೂಕ್ತವಾಗುತ್ತವೆ. ಯಾವುದೇ ಗ್ರಾಂಡ್‌ ಪಾರ್ಟಿಯಲ್ಲಿ ರಿಚ್‌ ಲುಕ್ಸ್ ಇರಲಿ ಎಂದು ನೀವು ಬಯಸಿದರೆ, ಉಡುಗೆಗಳ ಬಣ್ಣ ಆದಷ್ಟೂ ತೆಳು ಹಾಗೂ ಬಟ್ಟೆ ಮೃದು ಆಗಿರಬೇಕೆಂದು ಮರೆಯದಿರಿ. ಒಂದು ಪಕ್ಷ ಗಾಢ ಬಣ್ಣದ ಉಡುಗೆಗಳು ಅತಿ ಅಗತ್ಯ ಎನಿಸಿದರೆ, ಅವುಗಳ ಫ್ಯಾಬ್ರಿಕ್‌ನತ್ತಲೂ ಗಮನವಿರಲಿ. ಗಾಢ ಬಣ್ಣದ ಹತ್ತಿ ಮತ್ತು ತೆಳು ಬಟ್ಟೆಗಳು ಲೂಸ್‌ ಫಿಟಿಂಗ್ಸ್ ಹೊಂದಿದ್ದರೆ, ಬೇಸಿಗೆಯ ಧಗೆ ನಿಮ್ಮನ್ನು ಹಿಂಸಿಸದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ