ಸಾಮಾನ್ಯವಾಗಿ 2-3 ವರ್ಷಗಳಿಗೊಮ್ಮೆ ಆಗುವ ವರ್ಗಾವಣೆಯಿಂದಾಗಿ ಸೀಮಾ ಸುಮಾರು ಊರು, ನಗರಗಳನ್ನು ಸುತ್ತಾಡಿಬಿಟ್ಟಿದ್ದಾಳೆ. ಪ್ರತಿ ಸಲ ಡ್ರೆಸ್ಸಿಂಗ್‌ ಸೆನ್ಸ್ ವಿಷಯವಾಗಿ ತಲೆ ಕೆಡಿಸಿಕೊಳ್ಳುತ್ತಾಳೆ. ಊರಿನವರ ಲಹರಿಗೆ ಹೊಂದುವಂತೆ ಏನನ್ನು ಧರಿಸುವುದು ಏನನ್ನು ಬಿಡುವುದು? ನಿಮಗೂ ಇಂಥದೇ ಅನುಭವ ಆಗಿದೆಯೇ? ನೀವು ಬೆಂಗಳೂರು, ಮಂಗಳೂರು,  ಮೈಸೂರು, ಮುಂಬೈ, ಚೆನ್ನೈನಂಥ ಮಹಾನಗರಗಳಿಗೆ ಸೇರಿದವರಾದರೆ ಯಾವುದೇ ಸಂಕೋಚವಿಲ್ಲದೆ ಮನಸ್ಸಿಗೆ ಹಿಡಿಸಿದ ಉಡುಗೆ ಧರಿಸಬಹುದು. ಆದರೆ ಸಣ್ಣಪುಟ್ಟ ಊರು ನಗರಗಳಿಗೆ ಸೇರಿದವರಾದರೆ ಅಲ್ಲಿನ ವಾತಾವರಣ, ರೀತಿ ರಿವಾಜು, ಜನರ ಮನೋಭಾವ ಎಲ್ಲವನ್ನೂ ಗಮನಿಸಬೇಕಾಗುತ್ತದೆ. ಕೇವಲ ಸೀರೆ, ಚೂಡೀದಾರ್‌ ಅಷ್ಟೇನಾ ಅಥವಾ ಜೀನ್ಸ್, ಗೌನ್ ನಡೆಯುತ್ತದಾ?

ಎಷ್ಟೋ ಕಡೆ ಇಂದಿಗೂ ಕೇವಲ ಸೀರೆ ಉಡುವ ಮತ್ತು ಚೂಡೀದಾರ್‌ ಹಾಕುವ ಕ್ರಮ ಮಾತ್ರ ಇದೆ. ಅಂಥ ಕಡೆ ಬೆರಳೆಣಿಕೆಯಷ್ಟು ಕಾಲೇಜು ಕಿಶೋರಿಯರು ಮಾತ್ರವೇ ಜೀನ್ಸ್, ಟಾಪ್‌ ಧರಿಸುತ್ತಾರೆ. 80, 90ರ ದಶಕಕ್ಕೆ ಹೋಲಿಸಿದಾಗ ಈಗ ಎಷ್ಟೋ ಸುಧಾರಣೆಗಳಾಗಿವೆ ಎನ್ನಬಹುದು. ಈಗೆಲ್ಲ ಅಂಥ ಕಡೆ ಸಹ ವ್ಯತ್ಯಾಸ ಕಂಡುಬರುತ್ತಿದೆ. ಲೆಗ್ಗಿಂಗ್ಸ್ ಮೇಲೆ ಕುರ್ತಿ, ಹುಡುಗಿಯರು ಜೀನ್ಸ್ ಟಾಪ್‌, ಟೈಟ್‌ ಫಿಟ್ಟಿಂಗ್ಸ್ ಇತ್ಯಾದಿ ಬಳಸುವುದು ಮಾಮೂಲಿ ಆಗಿದೆ. ಒಟ್ಟಾರೆ ಹೇಳಲೇಬೇಕೆಂದರೆ ತೀರ 90ರ ದಶಕದ ಮಡಿವಂತಿಕೆ ಈಗಿಲ್ಲ, ಫ್ಯಾಷನ್‌ ಎಲ್ಲಾ ನಿಟ್ಟಿನಲ್ಲಿಯೂ ಮಿಂಚುತ್ತಿದೆ ಎನ್ನಬಹುದು.

ಏನನ್ನು ಧರಿಸುವುದು?

ದೇಶ ಇದ್ದಂತೆ ವೇಷ ಎಂಬ ನಾಣ್ಣುಡಿ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ಇಡೀ ಊರಿನ ಹೆಂಗಸರೆಲ್ಲ ಸೀರೆ ಉಟ್ಟೇ ಓಡಾಡುತ್ತಾರೆ ಎಂದರೆ ಹೊಸದಾಗಿ ಆ ಊರಿಗೆ ಬಂದ ನೀವು ಸಹ ಅದೇ ರೀತಿ ಇರಬೇಕು ಅಂತೇನಿಲ್ಲ. ಮುಖ್ಯವಾಗಿ ಸೀರೆ ಬದಲಿಗೆ ನೀವು ಇಲ್ಲಿ  ಸಲ್ವಾರ್‌ ಕಮೀಜ್‌, ಚೂಡೀದಾರ್‌, ಲೆಗ್ಗಿಂಗ್ಸ್, ಪ್ಯಾರೆಲಲ್ಸ್‌ ಇತ್ಯಾದಿ ಧರಿಸಲು ಹಿಂಜರಿಯದಿರಿ. ಇದನ್ನು ನೋಡಿದ ಮಂದಿ ಮಾರುಹೋಗಿ ಒಬ್ಬರನ್ನೊಬ್ಬರು ಅನುಕರಿಸುತ್ತಾರೆ. ಇದನ್ನು ನೋಡಿದ ದೂರದ ಏರಿಯಾದ ಹೆಂಗಸರೂ ಸಹ ಮನದಲ್ಲೇ ಮಂಡಿಗೆ ಮೆಲ್ಲುತ್ತಾ ತಾವೆಂದು ಇದನ್ನು ಧರಿಸುವುದು ಎಂದುಕೊಳ್ಳುತ್ತಾರೆ. ಕ್ರಮೇಣ ಆ ಫ್ಯಾಷನ್‌ ಎಲ್ಲೆಡೆ ಹರಡಿಕೊಳ್ಳುತ್ತದೆ.

ಇಂಥ ಸಣ್ಣ ಊರು ನಗರಗಳಿಗೆ ಸೇರಿದವರಾದ ನೀವು ಯಾವುದಾದರೂ ಮದುವೆಗೆ ಹೊರಟಿದ್ದರೆ, ರೇಷ್ಮೆ ಸೀರೆಗಿಂತ ಅಚ್ಚುಕಟ್ಟಾದುದು ಮತ್ತೊಂದಿಲ್ಲ. ಹೀಗಿರುವಾಗ ನೀವು ಸಹ ಎಲ್ಲರಂತೆ ಸಾಂಪ್ರದಾಯಿಕವಾಗಿ ಸಿದ್ಧಗೊಂಡು ಎಲ್ಲರಿಗೂ ಫ್ಯಾಷನ್‌ನ ಟಕ್ಕರ್‌ ಕೊಡಬಹುದು. ಪ್ರತಿದಿನ ಸೀರೆ, ಚೂಡೀದಾರ್‌ ಧರಿಸುವ ಈ ಮಹಿಳೆಯರು ನಿಮ್ಮ ಈ ಅಪ್‌ ಟು ಡೇಟ್‌ ರೇಷ್ಮೆ ಸೀರೆ ಕಂಡು ಬೆರಗಾಗುವರು. ಹೀಗೆಯೇ ಇತರ ಸಣ್ಣಪುಟ್ಟ ಫಂಕ್ಷನ್‌ಗಳಿಗೆ ಪ್ಯಾರೆಲಲ್ಸ್‌, ಲೆಗ್ಗಿಂಗ್ಸ್, ಸಲ್ವಾರ್‌ ಸೂಟ್‌ ಧರಿಸಿ, ಜೊತೆಗೆ ದುಪಟ್ಟಾ ಇಳಿಬಿಟ್ಟು ಪಾಲ್ಗೊಳ್ಳಬಹುದು. ವಿಭಿನ್ನತೆಗಾಗಿ ದುಪಟ್ಟಾವನ್ನು ತಲೆ ಮೇಲೆ ನೀಟಾಗಿ ಕವರ್‌ ಮಾಡುವಂತೆ ಸುತ್ತಿ, ಪಿನ್ನುಗಳಿಂದ ಫಿಕ್ಸ್ ಮಾಡಿ. ಹೀಗೆ ಮಾಡುವುದರಿಂದ ತಲೆಯ ಮೇಲಿಂದ ಸೆರಗು ಸರಿಯುವುದೂ ಇಲ್ಲ, ನಿಮ್ಮ ಈ ಹೊಸ ಫ್ಯಾಷನ್‌ ಕುರಿತು ಯಾರೂ ಆಕ್ಷೇಪಿಸುವುದೂ ಇಲ್ಲ....!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ