ಇಂದಿನ ನವನವೀನ ಫ್ಯಾಷನ್‌ ಯುಗದಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬದಲಾಗುತ್ತಲೇ  ಇರುತ್ತವೆ. ಹೀಗಾಗಿ ತಮ್ಮನ್ನು ತಾವು ಅಪ್ ಡೇಟೆಡ್‌  ಅಟ್‌ಮೋಸ್ಟ್ ಸ್ಟೈಲಿಶ್‌ ಆಗಿ ಪ್ರಸ್ತುತಪಡಿಸವ ಬಯಸುವವರು, ಬ್ಲೌಸ್‌ ವಿಷಯ ಫ್ಲಾಂಟ್‌ ಮಾಡದಿರುತ್ತಾರೆಯೇ…. ಅದೂ  ಬಹಳಷ್ಟು ಕಂಫರ್ಟ್‌ ಗ್ಲಾಮರ್‌ ತುಂಬಿರುವಾಗ….? ವಿಸ್ಟಾರ್‌ನ ಈ ಕಾಮ್ಛಿ ಬ್ಲೌಸ್‌ ನಿಮ್ಮಂಥರಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ಕ್ಯಾಶ್‌ನಿಂದ ಕ್ಯಾಬ್‌ವರೆಗೂ ಎಲ್ಲ ಇನ್‌ಸ್ಟೆಂಟ್‌ ಆಗಿರುವಾಗ, ಗಡಿಬಿಡಿಯಲ್ಲಿ ಸದಾ ಬಿಝಿ ಆಗಿರುವ ನವ ತರುಣಿಯರೇಕೆ ಒಂದು ಬ್ಲೌಸ್‌ ಹೊಲಿಸಲು ವಾರಗಟ್ಟಲೇ ಕಾಯಬೇಕು? ಹೀಗಾಗಿಯೇ ವಿಸ್ಟಾರ್‌ನ ಕಾಮ್ಛಿ ಬ್ಲೌಸ್‌ ಮಾರ್ಕೆಟ್‌ನ ಈ ಗ್ಯಾಪ್‌ನ್ನು ತುಂಬುತ್ತಿದೆ, ಮಹಿಳೆಯರಿಗೆ ಅಚ್ಚುಮೆಚ್ಚಾಗುತ್ತಿದೆ. ಟೇಲರ್‌ ಮೇಡ್‌ ಬ್ಲೌಸ್‌ಗಾಗಿ ಅಲ್ಲಿ ಇಲ್ಲಿ ತಿಣುಕಾಡಬೇಕಾದ ಅಗತ್ಯವಿಲ್ಲ, ಕಾಯುವಿಕೆ ಅಂತೂ ಇಲ್ಲವೇ ಇಲ್ಲ! ನೀವು ನೆನೆದ ಕ್ಷಣದಲ್ಲಿ, ಬೇಕೆನಿಸಿದ ಕಡೆ ನಿಮ್ಮ ರೆಡಿಮೇಡ್‌ ಬ್ಲೌಸ್‌ ಇದೀಗ ರೆಡಿ!

ವಿಸ್ಟಾರ್‌ನ ಕಾಮ್ಛಿ ಬ್ಲೌಸ್‌ ಇದೀಗ ಮೋಸ್ಟ್ ಕಂಫರ್ಟೆಬಲ್ ಸ್ಟ್ರೆಚೆಬಲ್ ಮೆಟೀರಿಯಲ್‌ನಿಂದ ರೂಪುಗೊಂಡಿದೆ, ಅದರಲ್ಲಿನ ಸ್ಪ್ಯಾಂಡೆಕ್ಸ್ ಕಂಟೆಂಟ್‌ಗಾಗಿ ಧರಿಸಿಯೇ ಆನಂದಿಸಬೇಕು.

ಒಂದು ಅನುಕೂಲಕರ ಕ್ಲೋಸ್ಡ್ ನೆಕ್‌ ಬ್ಯಾಕ್‌, ರಿಲ್ಯಾಕ್ಸ್ಡ್ ಸ್ಕೂಪ್‌ ಫ್ರಂಟ್‌ ನೆಕ್‌ ಅಥವಾ ತ್ರೀಕ್ವಾರ್ಟರ್‌ ಸ್ಲೀವ್ ಇರಲಿ, ಈ ರೆಡಿಮೇಡ್‌ ಟಾಪ್‌ ನಿಮಗೆ ಅತ್ಯಾಧುನಿಕ ಗ್ಲಾಮರಸ್‌ ಟಚ್‌ ನೀಡಿ, ನಿಮ್ಮ ಎಂದಿನ ಸಾಂಪ್ರದಾಯಿಕ ಉಡುಗೆಯಾದ ಸೀರೆಗೆ ಒಂದು ಅದ್ಭುತ ಹೊಚ್ಚ ಹೊಸ ಟ್ವಿಸ್ಟ್ ನೀಡಿ ಅತಿ ಸ್ಟೈಲಿಶ್‌ ಟ್ರೆಂಡಿ ಲುಕ್ಸ್ ಒದಗಿಸಲಿದೆ. ಕಾಮ್ಛಿ ಬ್ಲೌಸ್‌ನ್ನು ಇಂದಿನ ಅತ್ಯಾಧುನಿಕ ಹೊಸ ಪೀಳಿಗೆಯ ಅಚ್ಚುಮೆಚ್ಚಿನ ಆಯ್ಕೆಗಳಾದ ಮಾಡರ್ನ್‌ ಜ್ಯಾಕೆಟ್ಸ್, ಫ್ಯಾಷನ್‌ ಔಟ್‌ಫಿಟ್ಸ್ ಅಥವಾ ಹೈ ವೇಯ್ಸ್ಟ್ ಬಾಟಮ್ಸ್ ಗೂ ಹೊಂದಿಸಬಹುದಾಗಿದೆ.

ಕಾಮ್ಛಿ ಬ್ಲೌಸ್‌ ಬಳಸುವವರ ದೇಹದ ಆಕಾರಕ್ಕೆ ತಕ್ಕಂತೆ ಸ್ಟ್ರೆಚೆಬಲ್ ಗುಣ ಹೊಂದಿರುವುದರಿಂದ, ಅದು ಸದಾ ಸರ್ವದಾ ಸ್ನಗ್‌ಫಿಟ್‌ ನೀಡುವಲ್ಲಿ ಯಶಸ್ವಿ ಎನಿಸಿದೆ. ನಿಜಕ್ಕೂ ಇದು ಎಲ್ಲಾ ವಿಧದಲ್ಲೂ `ಮ್ಯಾಜಿಕ್‌ ಬ್ಲೌಸ್‌’ ಎನಿಸಿದೆ. ಹೀಗಾಗಿ ಕಾಮ್ಛಿ ಬ್ಲೌಸ್‌ ನಿಮ್ಮ ಎಲ್ಲಾ ಸಡಗರ ಸಂಭ್ರಮ ಹೆಚ್ಚಿಸುವ ಸಾಂಪ್ರದಾಯಿಕ ಸಮಾರಂಭಗಳಾದ ಮದುವೆ, ಮುಂಜಿ, ಲಗ್ನಪತ್ರಿಕೆ, ಆರತಕ್ಷತೆ ಅಥವಾ ಇನ್ನಾವುದೇ ಮಂಗಳಕರ ಶುಭಕಾರ್ಯಕ್ಕೆ ಧರಿಸಲು, ಸುವಾಸಿನಿಯರಿಗೆ ಉಡುಗೊರೆ ನೀಡಲು ಅತ್ಯಂತ ಸೂಕ್ತ ಆಯ್ಕೆ ಎನಿಸುತ್ತದೆ. ಇದು 2 ಮಾಡೆಲ್ಸ್, 4 ಸೈಜ್‌ ಹಾಗೂ ನಾನಾ ಬಗೆಯ ಕಲರ್ಸ್‌, ಶೇಡ್‌ಗಳಲ್ಲಿ ಲಭ್ಯ.

ವಿಸ್ಟಾರ್‌ನ ಕಾಮ್ಛಿ ಬ್ಲೌಸ್‌ಗಳು ದ. ಭಾರತದ ಎಲ್ಲಾ ಪ್ರಮುಖ ನಗರಗಳ ವಿಸ್ಟಾರ್‌ ಕಾನ್‌ಸೆಪ್ಟ್ ಸ್ಟೋರ್‌ಗಳು, ನಿಮ್ಮ ನೆಚ್ಚಿನ ಇತರೇ ಟೆಕ್ಸ್ ಟೈಲ್ಸ್‌ ಔಟ್‌ಲೆಟ್ಸ್ ಗಳಲ್ಲಿ ಸುಲಭ ಲಭ್ಯ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ