ಔಟ್‌ಫಿಟ್‌ ಮಾತ್ರವಲ್ಲ, ಆ್ಯಕ್ಸೆಸರೀಸ್‌ನ್ನೂ ಸಹ ನಿಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ನ್ನಾಗಿ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಅವುಗಳನ್ನು ಆರಿಸುವಾಗ ನಿಮ್ಮ ಔಟ್‌ಫಿಟ್‌ ಮತ್ತು ಪರ್ಸನಾಲಿಟಿಯನ್ನು ಗಮನದಲ್ಲಿರಿಸಿಕೊಳ್ಳಿ. 

ಬಾಲಿವುಡ್‌ನ ಅನೇಕ ನಾಯಕಿಯರು ಇಂತಹ ಆ್ಯಕ್ಸೆಸರೀಸ್‌ ಧರಿಸಿ ಮೋಹಕವಾಗಿ ಕಂಗೊಳಿಸುತ್ತಾರೆ. ನಿಮಗಾಗಿ ಆ್ಯಕ್ಸೆಸರೀಸ್‌ ಕೊಳ್ಳುವಾಗ ಈ ಅಂಶಗಳನ್ನು ಗಮನದಲ್ಲಿಡಿ :

ನೆಕ್‌ಪೀಸ್‌

ನಿಮ್ಮ ಜ್ಯೂವೆಲರಿ ಬಾಕ್ಸ್ ನಲ್ಲಿ ಬೇರೆ ಬೇರೆ ಸ್ಟೈಲ್‌ ಮತ್ತು ಶೇಪ್‌ನ ನೆಕ್‌ಪೀಸ್‌ಗಳನ್ನು ಇರಿಸಿಕೊಳ್ಳಿ. ಇವನ್ನು ಧರಿಸಿದ ಕೂಡಲೇ ನಿಮಗೆ ಸ್ಟೈಲಿಶ್‌ ಲುಕ್ಸ್ ಸಿಗುತ್ತದೆ.

- ಬ್ಲೌಸ್‌ ಮತ್ತು ಟೀಶರ್ಟ್‌ ಜೊತೆಗೆ ಲಾಂಗ್‌ ಲೆಂತ್‌ ನೆಕ್‌ಪೀಸ್‌ ಧರಿಸಿ.

- ಕಾಲರ್‌ವುಳ್ಳ  ಔಟ್‌ಫಿಟ್‌ನೊಂದಿಗೆ ಮುತ್ತಿನ ನೆಕ್‌ಪೀಸ್‌ ಧರಿಸಿ. ಇದು ಗ್ಲಾಮರಸ್‌ ಲುಕ್ಸ್ ನೀಡುತ್ತದೆ.

- ಎಲಿಗೆಂಟ್‌ ಲುಕ್ಸ್ ಗಾಗಿ ಸ್ಪಾರ್ಕ್‌ಲಿಂಗ್‌ ನೆಕ್‌ಲೇಸ್‌ ಸೆಟ್‌ ಖರೀದಿಸಿ. ಇದು ಗೌನ್‌, ಒನ್‌ಪೀಸ್‌ ಮತ್ತು ಆಫ್‌ಶೋಲ್ಡರ್‌ ಡ್ರೆಸ್‌ ಜೊತೆಗೆ ಚೆನ್ನಾಗಿ ಒಪ್ಪುತ್ತದೆ.

jacqueline-fernandez

- ಈಚಿನ ದಿನಗಳಲ್ಲಿ ಟ್ರೈಬಲ್ ನೆಕ್‌ಪೀಸ್‌ ಫ್ಯಾಷನ್‌ನಲ್ಲಿದೆ. ನೀವು ಅದನ್ನೂ ಧರಿಸಿ ನೋಡಬಹುದು.

- ಕಾಲೇಜ್‌ ಹುಡುಗಿಯ ಕಣ್ಸೆಳೆಯುವ ಲುಕ್ಸ್ ಗಾಗಿ 3-4 ನೆಕ್‌ಪೀಸ್‌ಗಳನ್ನು ಒಟ್ಟಿಗೆ ಧರಿಸಬಹುದು.

- ಫ್ಯಾಶನ್‌ ವೇರ್‌ನಲ್ಲಿ ಗಾರ್ಜಿಯಸ್‌ ಲುಕ್ಸ್ ಗಾಗಿ ಟೆಂಪಲ್ ಜ್ಯೂವೆಲರಿಯ ನೆಕ್‌ಪೀಸ್‌ ಧರಿಸಿ.

- ಎವರ್‌ಗ್ರೀನ್‌ ಬ್ಲ್ಯಾಕ್‌ ನೆಕ್‌ಪೀಸ್‌ ಎಲ್ಲ ಬಗೆಯ ಔಟ್‌ಫಿಟ್‌ಗಳಿಗೂ ಹೊಂದುತ್ತದೆ. ಇದನ್ನು ಕೊಳ್ಳಲು ಮರೆಯದಿರಿ.

- ನಿಯಾನ್‌ ಶೇಪ್‌ನ ನೆಕ್‌ಪೀಸ್‌ ಫ್ರೆಶ್‌ಲುಕ್‌ ನೀಡುತ್ತದೆ. ಇದರ ಕಲೆಕ್ಷನ್‌ ಸಹ ನಿಮ್ಮಲ್ಲಿರಲಿ.

Bollywood-style

ಇಯರ್‌ರಿಂಗ್ಸ್

ನಿಮಗೆ ನೆಕ್‌ಪೀಸ್‌ ಬೇಡವೆನಿಸಿದರೆ, ಕೇವಲ ಇಯರ್‌ರಿಂಗ್ಸ್ ಧರಿಸಿಯೂ ನೀವು ಸ್ಟೈಲಿಶ್‌ ಆಗಿ ಕಾಣಬಲ್ಲಿರಿ.

- ಬೋಲ್ಡ್ ಲುಕ್‌ಗಾಗಿ ದೊಡ್ಡದಾದ ಇಯರ್‌ರಿಂಗ್ಸ್ ಆರಿಸಿ.

- ಗೌನ್‌, ಡ್ರೆಸ್‌ ಮುಂತಾದವುಗಳ ಜೊತೆಗೆ ಡೈಮಂಡ್‌ ಅಥವಾ ಪರ್ಲ್ ಯ ದೊಡ್ಡ ಟಾಪ್ಸ್ ಧರಿಸಿ.

- ದಿನನಿತ್ಯದ ಉಡುಪಿನ ಜೊತೆ ಸಾಧಾರಣ ಅಳತೆಯ ಹ್ಯಾಂಗಿಂಗ್‌ ಇಯರ್‌ರಿಂಗ್ಸ್ ಧರಿಸಿ. ಇವು ಸ್ಟೈಲಿಶ್‌ ಆಗಿ ಕಾಣುತ್ತವೆ.

- ಶೋಲ್ಡರ್‌ ಲೆಂತ್‌ ಇಯರ್‌ರಿಂಗ್ಸ್ ತೊಟ್ಟಾಗ ನೀವು ಮೋಹಕವಾಗಿ ಕಾಣಬಲ್ಲಿರಿ.

- ಮಿಸ್‌ಮ್ಯಾಚ್‌ ಲುಕ್ಸ್ ಗಾಗಿ ವೆಸ್ಟರ್ನ್‌ವೇರ್‌ ಜೊತೆ ದೊಡ್ಡ ಝುಮುಕಿಗಳನ್ನು ಧರಿಸಿ.

- ಸೂಪರ್‌ ಸ್ಟೈಲಿಶ್‌ ಲುಕ್ಸ್ ಗಾಗಿ ಒಂದೇ ಕಿವಿಗೆ ಎಕ್ಸ್ ಟ್ರೀಮ್ ಲೆಂತ್‌ (ಭುಜದವರೆಗಿನ) ಇಯರ್‌ರಿಂಗ್‌ ಧರಿಸಿ.

- ಆಕರ್ಷಕ ಲುಕ್ಸ್ ಗಾಗಿ ಹಣ್ಣು, ಹೂವು ಅಥವಾ ಪ್ರಾಣಿಯ ಆಕಾರವುಳ್ಳ ಇಯರ್‌ರಿಂಗ್‌ ಧರಿಸಿ.

ಬ್ರೇಸ್‌ಲೆಟ್‌ (ಕಫ್‌)

ಕೈಗಳ ಸೌಂದರ್ಯವನ್ನು ಹೆಚ್ಚಿಸುವುದರ ಮೂಲಕ ನಿಮ್ಮ ಪರ್ಸನಾಲಿಟಿಗೂ ಮೆರುಗು ನೀಡಬಹುದು. ಇದಕ್ಕಾಗಿ ನಿಮ್ಮ ಜ್ಯೂವೆಲರಿ ಬಾಕ್ಸ್ ನಲ್ಲಿ ಬ್ರೇಸ್‌ಲೆಟ್‌ಗಳಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಿಕೊಡಿ.

- ಡೀಸೆಂಟ್‌ ಲುಕ್ಸ್ ಗೆ ಡೈಮಂಡ್‌ ಬ್ರೇಸ್‌ಲೆಟ್‌ ಧರಿಸಿ.

- ಡೆನಿಮ್ ಜೊತೆಗೆ ಲೆದರ್‌ನ ಕಫ್‌ ಬ್ರೇಸ್‌ಲೆಟ್‌ ಧರಿಸಬಹುದು.

- ಫ್ಪೆಶ್‌ ಲುಕ್ಸ್ ಗಾಗಿ ಬ್ರೈಟ್‌ ಶೇಡ್‌ನ ಬೀಡೆಡ್‌ ಬ್ರೇಸ್‌ಲೆಟ್‌ ಧರಿಸಿ.

- 3-4 ಬ್ರೇಸ್‌ಲೆಟ್‌ಗಳನ್ನು ಒಟ್ಟಿಗೆ ಧರಿಸುವುದರಿಂದಲೂ ಸ್ಟೈಲಿಶ್‌ ಲುಕ್‌ ಪಡೆಯಬಹುದು.

- ಗೋಲ್ಡ್ ಮತ್ತು ಸಿಲ್ವರ್‌ ಶೇಡ್‌ನ ಬ್ರೇಸ್‌ಲೆಟ್‌ಗಳು ನಿಮ್ಮ ಕಲೆಕ್ಷನ್‌ನಲ್ಲಿರಲಿ. ಇವು ಯಾವುದೇ ಡ್ರೆಸ್‌ನೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ