ಸಾಮಾನ್ಯವಾಗಿ ಅಡುಗೆ ಮಾಡುವಾಗ ಸಣ್ಣಪುಟ್ಟ ತಪ್ಪುಗಳು ಆಗುತ್ತಾ ಇರುತ್ತವೆ. ಅಂದರೆ, ಪಲ್ಯಕ್ಕೆ ಹೋಳು ಅರೆ ಬೆಂದಿರುವುದು, ಇಡ್ಲಿ-ಢೋಕ್ಲಾ ಸ್ಪಾಂಜ್‌ ತರಹ ಮೃದು ಆಗದಿರುವುದು, ದಾಲ್‌ ಮಾಡುವಾಗ ನೀರಸ ಎನಿಸುವುದು.... ಇತ್ಯಾದಿ. ಬನ್ನಿ, ಇದನ್ನು ಸರಿಪಡಿಸುವುದು ಹೇಗೆ ಎಂದು ನೋಡೋಣ.

ಸಾಮಗ್ರಿ ಒಂದೇ ಹದದಲ್ಲಿ ಬೇಯದಿರುವುದು : ತರಕಾರಿ, ಬೇಳೆ ಅಥವಾ ಕಾಳು ಒಂದೇ ಹದದಲ್ಲಿ ಬೇಯದಿರಲು ಅದಕ್ಕೆ ಬೆರೆಸಿದ ನೀರು ಅಥವಾ ಹೋಳು ಹೆಚ್ಚಿದ ವಿಧಾನ ಸಮರ್ಪಕ ಇಲ್ಲದಿರಬಹುದು. ಹೀಗಾದಾಗ ಹೋಳು ಕೆಲವು ಬೆಂದಿರುತ್ತವೆ, ಕೆಲವು ಬೇಯುವುದಿಲ್ಲ. ಹುರುಳಿಕಾಯಿ, ಗೋರಿಕಾಯಿಯಂಥ ಗಟ್ಟಿ ಪದಾರ್ಥಗಳನ್ನು ಕುಕ್ಕರ್‌ ಬಟ್ಟಲಿನ ತಳಭಾಗದಲ್ಲಿಯೂ ಎಲೆಕೋಸಿನಂಥ ಮೃದು ಭಾಗ ಮೇಲ್ಭಾಗದಲ್ಲಿಯೂ ಬರಲಿ.

ಬಳಸಿದ ಎಣ್ಣೆಯ ಸತತ ಮರುಬಳಕೆ : ಒಮ್ಮೆ  ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಕರಿಯಲು ಬಳಸಿದರೆ, ಅದರಿಂದ ಬೇರೆ ಬೇರೆ ವ್ಯಂಜನ ತಯಾರಿಸಿದರೆ, ವ್ಯಂಜನದ ರುಚಿಯೂ ಕೆಡುತ್ತದೆ, ನೋಡಲಿಕ್ಕೂ ಚೆನ್ನಾಗಿರುವುದಿಲ್ಲ. ಹೀಗಾಗದಂತೆ ಎಚ್ಚರವಹಿಸಿ. ಒಮ್ಮೆ ಕರಿದ ಎಣ್ಣೆಯನ್ನು ದೋಸೆ, ಚಪಾತಿ ತಯಾರಿಗೆ ಮಾತ್ರ ಬಳಸಿಕೊಳ್ಳಿ.

ವ್ಯಂಜನ ಬಿಸಿ ಮಾಡುವಾಗ ತಣ್ಣೀರಿನ ಬಳಕೆ : ಸಾಮಾನ್ಯವಾಗಿ ದಾಲ್‌, ಸಾಂಬಾರ್‌, ಕೂಟು, ಹುಳಿ, ಗೊಜ್ಜು ಇತ್ಯಾದಿ ಮರುಬಿಸಿ ಮಾಡುವಾಗ, ಅದು ಗಟ್ಟಿಯಾಗಿದೆ ಎಂದು ತಣ್ಣೀರು ಬೆರೆಸಿ ಬಿಸಿ ಮಾಡುತ್ತಾರೆ. ಇದು ಸರಿಯಲ್ಲ. ಇದರಿಂದ ರುಚಿಕರ ವ್ಯಂಜನ ರಸಹೀನ ಆಗುತ್ತದೆ. ಆದ್ದರಿಂದ ಇಂಥ ಗ್ರೇವಿಗಳನ್ನು ಬಿಸಿ ಮಾಡುವಾಗ ಅಗತ್ಯವಿದ್ದಷ್ಟು ಬಿಸಿ ನೀರು ಬೆರೆಸಿಯೇ ಇದನ್ನು ಬಿಸಿ ಮಾಡಬೇಕು. ಹಿಂದಿನ ರಾತ್ರಿಯಿಡೀ ಇದು ಫ್ರಿಜ್‌ನಲ್ಲಿದ್ದರೆ, ಮಾರನೇ ದಿನ ಇಂಗು, ಜೀರಿಗೆ, ಟೊಮೇಟೊ ಸೇರಿಸಿ ಒಗ್ಗರಣೆ ಕೊಟ್ಟು, ಅದಕ್ಕೆ ಮೇಲೆ ಬಿಸಿ ನೀರು ಹಾಕಿ ಕುದಿಸಿ ನಂತರ ಗ್ರೇವಿ ಬೆರೆಸಿದರೆ  ರುಚಿ ಕೊಡುತ್ತದೆ.

ಇಡ್ಲಿ-ಢೋಕ್ಲಾ ಮೃದುವಾಗಲಿಲ್ಲವೇ….? : ಸಾಮಾನ್ಯವಾಗಿ ರವೆ ಇಡ್ಲಿ ಅಥವಾ ಢೋಕ್ಲಾ ತಯಾರಿಸುವಾಗ, ಫ್ರಿಜ್‌ನಿಂದ ತೆಗೆದ ಮೊಸರನ್ನು ನೇರವಾಗಿ ಇದಕ್ಕೆ ಬೆರೆಸುತ್ತಾರೆ. ಹಾಗೆ ಮಾಡುವುದರಿಂದ ಇದು ಸ್ಪಾಂಜಿ ಆಗುವುದಿಲ್ಲ. ಫ್ರಿಜ್‌ನಿಂದ ತೆಗೆದ ಮೊಸರು, ಅರ್ಧ ಗಂಟೆ ಹೊರಗಿರಿಸಿ, 30 ಸೆಕೆಂಡ್‌ ಮೈಕ್ರೊವೇವ್‌ನಲ್ಲಿ ಬಿಸಿ ಮಾಡಿ ನಂತರ ಬಳಸುವುದು ಲೇಸು. (ಮೈಕ್ರೋವೇವ್ ಇಲ್ಲದಿದ್ದರೆ 45-50 ನಿಮಿಷ ಹೊರಗಿಡಿ).

ಸೊಪ್ಪು ಬ್ಲಾಂಚ್‌ ಮಾಡಿದ ನಂತರ ಹಿಂದಿನ ಸಹಜ ಬಣ್ಣ  ಉಳಿಯದೆ ಹೋದರೆ.... : ಎಲೆಕೋಸು ಅಥವಾ ಸೊಪ್ಪು ಇತ್ಯಾದಿ ಬ್ಲಾಂಚ್‌ (ಬಿಸಿ ನೀರಲ್ಲಿ 2 ನಿಮಿಷ ಕುದಿಸುವುದು) ಮಾಡಿದಾಗ, ತಕ್ಷಣ ಫ್ರಿಜ್‌ ನೀರಿಗೆ ಇದನ್ನು ರವಾನಿಸಿ. ಆಗ ಸಹಜ ಹಸಿರು ಬಣ್ಣ ಕುಂದುವುದಿಲ್ಲ.

ಮೈಕ್ರೋವೇವ್‌ನಲ್ಲಿ ಉಷ್ಣತೆ ಸೆಟ್‌ ಮಾಡಿದ ನಂತರ, ಅದನ್ನು ಆಫ್‌ ಮಾಡಿ ತಕ್ಷಣ ಅದರ ಬಾಗಿಲನ್ನು ತೆರೆದಿಡುವುದು : ಯಾವಾಗ ಮೈಕ್ರೋವೇವ್‌ನಲ್ಲಿ ಏನಾದರೂ ತಯಾರಿಸಿದಾಗ ಅಥವಾ ಬಿಸಿ ಮಾಡಿದಾಗ, ಅದು ಆಫ್‌ ಆದ ತಕ್ಷಣ ಅದರ ಬಾಗಿಲು ತೆರೆಯಲು ಹೋಗಬೇಡಿ. ಅದಾದ ಮೇಲೂ ಒಳಗಿನ ಆಹಾರ ಬಿಸಿ ಆಗುತ್ತಿರುತ್ತದೆ ಎಂಬುದು ನೆನಪಿರಲಿ. 5 ನಿಮಿಷ ಸ್ಟ್ಯಾಂಡರ್ಡ್‌ ಟೈಂ ಇರುತ್ತದೆ, ನಂತರ ಬಾಗಿಲು ತೆರೆಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ