ಭಾರತೀಯ ಅಡುಗೆಯಲ್ಲಿ ಮಸಾಲೆ ಪದಾರ್ಥಗಳ ಬಳಕೆ ಸಾವಿರಾರು ವರ್ಷಗಳಿಂದ ನಡೆದುಬಂದಿದೆ. ಇನ್ನು ಬಳಸುವ ಉದ್ದೇಶ, ಕೇವಲ ವ್ಯಂಜನಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಅವುಗಳಲ್ಲಿನ ಲೋಪದೋಷ ಅಡಗಿಸಿ, ಗುಣಾಂಶ ಹೆಚ್ಚಿಸುತ್ತವೆ. ಜೊತೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ತೊಂದರೆಗಳನ್ನೂ ನಿವಾರಿಸುವಲ್ಲಿ ಹಿರಿಯ ಪಾತ್ರ ವಹಿಸುತ್ತವೆ.

ಪ್ರಸ್ತುತ ಹೆಚ್ಚು ಹೆಲ್ತ್ ಕಾನ್ಶಿಯಸ್‌ ಆಗಿರುವ ಜನ ಸಂಬಾರ ಪದಾರ್ಥ, ಎಣ್ಣೆ ತುಪ್ಪದಂಥ ಜಿಡ್ಡಿನ ಸಾಮಗ್ರಿ ಬಳಸುವುದು ದಿನೇ ದಿನೇ ಕಡಿಮೆಯಾಗುತ್ತಿದೆ. ಕ್ಯಾಲೋರಿ ಪ್ರಮಾಣ ಹಾಗೂ ವ್ಯಂಜನಗಳ ಪೌಷ್ಟಿಕತೆ ಆಹಾರದ ಗುರುತಾಗಿದೆ. ಆದರೆ ನಿರಂತರ ನಡೆಯುತ್ತಿರುವ ಸಂಶೋಧನೆಗಳ ಪ್ರಕಾರ, ಯಾವುದೇ ಬಗೆಯ ಮಸಾಲೆಗಳನ್ನು ನಿಯಮಿತವಾಗಿ ನಮ್ಮ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಬಳಸುತ್ತಿದ್ದರೆ, ಅದರಿಂದೇನೂ ಹಾನಿಯಿಲ್ಲ, ಬದಲಿಗೆ ಆರೋಗ್ಯಕ್ಕೆ ಒಳ್ಳೆಯದು. ಬನ್ನಿ, ಕೆಲವು ಪ್ರಚಲಿತ ಮಸಾಲೆಗಳ ಬಗ್ಗೆ ಅವನ್ನು ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಬಳಸಿದರೆ ರುಚಿ ಹಾಗೂ ಆರೋಗ್ಯಕ್ಕೆ ಪೂರಕ ಎಂದು ತಿಳಿಯೋಣ.

ದಾಲ್ಚಿನ್ನಿ ಚಕ್ಕೆ ಅಥವಾ ದಾಲ್ಚಿನ್ನಿ

ಉಷ್ಣ ಗುಣಾಂಶವುಳ್ಳ, ಮಸಾಲೆ ಪದಾರ್ಥ. ಪಲಾವ್ ‌ಮಾಡುವಾಗ ಅದಕ್ಕೆ ಬಳಸುವ ಇತರ ಮಸಾಲೆ ಪದಾರ್ಥಗಳ ಜೊತೆ ಇದು ಅಗತ್ಯವಾಗಿ ಬೇಕು. ಪಲಾವ್ ‌ಜೊತೆಗಿನ ರಾಯ್ತಾಗಾಗಿ ಇದರ 1-2 ಚಿಟಕಿ ಸೇರಿಸಿದರೆ ರುಚಿ ಹೆಚ್ಚುತ್ತದೆ. ಬ್ರೆಡ್‌ ಸ್ಲೈಸ್‌ ಮೇಲೆ ಬೆಣ್ಣೆ ಸವರಿದ ನಂತರ ಇದರ ಪುಡಿಯನ್ನು ಚಿಟಕಿ ಉದುರಿಸಬೇಕು. ಅದೇ ತರಹ ಕೋಲ್ಡ್ ಕಾಫಿ ಸವಿಯುವ ಮುನ್ನ ಮೇಲೊಂದು ಚಿಟಕಿ, ಹಾಗೇ ಚಾಪ್ಸ್ ತಯಾರಿಸುವಾಗಲೂ ಮೇಲಷ್ಟು ಉದುರಿಸಿ. ಸೇಬಿನ ಖೀರು ಅಥವಾ ಮಿಲ್ಕ್ ಶೇಕ್‌ ತಯಾರಿಸುವಾಗಲೂ ಇದರ ಪುಡಿ ತುಸು ಉದುರಿಸಿದರೆ ರುಚಿ ಹೆಚ್ಚು.

ಮೆಣಸು

ಇದು ಸಂಬಾರ ಪದಾರ್ಥಗಳ ಮುಖ್ಯ ವಸ್ತು. ಖಾರಕ್ಕಾಗಿ ಇದನ್ನು ಬಹುತೇಕ ಎಲ್ಲಾ ವ್ಯಂಜನಗಳಿಗೂ ಬಳಸುತ್ತಾರೆ. ಕೆಲವೊಮ್ಮೆ ಇಡಿಯಾಗಿ ಅಥವಾ ಸಲಾಡ್‌ ಇತ್ಯಾದಿಗಳಿಗೆ ಪುಡಿ ರೂಪದಲ್ಲಿ ಬಳಸುತ್ತಾರೆ. ಮೆಣಸು 2 ಬಗೆಯಲ್ಲಿ ಲಭ್ಯ. ಒಂದರಲ್ಲಿ ಇದರ ಅರ್ಧ ಮಾಗಿದ ಕಾಳನ್ನು ಒಣಗಿಸಿ ಇಟ್ಟರೆ, ಅದು ಕಪ್ಪಾಗುತ್ತದೆ. ಇನ್ನೊಂದರಲ್ಲಿ ಇದರ ಕಾಳು ಚೆನ್ನಾಗಿ ಮಾಗಿದ ಮೇಲೆ ಬಿಡಿಸಿ ಒಣಗಿಸಲಾಗುತ್ತದೆ. ಆಗ ಇದರ ಮೇಲ್ಭಾಗದ ಸಿಪ್ಪೆ ತಾನಾಗಿ ಉದುರುತ್ತದೆ. ಚೆನ್ನಾಗಿ ಮಾಗಿದ ಮೇಲೆ ಕಪ್ಪು ಮೆಣಸಿಗಿಂತ ಬಿಳಿ ಮೆಣಸು ಹೆಚ್ಚು ತೀಕ್ಷ್ಣ ರುಚಿ ಹೊಂದಿ, ದುಬಾರಿ ಎನಿಸುತ್ತದೆ.

ಪಕೋಡ ಮಿಶ್ರಣ ಕಲಸುವಾಗ ಕಪ್ಪು ಬಿಳಿ ಎರಡೂ ಬಗೆಯ ಮೆಣಸಿನ ಪೌಡರ್‌ ಬೆರೆಸಬೇಕು. ರೊಟ್ಟಿಗೆ ತೊವ್ವೆ (ದಾಲ್‌) ಮಾಡಿಕೊಳ್ಳುವಾಗ ತರಿತರಿಯಾಗಿ ಕುಟ್ಟಿದ 4-5 ಕಾಳನ್ನು ಹಾಕಬೇಕು, ಆಗ ರುಚಿ ಹೆಚ್ಚುತ್ತದೆ. ಬೇಸನ್‌ ಲಡ್ಡು ಮಾಡುವಾಗಲೂ ಬ್ಲ್ಯಾಕ್‌ವೈಟ್‌ ಪೆಪ್ಪರ್‌ ಪೌಡರ್‌ ಬೆರೆಸಬೇಕು.

arjuna-bark-2

ಅರ್ಜುನ ವೃಕ್ಷ ಸಿಪ್ಪೆ

ಸಂಬಾರ ಪದಾರ್ಥಗಳ ಚಕ್ಕೆ ತರಹವೇ ಇವರು ಈ ಒಣಸಿಪ್ಪೆ ಉ. ಭಾರತದಲ್ಲಿ `ಅರ್ಜುನ್‌ ಕೀ ಛಾಲ್‌' ಎಂದೇ ಪ್ರಸಿದ್ಧ. ಇದು ಹಿಮಾಲಯದ ತಲಹಟಿ, ಉ.ಪ್ರದೇಶ, ಮ.ಪ್ರದೇಶ, ಬಿಹಾರ, ಬಂಗಾಳ, ಮಹಾರಾಷ್ಟ್ರದಲ್ಲಿ ಹೇರಳವಾಗಿ ಸಿಗುತ್ತದೆ. ಈ ಮರದ ಸಿಪ್ಪೆ ಬಹಳಷ್ಟು ಪ್ರಯೋಜನಕಾರಿ. ಇದರ ಮೇಲಿನ ಸಂಶೋಧನೆಗಳಿಂದ ಇದು ವಿಟಮಿನ್‌ `ಈ' ತರಹ ಆ್ಯಂಟಿ ಆಕ್ಸಿಡೆಂಟ್‌ನ ಕೆಲಸ ಮಾಡುತ್ತದೆ ಎಂದು ದೃಢಪಟ್ಟಿದೆ. ಹೀಗಾಗಿ ಇದನ್ನು ಪುಡಿ ಮಾಡಿ ಅಡುಗೆಯಲ್ಲಿ ಬಳಸುತ್ತಾರೆ. 1 ಲೀ. ನೀರಿಗೆ 1-2 ಚಮಚ ಇದರ ಪುಡಿ ಬೆರೆಸಿ, ನೀರು ಅರ್ಧ ಭಾಗ ಹಿಂಗುವವರೆಗೂ ಕುದಿಸಬೇಕು. ಇದು ಆರಿ ತಣ್ಣಗಾದ ಮೇಲೆ ದಿನಕ್ಕೆ 2 ಸಲ ಅರ್ಧರ್ಧ ಲೋಟದಂತೆ ಕುಡಿಯಿರಿ. ಇದಲ್ಲದೆ, ಇದನ್ನು ಟೊಮೇಟೊ ಜೂಸ್‌, ಹಾಲು, ಚಹಾದಲ್ಲಿ ಬೆರೆಸಿಯೂ ಕುಡಿಯಬಹುದು. ಇದರಿಂದ ಅಜೀರ್ಣ, ಹುಳಿತೇಗು, ಮಲಬದ್ಧತೆ ಇತ್ಯಾದಿ ದೂರಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ