ಪಾಸ್ತಾ ವಿತ್ಪನೀರ್

ಸಾಮಗ್ರಿ : 100 ಗ್ರಾಂ ಪನೀರ್‌ ಕ್ಯೂಬ್ಸ್, 200 ಗ್ರಾಂ ಬೆಂದ ಪಾಸ್ತಾ, ಒಂದಿಷ್ಟು ಹೆಚ್ಚಿದ ಅನಾನಸ್‌ ತುಂಡು, ಪುದೀನಾ, ಕೊ.ಸೊಪ್ಪು, ಕೆಂಪು ಹಸಿರು ಕ್ಯಾಪ್ಸಿಕಂ, ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಇಟಾಲಿಯನ್‌ ಸಾಸ್‌ (ರೆಡಿಮೇಡ್‌ ಲಭ್ಯ), ಒಗ್ಗರಣೆಗೆ ತುಸು ರೀಫೈಂಡ್‌ ಎಣ್ಣೆ.

ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಒಂದೊಂದಾಗಿ ಹೆಚ್ಚಿದ ಪದಾರ್ಥ, ನಂತರ ಪಾಸ್ತಾ ಪನೀರ್‌ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಮೆಣಸು, ಸಾಸ್‌ ಬೆರೆಸಿ ಕೆದಕಬೇಕು. ಕೆಳಗಿಳಿಸಿ ಕೊ.ಸೊಪ್ಪು, ಪುದೀನಾ ಉದುರಿಸಿ, ಚೆನ್ನಾಗಿ ಆರಲು ಬಿಡಿ. ಇದನ್ನು ಹಾಗೇ ಸವಿಯಬಹುದು, ಅಗತ್ಯವೆನಿಸಿದರೆ ಫ್ರಿಜ್‌ನಲ್ಲಿರಿಸಿ ಕೂಲ್ ‌ಮಾಡಿ ಸವಿಯಲು ಕೊಡಿ.

cookry-02

ಬೇಕ್ಡ್ ಪನೀರ್ಕ್ಯೂಬ್ಸ್

ಸಾಮಗ್ರಿ : 300 ಗ್ರಾಂ ಪನೀರ್‌ ಕ್ಯೂಬ್ಸ್, ಒಂದಿಷ್ಟು ತುಂಡರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಅರಿಶಿನ, ಚಾಟ್‌ ಮಸಾಲ, ತುಸು ಬೆಣ್ಣೆ.

ವಿಧಾನ : ಮೇಲಿನ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ, ಉಪ್ಪು, ಮಸಾಲೆ ಜೊತೆ ಬೆಣ್ಣೆ ಸಹ ಬೆರೆತುಕೊಳ್ಳುವಂತೆ ಮಾಡಿ. ಅರ್ಧ ಗಂಟೆ ನಂತರ ಇದನ್ನು ಓವನ್ನಿನಲ್ಲಿರಿಸಿ 180 ಡಿಗ್ರಿ ಶಾಖದಲ್ಲಿ ಬೇಕ್‌ ಮಾಡಿ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಚೀಸ್ಸ್ಯಾಂಡ್ವಿಚ್

ಸಾಮಗ್ರಿ : 4 ಬ್ರೆಡ್‌ ಸ್ಲೈಸ್‌, 2 ಟೊಮೇಟೊ, 1 ಸಣ್ಣ ಸೌತೇಕಾಯಿ, 2 ಬೆಂದ ಆಲೂ ಬಿಲ್ಲೆಗಳು, 2 ತುಂಡರಿಸಿದ ಪನೀರ್‌ ಕ್ಯೂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಪುದೀನಾ ಚಟ್ನಿ, ಬೆಣ್ಣೆ.

ವಿಧಾನ : ಬ್ರೆಡ್‌ ಸ್ಲೈಸ್‌ಗೆ ಬೆಣ್ಣೆ ಸವರಿಡಿ. ನಂತರ ಇದರ ಮೇಲೆ ಕ್ರಮವಾಗಿ ಸೌತೆ, ಟೊಮೇಟೊ, ಆಲೂ, ಪನೀರ್‌ ಬಿಲ್ಲೆಗಳು ಬರಲಿ. ಇದರ ನಡುನಡುವೆ ಉಪ್ಪು ಮೆಣಸು ಉದುರಿಸಿ. ಮತ್ತೊಂದು ಸ್ಲೈಸ್‌ನಿಂದ ಮುಚ್ಚಿ, ಚಿತ್ರದಲ್ಲಿರುವಂತೆ ಕತ್ತರಿಸಿ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

cookry-03

ಪನೀರ್ವೆಜ್ರೋಲ್ಸ್

ಸಾಮಗ್ರಿ : 2-3 ಈರುಳ್ಳಿ, ಹೆಚ್ಚಿದ ಬೀನ್ಸ್, ಕ್ಯಾರೆಟ್‌, ಎಲೆಕೋಸು (ತಲಾ 1-1 ಕಪ್‌), ತುಸು ತುರಿದ ಶುಂಠಿ, ತೆಂಗು, ಬೆಳ್ಳುಳ್ಳಿ, 250 ಗ್ರಾಂ ಮಸೆದ ಪನೀರ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಕೆಚಪ್‌, 5-6 ಬಿಸಿ ಬಿಸಿ (ತುಪ್ಪದಲ್ಲಿ ನಾದಿ, ಮಾಡಿದ) ಚಪಾತಿಗಳು, ಒಗ್ಗರಣೆಗೆ ಎಣ್ಣೆ ಇತ್ಯಾದಿ.

ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ತುರಿದ ಬೆಳ್ಳುಳ್ಳಿ, ಶುಂಠಿ ಆಮೇಲೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ತರಕಾರಿ ಸೇರಿಸಿ, ನೀರು ಚಿಮುಕಿಸುತ್ತಾ ಬಾಡಿಸಿ. ಮುಚ್ಚಳ ಮುಚ್ಚಿ ಬೇಯಲು ಬಿಡಿ. ಆಮೇಲೆ ಮಸೆದ ಪನೀರ್‌, ತೆಂಗಿನ ತುರಿ ಹಾಕಿ ಬಾಡಿಸಬೇಕು. ಕೊನೆಯಲ್ಲಿ ಉಪ್ಪು, ಮೆಣಸು, ಟೊಮೇಟೊ ಕೆಚಪ್‌ ಬೆರೆಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಈ ಪನೀರ್‌ ಪಲ್ಯ ಆರುವ ಮೊದಲೇ ತುಪ್ಪ ಸವರಿದ ಚಪಾತಿಗಳಲ್ಲಿ ಹರಡಿ, ರೋಲ್ ‌ಮಾಡಿಕೊಂಡು ಈರುಳ್ಳಿ ಬಿಲ್ಲೆ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ