ಸಲದ ವ್ಯಾಲೆಂಟೈನ್ಸ್ ಡೇ ಸಂಭ್ರಮಾಚರಣೆ ಮತ್ತಷ್ಟು ರೋಚಕವಾಗಿರಲು ಬಯಸುತ್ತೀರಾ? ಹಾಗಾದರೆ ನೀವಿಬ್ಬರೂ ಕೂಡಿ ಕೆಳಗಿನ ಹೊಚ್ಚ ಹೊಸ ಬಗೆಬಗೆಯ ರೊಮ್ಯಾಂಟಿಕ್ರೆಸಿಪೀಸ್ಏಕೆ ಟ್ರೈ ಮಾಡಬಾರದು.....?

ದಾಲ್ ಪುವಾ ಸ್ಟ್ರಾಬೆರಿ ಜ್ಯಾಂ

ದಾಲ್ ಪುವಾಗಾಗಿ ಸಾಮಗ್ರಿ : ಅಕ್ಕಿ, ಉದ್ದಿನ ಬೇಳೆ, ಹೆಸರು ಬೇಳೆ (ತಲಾ ಅರ್ಧರ್ಧ ಕಪ್‌), 1 ಚಮಚ ಶುಂಠಿ ಪೇಸ್ಟ್, 2-3 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಎಲ್.ಜಿ. ಇಂಗು, ಕರಿಯಲು ಎಣ್ಣೆ.

ಸ್ಟ್ರಾಬೆರಿ ಜ್ಯಾಂಗಾಗಿ ಸಾಮಗ್ರಿ : 8-10 ಸ್ಟ್ರಾಬೆರಿ, ಅರ್ಧ ಕಪ್‌ ಸಕ್ಕರೆ, ತುಸು ನಿಂಬೆ ರಸ.

ವಿಧಾನ : ಅಕ್ಕಿಬೇಳೆ ಶುಚಿಗೊಳಿಸಿ 2-3 ತಾಸು ನೆನೆಹಾಕಿಡಿ. ಎರಡನ್ನೂ ಬೇರೆ ಬೇರೆಯಾಗಿ ನುಣ್ಣಗೆ ರುಬ್ಬಿಡಿ. ಅಕ್ಕಿಯ ಕೊನೆ ಸುತ್ತಿಗೆ ಶುಂಠಿ, ಹಸಿ ಮೆಣಸು ಸೇರಿಸಿ ರುಬ್ಬಬೇಕು. ಇವೆರಡನ್ನೂ ಎಲ್.ಜಿ. ಇಂಗು, ಉಪ್ಪು ಸೇರಿಸಿ ನೀಟಾಗಿ ಬೆರೆಸಿಡಿ. ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಒಂದೊಂದೇ ಸೌಟು ಹಿಟ್ಟು ಬಿಡುತ್ತಾ, ಹೊಂಬಣ್ಣಕ್ಕೆ ಬರುವಂತೆ ಕರಿದು ತೆಗೆಯಿರಿ. ಗರಿಗರಿಯಾದ ಇವನ್ನು ಟಿಶ್ಯು ಪೇಪರ್‌ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ.

ನಂತರ ಸ್ಟ್ರಾಬೆರಿ ರುಬ್ಬಿಕೊಳ್ಳಿ. ಒಂದು ಪ್ಯಾನಿಲ್ಲಿ ಸ್ಟ್ರಾಬೆರಿ ಪೇಸ್ಟಿಗೆ, ಸಕ್ಕರೆ ಹಾಕಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ, ಕುದಿಸಬೇಕು. ಇದಕ್ಕೆ ನಿಂಬೆ ರಸ ಹಿಂಡಿಕೊಳ್ಳಿ. ಜ್ಯಾಂ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ, ಚೆನ್ನಾಗಿ ಆರಲು ಬಿಡಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.

AA-Cheesy-aloo-cutlet-(12)

ಚೀಝೀ ಆಲೂ ಕಟ್ಲೆಟ್

ಸಾಮಗ್ರಿ : 3-4 ಬೆಂದ ಆಲೂ (ಸಿಪ್ಪೆ ಸುಲಿದು ಮಸೆದಿಡಿ), 3-4 ಹಸಿ ಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ ಪುಡಿ, ಧನಿಯಾ ಪುಡಿ, ಎಲ್.ಜಿ. ಇಂಗು, ಕರಿಯಲು ಎಣ್ಣೆ.

ಹೂರಣದ ಸಾಮಗ್ರಿ : ಒಂದಿಷ್ಟು ತುರಿದ ಪನೀರ್‌, ಚೀಸ್‌ ಸ್ಪ್ರೆಡ್, ಅರ್ಧ ಕಪ್‌ ಮೈದಾ, 1 ಕಪ್‌ ಬ್ರೆಡ್‌ ಕ್ರಂಬ್ಸ್.

ವಿಧಾನ : ಹೂರಣದ ಸಾಮಗ್ರಿ ಬಿಟ್ಟು ಉಳಿದೆಲ್ಲ ಸಾಮಗ್ರಿ, ಎಲ್.ಜಿ. ಇಂಗು ಇತ್ಯಾದಿಗಳನ್ನು ಮಸೆದ ಆಲೂಗೆ ಬೆರೆಸಿಕೊಳ್ಳಿ. ಈ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಕಟ್ಟಿಡಿ. ನಂತರ ತುರಿದ ಪನೀರ್‌ ಗೆ ಚೀಸ್‌ ಸ್ಪ್ರೆಡ್‌, ತುಸು ಉಪ್ಪು, ಖಾರ ಸೇರಿಸಿ ಹೂರಣ ಕಲಸಿಡಿ. ಆಲೂ ಉಂಡೆಯ ನಡುವೆ ತುಸು ರಂಧ್ರ ಮಾಡಿ, ಅದಕ್ಕೆ ಅರ್ಧ ಚಮಚದಷ್ಟು ಹೂರಣ ತುಂಬಿಸಿ, ನೀಟಾಗಿ ಕವರ್‌ ಮಾಡಿಬಿಡಿ. ಹೀಗೆ ಎಲ್ಲವನ್ನೂ ರೆಡಿ ಮಾಡಿ. ಮೈದಾಗೆ ತುಸು ಉಪ್ಪು, ಖಾರ, ನೀರು ಬೆರೆಸಿ ಇಡ್ಲಿ ಹಿಟ್ಟಿನಂತೆ ಕಲಸಿಡಿ. ಇದರಲ್ಲಿ ಆಲೂ ಉಂಡೆ ಅದ್ದಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ನೀಟಾಗಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ, ಬಿಸಿಯಾಗಿ ಸವಿಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ