ಬಾದಾಮಿ ಖೀರು

ಸಾಮಗ್ರಿ : 2 ಕಪ್‌ ಫ್ರಿಜ್‌ ಕೂಲ್ ಹಾಲಿನಲ್ಲಿ ಇಡೀ ರಾತ್ರಿ ನೆನೆಸಿದ ಬಾದಾಮಿ, 1 ಲೀ. ಗಟ್ಟಿ ಹಾಲು, ಹಾಲಲ್ಲಿ ನೆನೆಸಿದ ತುಸು ಕೇಸರಿ, ರುಚಿಗೆ ತಕ್ಕಷ್ಟು ಕಲ್ಲುಸಕ್ಕರೆ (ಪುಡಿ ಮಾಡಿಕೊಳ್ಳಿ), ಏಲಕ್ಕಿ ಪುಡಿ, ಬಾದಾಮಿ ಎಸೆನ್ಸ್, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ 1 ಕಪ್‌), ಅಲಂಕರಿಸಲು ತಾಜಾ ಗುಲಾಬಿ ದಳ.

ವಿಧಾನ : ಒಂದು ಬಾಣಲೆಯಲ್ಲಿ ಹಾಲು ಕಾಯಿಸಿ ಅದು ಅರ್ಧದಷ್ಟು ಹಿಂಗುವಂತೆ ಮಂದ ಉರಿಯಲ್ಲಿ ಕೈಯಾಡಿಸುತ್ತಿರಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ 1 ಗಂಟೆ ಕಾಲ ಫ್ರಿಜ್‌ ನಲ್ಲಿರಿಸಿ, ಆಮೇಲೆ ನೆನೆಸಿದ ಬಾದಾಮಿಯೊಂದಿಗೆ ನುಣ್ಣಗೆ ಪೇಸ್ಟ್ ಮಾಡಿ. ಇದಕ್ಕೆ ಏಲಕ್ಕಿ ಪುಡಿ, ಸಕ್ಕರೆ ಬೆರೆಸಿ ಗೊಟಾಯಿಸಿ. ಅದೇ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಮಂದ ಉರಿಯಲ್ಲಿ ಡ್ರೈಫ್ರೂಟ್ಸ್ ಹುರಿಯಿರಿ. ಇದಕ್ಕೆ ಎಡಗೈಯಿಂದ ಬಾದಾಮಿ ಮಿಶ್ರಣ ಬೆರೆಸುತ್ತಾ, ಬಲಗೈಯಿಂದ ಗಂಟಾಗದಂತೆ ಕೆದಕುತ್ತಿರಿ. ನಂತರ ನೆನೆದ ಕೇಸರಿ, ಬಾದಾಮಿ ಎಸೆನ್ಸ್ ಬೆರೆಸಿಡಿ. ಚೆನ್ನಾಗಿ ಕುದಿ ಬಂದಾಗ ಇದನ್ನು ಕೆಳಗಿಳಿಸಿ, ಸಂಪೂರ್ಣ ಆರಲು ಬಿಡಿ. ಆಮೇಲೆ 2-3 ಗಂಟೆ ಕಾಲ ಫ್ರಿಜ್‌ ನಲ್ಲಿರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ತಣ್ಣಗೆ ಸವಿಯಲು ಕೊಡಿ.

weikfield45-O

ಕಸ್ಟರ್ಡ್ಕಪ್ಸ್

ಸಾಮಗ್ರಿ : 5-6 ಬ್ರೆಡ್‌ ಸ್ಲೈಸ್‌, 1 ಕಪ್‌ ಮಾಗಿದ ಮಾವಿನ ಪೇಸ್ಟ್, 3-4 ಚಮಚ ಕಸ್ಟರ್ಡ್‌ ಪೌಡರ್‌, ಅಲಂಕರಿಸಲು ವಿಪ್ಡ್ ಕ್ರೀಂ, 4-5 ಚಮಚ ಸಕ್ಕರೆ, 3 ಕಪ್‌ ಗಟ್ಟಿ ಹಾಲು, 2 ಚಮಚ ಫ್ರೆಶ್‌ ಕ್ರೀಂ, ಗ್ರೀಸಿಂಗ್‌ ಗಾಗಿ ಬೆಣ್ಣೆ, ತುಸು ಪುದೀನಾ ಎಲೆ.

ವಿಧಾನ : ಬ್ರೆಡ್‌ ಸ್ಲೈಸ್‌ ನ್ನು ಗೋಲಾಕಾರದ ತುಂಡುಗಳಾಗಿಸಿ. ಇವಕ್ಕೆ ಕಪ್‌ ಶೇಪ್‌ ನೀಡಲು, ಬೆಣ್ಣೆ ಸರಿದ ಕೇಕ್‌ ಮೌಲ್ಡ್ಸ್ ನಲ್ಲಿ‌ಒತ್ತಿ ತೆಗೆಯಿರಿ. ಈ ಕಪ್ಸ್ ನ್ನು ಓವನ್ನಿನಲ್ಲಿ ಲೈಟ್‌ ಆಗಿ ಬೇಕ್‌ ಮಾಡಿ. ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ, ಮಂದ ಉರಿಯಲ್ಲಿ ಅರ್ಧದಷ್ಟು ಹಿಂಗಿಸಿ. ಬೇರೆ ಕಾದಾರಿದ ಅರ್ಧ ಕಪ್‌ ಹಾಲಿಗೆ ಕಸ್ಟರ್ಡ್‌ ಪೌಡರ್‌ ಹಾಕಿ ಚೆನ್ನಾಗಿ ಕದಡಿಕೊಂಡು ಪೇಸ್ಟ್ ಮಾಡಿಡಿ. ನಂತರ ಒಲೆ ಮೇಲಿನ ಹಾಲಿಗೆ ಸಕ್ಕರೆ ಹಾಕಿ ಕದಡಿರಿ. ನಂತರ ಕಸ್ಟರ್ಡ್‌ ಪೇಸ್ಟ್ ನ್ನು ಹಾಲಿಗೆ ಬೆರೆಸುತ್ತಾ ಗಂಟಿಲ್ಲದಂತೆ ಕೈಯಾಡಿಸುತ್ತಾ 2 ನಿಮಿಷ ಕುದಿಸಿರಿ. ನಂತರ ಕೆಳಗಿಳಿಸಿ ಸಂಪೂರ್ಣ ಆರಲು ಬಿಡಿ. ನಂತರ ಇದಕ್ಕೆ ಫ್ರೆಶ್‌ ಕ್ರೀಂ, ಮಾವಿನ ಪೇಸ್ಟ್ ಹಾಕಿ ಕದಡಿರಿ. ಆಮೇಲೆ ಇದನ್ನು ಪೈಪಿಂಗ್‌ ಬ್ಯಾಗಿಗೆ ತುಂಬಿಸಿಕೊಂಡು, ಚಿತ್ರದಲ್ಲಿರುವಂತೆ ಬ್ರೆಡ್‌ ಕಪ್ಸ್ ಗೆ ತುಂಬಿಸಿ. ಇದರ ಮೇಲೆ ವಿಪ್ಡ್ ಕ್ರೀಂ ಬರಲಿ. ಕೊನೆಯಲ್ಲಿ ಪುದೀನಾ ಎಲೆ, ಮಾಗಿದ ಮಾವಿನ ತುಂಡುಗಳೊಂದಿಗೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ