ಶೇಂಗಾ ಹೋಳಿಗೆ

ಹೂರಣದ ಸಾಮಗ್ರಿ : 1 ದೊಡ್ಡ ತೆಂಗಿನಕಾಯಿ, 1 ದೊಡ್ಡ ಮುದ್ದೆ ಬೆಲ್ಲ, 2 ಚಮಚ ಗಸಗಸೆ, 1 ಬಟ್ಟಲು ಹುರಿದ ಶೇಂಗಾ ಬೀಜ, 2-2 ಚಿಟಕಿ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು.

ಕಣಕಕ್ಕೆ ಸಾಮಗ್ರಿ : ಅರ್ಧರ್ಧ ಬಟ್ಟಲು ಮೈದಾ-ಚಿರೋಟಿ ರವೆ, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ, ತುಪ್ಪ, 2 ಚಿಟಕಿ ಅರಿಶಿನ ಉಪ್ಪು.

ವಿಧಾನ : ಮೊದಲು ಕಡಲೆಬೀಜವನ್ನು ಹುರಿದು, ಆರಿದ ನಂತರ, ಸಿಪ್ಪೆ ಬೇರ್ಪಡಿಸಿ, ಇದನ್ನು ತರತರಿಯಾಗಿ ಪುಡಿ ಮಾಡಿ. ಹಾಗೆಯೇ ಗೋಡಂಬಿಯನ್ನೂ ತುಪ್ಪದಲ್ಲಿ ಹುರಿದಿಡಿ. ಒರಳು ಅಥವಾ ಮಿಕ್ಸಿಯಲ್ಲಿ ತೆಂಗಿನ ತುರಿ, ಪುಡಿ ಮಾಡಿದ ಬೆಲ್ಲ, ಅಗತ್ಯವಿದ್ದಷ್ಟು ಹಾಲು, ಗಸಗಸೆ, ಏಲಕ್ಕಿಪುಡಿ ಬೆರೆಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಕಡಲೆಬೀಜ, ಗೋಡಂಬಿ ಸೇರಿಸಿ ಕಲಸಿದರೆ ಹೂರಣ ರೆಡಿ.

ಮೊದಲು ತಯಾರಾದ ಕಣಕದಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ, ಖರ್ಜೂರದ ಹೋಳಿಗೆಗೆ ಮಾಡಿದಂತೆ ಅದೇ ಕ್ರಮದಲ್ಲಿ ಇಲ್ಲೂ ಹೂರಣವಿರಿಸಿ ಒಂದೊಂದಾಗಿ ಹೋಳಿಗೆ ಲಟ್ಟಿಸಿ ಸಿದ್ಧಪಡಿಸಿ, ಆಮೇಲೆ ಕಾದ ಹೆಂಚಿನ ಮೇಲೆ ಹಾಕಿ ಬೇಯಿಸಿ. ಬಿಸಿ ಬಿಸಿಯಾಗಿ ತುಪ್ಪ ಅಥವಾ ಹಾಲಿನ ಜೊತೆ ಸವಿಯಲು ಕೊಡಿ.

ಖರ್ಜೂರದ ಹೋಳಿಗೆ

ಹೂರಣದ ಸಾಮಗ್ರಿ : ಕಡಲೆಬೇಳೆ, ತೊಗರಿಬೇಳೆ (ಒಟ್ಟಾಗಿ ಅರ್ಧ ಬಟ್ಟಲು), 1 ದೊಡ್ಡ ಬಟ್ಟಲು ಪುಡಿ ಮಾಡಿದ ಮುದ್ದೆ ಬೆಲ್ಲ, ಅರ್ಧ ಬಟ್ಟಲು ಹಸಿ ಖರ್ಜೂರ (ಬೀಜ ಬೇರ್ಪಡಿಸಿದ್ದು),  2 ಚಮಚ ಗಸಗಸೆ, 1 ದೊಡ್ಡ ತೆಂಗಿನಕಾಯಿ, 2-2 ಚಿಟಕಿ ಏಲಕ್ಕಿ ಪುಡಿ, ಪಚ್ಚ ಕರ್ಪೂರ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ ಚೂರು, ಖರ್ಜೂರ ನೆನೆಯಲು ಹಾಲು.

ಕಣಕಕ್ಕೆ ಸಾಮಗ್ರಿ : ಅರ್ಧರ್ಧ ಬಟ್ಟಲು ಮೈದಾ-ಚಿರೋಟಿ ರವೆ, ಅಗತ್ಯವಿದ್ದಷ್ಟು ರೀಫೈಂಡ್‌ಎಣ್ಣೆ, ತುಪ್ಪ, 2 ಚಿಟಕಿ ಅರಿಶಿನ, ಉಪ್ಪು.

ವಿಧಾನ : ಮೊದಲು ಹಸಿ ಖರ್ಜೂರವನ್ನು ಹಾಲಿನಲ್ಲಿ ನೆನೆಹಾಕಿ, 1-2 ತಾಸು ಹಾಗೆ ಬಿಡಿ. ಒಂದು ಬೇಸನ್ನಿಗೆ ಜರಡಿಯಾಡಿದ ರವೆ, ಮೈದಾ, ಚಿಟಕಿ ಉಪ್ಪು ಅರಿಶಿನ ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ರೀಫೈಂಡ್‌ಎಣ್ಣೆ ಬೆರೆಸುತ್ತಾ ಚೆನ್ನಾಗಿ ನಾದಬೇಕು. ಅವಕಾಶವಿದ್ದರೆ ಒರಳಿನಲ್ಲಿ ಹಾರೆಯಿಂದ ಚೆನ್ನಾಗಿ ಕುಟ್ಟಿ ಹದಗೊಳಿಸಬಹುದು. ಅಥವಾ ಕಿಚನ್‌ ಸ್ಲ್ಯಾಬ್‌ ಮೇಲೆ ತುಪ್ಪದೊಂದಿಗೆ ನಾದಿಕೊಳ್ಳಬೇಕು. ಇದನ್ನು 1-2 ತಾಸು ನೆನೆಯಲು ಬಿಡಿ.

ಕುಕ್ಕರ್‌ನಲ್ಲಿ ಎರಡೂ ಬೇಳೆಗಳನ್ನು ಒಟ್ಟಾಗಿ ಬೇಯಿಸಿ. ಇದಕ್ಕೆ ಅರಿಶಿನ, 1 ಚಮಚ ರೀಫೈಂಡ್‌ ಎಣ್ಣೆ ಬೆರೆಸಿರಬೇಕು. ಬೇಳೆ ಬೆಂದ ನಂತರ ಕೆಳಗಿಳಿಸಿ ಆರಿದ ಮೇಲೆ, ಅದರ ನೀರು ಬಸಿದು, ಒಬ್ಬಟ್ಟಿನ ತಿಳಿಸಾರು ಮಾಡಲು ಬಳಸಿಕೊಳ್ಳಿ. ಅದೇ ಹೊತ್ತಿಗೆ ನೆನೆದ ಖರ್ಜೂರವನ್ನು ಹಾಲಿನ ಸಮೇತ ಮಿಕ್ಸಿಯಲ್ಲಿ ಲಘುವಾಗಿ ತಿರುವಿಕೊಳ್ಳಿ. ಆಮೇಲೆ ಒರಳು ಅಥವಾ ಮಿಕ್ಸಿಯಲ್ಲಿ ಇದರ ಜೊತೆ ಬೇಳೆ, ಬೆಲ್ಲ, ತೆಂಗಿನ ತುರಿ, ಏಲಕ್ಕಿ, ಪಚ್ಚ ಕರ್ಪೂರ ಸೇರಿಸಿ (ಕನಿಷ್ಠ ನೀರಿನೊಂದಿಗೆ) ಗಟ್ಟಿಯಾಗಿ ರುಬ್ಬಿಕೊಳ್ಳುವುದು. ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಚೂರು ಬೆರೆಸಿದರೆ ಹೂರಣ ರೆಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ