ಆಹಾರದ ರುಚಿ ಹೆಚ್ಚಿಸುವ ಮಸಾಲೆ ಪದಾರ್ಥಗಳು ಆರೋಗ್ಯ ರಕ್ಷಣೆ ಹೇಗೆ ಮಾಡುತ್ತವೆ ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.......
ಅಂದಹಾಗೆ ಮಸಾಲೆಗಳು ಆಹಾರದ ರುಚಿ ಹೆಚ್ಚಿಸಲು ಬಳಸಲ್ಪಡುತ್ತವೆ. ಆದರೆ ಭಾರತದಲ್ಲಿ ಮಸಾಲೆ ಪದಾರ್ಥಗಳು ಔಷಧಿಗಳ ರೂಪದಲ್ಲಿಯೂ ಉಪಯೋಗಿಸಲ್ಪಡುತ್ತವೆ. ಕರಿಮೆಣಸು, ಜಾಯಿಕಾಯಿ, ಅರಿಶಿನ, ಓಂಕಾಳು (ಅಜವಾನ), ಜೀರಿಗೆ, ಲವಂಗ, ಚಕ್ಕೆ ಇವನ್ನೆಲ್ಲ ಔಷಧಿಗಳ ರೂಪದಲ್ಲಿ ಬಳಸುವುದು ಸಾಮಾನ್ಯ ಸಂಗತಿ. ಕೆಲ ಮಸಾಲೆಗಳನ್ನು ಪುಡಿ ಮಾಡಿ ಬಳಸುತ್ತೇವೆ. ಇನ್ನೂ ಕೆಲವು ಮಸಾಲೆಗಳನ್ನು ಅಡುಗೆಯಲ್ಲಿ ಹಾಗೆಯೇ ಬಳಸುತ್ತೇವೆ. ಮಸಾಲೆ ಪದಾರ್ಥಗಳಲ್ಲಿರುವ ಆರೋಗ್ಯದ ಗುಣಗಳ ಬಗ್ಗೆ ತಿಳಿದುಕೊಳ್ಳಿ.
- ಚಕ್ಕೆಶತಶತಮಾನಗಳಿಂದ ಇದರ ಸುವಾಸನೆಯ ಕಾರಣದಿಂದಷ್ಟೇ ಇದನ್ನು ಅಡುಗೆಯಲ್ಲಿ ಬಳಸಲಾಗುತ್ತಿಲ್ಲ, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಗುಣದಿಂದಾಗಿ ಇದನ್ನು ಅಡುಗೆಯಲ್ಲಿ ಉಪಯೋಗಿಸಲಾಗುತ್ತಿದೆ. ಈ ಆ್ಯಂಟಿ ಆಕ್ಸಿಡೆಂಟ್ ಫ್ರೀರ್ಯಾಡಿಕ್ಸ್ ಜೊತೆಗೆ ಹೋರಾಡುವ ಸಾಮರ್ಥ್ಯ ಹೊಂದಿರುವ ಕಾರಣದಿಂದ ಕ್ಯಾನ್ಸರ್ ಮತ್ತು ಆರ್ಥ್‌ರೈಟಿಸ್‌ನಿಂದ ರಕ್ಷಿಸುವುದರ ಜೊತೆಗೆ ನಮ್ಮನ್ನು ಫಿಟ್ ಆಗಿಡಲು ನೆರವಾಗುತ್ತದೆ.
ಫಿಟ್ ಆಗಿರಲು ಸಹಾಯಕ : ಚಕ್ಕೆ ಹೈ ಫ್ಯಾಟ್ ಡಯೆಟ್‌ನ ಪರಿಣಾಮ ಕಡಿಮೆಗೊಳಿಸುತ್ತದೆ. ಅದರಿಂದ ನೀವು ತೂಕ ನಿಯಂತ್ರಿಸಲು ಸಾಧ್ಯವಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಚಕ್ಕೆಯನ್ನು ದೈನಂದಿನ ರೂಪದಲ್ಲಿ ಬಳಸುವುದರಿಂದ ದೇಹದಲ್ಲಿ ಫ್ಯಾಟ್ ಮಾಲಿಕ್ಯ್ಸೂ್ ಸಂಖ್ಯೆ ಕಡಿಮೆಯಾಗುತ್ತದೆ.
ಕಲೆಮುಕ್ತ ತ್ವಚೆಗೆ : ಮುಖದ ಮೇಲೆ ಕಲೆಗಳು ಯಾರಿಗೆ ತಾನೆ ಇಷ್ಟವಾಗುತ್ತವೆ? ಅದು ಕೇವಲ ಸೌಂದರ್ಯಕ್ಕಷ್ಟೇ ಕುಂದು ತರುವುದಿಲ್ಲ. ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಚಕ್ಕೆಯಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ ಗುಣ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ.
ಕೂದಲು ಬೆಳೆಯಲು ಸಹಾಯಕ?: ಪೌಷ್ಟಿಕ ಆಹಾರ ಸೇವಿಸದಿರುವ ಕಾರಣದಿಂದ ಕೂದಲುದುರುವ ಸಮಸ್ಯೆ ಗೋಚರಿಸುತ್ತದೆ. ಇಂತಹ ಸ್ಥಿತಿಯಲ್ಲಿ ಚಕ್ಕೆ ನೆತ್ತಿಯಲ್ಲಿರುವ ರಕ್ತ ಪ್ರವಾಹವನ್ನು ಹೆಚ್ಚಿಸಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
- ಲವಂಗ : ಯುಎಸ್‌ಡಿಎ ನ್ಯಾಷನಲ್ ನ್ಯೂಟ್ರಿಯೆಂಟ್ ಡೇಟಾಬೇಸ್‌ನ ಪ್ರಕಾರ, ಲವಂಗದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್ಸ್ ಹಾಗೂ ನಾರಿನಂಶ ಹೇರಳಾಗಿರುತ್ತವೆ. ಅದು ಆರೋಗ್ಯಕ್ಕೆ ಬಹಳ ಉಪಯುಕ್ತ. ಲವಂಗದಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯ್ ಪ್ರಾಪರ್ಟಿ ಪಚನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಮುಖದ ಹೊಳಪನ್ನು ಕಾಪಾಡುವ ಕೆಲಸ ಮಾಡುತ್ತದೆ.
ಹಲ್ಲು ನೋವಿನಿಂದ ಮುಕ್ತಿ : ಲವಂಗ ಕೇವಲ ಹಲ್ಲು ನೋವಿನಿಂದಷ್ಟೇ ಮುಕ್ತಿ ಕೊಡುವುದಿಲ್ಲ. ಅದು ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ.
ಕಲೆರಹಿತ ತ್ವಚೆ : ದಿನ ಲವಂಗ ಸೇವನೆಯಿಂದ ರಕ್ತ ಶುದ್ಧವಾಗುತ್ತದೆ. ದೇಹದ ಕಲ್ಮಶಗಳು ಹೊರಹೋಗಿ ನಿಮ್ಮ ತ್ವಚೆ ಮೃದು ಹಾಗೂ ಕಲೆರಹಿತ ಆಗುತ್ತದೆ.
ಏಜಿಂಗ್ ತಡೆ : ಏಜಿಂಗ್‌ನಲ್ಲಿ ತ್ವಚೆಯ ಜೀವಕೋಶಗಳು ತಮ್ಮ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಅದರಿಂದ ಮುಖದಲ್ಲಿ ನೆರಿಗೆಗಳು ಕಂಡುಬರುತ್ತವೆ. ಲವಂಗದಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶವಿರುವುದರಿಂದ ಅದು ನೆರಿಗೆಗಳಾಗುವುದನ್ನು ತಡೆದು ನೀವು ಹೆಚ್ಚು ವರ್ಷಗಳ ಕಾಲ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಸೋಂಕಿಗೀಡಾಗದಂತೆ ರಕ್ಷಣೆ : ಲವಂಗದಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಅಲರ್ಜಿಕ್, ಆ್ಯಂಟಿಸೆಪ್ಟಿಕ್ ಗುಣಗಳಿರುವುದರಿಂದ ಅದು ಚರ್ಮ ಸೋಂಕಿಗೀಡಾಗದಂತೆ ರಕ್ಷಿಸುತ್ತದೆ.