ಕೊರೋನಾದ ಲಕ್ಷಣಗಳು ಯಾರಲ್ಲಿ ಗೋಚರಿಸುತ್ತವೆಯೋ ಅವರನ್ನು ಗುರುತಿಸುವುದು ಸುಲಭ. ಆದರೆ ಯಾರಲ್ಲಿ ಈ ಲಕ್ಷಣಗಳು ಕಂಡಬರುವುದಿಲ್ಲ, ಅದು ಅಪಾಯಕಾರಿ. ಹೇಗೆ?  ಆ ಬಗ್ಗೆ ತಿಳಿದುಕೊಳ್ಳಿ.

ಕೊರೋನಾ ವೈರಸ್‌ ಪಸರಿಸುವಿಕೆಯಲ್ಲಿ ಮೌನ ಸಾಗಣೆದಾರ ಅಂದರೆ ಸೈಲೆಂಟ್‌ ಕ್ಯಾರಿಯರ್ಸ್‌ನ ಪಾತ್ರ ಕೂಡ ಇದೆ. ಕೆಲ  ಜನರಲ್ಲಿ ಕೆಮ್ಮು, ಜ್ವರ ಅಥವಾ ಕೊರೋನಾದ ಯಾವುದೇ ಲಕ್ಷಣಗಳು ಇರುವುದಿಲ್ಲ. ಆದರೆ ಈ ವೈರಸ್‌ನ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಾಷಿಂಗ್ಟನ್‌ ಡಿಸ್ನಿಯ ಜಾರ್ಜ್‌ಟೌನ್‌ ವಿ.ವಿಯ ಪ್ರೊಫೆಸರ್‌ ಒಬ್ಬರ ಪ್ರಕಾರ, ಇದು ಸಾಧ್ಯವಿದೆ. ಇಂತಹ ಸೈಲೆಂಟ್‌ ಕ್ಯಾರಿಯರ್ಸ್‌ ಯಾವುದೇ ನಿರ್ಬಂಧವಿಲ್ಲದೆ ಸಮಾಜದಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾಗುತ್ತಾರೆ ಹಾಗೂ ಈ ರೀತಿ ಹೋಗುತ್ತಾ ಬರುತ್ತಾ ಕೊರೋನಾ ಹಬ್ಬಿಸುತ್ತಾರೆ. ಕೊರೋನಾ ಸೋಂಕಿಗೆ ತುತ್ತಾಗಿರುವ ಹೊರತಾಗಿ, ರೋಗದ ಯಾವುದೇ ಲಕ್ಷಣಗಳು ಇರದೇ ಇರುವುದು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಆದರೆ ಇದು ಸತ್ಯ.

ಎಷ್ಟು ಜನರು ಸೈಲೆಂಟ್‌ ಕ್ಯಾರಿಯರ್ಸ್‌ ಶ್ರೇಣಿಯಲ್ಲಿ ಬರುತ್ತಾರೆ ಹಾಗೂ ಎಷ್ಟು ಜನರು ಕೊರೋನಾ ಹರಡುವಿಕೆಯಲ್ಲಿ ಪಾಲುದಾರರಾಗಿದ್ದಾರೆ ಎಂದು ಹೇಳುವುದು ಕಷ್ಟ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಸೈಲೆಂಟ್‌ ಕ್ಯಾರಿಯರ್ಸ್‌ನ್ನು 3 ಶ್ರೇಣಿಯಲ್ಲಿಟ್ಟು ಅದರ ವಿಶ್ಲೇಷಣೆ ಮಾಡಲಾಗಿದೆ.

ಅಸಿಂಪ್ಟೊಮೆಟಿಕ್‌?: ಇವರು ಎಂತಹ ಜನರೆಂದರೆ, ಅವರ ದೇಹದಲ್ಲಿ ಕೊರೋನಾ ವೈರಸ್‌ ಇರುತ್ತದೆ. ಆದರೆ ಅವರೆಂದೂ ತಮ್ಮ  ಲಕ್ಷಣಗಳನ್ನು ಪ್ರಕಟಪಡಿಸುವುದಿಲ್ಲ. ಚೀನಾದಿಂದ ದೊರೆತ ಅಂಕಿಅಂಶಗಳ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ, ಕೋವಿಡ್‌-19 ರೋಗಿಗಳ ಸಂಪರ್ಕಕ್ಕೆ ಬಂದಿದ್ದ ಕೆಲ ಜನರಲ್ಲಿ ವೈರಸ್‌ನ ಯಾವುದೇ ಲಕ್ಷಣಗಳು ಇರಲಿಲ್ಲ. ಇಂತಹ ಜನರನ್ನು ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ಪಾಸಿಟಿವ್‌ ಇರುವುದು ಕಂಡುಬಂತು. ಆ ಬಳಿಕ ಫಾಲೋ ಅಪ್‌ಗಾಗಿ ಅವರನ್ನು ಕರೆಸಿ ಟೆಸ್ಟ್ ಮಾಡಿದಾಗ ಅವರಲ್ಲಿ ಯಾವುದೇ ಲಕ್ಷಣಗಳಿರಲಿಲ್ಲ.

ಏಪ್ರಿಲ್ 1 ರಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಚೀನಾದಲ್ಲಿ ಇಂತಹ 24 ಜನರನ್ನು ಪರೀಕ್ಷೆಗೊಳಪಡಿಸಿದಾಗ 3 ವಾರಗಳ ಬಳಿಕ ಶೇ.25 ಜನರಲ್ಲಿ ಯಾವುದೇ ಲಕ್ಷಣಗಳಿರಲಿಲ್ಲ. ಒಂದು ಆಶ್ಚರ್ಯದ ಸಂಗತಿಯೆಂದರೆ, ಅವರ ಸರಾಸರಿ ವಯಸ್ಸು 14 ಆಗಿತ್ತು.

ಪ್ರಿಸಿಂಪ್ಟೊಮೆಟಿಕ್‌ : ಇವರು ಎಂತಹ ವ್ಯಕ್ತಿಗಳೆಂದರೆ, ಇವರು ವೈರಸ್‌ನಿಂದ ಸೋಂಕಿತರಾಗಿದ್ದಾರೆ. ಆದರೆ ರೋಗದ ಯಾವುದೇ ಲಕ್ಷಣಗಳು ಪ್ರಕಟವಾಗಿರುವುದಿಲ್ಲ.  ವೈರಸ್‌ಗ್ರಸ್ತರಾಗಿದ್ದರೂ ಅವರಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಏಕೆಂದರೆ ವೈರಸ್‌ನ ಲಕ್ಷಣಗಳು 5 ರಿಂದ 12 ದಿನಗಳ ಅವಧಿಯಲ್ಲಿ ಕಂಡುಬರುತ್ತದೆ. ವೈರಸ್‌ನ ಬಾಧೆ ಹಾಗೂ ಅದರ ಲಕ್ಷಣಗಳು ಕಂಡುಬರುವುದರ ನಡುವಿನ ಸಮಯವೇ ಪ್ರಿಸಿಂಪ್ಟೊಮೆಟಿಕ್‌ ಪೀರಿಯಡ್‌ ಆಗಿದೆ. ಈ ಅವಧಿಯಲ್ಲಿ ಇಂತಹ ಜನರಿಂದ ವೈರಸ್‌ನ ಪ್ರಸಾರ ಆಗುತ್ತದೆ.

ಏಪ್ರಿಲ್ 1ರ ವಿದೇಶಿ ವಕ್ತಾರರ ನ್ಯೂಸ್‌ ಕಾನ್‌ಫರೆನ್ಸ್ ಲಕ್ಷಣಗಳು ಕಂಡುಬಂದ ಬಳಿಕ ಅವರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಆದರೆ ಅಸಿಂಪ್ಟೊಮೆಟಿಕ್‌ಗೆ ಹೋಲಿಸಿದರೆ ಪ್ರಿಸಿಂಪ್ಟೊಮೆಟಿಕ್‌ ಜನರ ಸಂಖ್ಯೆ ಹೆಚ್ಚಿಗೆ ಇದೆ.  ಶೇ.75ರಷ್ಟು ಎಸಿಂಪ್ಟೊಮೆಟಿಕ್‌ ಜನರು ಯಾವುದೇ ಲಕ್ಷಣಗಳಿಲ್ಲದೆಯೇ ಪಾಸಿಟಿವ್ ಆಗಿರುವುದು ಕಂಡುಬಂತು. ಆ ಬಳಿಕ ಪ್ರಿಸಿಂಪ್ಟೊಮೆಟಿಕ್‌ ಆಗಿ ಮುಂದಿನ ದಿನಗಳಲ್ಲಿ ಫಾಲೋಅಪ್‌ ಟೆಸ್ಟ್ ಸಂದರ್ಭದಲ್ಲಿ ವೈರಸ್‌ನ ಲಕ್ಷಣಗಳು ಕಂಡುಬಂದವು. ಇದರರ್ಥ ಇಷ್ಟೆ,  ಯಾವುದೇ ರೋಗ ಲಕ್ಷಣಗಳು ಇರದೇ ಇರುವ ಕಾರಣದಿಂದ ಅವರನ್ನು ಐಸೋಲೇಶನ್‌ ಮಾಡಲಾಗಲಿಲ್ಲ. ಆ ಕಾರಣದಿಂದ ಅವರಿಂದಲೂ ಸೋಂಕು ಪಸರಿಸಿತು.

ವೆರಿ ಮೈಲ್ಡ್ ಸಿಂಪ್ಟೊಮೆಟಿಕ್‌ : ಇವರು ಎಂತಹ ಜನರೆಂದರೆ, ಇವರಲ್ಲಿ ವೈರಸ್‌ನ ಸಾಧಾರಣ ಲಕ್ಷಣಗಳು ಕಂಡುಬಂದವಾದರೂ ಅವರನ್ನು ಐಸೋಲೇಟ್‌ ಮಾಡಲಾಗಲಿಲ್ಲ. ಇವರು ಬೇರೆ ಜನರ ಸಂಪರ್ಕದಲ್ಲಿದ್ದರು. ಇವರಿಂದ ಸೋಂಕಿಗೆ ತುತ್ತಾದ ಜನರು ಬಹುಬೇಗ ಕೋವಿಡ್‌-19ನ ರೋಗಕ್ಕೆ ತುತ್ತಾದರು. ಬಳಿಕ ಇಬ್ಬರೂ ಪಾಸಿಟಿವ್ ಆದರು. ಇಂತಹ ಜನರು ಕೊರೋನಾದ ಲಕ್ಷಣಗಳನ್ನು ಅರಿತುಕೊಳ್ಳಲಿಲ್ಲ.

ಬೇರೆ ಇತರೆ ತೊಂದರೆ ಹಾಗೂ ತಪ್ಪು ಕಲ್ಪನೆಗಳಿಂದಾಗಿ ಹೋಗಿ ಬಂದು ಮಾಡುವಾಗ ಅವರ ವೈರಸ್‌ ಪಸರಿಸಿತು. ಒಂದು ಸಂಗತಿ ಗಮನದಲ್ಲಿರಲಿ. ಇಲ್ಲಿ, ಅವರ ಬಗ್ಗೆ ಚರ್ಚೆ ಆಗುತ್ತಿಲ್ಲ. ಉದ್ದೇಶಪೂರ್ವಕವಾಗಿ  ರೋಗವನ್ನೇ ಬಚ್ಚಿಟ್ಟ ಕೆಲವರ ಪ್ರಕರಣಗಳು ಕೂಡ ಇವೆ.

ಕ್ಲಿಷ್ಟತೆ : ನಮ್ಮ ನಡುವೆ ಎಷ್ಟೊಂದು ಸೈಲೆಂಟ್‌ ಕ್ಯಾರಿಯರ್ಸ್‌ ಇದ್ದಾರೆ ಹಾಗೂ ತಮಗೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ಅವರು ಕೋವಿಡ್‌ ರೋಗ ಪಸರಿಸುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳುವುದು ಕಷ್ಟದ ಸಂಗತಿಯೇ ಹೌದು. ಅಮೆರಿಕಾದ ವಾಷಿಂಗ್‌ಟನ್‌ನಲ್ಲಿ ಎಲ್ಲಕ್ಕೂ ಮುಂಚೆ ಕೊರೋನಾ ವೈರಸ್‌ ಕಂಡುಬಂದಿತ್ತು. ಅಲ್ಲಿನ ಅನೇಕ ಜನರನ್ನು ಪರೀಕ್ಷೆಗೊಳಪಡಿಸಿದಾಗ, ಶೇ.56ರಷ್ಟು ಜನ ಎಂಥವರು ಪಾಸಿಟಿವ್‌ ಕಂಡುಬಂದರೆ, ಅವರಲ್ಲಿ ವೈರಸ್‌ನ ಯಾವುದೇ ಲಕ್ಷಣಗಳಿರಲಿಲ್ಲ.

ಫೆಬ್ರವರಿ ತಿಂಗಳಲ್ಲಿ ಜಪಾನ್‌ನಲ್ಲಿ ಡೈಮಂಡ್‌ ಪ್ರಿನ್ಸೆಸ್‌ ಕ್ರೂಸ್‌ನ ಪ್ರವಾಸಿಗರಲ್ಲಿ ಕೆಲವರು ಅಸಿಂಪ್ಟೊಮೆಟಿಕ್‌ ಇದ್ದವರು. ಚೀನಾ ಹಾಗೂ ಸಿಂಗಾಪೂರ್‌ನಿಂದ ಬಂದ ವರದಿಗಳ ಪ್ರಕಾರ, ಕೊರೋನಾ ವೈರಸ್‌ ಪ್ರಕರಣದಲ್ಲಿ ಶೇ.13ರಷ್ಟು ಪಾಲು ಅಸಿಂಪ್ಟೊಮೆಟಿಕ್‌ ಜನರದ್ದಾಗಿತ್ತು.

ಜಾರ್ಜ್‌ಟೌನ್‌ ಯೂನಿರ್ಸಿಟಿಯ ಪ್ರೊಫೆಸರ್‌ರೊಬ್ಬರ ಪ್ರಕಾರ, ಸೈಲೆಂಟ್‌ ಕ್ಯಾರಿಯರ್ಸ್‌ನಿಂದಾಗಿ ಕೊರೋನಾ ವೈರಸ್‌ನ ಪ್ರಸರಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅಗತ್ಯ ಇದೆ. ಆದಾಗ್ಯೂ ಇದರಿಂದ ತೊಂದರೆಗೆ ಒಳಗಾದವರು, ಆರೋಗ್ಯದಿಂದಿರುವಂತೆ ಕಂಡರೂ, ಅವರು ಇತರೆ ಆರೋಗ್ಯವಂತ ಜನರಿಗೆ ವೈರಸ್‌ನ್ನು ಹಬ್ಬಿಸಬಹುದು ಹಾಗೂ ಅಂಥವರಲ್ಲಿ ಆರಂಭದಿಂದಲೇ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗುತ್ತವೆ.

ಒಂದು ಹೊಸ ಸೈಲೆಂಟ್‌ ಕ್ಯಾರಿಯರ್‌ ಮೃತ ವ್ಯಕ್ತಿಯಿಂದಲೂ ಸೋಂಕಿನ ಅಪಾಯ ಕೊರೋನಾಗಿಂತ ಮೊದಲು ಕೂಡ ಅಂತಹ ಪ್ರಕರಣಗಳು ಕಂಡುಬಂದಿದ್ದವು. ಇಂಥದೇ ವೈರಸ್‌ನಿಂದ `ಎಬೋಲಾ’ ಎಂಬ ರೋಗ ಉಂಟಾಗಿತ್ತು. ಅದರಿಂದ ಸತ್ತ ರೋಗಿಯಿಂದಲೂ ಸೋಂಕು ಉಂಟಾಗಿತ್ತು. ಆಗ `ವಿಶ್ವ ಆರೋಗ್ಯ  ಸಂಸ್ಥೆ ಗೈಡ್‌ಲೈನ್‌’ ಜಾರಿಗೊಳಿಸಿತ್ತು. ಥೈಲ್ಯಾಂಡ್‌ನಲ್ಲಿ ಇಂಥದೊಂದು ಮೊದಲ ಪ್ರಕರಣ ಕಂಡುಬಂದಿತ್ತು. ಕೊರೋನಾ ಸೋಂಕಿನಿಂದ ಮೃತಪಟ್ಟ ರೋಗಿಯಿಂದ ವೈದ್ಯರೊಬ್ಬರಲ್ಲಿ ಸೋಂಕು ಕಂಡುಬಂತು. ಇದೊಂದು ಚಿಂತೆಯ ವಿಷಯವೇ ಹೌದು. ಏಕೆಂದರೆ ಮೃತ ವ್ಯಕ್ತಿಯ ಪೋಸ್ಟ್ ಮಾರ್ಟಮ್ ಹಾಗೂ ಅಂತ್ಯ ಸಂಸ್ಕಾರದಲ್ಲಿ ಯಾರು ಯಾರು ಸಂಪರ್ಕಕ್ಕೆ ಬರುತ್ತಾರೊ, ಅವರಿಗೆಲ್ಲ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಮೃತ ವ್ಯಕ್ತಿಯೊಬ್ಬನ ದೇಹದಲ್ಲಿ ವೈರಸ್‌ ಎಷ್ಟು ಅವಧಿಯತನಕ ಜೀವಂತ ಇರುತ್ತದೆ ಎನ್ನುವುದು ಕೂಡ ಈವರೆಗೂ ಖಚಿತವಾಗಿಲ್ಲ.

ಈವರೆಗೂ ಇದಕ್ಕೆ ಯಾವುದೇ ಸೂಕ್ತ ಔಷಧಿಯೂ ಲಭ್ಯವಾಗಿಲ್ಲ. ಎಲ್ಲರಿಗೂ ಕೊರೋನಾ ಸೋಂಕಿನ ಪರೀಕ್ಷೆ ನಡೆಸುವುದು ಅಸಾಧ್ಯದ ಕೆಲಸವೇ ಸರಿ. ಇದರ ಹೊರತಾಗಿ ಏಕೈಕ ಟೆಸ್ಟ್ ನಿಂದ ಇದರ ಬಗ್ಗೆ ಸರಿಯಾಗಿ ಹೇಳಲು ಸಾಧ್ಯವಿಲ್ಲ. ಒಬ್ಬನೇ ಒಬ್ಬ ಪಾಸಿಟಿವ್‌ ವ್ಯಕ್ತಿ ಹಲವಾರು ಜನರಿಗೆ ಸೋಂಕು ತರಿಸಬಲ್ಲ. ಹೀಗಾಗಿ ಸ್ವಚ್ಛತೆ ಹಾಗೂ ಸುರಕ್ಷಿತ ಉಪಾಯಗಳಿಂದಷ್ಟೇ ನಾವು ಈ ರೋಗದಿಂದ ದೂರ ಇರಲು ಸಾಧ್ಯ.

– ಶಕುಂತಲಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ