ಮಳೆಗಾಲ ಶುರುವಾಯಿತು ಎಂದೊಡನೆ ಚರ್ಮಕ್ಕೆ ಸೋಂಕು, ಮುಖದ ಚರ್ಮ ಒಡೆಯುವುದು, ಕೈಕಾಲುಗಳ ಚರ್ಮದ ಸಿಪ್ಪೆ ಸುಲಿಯುವಿಕೆ, ಕಾಲುಬೆರಳ ಸಂದುಗಳಲ್ಲಿ ಫಂಗಸ್‌ ಹುಣ್ಣು ಇತ್ಯಾದಿ ಸಮಸ್ಯೆ ಎದುರಿಸಬೇಕಾಗುತ್ತದೆ. ಇಲ್ಲಿದೆ ಮಳೆಗಾಲದ ಸಮಸ್ಯೆಗಳನ್ನು ಎದುರಿಸಿ ಸೌಂದರ್ಯ ಸಂರಕ್ಷಿಸಿಕೊಳ್ಳಲು ಸಲಹೆ :

ಚರ್ಮವನ್ನು ಶಾಂತವಾಗಿಟ್ಟುಕೊಳ್ಳಲು, ಕ್ಲೆನ್ಸಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ಗಳು ಅತ್ಯಗತ್ಯ. ಕೂದಲು ಗುಂಗುರು ಆಗುವುದನ್ನು ಹಾಗೂ ಡ್ರೈ ಆಗುವುದನ್ನು ತಪ್ಪಿಸಲು, ಅದಕ್ಕೆ ಹೆಚ್ಚಿನ ಪೌಷ್ಟಿಕತೆ ಒದಗಿಸುವ ಅಗತ್ಯವಿದೆ.

ಮನೆಯಿಂದ ಹೊರಗೆ ಹೊರಡುವ ಮೊದಲು ನಿಮ್ಮ ಕೂದಲಿಗೆ ಅಗತ್ಯವಾಗಿ ಆ್ಯಂಟಿ ಪೊಲ್ಯೂಷನ್‌ ಸ್ಪ್ರೇ ಸಿಂಪಡಿಸಿ. ಚರ್ಮವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸನ್‌ಸ್ಕ್ರೀನ್‌, ಆ್ಯಲೋವೆರಾ ಜೆಲ್‌ ಹಾಗೂ ಇನ್ನಿತರ ಸ್ಕಿನ್‌ ಪ್ರೊಟೆಕ್ಷನ್‌ ಕ್ರೀಂ, ಲೋಶನ್‌ ಗಳನ್ನು ಬಳಸುತ್ತಿರಿ. ಇದು ನಿಮ್ಮ ಚರ್ಮಕ್ಕೆ ಸುರಕ್ಷಾತ್ಮಕ ಕವಚವಾಗಿ ಕೆಲಸ ಮಾಡುತ್ತದೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಸ್ಕಿನ್‌ ಪ್ರೊಟೆಕ್ಟರ್ಸ್‌ ನಿಮ್ಮ ಚರ್ಮದ ರೋಮ ರಂಧ್ರಗಳನ್ನು 6-7 ಗಂಟೆಗಳ ಕಾಲ ಕ್ಲೋಸ್‌ ಮಾಡುತ್ತವೆ ಹಾಗೂ ಪರಿಸರ ಮಾಲಿನ್ಯದಿಂದ ಆಗುವ ಹಾನಿಯನ್ನೂ ನಿಯಂತ್ರಿಸುತ್ತವೆ.

ಚರ್ಮವನ್ನು ಹೈಡ್ರೇಟ್‌  ರಿಜುವಿನೇಟ್‌ ಆಗಿಸಲು ನಿಯಮಿತವಾಗಿ ಎಕ್ಸ್ ಫಾಲಿಯೇಶನ್‌  ಸ್ಕ್ರಬಿಂಗ್‌ ಮಾಡಿಸುತ್ತಿರಬೇಕು. ಹಾಗೂ ಗ್ಲೋ ಪ್ಯಾಕ್‌ ಹಚ್ಚುವುದು ಸಹ ಅತ್ಯಗತ್ಯ. ನೀವು ಮನೆಯಿಂದ ಹೊರಗೆ ಹೊರಡುವಾಗ ವಿಷಭರಿತ ಘಟಕಗಳನ್ನು ಎದುರಿಸಲು ಮನೆಯಿಂದಲೇ ಸಿದ್ಧಪಡಿಸಿದ ಪ್ಯಾಕ್‌ ಗಳನ್ನು ಬಳಸುವುದು ಲೇಸು.

ಮಳೆಗಾಲದಲ್ಲಿ ನೆನೆಯುವುದರಿಂದ ತಲೆಗೂದಲು ಅನಾರೋಗ್ಯಕ್ಕೀಡಾಗಿ ಕೊಳಕಾಗುತ್ತದೆ, ಏಕೆಂದರೆ ಇಂದಿನ ಪರಿಸರ ಮಾಲಿನ್ಯದ ಕಾರಣ ಮಳೆ ನೀರಿನಲ್ಲಿ ವಿವಿಧ ಕೆಮಿಕಲ್ಸ್ ಹಾಗೂ ವಿಷಭರಿತ ಅಂಶಗಳು ಅಡಗಿರುತ್ತವೆ. ಹೀಗಾಗಿ ಉತ್ತಮ ಕಂಪನಿಯ ಕಂಡೀಶನರ್‌  ಶ್ಯಾಂಪೂ ಬಳಸಿರಿ. ಇದು ಕೂದಲನ್ನು ಸಾಫ್ಟ್ ಆಗಿಸಿ, ಅದರ ಆರ್ದ್ರತೆ ನಷ್ಟವಾಗದಂತೆ ರಕ್ಷಿಸುತ್ತದೆ. ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್‌ ಮಾಡುತ್ತಿರಬೇಕು. ಏಕೆಂದರೆ ಮಳೆ ಕಾರಣ ವಾತಾರಣದಲ್ಲಿ ಹೆಚ್ಚು ತೇವಾಂಶ ಇದ್ದೇ ಇರುತ್ತದೆ, ಅದು ಕೂದಲಿನ ಬುಡವನ್ನು ಭದ್ರ ಮಾಡುತ್ತದೆ.

ಎಣ್ಣೆ ಹಚ್ಚಿದ ನಂತರ ಕೂದಲಿಗೆ ಸ್ಟೀಮಿಂಗ್‌  ಮಾಸ್ಕಿಂಗ್‌ ಮಾಡುತ್ತಿರಬೇಕು. ನೀವು ಇದಕ್ಕಾಗಿ ಮನೆಯಲ್ಲೇ ಮಾಸ್ಕ್ ಸಿದ್ಧಪಡಿಸುವುದಾದರೆ ಈ ವಿಧಾನ ಅನುಸರಿಸಿ.

ಅವಕಾಡೋ ಹಣ್ಣಿನ ತಿರುಳು ಕಿವುಚಿ ಅದಕ್ಕೆ ಕಳಿತ ಬಾಳೆಹಣ್ಣು, 1-2 ಚಮಚ ಹಿಪ್ಪೆ ಎಣ್ಣೆ (ಆಲಿವ್‌ ಆಯಿಲ್), ನೆಲ್ಲಿ ರಸ, ಚಿಗರೆಪುಡಿ, ಸೀಗೇಕಾಯಿ ಬೆರೆಸಿ ಪೇಸ್ಟ್ ಮಾಡಿ ತಲೆಗೆ ತಿಕ್ಕಿ ತೊಳೆಯಿರಿ. ಒಣಗಿದ ನಂತರ ರೆಗ್ಯುಲರ್‌ ಆಗಿ ತಲೆ ಬಾಚುತ್ತಿರಿ.

ಮಳೆಗಾಲದಲ್ಲಿ ಸಿಂಥಟಿಕ್‌ ಟೈಟ್‌ ಡ್ರೆಸ್‌ ಧರಿಸಬೇಡಿ. ಸಡಿಲ ಕಾಟನ್‌, ಖಾದಿ ಡ್ರೆಸ್‌ ಧರಿಸಿ. ಇಲ್ಲದಿದ್ದರೆ ನಿಮಗೆ ಚರ್ಮದ ಸೋಂಕು ತಗುಲೀತು. ಎಲ್ಲಕ್ಕೂ ಮಹತ್ವಪೂರ್ಣ ವಿಷಯವೆಂದರೆ ನಿಮ್ಮ ಚರ್ಮಕ್ಕೆ ಎಲ್ಲಾ ಕೀಟಾಣುನಾಶಕ ಪ್ರಾಡಕ್ಟ್ಸ್ ಅಂದ್ರೆ ಮೆಡಿಕೇಟೆಡ್‌ ಸೋಪ್‌, ಫೇಸ್‌, ಬಾಡಿ ಪೌಡರ್‌, ಬಾಡಿ ಲೋಶನ್‌ ಇತ್ಯಾದಿ ಬಳಸುತ್ತಿರಿ. ತೇವಾಂಶ, ಬೆವರಿನಿಂದ ದೇಹಕ್ಕೆ ಸೋಂಕು ತಗುಲದಂತೆ ಇವು ರಕ್ಷಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ