ಜಾಯಿಂಟ್ಸ್ ಪೇನ್‌ ನಿಮ್ಮ ಓಡಾಟಕ್ಕೆ ಬ್ರೇಕ್‌ ಹಾಕದಿರಲು ಈ ಉಪಾಯಗಳನ್ನು ಅಗತ್ಯವಾಗಿ ಅನುಸರಿಸಿ……

ಕೀಲು ನೋವು ಸಾಮಾನ್ಯ ಆಗಿರುತ್ತದೆ, ಗಂಭೀರ ಆಗಿರುತ್ತದೆ. ಸಾಮಾನ್ಯ ನೋವನ್ನು ನಿಮ್ಮ ಆಹಾರ ಮತ್ತು ಜೀವನಶೈಲಿ ಬದಲಿಸಿ ಸರಿಪಡಿಸಿಕೊಳ್ಳಬಹುದು. ಆದರೆ ಗಂಭೀರವಾದ ನೋವಿಗೆ ಚಿಕಿತ್ಸೆಯ ಅಗತ್ಯವಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ 4 ವ್ಯಕ್ತಿಗಳಲ್ಲಿ  ಒಬ್ಬರಿಗೆ ಕೀಲು ನೋವು ಇದ್ದೇ ಇರುತ್ತದೆ. ಇದು ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೆಚ್ಚಾಗಿ ಇರುತ್ತದೆ.

ಕೀಲುನೋವು ಏಕಾಗುತ್ತದೆ?

ಕೀಲುನೋವಿಗೆ ಹಲವಾರು ಕಾರಣಗಳು ಇರುತ್ತವೆ. ಬೋನ್‌ ಫ್ಲೂಯೆಡ್‌ (ಮೂಳೆ ದ್ರವ) ಅಥವಾ ಮೆಂಬ್ರೇನ್‌ನಲ್ಲಿ ಬದಲಾವಣೆ, ಏಟು ಬೀಳವುದು ಅಥವಾ ಒಳಗೆ ಯಾವುದಾದರೂ ಕಾಯಿಲೆ ಉಂಟಾಗುವಿಕೆ, ಮೂಳೆ ಕ್ಯಾನ್ಸರ್‌, ಆರ್ಥ್ರೈಟಿಸ್‌, ಸ್ಥೂಲತೆ, ಬ್ಲಡ್‌ ಕ್ಯಾನ್ಸರ್‌, ವಯಸ್ಸಾದಂತೆ ಕೀಲುಗಳ ನಡುವೆ ಕಾರ್ಟಿವೇಜ್‌ನ್ನು ಬಳುಕುವಂತೆ ಹಾಗೂ ನುಣುಪಾಗಿಡುವ ಲೂಬ್ರಿಕೆಂಟ್‌ ಕಡಿಮೆಯಾಗುವುದು, ಲಿಗಮೆಂಟ್ಸನ ಉದ್ದ ಮತ್ತು ಬಳುಕುವಿಕೆ ಕಡಿಮೆಯಾಗುವುದು….. ಇತ್ಯಾದಿ

health

ಕೀಲುಗಳನ್ನು ಆರೋಗ್ಯವಾಗಿಡಿ

ಕೀಲುನೋವಿಗೆ ವಿಶೇಷವಾಗಿ ಆರ್ಥ್ರೈಟಿಸ್‌ಗೆ ಚಿಕಿತ್ಸೆ ಇಲ್ಲ. ಆದರೆ ಕೆಲವು ಉಪಾಯಗಳಿವೆ. ಅವನ್ನು ಬಳಸಿಕೊಂಡು ಅದರ ಹಿಡಿತದಿಂದ ಪಾರಾಗಬಹುದು ಅಥವಾ ಅದರ ಹಿಡಿತಕ್ಕೆ ಬರುವ ಲಕ್ಷಣಗಳನ್ನು ನಿಯಂತ್ರಿಸಬಹುದು.

– ಕೀಲುಗಳಲ್ಲಿರುವ ಕಾರ್ಟಿವೇಜ್‌ಗೆ ಆರ್ಥ್ರೈಟಿಸ್‌ನಿಂದಾಗಿ ಹಾನಿಯಾಗುತ್ತದೆ. ಇದು ಶೇ.70ರಷ್ಟು ನೀರಿನಿಂದ ತಯಾರಾಗಿರುತ್ತದೆ.    ಆದ್ದರಿಂದ ಹೆಚ್ಚು ನೀರು ಕುಡಿಯಿರಿ.

– ಕ್ಯಾಲ್ಶಿಯಂ ಇರುವ ಆಹಾರ ಪದಾರ್ಥಗಳು ಅಂದರೆ ಹಾಲು, ಹಾಲಿನಿಂದ ತಯಾರಾದ ವಸ್ತುಗಳು, ಬ್ರೋಕ್ಲಿ, ಸಾಲ್ಮನ್‌ಫಿಶ್‌, ಪಾಲಕ್‌, ರಾಜ್ಮಾ, ಕಡಲೆಕಾಯಿ, ಬಾದಾಮಿ, ಟೋಫು ಇತ್ಯಾದಿ ಸೇವಿಸಿ.

– ವಿಟಮಿನ್‌ `ಸಿ’ ಮತ್ತು `ಡಿ’ ಸ್ವಸ್ಥ ಕೀಲುಗಳಿಗೆ ಬಹಳ ಉಪಯುಕ್ತ. ಇವು ಹೆಚ್ಚಿನ ಪ್ರಮಾಣದಲ್ಲಿರುವ ಸ್ಟ್ರಾಬೆರಿ, ಕಿತ್ತಳೆಹಣ್ಣು, ಕಿವಿ ಫ್ರೂಟ್ಸ್, ಪೈನಾಪಲ್, ಹೂಕೋಸು, ಬ್ರೋಕ್ಲಿ, ಎಲೆಕೋಸು, ಹಾಲು, ಮೊಸರು, ಮೀನು ಇತ್ಯಾದಿ ಹೆಚ್ಚಾಗಿ ಸೇವಿಸಿ.

– ಸೂರ್ಯನ ಬೆಳಕಿನಲ್ಲಿಯೂ ಸ್ವಲ್ಪ ಹೊತ್ತು ಕಳೆಯಿರಿ. ಅದರಿಂದ ವಿಟಮಿನ್‌ `ಡಿ’ ಸಿಗುತ್ತದೆ.

– ತೂಕ ನಿಯಂತ್ರಿಸಿಕೊಳ್ಳಿ. ಹೆಚ್ಚು ತೂಕದಿಂದ ಕೀಲುಗಳಿಗೆ ಒತ್ತಡ ಬೀಳುತ್ತದೆ.

– ನಿಯಮಿತಾಗಿ ಎಕ್ಸರ್‌ಸೈಜ್‌ ಮಾಡಿ. ಅದರಿಂದ ಕೀಲುಗಳ ಬಿಗಿತ ಕಡಿಮೆಯಾಗುತ್ತದೆ. ಆದರೆ ಕೀಲುಗಳ ಮೇಲೆ ಹೆಚ್ಚು ಒತ್ತಡ ಬೀಳುವಂತಹ ವ್ಯಾಯಾಮ ಬೇಡ.

– ಮದ್ಯಪಾನ ಹಾಗೂ ಧೂಮಪಾನದಿಂದಾಗಿ ಕೀಲುಗಳಿಗೆ ಹಾನಿಯುಂಟಾಗುತ್ತದೆ. ಆರ್ಥ್ರೈಟಿಸ್‌ ಪೀಡಿತರು ಇವುಗಳ ಸೇವನೆ ನಿಲ್ಲಿಸಿದರೆ ಅವರ ಕೀಲುಗಳು ಮತ್ತು ಮಾಂಸಖಂಡಗಳಲ್ಲಿ ಸುಧಾರಣೆ ಬರುತ್ತದೆ, ನೋವು ಕಡಿಮೆಯಾಗುತ್ತದೆ.

– ಆರೋಗ್ಯವಂತರೂ ಸಹ ಧೂಮಪಾನ ಮಾಡಬಾರದು. ಇಲ್ಲದಿದ್ದರೆ ರುಮೈಟೆಡ್‌ ಆರ್ಥ್ರೈಟಿಸ್‌ಗೆ ಗುರಿಯಾಗಬಹುದು.

– ಹಣ್ಣು ಮತ್ತು ತರಕಾರಿ ಹೆಚ್ಚಾಗಿ ಸೇವಿಸಿ. ಅದರಿಂದ ಆಸ್ಟ್ರಿಯೋ ಆರ್ಥ್ರೈಟಿಸ್‌ನಿಂದ ರಕ್ಷಣೆ ಸಿಗುತ್ತದೆ.

– ಶುಂಠಿ ಮತ್ತು ಅರಿಶಿನ ಸೇವಿಸಿ. ಇದು ಕೀಲುಗಳ ಊತ ಕಡಿಮೆ ಮಾಡುತ್ತದೆ.

– ವಿಲಾಸಿ ಜೀವನ ಸಾಗಿಸಬೇಡಿ.

– ಊತ ಹೆಚ್ಚಿಸುವ ಪದಾರ್ಥಗಳಾದ ಉಪ್ಪು, ಸಕ್ಕರೆ, ಆಲ್ಕೋಹಾಲ್‌, ಕೆಫೀನ್‌, ತೈಲ, ಟ್ರಾನ್ಸ್ ಫ್ಯಾಟ್‌ ಮತ್ತು ಕೆಂಬಣ್ಣದ ಮಾಂಸದ ಸೇವನೆ ಕಡಿಮೆ ಮಾಡಿ.

– ನಡೆಯುವುದು, ಜಾಗಿಂಗ್‌, ಡ್ಯಾನ್ಸಿಂಗ್‌, ಜಿಮ್ಮಿಗೆ ಹೋಗುವುದು, ಮೆಟ್ಟಿಲು ಹತ್ತಿಳಿಯುವುದು ಅಥವಾ ತೆಳುವಾದ ಎಕ್ಸರ್‌ಸೈಜ್‌ನಿಂದಲೂ ಮೂಳೆಗಳನ್ನು ಸದೃಢಗೊಳಿಸಬಹುದು.

sehat

ಚಳಿಗಾಲದಲ್ಲಿ ವಿಶೇಷ ಗಮನ

ಚಳಿಗಾಲದಲ್ಲಿ ಕೀಲುನೋವು ಹೆಚ್ಚು ಸತಾಯಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಜನ ಹೆಚ್ಚು ಆರಾಮವಾಗಿರುತ್ತಾರೆ. ದೈಹಿಕ ಶ್ರಮ ಕಡಿಮೆಯಾಗುತ್ತದೆ. ಹಗಲು ಕಡಿಮೆ ಹಾಗೂ ರಾತ್ರಿ ದೊಡ್ಡದಾಗಿರುವುದರಿಂದ ಜೀನಶೈಲಿ ಬದಲಾಗುತ್ತದೆ. ಆಹಾರದ ಅಭ್ಯಾಸಗಳು ಬದಲಾಗುತ್ತದೆ. ಜನ ವ್ಯಾಯಾಮ ಮಾಡಲು ಹಿಂಜರಿಯುತ್ತಾರೆ. ಅದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಕೆಳಗಿನ ವಿಷಯಗಳನ್ನು ಗಮನಿಸಿ.

– ನಿಯಮಿತಾಗಿ ವ್ಯಾಯಾಮ ಮಾಡಿ. ಶಾರೀರಿಕವಾಗಿ ಸಕ್ರಿಯವಾಗಿರಿ.

– ಹೊರಗೆ ತಂಪಾಗಿದ್ದಾಗ ವಾಕಿಂಗ್‌ ಬೇಡ.

– ನೀರು ಕಡಿಮೆ ಕುಡಿಯಬೇಡಿ. ದಿನ 8-10 ಗ್ಲಾಸ್‌ ನೀರನ್ನು ಕುಡಿಯಿರಿ.

– ಸದಾ ಬೆಚ್ಚನೆಯ ಉಡುಪುಗಳನ್ನು ಧರಿಸಿ.

– ಥಂಡಿಯಿಂದ ರಕ್ಷಿಸಿಕೊಳ್ಳಿ. ನೋವಿರುವ ಭಾಗದಲ್ಲಿ ಬೆಚ್ಚನೆಯ ಬಟ್ಟೆಯನ್ನು ಸುತ್ತಿಡಿ.

– ತಂಪಾದ ಪದಾರ್ಥಗಳನ್ನು ತಿನ್ನುವ ಬದಲು ಬಿಸಿಯಾದ ಆಹಾರ ಸೇವಿಸಿ. ಈರುಳ್ಳಿ, ಬೆಳ್ಳುಳ್ಳಿ, ಸಾಲ್ಮನ್‌ಫಿಶ್‌, ಬೆಲ್ಲ, ಬಾದಾಮಿ, ಗೋಡಂಬಿ ಹೆಚ್ಚು ಸೇವಿಸಿ.

– ನಿಯಮಿತ ವ್ಯಾಯಾಮದಿಂದ ಮಾಂಸಖಂಡಗಳು ಹಿಗ್ಗುತ್ತವೆ. ಕೀಲುಗಳ ಬಿಗಿತದಿಂದ ನೆಮ್ಮದಿ ಸಿಗುತ್ತದೆ. ಆದರೆ ವ್ಯಾಯಾಮ ಮಾಡುವಾಗ ಅವಸರಿಸಬೇಡಿ.

– ಗೋಧಿ ನುಚ್ಚಿನ ರೊಟ್ಟಿ ಮತ್ತು ಹೆಸರುಕಾಳನ್ನು ಸೇವಿಸಿ. ಕುಂಬಳಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು, ಕ್ಯಾರೆಟ್‌ ಇತ್ಯಾದಿ ಸೇವಿಸಿ.

– ಆದಷ್ಟೂ ಹುಣಿಸೆ, ಕೋಕಂ, ನಿಂಬೆ ಬೇಡ.

ನಿಯಮಿತಾಗಿ ಔಷಧಗಳನ್ನು ಸೇವಿಸಿ. ಊತ, ಕೆಂಪಾಗುವಿಕೆ, ಕೀಲುಗಳನ್ನು ಬಳಸುವಾಗ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

– ಡಾ. ನೀರಜಾ

ಮನೆ ಮದ್ದು    

– ನೋವು ಹೆಚ್ಚಿದಾಗ ಪೇನ್‌ ರಿಲೀವರ್‌ ಬಳಸಿರಿ.

– ನೋವು ಮತ್ತಷ್ಟು ಹೆಚ್ಚದಂತೆ, ಕಾಲಿನ ಕೀಲುಗಳ ಮೇಲೆ ಅತ್ಯಧಿಕ ಭಾರ ಹೇರದಿರಿ.

– ಪ್ರತಿದಿನ ನಡುನಡುವೆ 15-20 ನಿಮಿಷ ಐಸ್‌ಪ್ಯಾಕ್‌ ನೀಡಬೇಕು.

– ನಿಮ್ಮನ್ನು ನೀವು ಸದಾ ಬೆಚ್ಚಗಿಡಿ. ದೇಹ ಬೆಚ್ಚಗಿದ್ದಷ್ಟೂ ಕೀಲುಗಳ ಬಾಧೆ ತಗ್ಗುತ್ತದೆ.

– ದ್ರವ ಪದಾರ್ಥಗಳನ್ನು ಬಿಸಿಯಾಗಿಯೇ ಸೇವಿಸಬೇಕು.

– ನಿಯಮಿತಾಗಿ ವ್ಯಾಯಾಮ ಮಾಡುತ್ತಿರಬೇಕು.

– ಒಂದೇ ಕಡೆ ಒಂದೇ ಪೊಸಿಷನ್‌ನಲ್ಲಿ ಬಹಳ ಹೊತ್ತು ಕೂತಿರಬೇಡಿ.

– ಕೀಲುಗಳ ಮೇಲೆ ಸೂರ್ಯರಶ್ಮಿ ಬೀಳುವ ಹಾಗೆ ಬಿಸಿಲಿನಲ್ಲಿ ಓಡಾಡಬೇಕು, ಕ್ರಮೇಣ ಬೆಳಗಿನ ಬಿಸಿಲಲ್ಲಿ ವಾಕಿಂಗ್‌ ಹೆಚ್ಚಿಸಿ.

– ನೀಲಗಿರಿ ಎಣ್ಣೆ ಬಳಸಿ ಆಗಾಗ ಮಸಾಜ್‌ ಮಾಡುತ್ತಿರಿ.

– ಬಿಸಿ ನೀರಿಗೆ ಉಪ್ಪು ಬೆರೆಸಿ, ಅದರಲ್ಲಿ ಕಾಲನ್ನು ಅದ್ದಿಡಿ, ಅದು ಒಳ್ಳೆಯದು.

COMMENT