ಶರತ್ ಚಂದ್ರ
ಯಶ್ ಅಭಿನಯದ 'ಟಾಕ್ಸಿಕ್' ಬಗೆಗಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 'ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಆಡಿಬರಹದಲ್ಲಿ ಬರುತ್ತಿರುವ ಈ ಚಿತ್ರ ದ ಕುರಿತು ಒಂದೊಂದೇ ಅಪ್ಡೇಟ್ ಗಳು ಹೊರ ಬರುತ್ತಿವೆ.

ಅದರಲ್ಲೂ ಚಿತ್ರದಲ್ಲಿ ನಟಿಸುತ್ತಿರುವ ನಟಿ ಮಣಿಯರ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರ ತಂಡ ಒಂದೊಂದೇ ಪಾತ್ರಗಳ ಪರಿಚಯ ಮಾಡುತ್ತಿದೆ. ಈಗಾಗಲೇ ಕಿಯಾರಾ ಅಡ್ವಾಣಿ, ಹ್ಯೂಮ ಖುರೇಶಿ, ನಯನ್ ತಾರಾ ಅವರ ಪೋಸ್ಟರ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.

ಈ ದಿನ ಇನ್ನೊಬ್ಬ ನಾಯಕಿ ತಾರಾ ಸುತಾರಿಯಾ ಅವರ ಪೋಸ್ಟರ್ ಯಶ್ ಸೇರಿ ಚಿತ್ರತಂಡ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ. ಚಿತ್ರದಲ್ಲಿ ರೆಬೆಕಾ ಅನ್ನುವ ಪಾತ್ರ ದಲ್ಲಿ ನಟಿಸುತ್ತಿರುವ ತಾರಾ, ಕೈಲ್ಲಿ ಗನ್ ಹಿಡಿದು ತಮ್ಮ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.ಬಹುಷಃ ಈ ಪಾತ್ರದಿಂದ ಚಿತ್ರಕ್ಕೆ ಇನ್ನೊಂದಷ್ಟು ಗ್ಲಾಮರ್ ಹೆಚ್ಚಾಗಿದೆ ಎನ್ನಬಹುದು.

ತನ್ನ ಹದಿ ಹರೆಯದಲ್ಲೇ ಕಿರುತೆರೆ ಮೂಲಕ ನಟನಾ ವೃತ್ತಿ ಆರಂಭಿಸಿದ ತಾರಾ, ಟೆಲಿವಿಶನ್ ನಲ್ಲಿ' ಬೆಸ್ಟ್ ಆಫ್ ನಿಕ್ಕಿ' ಹಾಗೂ 'ಎರ್ಟೈನ್ಮೆಂಟ್ ಕೇ ಲಿಯೇ ಕುಚ್ ಭೀ ಕರೆಗಾ' ರಿಯಾಲಿಟಿ ಶೋ ನಲ್ಲಿ ಮಿಂಚಿದ್ದರು.

ಕರಣ್ ಜೋಹಾರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್' ಮೂಲಕ ಬಾಲಿವುಡ್ ಪ್ರವೇಶಿಸಿದ್ದ ತಾರಾ ಸುತಾರಿಯಾ ತಡಪ್, ಹೀರೋಪಂತಿ 2 ಹೀಗೆ ಒಂದಷ್ಟು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ದ್ದಾರೆ.ಒಟ್ಟಿನಲ್ಲಿ 'ಟ್ಯಾಕ್ಸಿಕ್ ' ಚಿತ್ರದ ಮೂಲಕ ಒಂದು ದೊಡ್ಡ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ತಾರಾ ಸುತಾರಿಯಾರಿಗೆ ಸಿಕ್ಕಿದೆ.





