ಡ್ರೆಸ್ನ್ನು ಹೊಗಳುವುದೋ ಈ ರೂಪದರ್ಶಿಯನ್ನೋ? : ಯಾರು ಪರ್ಫೆಕ್ಟ್ಲಿ ಫಿಟ್‌ಫೈನ್ ಆಗಿರುತ್ತಾರೋ, ತಮ್ಮ ಸ್ಟೈಲಿಶ್ ಸ್ಮಾರ್ಟ್‌ಬಾಡಿಯನ್ನು ಸ್ವಿಮ್ ಸೂಟ್ ಧರಿಸಿ ಪ್ರದರ್ಶಿಸಲು ಬಯಸುತ್ತಾರೋ, ಅಂಥವರಿಗಾಗಿಯೇ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಇತ್ತೀಚೆಗೆ ಸ್ವಿಮ್ ವೀಕ್ ಶೋ ಏರ್ಪಾಡಾಗಿತ್ತು. ಸ್ವಿಮ್ ಧರಿಸಿದ ತರುಣಿಯರು ಎಲ್ಲಾ ಪೂಲ್, ಬೀಚುಗಳಲ್ಲೂ ಕಂಡು ಬರುತ್ತಾರೆ, ಆದರೆ ಎಲ್ಲ ತೋರ್ಪಡಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ ಎಂಬುದೇ ಕಟು ಸತ್ಯ! ಈ ಸ್ವಿಮ್ ವೀಕ್ ನಿಂದಾಗಿ ಹುಡುಗಿಯರು ತಮ್ಮ ಅಂಗಾಂಗ ಪ್ರದರ್ಶಿಸುತ್ತಾ ಗ್ಲಾಮರಸ್ ಆಗಿ ಮಿಂಚಿದ್ದೇ ಬಂತು, ಅದನ್ನು ನೋಡಲು ಲಕ್ಷಾಂತರ ಪ್ರೇಕ್ಷಕರ ದಂಡು ನೆರೆದಿತ್ತು! ಇಂಥ ಸ್ವಿಮ್ ಸೂಟ್ ಗೆ ಲಾಯಕ್ ಆಗುವಂಥ ಬಾಡಿ ಸಿದ್ಧಪಡಿಸಲು ಅದೆಷ್ಟು ರಾಗಿ ಬೀಸಬೇಕೋ? ಇಲ್ಲಿನ ಕೋಮಲಾಂಗಿಯರಷ್ಟೇ ಇದಕ್ಕೆ ಉತ್ತರಿಸಬಲ್ಲರು!

ಇಲ್ಲಿ ಕಲೆ ಮಾತ್ರ ಗಮನಿಸಿ : ದ. ಅಮೆರಿಕಾದ ಪ್ರಾಣವೇ ಅದರ ಕಾರ್ನಿವಾಲ್ ನಲ್ಲಿ ಅಡಗಿದೆ. ನಮ್ಮಲ್ಲಿ ಜಾತ್ರೆ ಸಮಾರಂಭಗಳಲ್ಲಿ ಇನ್ನಿಲ್ಲದ ಆರ್ಭಟ ಮಾಡುವಂತೆಯೇ ತುಸು ಬಡ ದೇಶಗಳಲ್ಲೂ ಇದನ್ನು ಅಷ್ಟೇ ಸಂಭ್ರಮದಿಂದ ಆಚರಿಸುತ್ತಾರೆ. ಉ/ದ ಅಮೆರಿಕಾದ ಪ್ರದೇಶಗಳಲ್ಲಿ ಇದನ್ನು ಯೂತ್ ಕಲ್ಚರ್ ಹೆಸರಲ್ಲಿ ಬಲು ಜೋಶ್ ನಲ್ಲಿ ಆಚರಿಸುತ್ತಾರೆ. ಅದರಲ್ಲೂ ಈ ವಿಷಯದಲ್ಲಿ ಬ್ರೆಝಿಲ್‌ಬಲು ಫೇಮಸ್. ಅದೇ ತರಹ ಇನ್ನಿತರ ದ. ಅಮೆರಿಕಾದ ದೇಶಗಳಲ್ಲೂ ಅತ್ಯಧಿಕ ಜನ ಜಮಾಯಿಸುತ್ತಾರೆ. ಯಾವಾಗಿನಿಂದ ತೆರೆಮರೆಯಿಂದ ಸರಿದು ಮುಂದೆ ಬಂದು ಎಲ್ಲರೊಂದಿಗೆ ಬೆರೆಯುತ್ತಿದ್ದಾರೋ, ಈ ಉತ್ಸವ ಮತ್ತಷ್ಟು ರಂಗೇರಿಸಿಕೊಂಡಿದೆ. ಮೇಲಿನ ದೃಶ್ಯ ಕ್ಯಾರಿಬಿಯನ್ ಐಲೆಂಡ್ ನ ಒಂದು ತಂಡದ್ದಾಗಿದ್ದು, ಫ್ಲಾರಿಡಾದಲ್ಲಿ ಹೀಗೇ ಅದು ಜನರ ಮನ ಸೂರೆಗೊಂಡಿತು.

ವೇದಿಕೆಗೆ ಇರುವ ಮೌಲ್ಯ : ಹಿಂದಿನ 1926ರ ಕಾಲನ್ನು ಇಂದಿನ ವೇದಿಕೆಯ ಮೇಲೆ ಪ್ರದರ್ಶಿಸಿ, ಪ್ರೇಕ್ಷಕರನ್ನು ಆ ಕಾಲಕ್ಕೆ ಕರೆದೊಯ್ಯುದು ಸುಲಭದ ಮಾತಲ್ಲ. ಆದರೆ ಅಮೆರಿಕಾದ ನಾರ್ವೆ ಪ್ರೊಡಕ್ಷನ್ಸ್ ಹೌಸ್, ಆ ಗತಕಾಲದ ಟೆನ್ನೆಸ್ಸೀ ಸ್ಟೇಟ್ ನ್ನು ಇಂದಿನ ಆಧುನಿಕ ವೇದಿಕೆಯಲ್ಲಿ ಪ್ರದರ್ಶಿಸಿ, ಆ ಕಾಲದ ಸಮಸ್ಯೆಗಳ ಬಗ್ಗೆ ತೋರಿಸಿ, ಪ್ರೇಮವಿರಹಗಳ ಇತಿಹಾಸವನ್ನು ಸಾಮಾನ್ಯ ಕುಟುಂಬಗಳ ಮೂಲಕ ಹೇಳಿಸಿದೆ! ಇಂದಿನ ಆಧುನಿಕ ಪೀಳಿಗೆ ಬಲು ಸಂಕುಚಿತ ಮನೋಭಾವ ಬೆಳೆಸಿಕೊಳ್ಳುತ್ತಿದೆ. ಇಂದಿನವರು ಅನುಭವಿಸುತ್ತಿರುವ ಆಧುನಿಕ ಸೌಲಭ್ಯಗಳಿಗಾಗಿ ಆ ತಲೆಮಾರಿನವರು ಎಷ್ಟೆಲ್ಲ ಬಲಿದಾನ ಮಾಡಿದ್ದಾರೆ ಎಂದು ಇವರು ಗ್ರಹಿಸಬೇಕಿದೆ. ಇಂದಿಗೂ `ವೇದಿಕೆ' ಇಂಥದ್ದಕ್ಕಾಗಿ ಎಷ್ಟು ಪ್ರಬಲ ಮಾಧ್ಯಮವಾಗಿದೆ ಎಂದರೆ, ಇಂದಿನವರು ಹಿಂದಿನವರ ಬಗ್ಗೆ ತಿಳಿಯಲಾಗಲಿ, ಓದಲಾಗಲಿ ಬಯಸುತ್ತಿಲ್ಲ. ಇಂದಿನವರು ಇದಕ್ಕಾಗಿ ಭಾರಿ ಬೆಲೆ ತೆರಬೇಕಾಗುತ್ತದೆ. ಈ ಕುರಿತಾಗಿ ರಷ್ಯಾ, ಉಕ್ರೇನ್, ಇಸ್ರೇಲ್, ಪ್ಯಾಲೆಸ್ಟೈನ್ ಈಗಾಗಲೇ ಬೆಲೆ ತೆತ್ತಿವೆ!

ಹೆಮ್ಮೆಯ ವಿಷಯ : ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದು ತಲೆಗೊಂದು ಕಿರೀಟ ಧರಿಸುವವರಿಗೆ ಈಗಂತೂ ಎಲ್ಲಿಲ್ಲದ ಕೋಡು ಮೂಡುತ್ತದೆ ಎಂಬುದು ನಿಜ! ಮರ್ಮೇಡ್ ಬುಟಿಕ್ ನ ಒಬ್ಬ ಸೀನಿಯರ್ ಮ್ಯಾನೇಜರ್ ಆದವಳು ಮಿಸ್ ಇದಾಹೋ, ಅಮೆರಿಕಾ ಆಗಿ ಆಯ್ಕೆಯಾದಾಗ, ಹೀಗೇ ಹೆಮ್ಮೆ ಪಟ್ಟುಕೊಂಡಳು! ಈ ಕಾಂಟೆಸ್ಟ್ ಇದೀಗ ಪ್ರತಿ ರೆಸಿಡೆನ್ಶಿಯ್ ಕಾಂಪ್ಲೆಕ್ಸ್ ನಲ್ಲೂ ನಡೆಯುವಂತಾಗಿದೆ. ಆದರೆ ಇದನ್ನು ಧರಿಸಿದವರು, ಕೆಲವು ದಿನಗಳ ಮಟ್ಟಿಗೆ ಆಕಾಶದಲ್ಲೇ ವಿಹರಿಸುವುದುಂಟು! ಈಗ ಈ ಸಾಧಾರಣ ಬುಟಿಕ್ ಗೆ ಎಂಥ ಗ್ರೇಡ್ ಬಂದಿದೆ ಎಂದರೆ, ನೀವು ಮಿಸ್ ಇದಾಹೋಳನ್ನು ನೋಡ ಬಯಸಿದರೆ, ಇಲ್ಲಿಗೆ ಬಂದು ಏನಾದರೂ ಖರೀದಿಸಲೇಬೇಕು, ಎಂದು ಬೀಗುತ್ತಿದೆ!





