ಸುಡು ಬಿರು ಬಿಸಿಲಲ್ಲಿ ನಿಮಗೂ ಸಹ ಏನೋ ಒಂದು ಕಾರಣಕ್ಕೆ ಅನಿವಾರ್ಯವಾಗಿ ಹೊರಗೆ ಹೋಗಲೇಬೇಕಾಗುತ್ತದೆ. ಆಗ ನಿಮಗೆ ಇಂಥ ಸನ್‌ಗ್ಲಾಸ್‌ನ ಅಗತ್ಯ ಬಂದೇ ಬರುತ್ತದೆ. ಬಿಸಿಲಲ್ಲಿ ದಣಿದಿರುವ ನಿಮ್ಮ ಕಂಗಳಿಗೆ ಇದು ಕೂಲ್‌ ಕೂಲ್‌ ಅನುಭವ ತುಂಬುತ್ತದೆ.

ಸನ್‌ಗ್ಲಾಸ್‌ ಮೋಡಿ

ಕಂಗಳ ಕಾಂತಿಯನ್ನು ಸುಧಾರಿಸುವ ಕನ್ನಡಕ ಧರಿಸುವ ಬಹಳಷ್ಟು ಮಂದಿ ಸಾಧಾರಣ ಸನ್‌ಗ್ಲಾಸ್‌ನ್ನು ಧರಿಸಲಾಗದೆ ತಾವು ಆ ಭಾಗ್ಯದಿಂದ ವಂಚಿತರು ಎಂದು ಕೊರಗುತ್ತಾರೆ. ಏಕೆಂದರೆ ತಮ್ಮ ದೃಷ್ಟಿದೋಷದಿಂದಾಗಿ ಈಗಾಗಲೇ ಒಂದು ಕನ್ನಡಕ ಧರಿಸಿರುವ ಅವರು, ಅದರ ಮೇಲೆ ಈ ತರಹದ ತಂಪು ಕನ್ನಡಕ ಧರಿಸುವುದು ಕಷ್ಟವಾಗುತ್ತದೆ. ಯಾರಿಗೆ ಇಂಥ ದೃಷ್ಟಿ ದೋಷವಿದೆಯೋ ಅಂಥವರು ಕನ್ನಡಕ ಧರಿಸದೆ ಗಾಡಿ ಓಡಿಸುವುದು ಅಪಾಯಕಾರಿ ಆಗುತ್ತದೆ. ಜೊತೆಗೆ ದೃಷ್ಟಿದೋಷ ನಿವಾರಿಸುವ ಕನ್ನಡಕ ಧರಿಸಿದವರು ಅದಿಲ್ಲದೆ ಟ್ರಾಫಿಕ್‌ ತುಂಬಿದ ರಸ್ತೆಗಳಲ್ಲಿ ನಡೆದಾಡುವುದು ಸಹ ಅಪಾಯಕಾರಿಯೇ ಸರಿ. ಹಾಗಿದ್ದರೆ ಇಂಥ ಮಂದಿ ತಮ್ಮ ಜೀವಮಾನವಿಡೀ ಸನ್‌ಗ್ಲಾಸ್‌ ಧರಿಸಿ ಅದರ ಮಜಾ ಪಡೆಯುವ ಹಾಗೇ ಸಾಧ್ಯವಿಲ್ಲವೇ….. ಹಾಗೇನೂ ಇಲ್ಲ! ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಹೊಸ ಬಗೆಯ ಸನ್‌ಗ್ಲಾಸಸ್‌ನಿಂದಾಗಿ ಅವರು ತಮ್ಮ ದೃಷ್ಟಿದೋಷ ಸರಿಪಡಿಸುವ ನಂಬರ್‌ನ ಕನ್ನಡಕ ಇರುವಂಥ, ಬಿಸಿಲಿನ ಹಾನಿ ತಪ್ಪಿಸುವ (ಟೂ ಇನ್‌ ಒನ್‌) ಹೊಸ ಬಗೆಯ ಸನ್‌ಗ್ಲಾಸ್‌ ಧರಿಸಬಹುದಾಗಿದೆ.

ಇಂಥ ದೃಷ್ಟಿದೋಷ ಸರಿಪಡಿಸುವ ಕನ್ನಡಕ ಧರಿಸುವವರೆಲ್ಲರೂ, ಸನ್‌ಗ್ಲಾಸ್‌ನ ಲಾಭ ಪಡೆಯಬೇಕೆಂದು, ಪರಂಪರಾಗತ ಲೆನ್ಸ್ ಧರಿಸಿ ಬೇರೆ ಬೇರೆ ಋತುಗಳಿಗೆ ತಕ್ಕಂತೆ ಕನ್ನಡಕ ಬದಲಿಸುವ ತೊಂದರೆ ತಪ್ಪಿಸುತ್ತಾರೆ. ಆದರೆ  ಪರಂಪರಾಗತ ಲೆನ್ಸ್ ಎಷ್ಟೋ ಸಲ ಅಡ್ಜಸ್ಟ್ ಆಗುವುದಿಲ್ಲ ಅಥವಾ ಬದಲಾಗುತ್ತಿರುವ ಋತುವಿಗೆ ತಕ್ಕಂತೆ ಅಗತ್ಯಗಳನ್ನು ಪೂರೈಸಲು ಪರಿರ್ತನೆಗೊಳ್ಳುವುದಿಲ್ಲ. ಕೆಲವು ಜನರಂತೂ ಈ ಲೆನ್ಸ್ ತಮ್ಮ  ಸ್ಟೈಲ್ ಗೆ ಮ್ಯಾಚ್‌ ಆಗುವುದಿಲ್ಲ, ಪ್ರಯೋಜನವಿಲ್ಲ ಎನ್ನುತ್ತಾರೆ.

ಪವರ್‌ ಪ್ರೊಟೆಕ್ಷನ್‌

ಪ್ರಿಸ್‌ಕ್ರಿಪ್ಶನ್‌ ಸನ್‌ಗ್ಲಾಸ್‌ ವಿಶೇಷ ಟೆಕ್ನಾಲಜಿ ಸಮರ್ಥಿತ ಸನ್‌ಗ್ಲಾಸ್‌ ಆಗಿದ್ದು, ಇದು ವ್ಯಕ್ತಿಯ ದೃಷ್ಟಿ ಸುಧಾರಿಸಲು ಪವರ್‌ ಲೆನ್ಸ್ ನ್ನೂ ಹೊಂದಿರುತ್ತದೆ. ಪ್ರಿಸ್‌ಕ್ರಿಪ್ಶನ್‌ ಸನ್‌ಗ್ಲಾಸಸ್‌ ಎಲ್ಲಾ ಬಗೆಯ ಪ್ರಿಸ್‌ಕ್ರಿಪ್ಶನ್‌ಗಳಿಗೂ ಲಭ್ಯವಿವೆ.

ಹಿಂದೆಲ್ಲ ಜನ ಸನ್‌ಗ್ಲಾಸಸ್‌ನ್ನು ಸಾಮಾನ್ಯವಾಗಿ ಫ್ಯಾಷನ್‌ ಆ್ಯಕ್ಸೆಸರೀಸ್‌ ಎಂದೇ ಭಾವಿಸಿದ್ದರು. ಅಂದರೆ ಕೇವಲ ಉಳ್ಳವರ ಒಡವೆ ಎಂಬಂತೆ. ಆದರೀಗ ಕಂಗಳ ಆರೋಗ್ಯ ಸುಧಾರಿಸಲು ಇವು ವೆರಿ ಎಸೆನ್ಶಿಯಲ್ ಆ್ಯಕ್ಸೆಸರೀಸ್‌ ಆಗಿವೆ. ಸುಲಭದ ಕೈಗೆಟುಕುವ ದರದಲ್ಲಿ ದೊರಕುವ ಇವು ಸೂರ್ಯನ ಯುವಿ ಕಿರಣಗಳಿಂದ ನಮ್ಮ ಕಂಗಳನ್ನು ರಕ್ಷಿಸುತ್ತವೆ. ಅವುಗಳ ಬಳಕೆ ಇದೀಗ ತೀರಾ ಸಾಮಾನ್ಯ ಎನಿಸಿದೆ.

ಈಗಂತೂ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಕೂಡ ಪ್ರಿಸ್‌ಕ್ರಿಪ್ಶನ್‌ ಸನ್‌ಗ್ಲಾಸ್‌ನ್ನು ತಮ್ಮ ಕಂಗಳ ಜ್ಯೋತಿಯಂತೆ ಕಾಪಾಡಿಕೊಳ್ಳುತ್ತಾರೆ, ಇದು ತಮ್ಮ ಕಂಗಳ ಆರೋಗ್ಯ ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಅವರಿಗೆ ಗೊತ್ತಿದೆ.

– ಪ್ರತಿನಿಧಿ

TAGS : ಸನ್‌ಗ್ಲಾಸ್‌, ದುರ್ಬಲ ದೃಷ್ಟಿ, ಕೂಲ್ ಕೂಲ್ ಅನುಭವ, ಪ್ರಿಸ್‌ಕ್ರಿಪ್ಶನ್‌ ಸನ್‌ಗ್ಲಾಸ್‌, ಎಸೆನ್ಶಿಯಲ್ ಆ್ಯಕ್ಸೆಸರೀಸ್‌ ಫ್ಯಾಷನ್‌ ಆ್ಯಕ್ಸೆಸರೀಸ್‌, ಪವರ್ ಪ್ರೊಟೆಕ್ಷನ್, ಕಾಂಟ್ಯಾಕ್ಟ್ ಲೆನ್ಸ್, ಸೂರ್ಯನ ಯುವಿ ಕಿರಣಗಳು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ