ಸಂಜೆಯ ಪಾರ್ಟಿ ಇರಲಿ, ಫ್ರೆಂಡ್ಸ್ ಜೊತೆ ಹೊರಗಿನ ಸುತ್ತಾಟವಿರಲಿ, ಸನ್‌ಶೈನ್‌ ಮೇಕಪ್‌ ಎಲ್ಲ ಸಂದರ್ಭಕ್ಕೂ ಫಿಟ್‌. ಈ ಲುಕ್ಸ್ ಶಿಮರಿ ಆಗಿದ್ದರೂ ಸಾಕಷ್ಟು ಸಮ್ಮರಿ ಅಂದ್ರೆ ಕೂಲ್‌ ಆಗಿರುತ್ತದೆ. ಹಾಗಿದ್ದರೆ ಇನ್ನೇಕೆ ತಡ? ಓಲ್ಡ್ ಲುಕ್ಸ್ ಗೆ ಬೈ ಬೈ ಹೇಳಿ, ಸನ್‌ ಶೇಡ್ಸ್ ಜೊತೆ ಲುಕ್ಸ್ ನಲ್ಲಿ ಪ್ರಯೋಗ ಮಾಡಲು, ಬೇಸಿಗೆಗೆ ಹಾಯ್‌ ಹೇಳಿ, ದೋಸ್ತಿ ಮಾಡಿಕೊಳ್ಳಿ.

ಎಲ್ಲಕ್ಕೂ ಮೊದಲು ಬೇಸ್‌ನಿಂದ ಶುರು ಮಾಡಿ. ಈ ಸೀಸನ್‌ನಲ್ಲಿ ಕೇವಲ ಪೌಡರ್‌ ಬೇಸ್ಡ್ ಬೇಸ್‌ನಷ್ಟೇ ಬಳಸಬೇಕು. ಹಾಗೆ ಮಾಡುವುದರಿಂದ ಬೆವರು ಕಡಿಮೆ ಆಗುತ್ತದೆ. ಮೇಕಪ್‌ ಬಹಳ ಕಾಲ ಉಳಿಯುತ್ತದೆ. ಇದಕ್ಕಾಗಿ ನೀವು ಗೋಲ್ಡನ್‌ ಟಿಂಟ್‌ಯುಕ್ತ ಶಿಮರಿ ಪ್ಯಾನ್‌ ಕೇಕ್‌ನ್ನು ಬಳಸಬೇಕು. ಇದರಿಂದ ಮುಖದ ಮೇಲೆ ಮ್ಯಾಟ್‌ ಶಿಮರಿ ಲುಕ್ಸ್ ಕಂಡುಬರುತ್ತದೆ.

ಸಮ್ಮರ್‌ನಲ್ಲಿ ಹೀಟ್‌ ಸ್ವೆಟ್‌ ಕಾರಣ, ಇಡೀ ದಿನ ನಾವೆಲ್ಲರೂ ಸಿಂಪಲ್ ನೋ ಮೇಕಪ್‌ ಲುಕ್ಸ್ ನಲ್ಲಿ ಇರಬಯಸುತ್ತೇವೆ. ಹಾಗಿರುವಾಗ ಸಂಜೆ ನಂತರ ಆಕರ್ಷಕ ಶೈನ್‌ ಬರುವಂತೆ ಮೇಕಪ್‌ ಮಾಡಬಾರದೇಕೆ?

ಮೇಕಪ್‌ ಹೆಚ್ಚು ಹೊತ್ತು ಉಳಿಯಲು ಐ ಮೇಕಪ್‌ಗಾಗಿ ಯೆಲ್ಲೋ ಕಲರ್‌ನ ಶೈನಿ ಐ ಶ್ಯಾಡೋವನ್ನು ಕಂಗಳ ಒಳ ಭಾಗದಲ್ಲಿ ಹಚ್ಚಬೇಕು. ಮಧ್ಯದ ಮತ್ತು ಹೊರಭಾಗಗಳಿಗೆ ಜೂಸಿ ಗ್ಲಾಸಿ ಆರೆಂಜ್‌ ಶೇಡ್‌ನಿಂದ ಫಿಲ್ ಮಾಡಿ. ಐ ಮೇಕಪ್‌ಗೆ ಲಾಂಗ್‌ ಲಾಸ್ಟಿಂಗ್‌ ಎಫೆಕ್ಟ್ ನೀಡಲು ಐ ಶ್ಯಾಡೋ ಹಚ್ಚುವ ಮೊದಲು ಕಂಗಳ ಮೇಲೆ ಐ ಪ್ರೈಮರ್‌ ಸಹ ಹಚ್ಚಬಹುದು. ಇದರ ನೆರವಿನಿಂದ ಮೇಕಪ್‌ ಬಹಳ ಹೊತ್ತು ಉಳಿಯುತ್ತದೆ ಮತ್ತು ಐ ಶ್ಯಾಡೋ ಕಲರ್ಸ್‌ ಸಹ ಇಂಟೆನ್ಸ್ ಆಗಿರುತ್ತದೆ.

ಈಗ ಐ ಡೂಗೆ ಪರ್ಫೆಕ್ಟ್ ಫಿನಿಶ್‌ ನೀಡಲು ಐಲಿಡ್‌ ಮೇಲೆ ತೆಳು ಲೈನರ್‌ ಎಳೆಯಿರಿ ಮತ್ತು ಹುಬ್ಬುಗಳನ್ನು ಮಸ್ಕರಾದ ಕೋಟ್ಸ್ ನಿಂದ ಮರ್ಜ್‌ ಮಾಡಿ. ತುಟಿಗಳಿಗೆ ಸನ್‌ ಎಫೆಕ್ಟ್ ನೀಡಲು ಅವನ್ನು ಆರೆಂಜ್‌ ಲಿಪ್‌ಶೇಡ್ಸ್ ನಿಂದ ಸೀಲ್ ಮಾಡಿಬಿಡಿ.

ಖಂಡಿತಾ ಇದು ಸನ್‌ಸೆಟ್‌ ಲುಕ್‌ ನೀಡುತ್ತದೆ, ಆದರೆ ಇದರ ಹೊರತಾಗಿಯೂ ಸಮ್ಮರ್‌ನಲ್ಲಿ ಮುಖದಲ್ಲಿ ಬೆವರುವಿಕೆ ಸಾಧಾರಣ ವಿಷಯವಾಗಿದೆ. ಇದರಿಂದ ಪಾರಾಗಲು ಕೇವಲ ವಾಟರ್‌ಪ್ರೂಫ್‌  ವಾಟರ್‌ ರೆಸಿಸ್ಟಿಂಗ್‌ ಪ್ರಾಡಕ್ಟ್ಸ್ ನ್ನೇ ಬಳಸಬೇಕು.

ಬೇಸಿಗೆಯಲ್ಲೂ ನಳನಳಿಸುತ್ತಿರಿ!

ಇಷ್ಟು ಮಾತ್ರವಲ್ಲದೆ ವಾರದಲ್ಲಿ 2 ಸಲ ಸ್ಕ್ರಬ್‌ ಮಾಡಿಸಬೇಕು. ಇದಕ್ಕಾಗಿ ತರಿತರಿಯಾಗಿ ರುಬ್ಬಿಕೊಂಡ ಮಸೂರ್‌ದಾಲ್‌, ಆರೆಂಜ್‌ ಪೀಲ್‌ ಪೌಡರ್‌, ಮುಲ್ತಾನಿ ಮಿಟ್ಟಿ, ಜವೆಗೋಧಿಯ ಹಿಟ್ಟುಗಳನ್ನು ಕಾಯಿಸದ ಹಸುವಿನ ಹಾಲಿನಲ್ಲಿ ಬೆರೆಸಿ ಅಗತ್ಯವಿರುವ ಕಡೆ ಮೈಕೈಗೆ ಹಚ್ಚಬೇಕು. ಇದು ಚೆನ್ನಾಗಿ ಒಣಗಿದ ನಂತರ, ತಣ್ಣೀರಿನಲ್ಲಿ ತೊಳೆಯಿರಿ. ಈ ಹರ್ಬ್‌ ಸ್ಕ್ರಬ್‌ನಲ್ಲಿ ಆರೆಂಜ್‌ ಪೀಲ್‌ ಬದಲು ಮೂಸಂಬಿ, ನಿಂಬೆ ಸಿಪ್ಪೆಯ ಪುಡಿ ಸಹ ಬಳಸಬಹುದು.

ಇಷ್ಟಾದರೂ ಬೆವರು ಹೆಚ್ಚಿದ್ದರೆ, ಟಚ್‌ಅಪ್‌ಗಾಗಿ ಕರ್ಚೀಫ್‌ ಅಥವಾ ಟಿಶ್ಯು ಪೇಪರ್‌ನಿಂದ ಥಪಥಪನೆ ತಟ್ಟಿ ಒಣಗಿಸಿ. ಜೊತೆಗೆ ಟೂವೇ ಕೇಕ್‌ನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ. ಅಗತ್ಯ ಬಂದಾಗ ಇದರಿಂದ ಟಚ್‌ಅಪ್‌ ನೀಡುತ್ತಿರಿ. ಇತ್ತೀಚೆಗೆ ಮಾರ್ಕೆಟ್‌ನಲ್ಲಿ ಹಲವು ಬಗೆಯ ರೀಫ್ರೆಶಿಂಗ್‌ ಸ್ಪ್ರೇ ಲಭ್ಯವಿವೆ. ಇವು ಒಂದು ಕ್ಷಣದಲ್ಲಿ ನಿಮ್ಮ ಆಯಾಸ ದೂರ ಮಾಡಿ, ನಿಮ್ಮನ್ನು ತಕ್ಷಣ ರೀಫ್ರೆಶ್‌ ಮಾಡುತ್ತವೆ. ನೀವು ವಾಟರ್‌ಪ್ರೂಫ್‌ ಮೇಕಪ್‌ ಮಾಡಿದ್ದರೆ, ದೂರದಿಂದ ಈ ಸ್ಪ್ರೇ ಸಿಂಪಡಿಸಿ, ಒಣಗಲು ಬಿಡಿ. ಇದರಿಂದ ನೀವು ಸಾಕಷ್ಟು ಕೂಲ್‌ ರೀಫ್ರೆಶ್‌ ಆಗಿ ಕಂಗೊಳಿಸುವಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ