ಆರೋಗ್ಯಕರ ಹಾಗೂ ಬಲಿಷ್ಠ ದೇಹಕ್ಕೆ ಕ್ಯಾಲ್ಶಿಯಂ ಕುರಿತಾದ ಈ ಮಾಹಿತಿ ಬಹಳಷ್ಟು ಉಪಯುಕ್ತ ಆಗಬಹುದು......

ಒಂದು ಅಧ್ಯಯನದ ಪ್ರಕಾರ, 14 ರಿಂದ 17ರ ನಡುವಿನ ಶೇ.20ರಷ್ಟು ಹೆಣ್ಣುಮಕ್ಕಳಲ್ಲಿ ಕ್ಯಾಲ್ಶಿಯಂ ಕೊರತೆ ಇರುವುದು ಕಂಡುಬಂದಿದೆ. ಈ ಹಿಂದೆ ಕೇವಲ ಗರ್ಭಿಣಿಯರಲ್ಲಿ ಮಾತ್ರ ಇದರ ಕೊರತೆ ಕಂಡುಬರುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಇಂದಿನ ಅಸ್ತವ್ಯಸ್ತ ಜೀನಶೈಲಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಪ್ಯಾಕೆಟ್‌ ಪ್ಯಾಡ್‌ಗಳ ಮೇಲೆ ಅವಲಂಬಿಸಿದ್ದಾರೆ. ಈ ಕಾರಣದಿಂದ ಅವರ ದೇಹಕ್ಕೆ ಸೂಕ್ತ ಪೋಷಕಾಂಶಗಳು ದೊರಕುತ್ತಿಲ್ಲ.

ಮಹಿಳೆಯರು ಗಂಡ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸುತ್ತಾರೆ. ಆದರೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಒಳ್ಳೆಯ ಆರೋಗ್ಯ ಮತ್ತು ಬಲಿಷ್ಠ ದೇಹಕ್ಕೆ ಕ್ಯಾಲ್ಶಿಯಂ ಅತ್ಯಂತ ಅವಶ್ಯ. ಅದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲಿಷ್ಠವಾಗುತ್ತವೆ.

ನಮ್ಮ ಮೂಳೆಗಳ ಶೇ.70ರಷ್ಟು ಭಾಗ ಫಾಸ್ಛೇಟ್‌ನಿಂದ ರೂಪುಗೊಂಡಿದೆ. ಇದೇ ಕಾರಣದಿಂದ ಕ್ಯಾಲ್ಶಿಯಂ ಮೂಳೆಗಳು ಮತ್ತು ಹಲ್ಲುಗಳ ಒಳ್ಳೆಯ ಆರೋಗ್ಯಕ್ಕೆ ಅತ್ಯವಶ್ಯ. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕ್ಯಾಲ್ಶಿಂಯನ ಅವಶ್ಯಕತೆ ಹೆಚ್ಚಿಗೆ ಇರುತ್ತದೆ. ಅವರ ದೇಹದಲ್ಲಿ 10೦0 ರಿಂದ 1200 ಎಂ.ಎಲ್.ನಷ್ಟು ಕ್ಯಾಲ್ಶಿಯಂ ಇರಬೇಕು. ಇಷ್ಟು ಪ್ರಮಾಣದಲ್ಲಿ ಇರದೇ ಹೋದರೆ ಅವರು ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.

ಕ್ಯಾಲ್ಶಿಯಂ ಆರೋಗ್ಯವಂತ ಹೃದಯ, ಸ್ನಾಯುಗಳ ಫಿಟ್ನೆಸ್‌, ಹಲ್ಲುಗಳು ಹಾಗೂ ಮೂಳೆಗಳು ಆರೋಗ್ಯದಿಂದಿರಲು ಅತ್ಯವಶ್ಯ. ಆದರೆ ಕ್ಯಾಲ್ಶಿಯಂ ಕೊರತೆ ಮೂಳೆಗಳು ಮೇಲಿಂದ ಮೇಲೆ ಫ್ರಾಕ್ಚರ್‌ ಆಗುವುದು ಆಸ್ಟೋಪೊರೊಸಿಸ್‌ನ ಅಪಾಯ ಸಂವೇದನಾ ಶೂನ್ಯತೆ, ಇಡೀ ದೇಹದಲ್ಲಿ ನೋವು ಮಾಂಸಖಂಡಗಳಲ್ಲಿ ಹಿಂಡಿದಂತೆ ನೋವು ದಣಿವು, ಹೃದಯ ಬಡಿತ ಹೆಚ್ಚಳ, ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕೂದಲು ಉದುರುವಿಕೆ ಮುಂತಾದ ಸಮಸ್ಯೆ ಉಂಟಾಗಬಹುದು.

ಇಂತಹ ಸ್ಥಿತಿಯಲ್ಲಿ ಕ್ಯಾಲ್ಶಿಯಂನ ಕೊರತೆಯನ್ನು ನಿಮ್ಮ ಡಯೆಟ್‌ನ ಮುಖಾಂತರ ನೀಗಿಸಿಕೊಳ್ಳಿ.

ಕ್ಯಾಲ್ಶಿಯಂ ಕೊರತೆಗೆ ಏನು ಕಾರಣ?

ಮುಟ್ಟಂತ್ಯದ ವಯಸ್ಸು 40-50ರ ನಡುವೆ ಕ್ಯಾಲ್ಶಿಯಂನ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ ಈ ಅವಧಿಯಲ್ಲಿ ಅವರ ದೇಹದಲ್ಲಿ ಸ್ತ್ರೀ ಹಾರ್ಮೋನು ಈಸ್ಟ್ರೋಜನ್‌ನ ಮಟ್ಟ ಕುಸಿಯತೊಡಗುತ್ತದೆ. ಅಂದಹಾಗೆ ಆಗ ಕ್ಯಾಲ್ಶಿಯಂ ಮತ್ತು ಚಯಾಪಚಯ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಹಾರ್ಮೋನ್‌ ಪರಿವರ್ತನೆ : ಕ್ಯಾಲ್ಶಿಯಂ ರಿಚ್‌ ಡಯೆಟ್‌ ಅಂದರೆ ಹಾಲು, ಮೊಸರು ಮುಂತಾದವುಗಳನ್ನು ಸೇವಿಸದೇ ಇರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಹಾರ್ಮೋನ್‌ ಡಿಸಾರ್ಡರ್‌ ಹೈಪೊಸ್ಟೆರಾಯಿಸಂ : ಈ ಸ್ಥಿತಿಯಲ್ಲಿ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಥೈರಾಯ್ಡ್ನ ಉತ್ಪಾದನೆ ಆಗುವುದಿಲ್ಲ. ಅಂದಹಾಗೆ ಅದು ರಕ್ತದಲ್ಲಿ ಕ್ಯಾಲ್ಶಿಯಂನ್ನು ನಿಯಂತ್ರಿಸುತ್ತದೆ. ಮಹಿಳೆಯರ ಹೆಚ್ಚಿನ ಸಮಯ ಅಡುಗೆಮನೆಯಲ್ಲಿ ಕಳೆಯುತ್ತದೆ. ಆದರೆ ಅಡುಗೆಮನೆಯಲ್ಲಿರುವ ಸಾಕಷ್ಟು ಪದಾರ್ಥಗಳು ಕ್ಯಾಲ್ಶಿಯಂನ ಕೊರತೆಯನ್ನು ನಿವಾರಿಸಬಲ್ಲವು ಎಂಬುದು ಅವರಿಗೆ ಗೊತ್ತಾಗಿರುವುದಿಲ್ಲ. ಅವುಗಳನ್ನು ಸೇವಿಸಿಬಿಟ್ಟರೆ ಹೆಚ್ಚುವರಿಯಾಗಿ ಕ್ಯಾಲ್ಶಿಯಂ ಸೇವನೆ ಮಾಡುವ ಅವಶ್ಯಕತೆ ಉಂಟಾಗುವುದಿಲ್ಲ.

ರಾಗಿ : ಇದರಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೇರಳವಾಗಿರುತ್ತದೆ. 100 ಗ್ರಾಂ ರಾಗಿಯಲ್ಲಿ 370 ಮಿಲಿಗ್ರಾಂ ಕ್ಯಾಲ್ಶಿಯಂ ಇರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ