ಆರೋಗ್ಯಕರ ಜೀವನದ ಆನಂದ ಪಡೆಯಬೇಕಿದ್ದರೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಈ ವಿಧಾನಗಳು ನಿಮಗೆ ಉಪಯುಕ್ತ ಆಗಬಹುದು.

ಚೀನಾ ದೇಶದ ಹವಾನ್‌ ನಗರದಿಂದ ಹಬ್ಬಿದ ಕೊರೋನಾ ಎಂಬ ರೋಗ ಈಗ ಭಾರತದ ಜೊತೆ ಜೊತೆಗೆ ಬೇರೆ ದೇಶಗಳಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಇದು ಎಂತಹ ಒಂದು ಭಯಾನಕ ರೋಗವೆಂದರೆ, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸುಲಭವಾಗಿ ಪಸರಿಸುತ್ತದೆ. ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಎಲ್ಲಕ್ಕೂ ಮುಖ್ಯವಾದುದೆಂದರೆ, ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅಂದಹಾಗೆ ಜನರು ಕೈಗಳ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಬಹಳಷ್ಟು ಜನರ ಅಭಿಪ್ರಾಯದಲ್ಲಿ ಕೈ ತೊಳೆದುಕೊಳ್ಳುವುದೆಂದರೆ ಸೋಪು ಹಾಗೂ ನೀರಿನ ವ್ಯರ್ಥ ಬಳಕೆ ಮಾಡಿದಂತೆ. ಅನೇಕ ಜನರಿಗೆ ಕೈತೊಳೆದುಕೊಳ್ಳುವ ಸರಿಯಾದ ವಿಧಾನ ಕೂಡ ಗೊತ್ತಿಲ್ಲ. ಆ ಕಾರಣದಿಂದ ಜನರಲ್ಲಿ ಸೋಂಕು ಹಾಗೂ ಬಗೆಬಗೆಯ ರೋಗಗಳು ಬಹು ಬೇಗ ಪಸರಿಸುತ್ತಿವೆ.

ವೈದ್ಯಕೀಯ ಕ್ಷೇತ್ರದ ತಜ್ಞರು ಕಳೆದ ಅನೇಕ ವರ್ಷಗಳಿಂದಲೇ ಎಂಥದೇ ರೋಗಗಳಿಂದ ರಕ್ಷಿಸಿಕೊಳ್ಳಲು ಕೈ ತೊಳೆದುಕೊಳ್ಳುವುದು ಸೂಕ್ತ ಉಪಾಯ ಎಂದು ಹೇಳುತ್ತ ಬಂದಿದ್ದಾರೆ.

ಒಂದು ಸಂಶೋಧನೆಯ ಪ್ರಕಾರ ನಮ್ಮ ದೇಶದ ಶೇ.40ರಷ್ಟು ಜನರು ಊಟಕ್ಕಿಂತ ಮುಂಚೆ ಕೈ ತೊಳೆದುಕೊಳ್ಳುವುದಿಲ್ಲ. ಒಂದು ವೇಳೆ ನಾವು ಕೈ ತೊಳೆದುಕೊಳ್ಳುವ ಪ್ರಕ್ರಿಯೆಯನ್ನು ಪರಿಪೂರ್ಣ ಪ್ರಾಮಾಣಿಕತೆಯಿಂದ ನರೆವೇರಿಸಿದರೆ ನಮ್ಮನ್ನು ನಾವು ಹಲವು ರೋಗಗಳಿಂದ ರಕ್ಷಿಸಿಕೊಳ್ಳಬಹುದು.

ಕೈ ತೊಳೆದುಕೊಳ್ಳುವುದು ಏಕೆ ಅತ್ಯವಶ್ಯ?

ನಾವು  ದಿನವಿಡೀ ಏನೇನು ಕೆಲಸ ಮಾಡುತ್ತೇವೆ, ಅದರಲ್ಲಿ ನಮ್ಮ ಕೈಗಳಲ್ಲಿ ರೋಗಾಣು ಇರುವುದು ಸಾಮಾನ್ಯ. ನಾವು ಸಾರ್ವಜನಿಕ ಸ್ಥಳಗಳಿಗೆ ಹೋದಾಗ ಅಲ್ಲಿ ಲಿಫ್ಟ್ಗಳನ್ನು ಬಳಸುತ್ತೇವೆ, ಮೆಟ್ರೋದಲ್ಲಿ ಹ್ಯಾಂಡಲ್ ಹಿಡಿಯುತ್ತೇವೆ. ಆಫೀಸಿನಲ್ಲಿ ಬಾಗಿಲುಗಳು, ನಲ್ಲಿಗಳು, ರೇಲಿಂಗ್‌ಗಳನ್ನು ಮುಟ್ಟುತ್ತೇವೆ. ಅದರಿಂದಾಗಿ ನಮ್ಮ ಕೈಗಳು ಸೋಂಕಿಗೀಡಾಗುತ್ತವೆ. ಒಂದು ವೇಳೆ ನಾವು ಸೋಂಕಿತ ಕೈಗಳಿಂದ ಏನಾದರೂ ತಿಂದರೆ, ಯಾರದ್ದಾದರೂ ಕೈಗಳನ್ನು ಕುಲುಕಿದರೆ ಆಗ ರೋಗಾಣುಗಳು ಇತರರ ಕೈಗಳನ್ನು ತಲುಪುತ್ತದೆ.

ಕೊರೋನಾದಿಂದ ರಕ್ಷಿಸಿಕೊಳ್ಳಲು ಅಮೆರಿಕ ವೈದ್ಯರು `ಡೋಂಟ್‌ ಟಚ್‌ ಯುವರ್‌ ಫೇಸ್‌' ಎಂಬ ಅಭಿಯಾನ ನಡೆಸಿದ್ದರು. ಕೊರೋನಾದಿಂದ ರಕ್ಷಿಸಿಕೊಳ್ಳಲು ಇದು ಅತ್ಯಂತ ಸುಲಭ ಉಪಾಯ ಎನ್ನುವುದು ಅವರ ಹೇಳಿಕೆಯಾಗಿತ್ತು. ಮುಖವನ್ನು  ಸಾಧ್ಯವಿದ್ದಷ್ಟು ಕಡಿಮೆ ಮುಟ್ಟಿ. ಅದರಿಂದ ಕೊರೋನಾ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ನಾವು ಸಾಮಾನ್ಯವಾಗಿ ಒಂದು ಗಂಟೆಗೆ 2-3 ಸಲ  ಮುಖವನ್ನು ಮುಟ್ಟಿಕೊಳ್ಳುತ್ತೇವೆ.

ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಿ.ಡಿ.ಸಿ. ಹಲವು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿ ಅವಶ್ಯಕ ಎಚ್ಚರಿಕೆಗಳನ್ನು ಪಾಲಿಸುವಂತೆ ಸಲಹೆ ನೀಡಿದೆ. ಅದರಲ್ಲಿ ಕೈಗಳನ್ನು ತೊಳೆದುಕೊಳ್ಳುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿವೆ.

ಹಿರಿಯ ಫಿಸಿಯೋಥೆರಪಿಸ್ಟ್ ಡಾ. ಸತ್ಯಂ ಭಾಸ್ಕರ್‌ ನಾವು ಹೇಗೆ ಕೈ ತೊಳೆದುಕೊಳ್ಳಬೇಕು ಎಷ್ಟ ಹೊತ್ತು ಕೈ ತೊಳೆದುಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದರು.

ಸ್ಯಾನಿಟೈಸರ್‌ಗಿಂತ ಸೋಪ್‌ನಿಂದ ಕೈ ತೊಳೆದುಕೊಳ್ಳುವುದು ಸೂಕ್ತ. ಏಕೆಂದರೆ ಮಾರ್ಕೆಟ್‌ನಲ್ಲಿ ಇರುವ ಸ್ಯಾನಿಟೈಸರ್‌ಗಳಲ್ಲಿ ಆಲ್ಕೋಹಾಲ್ ಅಂಶ ಇದ್ದೇ ಇರುತ್ತದೆ ಎಂದು ಹೇಳಲಾಗದು. ನೀವು ಕೈ ತೊಳೆದುಕೊಳ್ಳುವ ಸರಿಯಾದ ವಿಧಾನವನ್ನು ಅನುಸರಿಸಿದರೆ ನಿಮ್ಮ ಕೈಗಳು ಸ್ವಚ್ಛವಾಗುತ್ತವೆ. ಅದಕ್ಕಾಗಿ ನೀವು 20 ಸೆಕೆಂಡುಗಳ ಕಾಲ ಎಣಿಕೆ ಮಾಡುವ ಅವಶ್ಯಕತೆಯೂ ಉಂಟಾಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ