ಮೆಡಿಕಲ್ ಎಕ್ಸ್ ಪರ್ಟ್ಸ್ ಈ ಕುರಿತು ಏನು ಸಲಹೆ ನೀಡುತ್ತಾರೆ?

- ಇನ್‌ಡೋರ್‌ ವರ್ಕ್‌ಔಟ್ಸ್ ಈ ಸೀಸನ್‌ನಲ್ಲಿ ಎಲ್ಲಕ್ಕೂ ಹೆಚ್ಚು ಲಾಭಕರ ಎನಿಸುತ್ತದೆ. ಬೆಳಗ್ಗೆ 5 ಗಂಟೆಗೇ ಎದ್ದು, ತಂಪಾದ ವಾತಾವರಣದಲ್ಲಿ  40-45 ನಿಮಿಷ ವರ್ಕ್‌ಔಟ್‌ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.

- ಈ ಸೀಸನ್‌ನಲ್ಲಿ ಗ್ರೂಪ್‌ ಆ್ಯಕ್ಟಿವಿಟೀಸ್‌ಗೆ ಹೆಚ್ಚಿನ ಗಮನ ಕೊಡಿ. ಇದರಿಂದ ಫಿಟ್‌ ಆಗಿರುವುದರ ಜೊತೆ ಜೊತೆಗೆ ಒಂದು ಹೆಲ್ದಿ ಕಾಂಪಿಟಿಷನ್‌ ಕೂಡ ಕೂಡಿಕೊಳ್ಳುತ್ತದೆ.

- ಈ ಸೀಸನ್‌ನಲ್ಲಿ ಕಪಲ್ಸ್ ತಮ್ಮ ಮಕ್ಕಳ ಜೊತೆ ಹೆಚ್ಚಿನ ಕಾಲ ಕಳೆಯಬೇಕು. ಇದರಿಂದ ಮಕ್ಕಳನ್ನು ಸಂಭಾಳಿಸುವುದರಲ್ಲಿ ಕ್ಯಾಲೋರಿ ಬರ್ನ್‌ ಆಗುವುದಲ್ಲದೆ, ಹೆಚ್ಚಿನ ಮಜಾ ಸಿಗುತ್ತದೆ.

- ಈ ಸೀಸನ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಕುಡಿಯಿರಿ. ಪಚನದ ಯಾವುದೇ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೊಂದೇ ಪರಿಹಾರ. ಕೋಲ್ಡ್ ಪೇಯಗಳು, ನೀರು ಮಜ್ಜಿಗೆ, ಪಾನಕ, ಜೂಸ್‌, ಮಿಲ್ಕ್ ಶೇಕ್‌ ಇತ್ಯಾದಿ ಈ ಸೀಸನ್‌ಗೆ ಹೆಚ್ಚು ಪೂರಕ. ಆಗಾಗ ಎಳನೀರನ್ನೂ ಸೇವಿಸಿ.

- ಈ ಸೀಸನ್‌ನಲ್ಲಿ ಹೆಚ್ಚು ಹೆಚ್ಚು ತಾಜಾ ಹಸಿ ತರಕಾರಿಯ ಸಲಾಡ್‌, ಕೋಸಂಬರಿ ಸೇವಿಸಿ. ಹಸಿರು ಸೊಪ್ಪು, ಟೊಮೇಟೊ, ಮೂಲಂಗಿ, ಸೌತೆಕಾಯಿ, ಕ್ಯಾಪ್ಸಿಕಂ, ಈರುಳ್ಳಿ ಇತ್ಯಾದಿ.

- ಹಾಗೆಯೇ ಹೆಚ್ಚು ನೀರಿನಂಶವುಳ್ಳ ಮೂಸಂಬಿ, ಕಿತ್ತಳೆಹಣ್ಣು, ಕರ್ಬೂಜಾ, ಚಕ್ಕೋತಾ, ಸಿದ್ದೋಟಿ ಹಣ್ಣು ಇತ್ಯಾದಿ ಸೇವಿಸಿ.

- ಈ ಬೇಸಿಗೆಯಲ್ಲಿ ಹೊರಗಿನ ಬಯಲಾಟಕ್ಕಿಂತ ಒಳಾಂಗಣ ಕ್ರೀಡೆಗಳಾದ ಬ್ಯಾಡ್‌ಮಿಂಟನ್‌, ಟೆನಿಸ್‌, ಸ್ಕ್ವಾಶ್‌ ಇತ್ಯಾದಿ ಆಡಿಕೊಳ್ಳಿ.

- ಬೇಸಿಗೆಯಲ್ಲಿ ನೀರಿನಲ್ಲಿ ಈಜಾಟ ಹೆಚ್ಚಿನ ಖುಷಿ ಕೊಡುತ್ತದೆ. ಇದು ತಂಪು ಮಾತ್ರವಲ್ಲದೆ  ಉತ್ತಮ ವ್ಯಾಯಾಮ ಕೂಡ. ಈಜು ದೇಹದ ಅಂಗಾಂಗಗಳಿಗೆ ಹೆಚ್ಚಿನ ಚೈತನ್ಯ ತುಂಬುತ್ತದೆ.

- ಈಜು ನಮ್ಮ ಸ್ಟ್ರೆಸ್‌ ಕಡಿಮೆ ಮಾಡುವುದಕ್ಕೂ ಸಹಕಾರಿ. ನೀವು ಕುಟುಂಬದವರ ಜೊತೆಗೂಡಿ ಈಜಾಡಿದರೆ ಹೆಚ್ಚಿನ ಮಜಾ ಉಂಟು. ಮರೆಯದೆ ದೇಹಕ್ಕೆ `ಸನ್‌ ಟ್ಯಾನ್‌ ಲೋಶನ್‌' ಹಚ್ಚಿಕೊಳ್ಳಿ.

- ಬೇಸಿಗೆಯಲ್ಲಿ ನಿಮ್ಮ ಊಟ-ತಿಂಡಿ ಕಡೆ ವಿಶೇಷ ಗಮನ ಕೊಡಿ. ಆದಷ್ಟೂ ಹುರಿದ ಕರಿದ, ಮಸಾಲೆಯುಕ್ತ ಆಹಾರ ಬೇಡ. ಹಸಿರು ತರಕಾರಿ, ಮೊಸರನ್ನ, ಸಾತ್ವಿಕ ಆಹಾರಕ್ಕೆ ಹೆಚ್ಚು ಮಹತ್ವ ಕೊಡಿ.

- ಲೈಟ್‌ ವೈಟ್‌ ಹಾಗೂ ಲೈಟ್‌ ಕಾಟನ್‌ ಡ್ರೆಸೆಸ್‌ ಈ ಕಾಲಕ್ಕೆ ಸರಿ. ಆಗ ಹೆಚ್ಚು ಕೂಲ್‌ ಎನಿಸುತ್ತದೆ.

- ಬಿಸಿಲಲ್ಲಿ ಹೋಗಬೇಕಾದಾಗ ಕೂಲಿಂಗ್‌ ಗ್ಲಾಸ್‌, ಹ್ಯಾಟ್‌, ಛತ್ರಿ ಮರೆಯಬೇಡಿ. ಉತ್ತಮ ಬ್ರಾಂಡ್‌ನ  30 SPF ಸನ್‌ಸ್ಕ್ರೀನ್‌ ಲೋಶನ್‌ ಹಚ್ಚದೆ ಹೊರಗೆ ಹೊರಡಬೇಡಿ.

- ಹೊರಗೆ ಬಿಸಿಲಿನಿಂದ ಬಂದ ತಕ್ಷಣ ಫ್ಯಾನ್ ಅಥವಾ ಕೂಲರ್‌ ಮುಂದೆ ನಿಲ್ಲಬೇಡಿ. ಸ್ವಲ್ಪ ಹೊತ್ತು ಮಾಮೂಲಿ ತಾಪಮಾನದಲ್ಲಿಯೇ ಕೂರಬೇಕು.

- ಊಟ ಆದ ತಕ್ಷಣ ಬಿಸಿಲಿನಲ್ಲಿ ಹೊರಡಬೇಡಿ.

- ಹೊರಗೆ ದೊರಕುವ ಜೂಸ್‌ ಕುಡಿಯದಿರಿ, ಸೋಂಕು ತಗುಲೀತು.

- ಸುಮತ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ