ಚರ್ಮ ನಮ್ಮ ದೇಹವನ್ನು ಧೂಳು, ಮಣ್ಣು, ಬ್ಯಾಕ್ಟೀರಿಯಾ, ಸೂರ್ಯನ UV ಕಿರಣಗಳು ಇತ್ಯಾದಿಗಳಿಂದ ಕಾಪಾಡುತ್ತದೆ. ಆದರೆ ಕ್ರಮೇಣ ವಯಸ್ಸಾಗ ತೊಡಗಿದಂತೆ, ಅದರಲ್ಲಿನ ಬಳುಕುವಿಕೆ ಮಾಯವಾಗಿ ಕಸುವು ಕುಗ್ಗುತ್ತದೆ. ಈಗ ಇದು ತನ್ನನ್ನು ತಾನು ಬಾಹ್ಯ ಹಾನಿಗಳಿಂದ ರಕ್ಷಿಸಿಕೊಳ್ಳಲಾಗದು. ವಯಸ್ಸು ಹೆಚ್ಚಾದಂತೆ ತ್ವಚೆಯಲ್ಲಿನ ಎಲಾಸ್ಟಿಕ್ ಟಿಶ್ಯು ಹಾಳಾಗುತ್ತಾ ಹೋಗುತ್ತದೆ. ಚರ್ಮ ತೆಳು ಆಗುತ್ತದೆ, ಬಡಕಲಾಗಿ ಜೋತಾಡುತ್ತದೆ. ಆಗ ಚರ್ಮ ಹೆಚ್ಚು ಹೆಚ್ಚಾಗಿ ಪಾರದರ್ಶಕ ಆಗುತ್ತದೆ. ಆಗ ಏಜಿಂಗ್ ಜೊತೆ ಜೊತೆಗೆ ಸುಕ್ಕುಗಳು ಹೆಚ್ಚುತ್ತವೆ. ಹಾಗಾದಾಗ ತ್ವಚೆಯ ವಿಶೇಷ ಆರೈಕೆ ಅತ್ಯಗತ್ಯ ಆಗುತ್ತದೆ. ಈ ಕೆಳಗಿನ ಸಲಹೆಗಳನ್ನು ಅನುಸರಿಸಿ ನೀವು ಇಂಥ ಸಮಸ್ಯೆಗಳಿಂದ ಪಾರಾಗಿ :
ಚರ್ಮ ಬಿಸಿಲಿಗೆ ಬಾಡದಂತೆ ರಕ್ಷಿಸಿ : ಚರ್ಮ ಬಿಸಿಲಿಗೆ ಹಾಳಾಗದಂತೆ ತಡೆದಷ್ಟೂ ಆ್ಯಂಟಿ ಏಜಿಂಗ್‌ಗೆ ಹೆಚ್ಚಿನ ನೆರವು ಸಿಗುತ್ತದೆ. ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಏಜಿಂಗ್ ಬಾಧೆ ಹೆಚ್ಚುತ್ತದೆ. ತೀವ್ರ ಬಿಸಿಲಿನ ಕಾರಣ ಚರ್ಮದ ವಯಸ್ಸು ಅಗತ್ಯಕ್ಕೆ ಮೊದಲೇ ಹೆಚ್ಚಾಗಿರುವಂತೆ ಕಾಣುತ್ತದೆ. ಇದನ್ನೇ ಫೋಟೋ ಏಜಿಂಗ್ ಎನ್ನುತ್ತಾರೆ. ಚರ್ಮಕ್ಕೆ ತೀವ್ರ ಬಿಸಿಲು ಮತ್ತು ಹಾನಿಕಾರಕ UV ಕಿರಣಗಳಿಂದ ರಕ್ಷಣೆ ಪಡೆಯಲು ಡರ್ಮಟಾಲಜಿಸ್ಟ್ ಸಲಹೆ ಹೀಗಿದೆ :
ಸದಾ ನೆರಳಲ್ಲಿರಿ : ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಬಿಸಿಲಿನಲ್ಲಿ ಸುತ್ತಾಡಬೇಡಿ. ಸಾಧ್ಯವದಷ್ಟೂ ನಿಮ್ಮ ಎಲ್ಲಾ ಕೆಲಸಗಳನ್ನು ನೆರಳಲ್ಲೇ ಮಾಡಿಕೊಳ್ಳಿ.
ನಿಮ್ಮನ್ನು ನೀವು ಕವರ್ ಮಾಡಿಕೊಳ್ಳಿ : ನಿಮ್ಮನ್ನು ನೀವು ಟೋಪಿ, ಸ್ಕಾರ್ಫ್‌ನಿಂದ ಕವರ್ ಮಾಡಿಕೊಳ್ಳಿ. ತುಂಬು ತೋಳಿನ ಉಡುಗೆ, ಪ್ಯಾಂಟ್ ಇರಲಿ. ಸನ್‌ಗ್ಲಾಸಸ್ ಧರಿಸಲು ಮರೆಯದಿರಿ.
ಹೊರಗೆ ಹೊರಡುವ ಮೊದಲು ಸನ್‌ಸ್ಕ್ರೀನ್ ಹಚ್ಚಿರಿ : ಕನಿಷ್ಠ 15 SPF ಉತ್ತಮ ಪರಿಣಾಮಕ್ಕಾಗಿ 30 SPF ಸನ್‌ಸ್ಕ್ರೀನ್ ಲೋಶನ್ ಹಚ್ಚಿರಿ. ಇದು ಸೂರ್ಯನ ಎರಡೂ ಬಗೆಯ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ತೀವ್ರ ಬಿಸಿಲಿನ ಚರ್ಮದ ಮೇಲೆ ಸುಕ್ಕು, ಕಪ್ಪು ಉಂಗುರ ಏಜಿಂಗ್ ಕಲೆಗಳು, ಇತ್ಯಾದಿ ಸಮಸ್ಯೆಗಳು ತಲೆದೋರಬಹುದು. ಸನ್‌ಸ್ಕ್ರೀನ್ ಬಳಕೆಯಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು.
ಮೇಕಪ್ ಕಳಚಿರಿ : ರಾತ್ರಿ ಮಲಗುವ ಮೊದಲು ಮೇಕಪ್ ರಿಮೂವ್ ಮಾಡಲು ಮರೆಯದಿರಿ. ಇದರಿಂದ ಚರ್ಮ ರಾತ್ರಿ ಪೂರ್ತಿ ಹಾಯಾಗಿ ಉಸಿರಾಡಬಲ್ಲದು. ರಾತ್ರಿಯಿಡೀ ಮೇಕಪ್ ಚರ್ಮದ ಮೇಲೆ ಹಾಗೇ ಉಳಿದುಬಿಟ್ಟರೆ, ಅದರ ರೋಮರಂಧ್ರಗಳು ಕ್ಲೋಸ್ ಆಗಿಹೋಗಿ, ಬ್ಲ್ಯಾಕ್‌ಹೆಡ್ಸ್ ಏಳುವ ಸಮಸ್ಯೆಗಳಿವೆ.
ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿರಿ : ನಿಮಗೆ ವಯಸ್ಸು ಹೆಚ್ಚಿದಂತೆಲ್ಲ ಚರ್ಮ ಡ್ರೈ ಆಗುತ್ತಾ ಹೋಗುತ್ತದೆ. ಅದಕ್ಕೆ ಸರಿಯಾದ ಹೈಡ್ರೇಶನ್ ಸಿಗದಿದ್ದರೆ ಫೈನ್ ಲೈನ್ಸ್ ಮತ್ತು ಸುಕ್ಕು ಮೂಡುತ್ತದೆ. ಮಾಯಿಶ್ಚರೈಸರ್‌ನಿಂದ ಚರ್ಮದಲ್ಲಿ ಆರ್ದ್ರತೆ ಕೂಡುತ್ತದೆ. ಹೀಗಾಗಿ ಚರ್ಮ ಯಂಗ್ ಆಗಿ ತೋರಿ, ಮೃದುವಾಗುತ್ತದೆ.
ನೀವು ಫೇಶಿಯಲ್ ಮಾಯಿಶ್ಚರೈಸರ್, ಬಾಡಿ ಮಾಯಿಶ್ಚರೈಸರ್, ಲಿಪ್ ಬಾಮ್ ಬಳಸಬಹುದು. ಚರ್ಮವನ್ನು ಡ್ರೈಗೊಳಿಸುವಂಥ ಉತ್ಪನ್ನಗಳನ್ನು ಎಂದೂ ಬಳಸಬೇಡಿ. ಉದಾ : ಒರಟು ಸೋಪು, ಆಲ್ಕೋಹಾಲ್ ಆಧಾರಿತ ಉತ್ಪನ್ನಗಳು.