ಮೇಕಪ್ ಮಾಡಿಕೊಳ್ಳುವ ಮೊದಲು ಮುಖವನ್ನು ಚೆನ್ನಾಗಿ ಶುಚಿಗೊಳಿಸಿ. ಇದಕ್ಕಾಗಿ ಕಾಟನ್ ಬಳಸಿರಿ. ಐ ಲೈನರ್ ಮತ್ತು ಐ ಮೇಕಪ್ ರಿಮೂವ್ ಮಾಡಲು ಇಯರ್ ಬಡ್ ಬಳಸಿಕೊಳ್ಳಿ. ಮುಖಕ್ಕೆ ಮೇಕಪ್ ಮಾಡುವ ಮೊದಲು ಲೈಚ ಟೋನ್‌ನ ಫೇಸ್‌ಪ್ಯಾಕ್ ಹಚ್ಚಿರಿ. ಕಂಗಳ ಸುತ್ತಮುತ್ತಲಿನ ಕಲೆಗಳನ್ನು ನಿವಾರಿಸಲು ಆರೆಂಜ್ ಟೋನ್ ಹಚ್ಚಿರಿ. ಲಿಪ್ ಲೈನರ್‌ನಿಂದ ತುಟಿಗಳಿಗೆ ಬೇಸ್ ಒದಗಿಸಿ. ನಿಮ್ಮ ಕಂಗಳ ಮೇಕಪ್ ಭಾರಿ ಆಗಿದ್ದರೆ, ತುಟಿಗಳ ಮೇಕಪ್ ಲೈಟ್ ಆಗಿರಲಿ. ಈ ಸೀಸನ್‌ನಲ್ಲಿ ತುಟಿಗಳಿಗೆ ಗುಲಾಬಿ, ಕಿತ್ತಳೆಯ ಬಣ್ಣಗಳನ್ನು ಹೆಚ್ಚಾಗಿ ಬಳಸಿರಿ. ಬಲು ಸೂಕ್ಷ್ಮವಾಗಿ, ನೀಟಾಗಿ ಮೇಕಪ್ ಮಾಡಬೇಕು.
ಕನ್ಸೀಲರ್ : ಬೇಸಿಗೆಯಲ್ಲಿ ಫೌಂಡೇಶನ್ ಮುಖವನ್ನು ತುಸು ಹೆವಿಯಾಗಿ ತೋರ್ಪಡಿಸಬಹುದು. ಹೀಗಾಗಿ ಇದರ ಬದಲು ಕನ್ಸೀಲರ್ ಉಪಯೋಗಿಸಿ ಇದು ಮುಖದ ಸುಕ್ಕು ಕಲೆ ನಿವಾರಿಸಬಲ್ಲದು. ನೀವು ಸರಳವಾಗಿ ಕಂಡುಬರಲು ಬಯಸಿದರೆ, ಲಿಕ್ವಿಡ್ ಕನ್ಸೀಲರ್ ಬಳಸಿರಿ. ಮುಖದ ಮೇಲೆ ಕನ್ಸೀಲರ್ ಯಾ ಫೌಂಡೇಶನ್‌ನ್ನು ಎಲ್ಲಾದರೂ ಕೂಲ್ ಆಗಿರುವ ಜಾಗದಲ್ಲಿ ಕುಳಿತು ಮಾಡಿಕೊಳ್ಳಿ. ಇದರಿಂದ ಮೇಕಪ್ ಮಾಡಿಕೊಳ್ಳುವಾಗ ಬೆವರು ಬರುವುದಿಲ್ಲ ಹಾಗೂ ಕನ್ಸೀಲರ್ ಕೂಡ ಸರಿಯಾದ ಜಾಗಕ್ಕೆ ತಗುಲುತ್ತದೆ.
ಕಾಜಲ್ : ನೀವು ಲೈಟ್ ಮೇಕಪ್ ಮಾಡುತ್ತಿದ್ದರೆ, ಕಾಜಲ್ ಲೈಟಾಗಿಯೇ ತೀಡಬೇಕು. ನೀವು ಈವ್ನಿಂಗ್ ಪಾರ್ಟಿಗೆ ಹೊರಟಿದ್ದರೆ, ಆಗ ಕಂಗಳನ್ನು ಹೈಲೈಟ್ ಮಾಡಲು ಡಾರ್ಕ್ ಕಾಜಲ್ ಬಳಸಿರಿ. ಐ ಲೈನರ್ ಐ ಶ್ಯಾಡೋ ಬಹಳ ಹೊತ್ತು ಕಂಗಳ ಮೇಲೆ ಕಂಡುಬರಬೇಕೆಂದರೆ, ಕಾಜಲ್ ತೀಡುವ ಮೊದಲು ಕಂಗಳ ಕೆಳಗೆ ಕಾಂಪ್ಯಾಕ್ಟ್ ಪೌಡರ್ ಹಚ್ಚಿಕೊಳ್ಳಿ. ಇದರಿಂದ ಕಾಜಲ್ ಅನಗತ್ಯ ಹರಡಿಕೊಳ್ಳುವುದಿಲ್ಲ. ಕಂಗಳಿಗೆ ಲಿಕ್ವಿಡ್ ಐ ಲೈನರ್ ಬಳಸದಿರುವುದೇ ಲೇಸು.
ಸೀರೆ ಅಥವಾ ಸಲ್ವಾರ್‌ಸೂಟ್‌ನಂಥ ಟ್ರೆಡಿಷನಲ್ ಡ್ರೆಸೆಸ್ ಹಬ್ಬಗಳಲ್ಲಿ ಎಲ್ಲರಿಗೂ ಇಷ್ಟ. ಆದರೆ ನೀವು ವೆಸ್ಟರ್ನ್ ಬಟ್ಟೆ ಧರಿಸಿದ್ದರೆ, ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಮೇಕಪ್‌ನದೇ ಆಗಿರುತ್ತದೆ. ಏಕೆಂದರೆ ವೆಸ್ಟರ್ನ್ ಡ್ರೆಸೆಸ್‌ಗೆ ಮಾಡಬೇಕಾದ ಮೇಕಪ್ ಬೇರೆ ಹಾಗೂ ಸೀರೆ/ಸಲ್ವಾರ್‌ಗೆ ಮಾಡುವ ಮೇಕಪ್ ಬೇರೆ ತರಹದ್ದಾಗಿರುತ್ತದೆ. ಹೀಗಾಗಿ ಮೇಕಪ್‌ಗೆ ಮೊದಲು ಕೆಲವು ವಿಷಯಗಳನ್ನು ಅಗತ್ಯವಾಗಿ ತಿಳಿದಿರಬೇಕು. ನಿಮ್ಮ ಡ್ರೆಸ್‌ಗೆ ತಕ್ಕಂತಲ್ಲ, ನಿಮ್ಮ ಮುಖ ಚಹರೆಗೆ ತಕ್ಕಂತೆ ಮೇಕಪ್ ಮಾಡಿ. ಇದರಲ್ಲಿ 2 ಬಣ್ಣಗಳಿದ್ದರೆ, ಆಗ ಐ ಶ್ಯಾಡೋವನ್ನು ಚೆನ್ನಾಗಿ ಬ್ಲೆಂಡ್ ಮಾಡಬೇಕು.
ಫೌಂಡೇಶನ್ : ಯಾವಾಗಲೂ ಫೌಂಡೇಶನ್ ಕೊಳ್ಳುವಾಗ ಯಾವುದನ್ನು ಆರಿಸಬೇಕು ಎಂಬುದೇ ಸಮಸ್ಯೆ. ನೀವು ಯಾವಾಗ ಫೌಂಡೇಶನ್ ಆರಿಸಿಕೊಂಡರೂ, ಯಾವ ಬಣ್ಣ ನಿಮ್ಮ ಮುಖಚಹರೆಯಲ್ಲಿ ಚೆನ್ನಾಗಿ ವಿಲೀನಗೊಳ್ಳುತ್ತಿದೆ ಎಂಬುದನ್ನು ಗಮನಿಸಿಕೊಳ್ಳಿ. ಆದರೆ ಒಬ್ಬ ವ್ಯಕ್ತಿಯ ಮುಖದಲ್ಲಿ ಹಲವು ಬಗೆಯ ಶೇಡ್ಸ್ ಇರುತ್ತವೆ, ಆದ್ದರಿಂದ ಫೌಂಡೇಶನ್ ಟೆಸ್ಟ್ ಎಲ್ಲಿ ಮಾಡುವುದು ಎಂಬುದನ್ನು ಮೊದಲೇ ಕಂಡುಕೊಳ್ಳಿ.
ಒಂದು ಪಕ್ಷ, ಒಂದು ಬಣ್ಣ ಇಡೀ ಮುಖವನ್ನು ಕವರ್ ಮಾಡಲಾಗದಿದ್ದರೆ, ಆಗ ನೀವು 2 ಬಣ್ಣಗಳನ್ನು ಆರಿಸಬಹುದು. ಬೇಸ್‌ನ್ನು ಜಾ ಲೈನ್ ಬಳಿ ಟೆಸ್ಟ್ ಮಾಡಿ, ಏಕೆಂದರೆ ಈ ಭಾಗ ಕುತ್ತಿಗೆ, ಮುಖ ಎರಡನ್ನೂ ಕವರ್ ಮಾಡುತ್ತದೆ. ನಂತರ ನೀವು ಯಾವ ಬಣ್ಣ ಆರಿಸಿರುವಿರೋ ಅದನ್ನು ಮುಖಕ್ಕೆ ಹಚ್ಚಿರಿ.