ಆಹಾರ ನಿಮ್ಮ ಚರ್ಮದ ಬಣ್ಣ, ಕೂದಲಿನ ಸ್ವಾಸ್ಥ್ಯ, ಮೂಡ್‌ನ್ನು ಸಹ ಪ್ರಭಾವಿತಗೊಳಿಸುತ್ತದೆ. ನೀವು ಆಂತರಿಕವಾಗಿ ಆರೋಗ್ಯವಂತರಾಗಿದ್ದರೆ, ನಿಮ್ಮ ಚರ್ಮ ಸಹಜವಾಗಿಯೇ ಹೊಳೆಯತೊಡಗುತ್ತದೆ. ಅದಕ್ಕೆ ಕೃತಕ ಸಾಧನಗಳ ಅಗತ್ಯವೇ ಇಲ್ಲ. ನಿಮ್ಮ ಚರ್ಮವನ್ನು ನೋಡಿದಾಗ ನಿಮ್ಮ ಆರೋಗ್ಯದ ಗುಟ್ಟು ತಿಳಿಯುತ್ತದೆ. ಆಹಾರದಲ್ಲಿ ಧಾರಾಳವಾಗಿ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಮಿನರಲ್ಸ್ ಬಳಸುವುದರಿಂದ ಅದು ನಿಮ್ಮ ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ನಿಮ್ಮ ಚರ್ಮವನ್ನೂ ಹೊಳೆಹೊಳೆಯುವಂತೆ ಮಾಡಬಲ್ಲದು. ಚರ್ಮವನ್ನು ಸುಂದರ, ಸ್ವಸ್ಥಗೊಳಿಸುವುದು ಅಸಾಧ್ಯದ ಕೆಲಸವೇನಲ್ಲ.

ಸರಿಯಾದ ಆಹಾರ ಕ್ರಮ ತೂಕವನ್ನು ನಿಯಂತ್ರಿಸುತ್ತದೆ : ಹೆಚ್ಚಿನ ಆಹಾರ ಸೇವನೆ ಅಥವಾ ತಪ್ಪಾದ ಆಹಾರ ಸೇವನೆಯಿಂದ ದೇಹ ತೂಕ ಹೆಚ್ಚುತ್ತದೆ. ಆದರೆ ಇದರರ್ಥ ನೀವು ಮಾಡೆಲ್‌ನಂತೆ ನಿಮ್ಮ ದೇಹವನ್ನು ಬಿಲ್‌ಕುಲ್ ‌ತೆಳುವಾಗಿಟ್ಟುಕೊಳ್ಳಲೇಬೇಕು ಎಂದೇನಲ್ಲ. ಅದೇ ತರಹ ಸ್ಥೂಲತೆಯೂ ಒಳ್ಳೆಯದಲ್ಲ. ಏಕೆಂದರೆ ಇದು ಶುಗರ್‌, ಬಿಪಿ, ಹೃದ್ರೋಗಗಳ ತವರು.

Omega-3

ಸಮರ್ಪಕ ಆಹಾರ ಬಳಸದಿರುವುದರಿಂದ ಕೂದಲು ಶುಷ್ಕ ಮತ್ತು ನಿರ್ಜೀವ ಆಗಿಬಿಡುತ್ತದೆ : ನಿಮ್ಮ ಕೂದಲಿಗೂ ಸಹ ಪೋಷಣೆಯ ಅಗತ್ಯ ಖಂಡಿತಾ ಇದೆ. ಹೀಗಾಗಿ ಆಹಾರದ ನೇರ ಪರಿಣಾಮ ಕೂದಲಿನ ಮೇಲಾಗುತ್ತದೆ. ನಿಮ್ಮ ಆಹಾರದಲ್ಲಿ ವಿಟಮಿನ್ಸ್, ಮಿನರಲ್ಸ್ ನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುತ್ತಿಲ್ಲವಾದರೆ, ಹೇರ್‌ ಫಾಲಿಕ್ಸ್‌ ದುರ್ಬಲವಾಗುತ್ತದೆ. ಇದರಿಂದ ಕೂದಲು ದುರ್ಬಲಗೊಂಡು ತೆಳುವಾಗುತ್ತಾ, ಉದುರತೊಡಗುತ್ತದೆ.

 

ಉಗುರುಗಳಿಗೂ ಬೇಕು ಪೋಷಣೆ :  ನಿಮ್ಮ ಉಗುರು ಸುಲಭವಾಗಿ ಮುರಿಯುವ ಹಾಗಿದ್ದರೆ, ಇದರರ್ಥ ನೀವು ನಿಮ್ಮ ಆಹಾರದಲ್ಲಿ ಅಗತ್ಯವಾಗಿ ಬದಲಾವಣೆ ಮಾಡಿಕೊಳ್ಳಬೇಕು ಅಂತ. ಕೂದಲಿನ ತರಹವೇ ಉಗುರಿಗೂ ಸಹ ಪೋಷಣೆಯ ಅಗತ್ಯವಿದೆ. ಹೀಗಾಗಿ ತಾಜಾ ತರಕಾರಿ, ಮೊಳಕೆಕಾಳು, ಕಡಿಮೆ ಕೊಬ್ಬಿನಂಶದ ಡೇರಿ ಪ್ರಾಡಕ್ಟ್ಸ್, ಮೊಟ್ಟೆ, ವೈಟ್‌ಲೀನ್‌ ಮೀಟ್‌ ಸೇವಿಸಬೇಕು. ಇದರಿಂದ ಉಗುರಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್‌ ಅಂಶ ಸಿಗುತ್ತದೆ.

Vitamin-E

ಪೋಷಕ ಪದಾರ್ಥಗಳ ಅಭಾ ದಲ್ಲಿ ಮಾಂಸಖಂಡಗಳು ದುರ್ಬಲ ಹಾಗೂ ಚಿಕ್ಕದಾಗುತ್ತವೆ : ನಿಮ್ಮ ಮಾಂಸಖಂಡಗಳು ಹಾಗೂ ಸೌಂದರ್ಯಕ್ಕೆ ನೇರ ಸಂಬಂಧವಿದೆ. ನಿಮ್ಮ ಮಾಂಸಖಂಡಗಳು ಕ್ರಮೇಣ ದುರ್ಬಲವಾಗತೊಡಗಿದಂತೆ ನೀವು ಯಾವುದೇ ವರ್ಕ್‌ಔಟ್‌ ಮಾಡಲಾಗದು, ದೂರದ ವಾಕಿಂಗ್‌ ಆಗದು. ಇದರ ಪರಿಣಾಮ ನಿಮ್ಮ ದೇಹದ ಮುದ್ರೆಗಳ ಮೇಲೆ ಆಗುತ್ತದೆ. ಹೀಗಾಗಿ ನಿಮ್ಮ ಮಾಂಸಖಂಡಗಳನ್ನು ಅಗತ್ಯ ಸಶಕ್ತಗೊಳಿಸಿ. ಇದಕ್ಕಾಗಿ ಧಾರಾಳ ಪ್ರೋಟೀನ್‌ ಅಂಶವುಳ್ಳ ಹಾಲು, ಮೊಳಕೆಕಾಳು, ಸೋಯಾ ಇತ್ಯಾದಿ ಸೇವಿಸಿ. ಆಗ ಅವು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತವೆ.

 

ನೀವು ಏನೇ ಸೇವಿಸಿದರೂ, ಅದು ನಿಮ್ಮ ಚರ್ಮದಲ್ಲಿ ಪ್ರತಿಫಲಿಸುತ್ತದೆ : ಶುಷ್ಕ ಮತ್ತು ನಿರ್ಜೀವ ತ್ವಚೆ ನಿಮ್ಮ ಆಹಾರದ್ದೇ ಪರಿಣಾಮವಾಗಿದೆ. ನೀವು ಪ್ರೋಟೀನ್‌ನ್ನು ಧಾರಾಳ ಸೇವಿಸಿದ್ದೇ ಆದಲ್ಲಿ, ತಾಜಾ ಹಸಿ ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸಿದರೆ, ಆಗ ಮಾತ್ರ ನಿಮ್ಮ ಚರ್ಮ ಯೌವನಭರಿತ ಆಗಿರುತ್ತದೆ, ಸದಾ ತಾರುಣ್ಯಕಾಂತಿ ಚೆಲ್ಲುತ್ತದೆ. ಪ್ರೋಸೆಸ್ಡ್ ಫುಡ್‌, ಕೊಬ್ಬು ತುಂಬಿದ ಆಹಾರ ಪದಾರ್ಥಗಳಿಂದ ಆದಷ್ಟೂ ದೂರವಿರಿ. ಇದರಿಂದ ಚರ್ಮ ಜಿಡ್ಡುಜಿಡ್ಡಾಗುತ್ತದೆ. ಆಗ ಸಹಜವಾಗಿಯೇ ಆ್ಯಕ್ನೆ ಮೊಡವೆಗಳು ಹೆಚ್ಚುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ