30 ವರ್ಷಗಳ ಹಿಂದೆ ನಾಲ್ಕು ಕಾಯಿಲೆಗಳಿಂದ ಬಳಲುತ್ತಿದ್ದ ಶಿವಮೊಗ್ಗದ ರಘುನಾಥ ಗುರೂಜಿ ಅವರು ದಿನಾಲು 14 ಮಾತ್ರೆಗಳನ್ನು ನುಂಗುತ್ತಿದ್ದರು. ಜೀವನದ ಬಗ್ಗೆಯೇ ಅವರಿಗೆ ಬೇಸರ ಹುಟ್ಟಿಬಿಟ್ಟಿತ್ತು. ಆಗ ಅವರಿಗೆ ಒಂದು ಚಿಕಿತ್ಸಾ ಪದ್ಧತಿಯ ಬಗ್ಗೆ ತಿಳಿಯಿತು. ಅದರ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿ ತಮಗೆ ತಾವೇ ಚಿಕಿತ್ಸೆ ಮಾಡಿಕೊಂಡರು. ನಾಲ್ಕೈದು ತಿಂಗಳಲ್ಲಿಯೇ ಆ ರೋಗಗಳಿಂದ ಮುಕ್ತರಾದರು.

ಬೇರೆಯವರಿಗೂ ಈ ಚಿಕಿತ್ಸೆ ನೀಡಲು ಆರಂಭಿಸಿದರು. 16 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು `ಟೆಂಪಲ್ ಆಫ್‌ ಸಕ್ಸಸ್‌' ಹೆಸರಿನಲ್ಲಿ ಚಿಕಿತ್ಸಾ ಕೇಂದ್ರ ಆರಂಭಿಸಿ, ಅನೇಕ ರೋಗಿಗಳಿಗೆ ಆಶಾಕಿರಣವಾಗಿ ಪರಿಣಮಿಸಿದ್ದಾರೆ. ಔಷಧಿ, ಮಾತ್ರೆ, ಚುಚ್ಚುಮದ್ದು ಇಲ್ಲದೆ ಯಾವುದೇ ಕಾಯಿಲೆಯನ್ನು ಕೆಲವು ವಿಶಿಷ್ಟ ಪದ್ಧತಿಗಳಿಂದ ಗುಣಪಡಿಸುವುದೇ  `ಅಮೃತ ಚಿಕಿತ್ಸೆ'ಯ ಮೂಲತತ್ವ.

ಮನುಷ್ಯನ ಆರೋಗ್ಯದಲ್ಲಿ ನೀರು, ನಿಂಬೆಹಣ್ಣು ಅತ್ಯಮೂಲ್ಯ ಪಾತ್ರ ವಹಿಸುತ್ತವೆ.

`ಟೆಂಪಲ್ ಆಫ್‌ ಸಕ್ಸಸ್‌'ನಲ್ಲಿ ಉಷಃಪಾನ ಸಹಿತವಾಗಿ ಅನೇಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ.

ಬೇರೆ ಬೇರೆ ವೈದ್ಯಕೀಯ ಪದ್ಧತಿಗಳಲ್ಲಿ ಗುಣವಾಗದ ಅನೇಕ ರೋಗಿಗಳು ಇಲ್ಲಿ ಗುಣಮುಖರಾಗಿ ಹೋದ ಸಾಕಷ್ಟು ಉದಾಹರಣೆಗಳಿವೆ. ಜೀವನಶೈಲಿ, ಆಹಾರಶೈಲಿ ಹಾಗೂ ಯೋಚನಾಶೈಲಿಯನ್ನು ಸಕಾರಾತ್ಮಕಗೊಳಿಸಿಕೊಂಡರೆ ನಾವು ಸಾಕಷ್ಟು ರೋಗಗಳಿಂದ ದೂರವಿರಬಹುದು ಎಂದು `ಅಮೃತ ಚಿಕಿತ್ಸೆ'ಯ ಮೂಲಕ ರೋಗಿಗಳಿಗೆ ಇಲ್ಲಿ ಮನದಟ್ಟು ಮಾಡಿಕೊಡಲಾಗುತ್ತದೆ.

`ಟೆಂಪಲ್ ಆಫ್‌ ಸಕ್ಸಸ್‌'ನಲ್ಲಿ ರೋಗಿಗಳಿಗಷ್ಟೇ ಅಲ್ಲ, ಜನರ ವೈಯಕ್ತಿಕ, ಸಾಮಾಜಿಕ, ಆರ್ಥಿಕ, ಕೌಟುಂಬಿಕ ಸಮಸ್ಯೆಗಳಿಗೂ ಪರಿಹಾರ ಸೂಚಿಸಿ, ಅವರ ಜೀವನವನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡುವ ವಿನೂತನ ಕಾರ್ಯ ಕೂಡ ಮಾಡಲಾಗುತ್ತದೆ.  `ಕೆಳಗೆ ಬಿದ್ದವರಿಗಾಗಿ ಇಷ್ಟಸಿದ್ಧಿ' ಎಂಬ ಕಾರ್ಯಕ್ರಮವನ್ನು ಇದೇ ಚಿಕಿತ್ಸಾ ಕೇಂದ್ರದಲ್ಲಿ ಮೇಲಿಂದ ಮೇಲೆ ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ಅನೇಕರು ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ಟೆಂಪಲ್ ಆಫ್‌ ಸಕ್ಸಸ್‌, ಮೇಲಾ ಪ್ಲಾಜಾ, ಜ್ಯುವೆಲ್ ‌ಸೋಕ್‌ ಬಿಲ್ಡಿಂಗ್‌, ಆರ್‌.ವಿ. ರಸ್ತೆ, (ಲಾಲ್‌ಬಾಗ್‌ ವೆಸ್ಟ್ ಗೇಟ್‌ ಕಾಮತ್ ಹೋಟೆಲ್ ‌ಪಕ್ಕ)  ವಿ.ವಿ. ಪುರಂ, ಬೆಂಗಳೂರು - 560004.  ಫೋನ್: 080 22426789,  91 8147338259 / 8147573944

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ