ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ವ್ಯಾಯಾಮದಿಂದ ಹಲವು ಲಾಭಗಳಿವೆ. ಆದರೆ ನಾವೀಗ ನಡೆಸುತ್ತಿರುವ ಧಾವಂತದ ಜೀವನಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯವೇ ದೊರೆಯುವುದಿಲ್ಲ. ಹಲವು ವರ್ಷಗಳಿಂದ ಏಕತಾನತೆಯ ಜೀವನ ನಡೆಸುವುದು ಹಲವು ಬಗೆಯ ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಅದರಲ್ಲಿ ದೈಹಿಕ ಸ್ಥಿತಿಗಳ ಜೊತೆ ಜೊತೆಗೆ ಮಾನಸಿಕ ಸ್ಥಿತಿಗಳು ಕೂಡ ಸೇರಿವೆ.

ನಮ್ಮ ದೇಹಕ್ಕೆ ದಿನ ಸ್ವಲ್ಪ ಮಟ್ಟಿನ ಕ್ರಿಯಾಶೀಲತೆ ಅತ್ಯಗತ್ಯ. ಅದು ಯಾವುದೇ ರೂಪದಲ್ಲಾಗಿರಬಹುದು. ಅದರಿಂದಾಗಿ ನಮ್ಮ ದೈಹಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ವ್ಯಾಯಾಮದಿಂದ ಹಲವು ಸಕಾರಾತ್ಮಕ ಲಾಭಗಳಿವೆ. ಅದೇ ರೀತಿ ಹಲವು ನಕಾರಾತ್ಮಕ ಪರಿಣಾಮಗಳೂ ಸಹ ಆಗಬಹುದು. ಇದರ ಕಡೆ ಯಾರ ಗಮನ ಅಷ್ಟಾಗಿ ಹೋಗುವುದಿಲ್ಲ. ಅತಿಯಾದ ವ್ಯಾಯಾಮದಿಂದ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು.

ವ್ಯಾಯಾಮದ ಸಕಾರಾತ್ಮಕ ರೂಪ

ಹೃದಯದ ಸ್ಥಿತಿಗತಿಯಲ್ಲಿ ಸುಧಾರಣೆ : ನಮ್ಮ ಹೃದಯದ ಸ್ಥಿತಿ ನಾವು ದೈಹಿಕವಾಗಿ ಎಷ್ಟರಮಟ್ಟಿಗೆ ಕೆಲಸ ಮಾಡುತ್ತೇವೆ ಎನ್ನುವುದನ್ನು ಅಲಂಬಿಸಿರುತ್ತದೆ. ಯಾರು ದೈಹಿಕವಾಗಿ ಹೆಚ್ಚು ಸಕ್ರಿಯವಾಗಿರುವುದಿಲ್ಲವೋ ಅವರಿಗೆ ಹೃದಯ ಸಂಬಂಧೀ ಕಾಯಿಲೆಗಳು ಹೆಚ್ಚಾಗಿ ಕಾಡಿಸುತ್ತವೆ.

ಉತ್ತಮ ನಿದ್ರೆ : ಹಲವು ಅಧ್ಯಯನಗಳಿಂದ ದೃಢಪಟ್ಟ ಒಂದು ಸಂಗತಿಯೆಂದರೆ, ಯಾರು ನಿಯಮಿತವಾಗಿ ವ್ಯಾಯಾಮ ಮಾಡುತ್ತಿರುತ್ತಾರೊ, ಅವರಿಗೆ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ. ಇದಕ್ಕೆ ಕಾರಣವೇನೆಂದರೆ., ವ್ಯಾಯಾಮ ಮಾಡುವುದರಿಂದಾಗಿ ನಮ್ಮ ದೇಹದ ಸರ್ಕೇಡಿಯನ್‌ ರಿದಮ್ ಬಲಗೊಳ್ಳುತ್ತದೆ. ಅದು ಹಗಲು ಹೊತ್ತಿನಲ್ಲಿ ನಿಮ್ಮನ್ನು ಸಕ್ರಿಯವಾಗಿಡಲು ನೆರವಾಗುತ್ತದೆ. ಈ ಕಾರಣದಿಂದ ನಮಗೆ ರಾತ್ರಿ ಹೊತ್ತು ಉತ್ತಮ ನಿದ್ರೆ ಬರುತ್ತದೆ.

ದೈಹಿಕ ಶಕ್ತಿಯಲ್ಲಿ ಹೆಚ್ಚಳ : ನಮ್ಮಲ್ಲಿ ಬಹಳಷ್ಟು ಜನರಿಗೆ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದ ಶಕ್ತಿ ಹೀರಲ್ಪಡುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಹಾಗಾಗಿ ಬಹಳಷ್ಟು ಜನರು ಹಾಗೆಯೇ ಕುಳಿತುಬಿಟ್ಟಿರುತ್ತಾರೆ. ಆದರೆ ವಾಸ್ತವದಲ್ಲಿ ಇದರ ತದ್ವಿರುದ್ಧ ಘಟಿಸುತ್ತದೆ. ವ್ಯಾಯಾಮದಿಂದಾಗಿ ನೀವು ದಿನವಿಡೀ ಸಕ್ರಿಯರಾಗಿರುವಿರಿ. ಏಕೆಂದರೆ ವ್ಯಾಯಾಮ ಮಾಡುವಾಗ ನಮ್ಮ ದೇಹದಲ್ಲಿ ಹಲವು ಬಗೆಯ ಹಾರ್ಮೋನುಗಳು ಬಿಡುಗಡೆಗೊಳ್ಳುತ್ತವೆ. ಅವು ನಮ್ಮನ್ನು ದಿನವಿಡೀ ಸಕ್ರಿಯವಾಗಿಡಲು ನೆರವಾಗುತ್ತವೆ.

ಆತ್ಮವಿಶ್ವಾಸದಲ್ಲಿ ಹೆಚ್ಚಳ : ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೀವು ನಿಮಗೆ ಬೇಕಾದ ರೀತಿಯಲ್ಲಿ ದೇಹಕ್ಕೆ ಶೇಪ್‌ ಕೊಡಬಹುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ದೇಹದ ಉತ್ತಮ ರಚನೆ ಹಾಗೂ ಸಕಾರಾತ್ಮಕ ಯೋಚನೆಯ ಕಾರಣದಿಂದ, ನೀವು ನಿಮ್ಮ ಮನೆ ಹಾಗೂ ಆಫೀಸಿನಲ್ಲಿ ಮೊದಲಿಗಿಂತ ಹೆಚ್ಚು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಅತಿ ವ್ಯಾಯಾಮದ ದುಷ್ಪರಿಣಾಮ

ನಿಯಮಿತ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹಲವು ಲಾಭಗಳಿವೆ. ಹೀಗಾಗಿ ದೈಹಿಕ ಕ್ರೀಯಾಶೀಲತೆಯ ಬಗ್ಗೆ ನಿರ್ಲಕ್ಷ್ಯ ತೋರುವುದರಲ್ಲಿ ಯಾವುದೇ ಅರ್ಥ ಇಲ್ಲ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಕೆಲವು ವಾಸ್ತವ ಅಂಶಗಳು ಹೇಗಿವೆಯೆಂದರೆ, ಅತಿಯಾಗಿ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

- ಕೆಲವು ಮಹಿಳೆಯರಲ್ಲಿ ಒಂದು ವಿಶಿಷ್ಟ ಬಗೆಯ ಸ್ಥಿತಿ, ಉತ್ಪನ್ನವಾಗುತ್ತದೆ. ಅದನ್ನು `ಋತುರೋಧ' ಎಂದು ಕರೆಯುತ್ತಾರೆ. ಇದರರ್ಥ ಆಕೆಗೆ 3 ತಿಂಗಳ ಕಾಲ ಋತುಸ್ರಾವ ಉಂಟಾಗುವುದಿಲ್ಲ. ಈ ಸ್ಥಿತಿ ಯಾವಾಗ ಉತ್ಪನ್ನವಾಗುತ್ತದೆ ಎಂದರೆ, ಮಹಿಳೆ ಸೂಕ್ತ ಪೋಷಕಾಂಶಗಳನ್ನು ಸೇವಿಸದೆಯೇ, ಅಂದರೆ ಕ್ಯಾಲೋರಿ ದೊರಕಿಸಿಕೊಡುವ ಆಹಾರ ಪದಾರ್ಥಗಳನ್ನು ಸೇವಿಸದೆಯೇ 3 ತಿಂಗಳ ಕಾಲ ನಿಯಮಿತ ವ್ಯಾಯಾಮ ಮಾಡಿದ್ದರಿಂದ ಹೀಗಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ