ಬ್ಯಾಲೆನ್ಸ್ಡ್ ಡಯೆಟ್‌ ಅಂದರೆ ಸಮತೋಲನ ಆಹಾರ ದೇಹವನ್ನು ಆರೋಗ್ಯದಿಂದಿಡುತ್ತದೆ. ಅಷ್ಟೇ ಅಲ್ಲ, ಅದು ಮನುಷ್ಯನ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದರೆ ಹಲವು ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ.

ಯಾರು ಸಮತೋಲನದಿಂದ ಕೂಡಿದ ಆಹಾರ ಸೇವಿಸುವುದಿಲ್ಲವೋ ಅದರ ಪರಿಣಾಮ ಅವರ ಆರೋಗ್ಯದ ಜೊತೆ ಜೊತೆಗೆ ಅವರ ಕೆಲಸದ ಮೇಲೂ ಉಂಟಾಗುತ್ತದೆ. ಹೀಗಾಗಿ ಗೃಹಿಣಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಸಮತೋಲನ ಆಹಾರ ಸೇವಿಸುವುದು ಅವಶ್ಯ. ಸಮತೋಲನ ಆಹಾರ ನಮ್ಮನ್ನು ಆರೋಗ್ಯದಿಂದಿಡುವುದರ ಜೊತೆಗೆ, ಸ್ಟ್ಯಾಮಿನಾ ಕೂಡ ಹೆಚ್ಚಿಸುತ್ತದೆ.

ಬ್ಯಾಲೆನ್ಸ್ಡ್ ಡಯೆಟ್‌ ಎಂತಹ ಆಹಾರವೆಂದರೆ, ಅದು ಸಾಕಷ್ಟು ಎನರ್ಜಿಯಿಂದ ಕೂಡಿರಬೇಕು, ದೇಹವನ್ನು ಬಲಿಷ್ಠಗೊಳಿಸುವಂತಿರಬೇಕು. ಹೀಗಾಗಿ ನಿಮ್ಮ ಆಹಾರವನ್ನು 3 ಗುಂಪುಗಳಲ್ಲಿ ವಿಂಗಡಿಸಿಕೊಳ್ಳಬೇಕು. ನಿಮ್ಮ ದೇಹ ಆರೋಗ್ಯದಿಂದ ಇರಬೇಕು, ಫಿಟ್‌ ಆಗಿರಬೇಕೆಂದು ಬಯಸುವಿರಾದರೆ ಡಯೆಟ್‌ ಚಾರ್ಟ್‌ ನಿಮಗೆ ನೆರವಾಗುತ್ತದೆ.

ಆಹಾರ ತಜ್ಞರ ಪ್ರಕಾರ, ಪ್ರತಿಯೊಬ್ಬ ಮಹಿಳೆಯ ಆಹಾರದಲ್ಲಿ ವಿಟಮಿನ್‌, ಪ್ರೋಟೀನ್‌ ಹಾಗೂ ಕ್ಯಾಲ್ಶಿಯಂ ಪ್ರಮಾಣ ಹೇರಳವಾಗಿರಬೇಕು. ಮೊಳಕೆಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಎನರ್ಜಿ ಫುಡ್‌ನಲ್ಲಿ ಗೋದಿ, ಅಕ್ಕಿ, ಬೆಲ್ಲ, ಎಣ್ಣೆ, ಬೆಣ್ಣೆ, ಆಲೂಗಡ್ಡೆ ಮುಂತಾದವು ಒಳಗೊಂಡಿರಬೇಕು. ಅವು ನಿಮ್ಮನ್ನು ಆರೋಗ್ಯದಿಂದಿಡುವುದರ ಜೊತೆ ಜೊತೆಗೆ ನಿಮ್ಮ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ಶಕ್ತಿಯುತ ಆಹಾರಗಳು

ಈ ಶಕ್ತಿಯುತ ಆಹಾರಗಳು ನಿಮಗೆ ಹೆಚ್ಚುವರಿ ಶಕ್ತಿಯನ್ನು ಕೊಡುತ್ತವೆ. ಡ್ರೈಫ್ರೂಟ್ಸ್, ಬೇಳೆಗಳು, ಹಾಲು ಮುಂತಾದವು ಶಕ್ತಿಯುತ ಆಹಾರದಲ್ಲಿ ಸೇರ್ಪಡೆಗೊಳ್ಳುತ್ತವೆ. ಡ್ರೈಫ್ರೂಟ್ಸ್ ಮತ್ತು ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯ ಮತ್ತಷ್ಟು ಉತ್ತಮಗೊಳ್ಳುತ್ತದೆ. ಅನಾರೋಗ್ಯದಿಂದ ದೂರ ಇರಲು ಬಯಸುವಿರಾದರೆ, ವಿಟಮಿನ್ಸ್, ಮಿನರಲ್ಸ್ ಹಾಗೂ ಪ್ರೋಟೀನ್‌ ರಿಚ್‌ ಫುಡ್‌ಗಳನ್ನು ಹೆಚ್ಚೆಚ್ಚು ಉಪಯೋಗಿಸಿ. ಹಾಲು, ಪನೀರ್‌, ಹಸಿರು ತರಕಾರಿಗಳು ಇವನ್ನು ಇನ್ನಷ್ಟು ಪ್ರಮಾಣದಲ್ಲಿ ನಿಮ್ಮ ಡಯೆಟ್  ನಲ್ಲಿ ಸೇರ್ಪಡೆ ಮಾಡಿಕೊಳ್ಳಿ.

ಉದ್ಯೋಗಸ್ಥ ಮಹಿಳೆಯರು ಆಫೀಸಿನಲ್ಲಿ ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡಬೇಕಾಗಿ ಬರುತ್ತದೆ. ಅದು ಎಷ್ಟೋ ಸಲ ಅವರನ್ನು ಸುಸ್ತು ಮಾಡುತ್ತದೆ. ಅವರ ಈ ಷೆಡ್ಯೂಲ್‌ ಅವರನ್ನು ಅನ್‌ಹೆಲ್ದಿ ಮಾಡುತ್ತದೆ. ಇಂತಹ ಸ್ಥಿತಿಯಲ್ಲಿ ದೇಹಕ್ಕೆ ವಿಟಮಿನ್‌ ಹಾಗೂ ಮಿನರಲ್ಸ್ ಅವಶ್ಯಕತೆ ಇರುತ್ತದೆ. ಏಕೆಂದರೆ ಇವು ದೇಹಕ್ಕೆ ಎನರ್ಜಿ ಕೊಡುತ್ತವೆ. ಹೀಗಾಗಿ ಇವನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ.

ಎನರ್ಜೆಟಿಕ್‌ ಆಗಿರಲು ಹಾಲು, ಬ್ರೋಕನ್‌ ವೀಟ್‌ಗಳನ್ನು ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಹಣ್ಣುಗಳನ್ನು ಸಹ ಸೇವಿಸಿ. ಡಯೆಟ್‌ನಲ್ಲಿ ಒಂದಾದರೂ ಹಣ್ಣು ಇರಲೇಬೇಕು. ಸೇಬು, ಪಪ್ಪಾಯಿ, ಊಟಿ ಆ್ಯಪಲ್ ಇವುಗಳಲ್ಲಿ ವಿಟಮಿನ್‌ `ಎ' ಹೇರಳ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಈ ಹಣ್ಣುಗಳ ಸೇವನೆ ಎನರ್ಜೆಟಿಕ್‌ ದೇಹಕ್ಕೆ ಅತ್ಯಂತ ಅವಶ್ಯಕ.

ಸಮರ್ಪಕ ದಿನಚರಿ

ಆಹಾರ ತಜ್ಞೆ ಸುನೀತಾ ಅವರ ಪ್ರಕಾರ, ಮಾನಸಿಕವಾಗಿ ಸ್ಟ್ರಾಂಗ್‌ ಆಗಿರಲು ಹಾಲಿನ ಜೊತೆಗೆ ಡ್ರೈಫ್ರೂಟ್ಸ್ ಸೇವನೆ ಅತ್ಯಂತ ಅವಶ್ಯಕ. ಇವುಗಳ ಹೆಚ್ಚುವರಿ ಸೇವನೆ ನಿಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಫಿಟ್‌ ಆಗಿಡುತ್ತದೆ. ಆಹಾರದಲ್ಲಿ ಝಿಂಕ್‌ನ ಪ್ರಮಾಣ ಕೂಡ ಇರಲಿ. ಇದು ದೇಹವನ್ನು ಫಿಟ್‌ ಆಗಿಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ