ಹಾಟ್, ಗಾರ್ಜಿಯಸ್ ಅಂಡ್ ಫ್ಯಾಬ್ಯುಲಸ್ ಲುಕ್ಸ್ಗಾಗಿ ಈ ಬಾರಿ ವ್ಯಾಲೆಂಟೈನ್ ಪಾರ್ಟಿಗಾಗಿ ಹರಡಿರುವ ಈ ಟ್ರೆಂಡ್ ಗಮನಿಸಿಕೊಂಡು ನಿಮ್ಮ ಪರ್ಸನಾಲಿಟಿಯಲ್ಲಿ ಹೊಸ ಗೆಟಪ್ ತಂದುಕೊಳ್ಳಿ. ಬ್ಯೂಟಿಫುಲ್ ಆಗಿ ಕಂಗೊಳಿಸಲು ನೀವು ಮನೆಯಲ್ಲಿ ಮೇಕಪ್ ಸಾಮಗ್ರಿಗಳ ಅಂಗಡಿ ತೆರೆಯಬೇಕೆಂದೇನೂ ಇಲ್ಲ. ಬದಲಿಗೆ ಹೊಸ ಹೊಸ ಫ್ಯಾಷನ್, ಬ್ಯೂಟಿ, ಮೇಕಪ್ ಕುರಿತಾದ ಟ್ರೆಂಡ್ ಪ್ರಕಾರ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಕಾಂತಿ ತರಲು ಯತ್ನಿಸಿ.
ಪಾಪ್ ರೆಡ್ ಗ್ಲಾಮ್ ಲಿಪ್ಸ್
ಈ ಸೀಸನ್‌ನಲ್ಲಿ ತುಟಿಗಳಿಗಾಗಿ 100% ಪಾಪ್ ಗ್ಲಾಮ್ ಐಡಿಯಾ ಬೆಸ್ಟ್ ಆಗಿರುತ್ತದೆ. ಅಂದ್ರೆ ನಿಯಾನ್ ಮೇಕಪ್ ಪ್ರಕಾರ ಹಾಟ್ ರೆಡ್, ನಿಯಾನ್ ಶೇಡ್, ಪ್ಲಮ್ ಶೇಡ್ ಮತ್ತು ಪಿಂಕ್ ಗ್ಲಾಮರಸ್ ಶೇಡ್ಸ್ ಚಾಲ್ತಿಯಲ್ಲಿರುತ್ತದೆ. ಹೀಗಾಗಿ ಲಿಪ್‌ಸ್ಟಿಕ್ ಆರಿಸುವಾಗ ತುಸು ಬೋಲ್ಡ್ ಗ್ಲಾಮರಸ್ ಶೇಡ್ಸನ್ನೇ ಆರಿಸಿ.
ಹೇರ್ ಕಲರ್ ಕೂದಲಿಗೆ ಫಂಕಿ ಪಿನ್ ಅಪ್, ಅನ್‌ಈವೆನ್ ಲುಕ್, ರೋಲರ್, ಶೈನಿಂಗ್, ಸ್ಟ್ರೇಟನಿಂಗ್, ಸಾಫ್ಟಿ ರೋಲಿಂಗ್, ವೀವಿಂಗ್, ನಿಟಿಂಗ್, ಟ್ವಿಸ್ಟ್ ಪಫ್, ಅನ್‌ಟೈಡಿಂಗ್, ಸ್ಮಜಿಂಗ್ ಪ್ಲೇಟ್, ನೋಟೆಡ್ ಬನ್ ಇತ್ಯಾದಿಗಳ ಸ್ಟೈಲ್ ಮುಂದವರಿಯಲಿದೆ. ಇದನ್ನು ಇನ್ನಷ್ಟು ಗ್ಲಾಮರೈಸ್‌ಗೊಳಿಸಲು ಆರ್ಟಿಫಿಶಿಯ್ ಫ್ಲೋರ್‌ನಿಂದ ಡಯಾಗ್ನಲ್ ಡಿಸೈನ್‌ನಲ್ಲಿ ಡೆಕೋರೇಟ್ ಮಾಡಬಹುದು. ಇಷ್ಟು ಮಾತ್ರವಲ್ಲದೆ ಜರ್ಕನ್, ಪರ್ಲ್, ಗ್ಲಿಟರ್, ಫೆದರ್ ಇತ್ಯಾದಿಗಳಿಂದ ನ್ಯೂ ಲುಕ್ಸ್ ಗಳಿಸಬಹುದು.
ನಿಯಾನ್ ಮೇಕಪ್
ಇದು ಇತ್ತೀಚೆಗಷ್ಟೇ ಶುರುವಾದ ಮೇಕಪ್. ನೀವು ಆತ್ಮವಿಶ್ವಾಸ ತುಂಬಿ ತುಳುಕುತ್ತಿರುವ ಫನ್ ಲವಿಂಗ್ ವ್ಯಕ್ತಿತ್ವದವರಾದರೆ, ಅದನ್ನೇ ನಿಮ್ಮ ಮೇಕಪ್‌ನಲ್ಲಿ ಪ್ರದರ್ಶಿಸಬಯಸಿದರೆ, ನಿಯಾನ್ ಮೇಕಪ್‌ಗೆ ಸಮನವಾದುದು ಬೇರೊಂದಿಲ್ಲ. ನೀವು ಬೇರೆಲ್ಲರಿಗಿಂತ ಡಿಫರೆಂಟ್ ಎಂದು ತೋರಿಸಬಯಸಿದರೆ, ನಿಮ್ಮ ಸ್ಕಿನ್ ಟೋನ್‌ಗಿಂತ ಒಂದು ಶೇಡ್ ಲೈಟರ್ ಫೌಂಡೇಶನ್ನಿನ ಆಯ್ಕೆ ಮಾಡಿ. ಐ ಶ್ಯಾಡೋದಲ್ಲಿ ಫನ್ ಲವಿಂಗ್ ವೈಬ್ರೆಂಟ್ ಕಲರ್‌ನ ಯೆಲ್ಲೋ, ಆರೆಂಜ್, ಪಿಂಕ್, ಬ್ಲೂ, ಪರ್ಪಲ್, ಫ್ಯೂಶಿಯಾ ಗ್ರೀನ್, ಫ್ಲೇರೋ ಗ್ರೀನ್, ಮೆಜೆಂತಾ ಇತ್ಯಾದಿ ಆರಿಸಿ. ವ್ಯಾಲ್ಯುವ್‌ನೈಸಿಂಗ್ ಥಿಕ್ ಲೇಯರ್ ಮಸ್ಕರಾ ಮತ್ತು ಹೆವಿ ಟ್ರಾನ್ಸ್ಪರೆಂಟ್ ಲಿಪ್‌ಗ್ಲಾಸಸ್ ವಿತ್ ನಿಯಾನ್ ಪೇಸ್ಟ್ ಲಿಪ್‌ಸ್ಟಿಕ್‌ನಿಂದ ನಿಮ್ಮ ಲುಕ್ಸ್ ಕಂಪ್ಲೀಟ್ ಮಾಡಿ. ಕಂಗಳ ಕ್ರೀಸ್‌ಗಾಗಿ ವಾಟರ್‌ಲೈನ್‌ನಲ್ಲಿ ಲೈಟ್ ಲೈನರ್ ಅಥವಾ ಪೆನ್ಸಿಲ್ ಬಳಸಿರಿ. ಯಂಗ್ ಲುಕ್ಸ್ಗಾಗಿ ಪಿಂಕ್ ಶೇಡ್ ಬ್ರೈಟ್ ಲಿಪ್‌ಸ್ಟಿಕ್‌ನ್ನೇ ಆರಿಸಿ.
ಹೈಲೈಟಿಂಗ್
ಕೂದಲನ್ನು ಹೈಲೈಟ್‌ಗೊಳಿಸಲು ಕ್ರಿಯೇಟಿವಿಟಿಗೆ ಹೆಚ್ಚು ಒತ್ತು ಕೊಡಿ. ಎಕ್ಸ್ಪೆರಿಮೆಂಟ್ ಫಂಕಿ ನಿಯಾನ್ ಹೈಲೈಟಿಂಗ್‌ನ ಟ್ರೆಂಡ್ ಇರುತ್ತದೆ. ಇದರಲ್ಲಿ ಹೇರ್‌ಸ್ಪ್ರೇ, ಹೇರ್ ಚೋಕ್ ಮತ್ತು ಹೇರ್ ಗ್ಲಿಟರ್ ಪ್ರಮುಖವಾಗಿರುತ್ತವೆ. ಕೇವಲ ಗೋಲ್ಡನ್ ಕಾಪರ್ ಹೈಲೈಟಿಂಗ್ ಮಾತ್ರವಲ್ಲದೆ ಈ ಬಾರಿ ವೈಬ್ರೆಂಟ್ ಕಲರ್ಸ್ ಕೂಡ ಚಾಲ್ತಿಯಲ್ಲಿರುತ್ತದೆ.
ಶೀಟ್ ಮಾಸ್ಕ್
ಇನ್‌ಸ್ಟೆಂಟ್ ಗ್ಲೋಗಾಗಿ ಕೊರಿಯನ್ ಶೀಟ್ ಮಾಸ್ಕ್ ಚಾಲ್ತಿಯಲ್ಲಿರುತ್ತದೆ. ಇದರ ಬೆಟರ್ ಪರಿಣಾಮಗಳಿಂದಾಗಿ, ಮುಂದಿನ ವರ್ಷದಲ್ಲೂ ಇದರ ಟ್ರೆಂಡ್ ಹೆಚ್ಚಲಿದೆ. ಶೀಟ್ ಮಾಸ್ಕ್ ಹಾಕಿಕೊಳ್ಳುವುದು ಬಲು ಸುಲಭ. ಇದು ಫೇಸ್ ಸ್ಕಿನ್‌ನ್ನು ಎಕ್ಸ್ ಫೋಲಿಯೇಶನ್ ಮೂಲಕ ಬೊಂಬಾಟ್ ಕಾಂತಿ ನೀಡುತ್ತದೆ. ಶೀಟ್ ಮಾಸ್ಕ್ನಲ್ಲಿ ಆ್ಯಂಟಿ ಏಜಿಂಗ್, ಬ್ರೈಟ್‌ನಿಂಗ್, ಹೈಡ್ರೇಟಿಂಗ್, ಮಾಯಿಶ್ಚರೈಸಿಂಗ್, ಆ್ಯಂಟಿಆ್ಯಕ್ನೆ, ಹೈಡ್ರೋಜೆಲ್, ಪರ್ಲ್ ಮಾಸ್ಕ್ ಇತ್ಯಾದಿ ಪ್ರಮುಖ. ಇದನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಬಹುದು.