ಸಾಮಾನ್ಯವಾಗಿ ಜನರು ತಮ್ಮ ದೇಹ ಹಾಗೂ ಆಸುಪಾಸಿನ ಪರಿಸದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಕೀಟನಾಶಕಗಳ ಸಂಪರ್ಕಕ್ಕೆ ಬರುವವರು ಬಂಜೆತನ ಅಂದರೆ ಮಕ್ಕಳಾಗದೇ ಇರುವ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು ಎನ್ನುವುದು ತಿಳಿದುಬಂದಿದೆ. ಆದರೆ ಕೀಟನಾಶಕಗಳಿಂದ ದೂರ ಇರುವವರು ಕೂಡ ಬಂಜೆತನಕ್ಕೆ ತುತ್ತಾಗಬಹುದು. ಇದಕ್ಕೆ ಮುಖ್ಯ ಕಾರಣ ನಮ್ಮ ಅಸುರಕ್ಷಿತ ಆಹಾರ. ಏಕೆಂದರೆ ನಮ್ಮ ಆಹಾರದಲ್ಲಿ ಸೇರ್ಪಡೆಗೊಂಡಿರುವ ಹಣ್ಣು ತರಕಾರಿಗಳ ಮುಖಾಂತರ ನಾವು ಯೂರಿಯಾ ಸೇವನೆ ಮಾಡುತ್ತಿದ್ದೇವೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿಗೆ ಬಗೆ ಬಗೆಯ ಹಣ್ಣು ತರಕಾರಿಗಳು ಅತ್ಯವಶ್ಯ. ಏಕೆಂದರೆ ಅವುಗಳಲ್ಲಿ ಖನಿಜಾಂಶಗಳು ಹೇರಳವಾಗಿರುತ್ತವೆ. ಹಲವು ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೆಂದರೆ, ಯಾವ ಮಹಿಳೆಯರು ಕೀಟನಾಶಕಗಳ ಅಂಶ ಇರುವ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡುತ್ತಾರೊ, ಅವರು ಗರ್ಭಿಣಿಯರಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಒಂದು ವೇಳೆ ಗರ್ಭಿಣಿಯರಾದರೆ ಗರ್ಭಾವಸ್ಥೆಗೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.
ಅಂದಹಾಗೆ ಹಣ್ಣು ತರಕಾರಿಗಳನ್ನು ಇಲಿ ಹಾಗೂ ಬೇರೆ ಕೆಲವು ಉಪದ್ರವಿ ಜೀವಿಗಳಿಂದ ರಕ್ಷಿಸಲು ಕೀಟನಾಶಕ ಸಿಂಪರಣೆ ಮಾಡಲಾಗುತ್ತದೆ. ಈ ಕೀಟನಾಶಕಗಳು ಎರಡು ಪ್ರಕಾರದ್ದಾಗಿರುತ್ತವೆ. ಮೊದಲನೆಯ ರಾಸಾಯನಿಕ ಕೀಟನಾಶಕಗಳನ್ನು ಕೃತಕವಾಗಿ ತಯಾರಿಸಲಾಗುತ್ತದೆ. ಜೈವಿಕ ಕೀಟನಾಶಕಗಳನ್ನು ನೈಸರ್ಗಿಕ ಸಾಮಗ್ರಿಯಿಂದ ಉತ್ಪಾದಿಸಲಾಗುತ್ತದೆ.
ರಾಸಾಯನಿಕಗಳ ನೇರ ಸಂಪರ್ಕಕ್ಕೆ ಬರುವವರು ಅದರ ಹಾನಿಕಾರಕ ಪರಿಣಾಮಗಳಿಗೆ ತುತ್ತಾಗುತ್ತಾರೆ. ಈ ಉದ್ಯಮಗಳಲ್ಲಿ ಕೆಲಸ ಮಾಡುವವರು ಇಲ್ಲಿ ಅವನ್ನು ತಮ್ಮ ಹೊಲಗಳಲ್ಲಿ ಸಿಂಪರಣೆ ಮಾಡುವ ರೈತರು ಇದರ ಹಾನಿಗೆ ತುತ್ತಾಗುತ್ತಾರೆ. ನೇರ ಸಂಪರ್ಕಕ್ಕೆ ಬರದೇ ಇದ್ದರು ಕೂಡ ಅದರ ಮಾರಕ ಪರಿಣಾಮಗಳಿಗೆ ತುತ್ತಾಗುತ್ತಾರೆ. ಅವರು ಯಾರೆಂದರೆ ಅವನ್ನು ಬಳಸುವ ಬಳಕೆದಾರರು.
ಗರ್ಭಾವಸ್ಥೆ ಶೇ.30ರಷ್ಟು ಕಡಿಮೆ
ಜಗತ್ತಿನಾದ್ಯಂತ ಸಂಶೋಧಕರು ಕೀಟನಾಶಕಗಳ ಪ್ರಭಾವ ಕಂಡುಕೊಳ್ಳಲು ಹಲವು ಬಗೆಯ ಸಂಶೋಧನೆಗಳನ್ನು ಮಾಡಿದರು. ಕೀಟನಾಶಕಗಳ ಅಂಶವಿರುವ ಹಣ್ಣು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಶೇ.30ರಷ್ಟು ಕಡಿಮೆಯಾಗುತ್ತದೆ. ಇದರ ಹೊರತಾಗಿ ಶೇ.40ರಷ್ಟು ಪ್ರಕರಣಗಳು ಹೇಗಿದ್ದವು ಎಂದರೆ, ಅವರಲ್ಲಿ ರಾಸಾಯನಿಕಗಳ ಕಾರಣದಿಂದ ಗರ್ಭಪಾತದ ಸ್ಥಿತಿ ಉಂಟಾಯಿತು.
ಪುರುಷರಿಗೂ ತೊಂದರೆ
ಕ್ರಿಮಿನಾಶಕಗಳ ಕಾರಣದಿಂದ ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕೂಡ ಕುಸಿಯುತ್ತದೆ. ಪುರುಷರಲ್ಲಿ ನಿಮಿರು ದೌರ್ಬಲ್ಯ ಉಂಟಾಗುವ ಪ್ರಮಾಣ ಕೆಲವು ವರ್ಷಗಳಿಂದ ಹೆಚ್ಚುತ್ತಲೇ ಹೊರಟಿದೆ. ಹಲವು ಸಂಶೋಧನೆಗಳ ಪ್ರಕಾರ, 40ಕ್ಕೂ ಹೆಚ್ಚಿನ ವಯೋಮಾನದ ಶೇ.55ರಷ್ಟು ಪುರುಷರು ಗುಪ್ತಾಂಗದ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕೆ ಕಾರಣ ಕ್ರಿಮಿನಾಶಕಗಳು ಎಂದು ಸಾಬೀತಾಗಿದೆ.
ಅಂದಹಾಗೆ, ಈ ಕ್ರಿಮಿನಾಶಕಗಳಲ್ಲಿರುವ ರಾಸಾಯನಿಕವೊಂದು ಅಸಿಟೈಲ್ ಕೊಲಿನ್ ಆ್ಯಸ್ಟ್ರೇಸ್ ನ ನಿರ್ಮಾಣಕ್ಕೆ ತಡೆ ಹಿಡಿಯುತ್ತದೆ. ಅದು ಒಂದು ಕಿಣ್ವ ಅಂದರೆ ಎಂಜೈಮ್ ಆಗಿದ್ದು ಅದು ಮೆದುಳಿನಲ್ಲಿರುವ ರಾಸಾಯನಿಕ ಸಂದೇಶವಾಹಕವಾಗಿ ಕೆಲಸ ಮಾಡುವ ನ್ಯೂರೊ ಟ್ರಾನ್ಸ್ ಮೀಟರ್ ಗಳ ಜೊತೆಗೆ ಆ ಆವೇಗಗಳ ಕಾರ್ಯ ನಿರ್ವಹಿಸುತ್ತದೆ. ಅದೇ ಗುಪ್ತಾಂಗ ಒತ್ತಡವನ್ನುಂಟು ಮಾಡುತ್ತದೆ.