ಆಧುನಿಕ ಸಂಶೋಧನೆಗಳ ವರದಿಯ ಪ್ರಕಾರ 14-17 ವರ್ಷ ವಯಸ್ಸಿನ 20% ಹುಡುಗಿಯರು ಕ್ಯಾಲ್ಶಿಯಂ ಕೊರತೆಯಿಂದ ಪೀಡಿತರಾಗಿದ್ದಾರೆ. ಹಿಂದಿನ ಕಾಲದಲ್ಲಿ ಇಷ್ಟು ದೊಡ್ಡ ಪ್ರಮಾಣದ ಕ್ಯಾಲ್ಶಿಯಂ ಕೊರತೆ ಕೇವಲ ಗರ್ಭಿಣಿಯರು ಹಾಗೂ ರಜೋನಿವೃತ್ತ ಪ್ರೌಢ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತಿತ್ತು.

ಈ ಹೊಸ ತೊಂದರೆಗೆ ಮೂಲಕಾರಣ ಎಂದರೆ ಬಿಗಡಾಯಿಸುತ್ತಿರುವ ಜೀವನಶೈಲಿ. ಇತ್ತೀಚೆಗೆ ಜನ ಬಹಳ ಬೇಗ ರೆಡಿ ಟು ಈಟ್ ಪ್ಯಾಕೆಟ್‌ ಫುಡ್ಸ್ ಗೆ ಅಂಟಿಕೊಳ್ಳುತ್ತಾರೆ. ಆ ಕಾರಣ ಅವರಿಗೆ ಬ್ಯಾಲೆನ್ಸ್ಡ್ ಫುಡ್‌ ದೊರಕುತ್ತಿಲ್ಲ.

ಹೆಂಗಸರು ತಮ್ಮ ಮನೆಯವರೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆಯೇ ಹೊರತು ತಮ್ಮ ದೇಹಾರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಉತ್ತಮ ಆರೋಗ್ಯ, ಸಶಕ್ತ ದೇಹಕ್ಕಾಗಿ ಕ್ಯಾಲ್ಶಿಯಂ ಅತ್ಯಗತ್ಯ. ಇದರಿಂದ ಮೂಳೆ ಮತ್ತು ಹಲ್ಲುಗಳಿಗೆ ಶಕ್ತಿ ತುಂಬುತ್ತದೆ.

ನಮ್ಮ ಮೂಳೆಗಳ 70% ಭಾಗ ಕ್ಯಾಲ್ಶಿಯಂ ಫಾಸ್ಛೇಟ್‌ ನಿಂದ ಆಗಿದೆ. ಈ ಕಾರಣದಿಂದಲೇ ಮೂಳೆಗಳು ಮತ್ತು ಹಲ್ಲುಗಳ ಉತ್ತಮ ಆರೋಗ್ಯಕ್ಕೆ ಕ್ಯಾಲ್ಶಿಯಂ ಬಲು ಮುಖ್ಯ.ಗಂಡಸರಿಗಿಂತ ಹೆಂಗಸರಿಗೆ ಕ್ಯಾಲ್ಶಿಯಂ ಹೆಚ್ಚು  ಅಗತ್ಯ. ಅವರ ದೇಹದಲ್ಲಿ 1000-1200 ಮಿ.ಗ್ರಾಂ.ನಷ್ಟು ಕ್ಯಾಲ್ಶಿಯಂ ಇರಲೇಬೇಕು. ಇಲ್ಲದ್ದಿದರೆ ಇದರ ಕೊರತೆಯಿಂದ ಹಲವು ಬಗೆಯ ದೈಹಿಕ ತೊಂದರೆಗಳು ಹೆಚ್ಚುತ್ತವೆ.

ಕ್ಯಾಲ್ಶಿಯಂನಿಂದ ಸದೃಢ ಹೃದಯ, ಗಟ್ಟಿಮುಟ್ಟಾದ ಅಂಗಾಂಗ, ಹಲ್ಲು, ಉಗುರು, ಮೂಳೆಗಳು ನಮ್ಮದಾಗುತ್ತವೆ. ಇದರ ಕೊರತೆಯಿಂದ ಮತ್ತೆ ಮತ್ತೆ ಫ್ರಾಕ್ಚರ್‌ ಗೆ ತುತ್ತಾಗುವಿಕೆ, ಆಸ್ಟಿಯೊಪೊರೋಸಿಸ್‌ ನ ಆತಂಕ, ಸಂವೇದನಾಶೂನ್ಯತೆ, ಮೈ ಕೈ ನೋವು ಅಂಗಾಂಗಳ ವೈಫಲ್ಯ, ಸುಸ್ತು, ಹೃದಯದ ಬಡಿತ ಹಿಚ್ಚುವಿಕೆ, ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆ ನೋವು, ಕೂದಲು ಉದುರುವಿಕೆ ಇತ್ಯಾದಿ ಸಮಸ್ಯೆ ಹೆಚ್ಚುತ್ತದೆ.

ಹೀಗಾಗಿ ದೇಹಕ್ಕೆ ಬೇಕಾದ ಕ್ಯಾಲ್ಶಿಯಂನ್ನು ನಿಮ್ಮ ಆಹಾರದಿಂದಲೇ ಒದಗಿಸಬೇಕಲ್ಲದೆ ಹೆಚ್ಚುವರಿ ಸಪ್ಲಿಮೆಂಟ್ಸ್ ನಿಂದಲ್ಲ.

ಹೆಂಗಸರಲ್ಲಿ ಕ್ಯಾಲ್ಶಿಯಂ ಕೊರತೆಗೆ ಕಾರಣ ಮುಟ್ಟಂತ್ಯ (ಮೆನೋಪಾಸ್‌) ಸಮೀಪಿಸುತ್ತಿರುವ 45-50 ವರ್ಷದ ಹೆಂಗಸರಲ್ಲಿ ಕ್ಯಾಲ್ಶಿಯಂ ಕೊರತೆ ಹೆಚ್ಚಾಗಿ ಕಾಣಿಸುತ್ತದೆ. ಏಕೆಂದರೆ ಈ ವಯಸ್ಸಿನಲ್ಲಿ ಫೀಮೇಲ್ ‌ಹಾರ್ಮೋನ್‌ ಈಸ್ಟ್ರೋಜನ್‌ ನ ಮಟ್ಟ ಕಡಿಮೆ ಆಗಿರುತ್ತದೆ. ಇದು ದೇಹಕ್ಕೆ ಬೇಕಾಗುವ ಕ್ಯಾಲ್ಶಿಯಂ ಪೂರೈಸಿ, ಮೆಟಬಾಲಿಕ್‌ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಹಾರ್ಮೋನ್ಪರಿವರ್ತನೆ : ಕ್ಯಾಲ್ಶಿಯಂ ರಿಚ್‌ ಡಯೆಟ್‌ ನ ಕೊರತೆ ವಿಶೇಷವಾಗಿ ಡೇರಿ ಪ್ರಾಡಕ್ಟ್ಸ್ ಆದ ಹಾಲು, ಮೊಸರು, ಪನೀರ್‌, ಬೆಣ್ಣೆ, ತುಪ್ಪ ಇತ್ಯಾದಿಗಳ ಸೇವನೆಯಿಂದ ದೂರವಾಗುತ್ತದೆ.

ಹಾರ್ಮೋನ್ಡಿಸಾರ್ಡರ್ಹೈಪೊಥೈರಾಯ್ಡಿಸಂ : ಈ ಸ್ಥಿತಿಯಲ್ಲಿ ದೇಹದಲ್ಲಿ ಸಾಕಷ್ಟು ಪ್ರಮಾಣದ ಥೈರಾಯ್ಡ್ ಹಾರ್ಮೋನಿನ ಉತ್ಪತ್ತಿ ಆಗುವುದಿಲ್ಲ. ಅದು ರಕ್ತದಲ್ಲಿ ಕ್ಯಾಲ್ಶಿಯಂ ಲೆವೆಲ್ ‌ಕಂಟ್ರೋಲ್ ‌ಮಾಡಲು ಪೂರಕ.

ಹೆಂಗಸರ ಹೆಚ್ಚಿನ ಸಮಯ ಕಿಚನ್‌ ನಲ್ಲಿಯೇ ಕಳೆದುಹೋಗುತ್ತದೆ. ಆದರೆ ಅಡುಗೆಮನೆಯಲ್ಲೇ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು, ಕ್ಯಾಲ್ಶಿಯಂ ಒದಗಿಸಲು ಬೇಕಾದ ಹಲವು ಸಾಮಗ್ರಿಗಳು ಲಭ್ಯ ಎಂದು ಅವರಿಗೆ ಗೊತ್ತಿಲ್ಲ. ಇವುಗಳನ್ನು ಬಳಸಿದರೆ ಸಾಕು, ಹೆಚ್ಚುವರಿ ಕ್ಯಾಲ್ಶಿಯಂ ಸಪ್ಲಿಮೆಂಟ್ಸ್ ನ್ನು ಮಾತ್ರೆಗಳ ರೂಪದಲ್ಲಿ ಬಳಸುವ ಅಗತ್ಯವಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ