ಕೆಲವು ಹೆಂಗಸರಲ್ಲಿ ದಿಢೀರ್ ಎಂದು ಪ್ರೆಗ್ನೆನ್ಸಿಯಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂದ್ರೆ ಮುಟ್ಟು ಸಕಾಲಕ್ಕೆ ಆಗದೆ ಬಾಧೆಗೊಳ್ಳುವುದು, ಸ್ತನದಲ್ಲಿ ಹಾಲಿನ ಒಸರುವಿಕೆ, ಕಾಮೇಚ್ಛೆ ಕಡಿಮೆ ಆಗುವುದು ಇತ್ಯಾದಿ. ಅಸಲಿಗೆ ಇವೆಲ್ಲ ಬದಲಾವಣೆಗಳು ಒಂದು ನಿರ್ದಿಷ್ಟ ಸ್ಥಿತಿಗೆ ಸಂಬಂಧಿಸಿದ್ದು, ಅದನ್ನು ಹೈಪರ್ ಪ್ರಿಯೋಕ್ಟಿನೆಮಿಯಾ ಎನ್ನುತ್ತಾರೆ. ಇದರಲ್ಲಿ ರಕ್ತದಲ್ಲಿನ ಪ್ರೊಲಾಕ್ಟಿನ್ ಹಾರ್ಮೋನ್ ಲೆವೆಲ್ಸ್ ಸಾಮಾನ್ಯಕ್ಕಿಂತ ಹೆಚ್ಚಾಗಿಬಿಡುತ್ತದೆ. ಈಸ್ಟ್ರೋಜನ್ ಉತ್ಪಾದನೆಯಲ್ಲಿ ದೊಡ್ಡ ಮಟ್ಟದಲ್ಲಿ ಹಸ್ತಕ್ಷೇಪ ಆಗುವುದರಿಂದ ಮುಟ್ಟಿನ ದಿನಗಳಲ್ಲಿ ಏರುಪೇರು ಉಂಟಾಗುತ್ತದೆ.
ಪ್ರೋಲ್ಯಾಕ್ಟಿನ್ ನ ಮುಖ್ಯ ಕೆಲಸ ಎಂದರೆ, ಗರ್ಭಾವಸ್ಥೆಯಲ್ಲಿ ಸ್ತನಗಳನ್ನು ವಿಕಸಿತಗೊಳಿಸಿ, ಹಾಲು ಒಸರಲು, ಹಾಲಿನ ಉತ್ಪಾದನೆಗೆ ಪೂರಕವಾಗುವಂತೆ ಅವನ್ನು ಸಿದ್ಧಪಡಿಸುವುದಾಗಿದೆ. ಯಾವ ಹೆಣ್ಣು ಗರ್ಭಿಣಿ ಅಲ್ಲವೋ, ಅಂಥವಳಿಗೂ ಈ ಹಾರ್ಮೋನ್ ಕಡಿಮೆ ಪ್ರಮಾಣದಲ್ಲಿ ರಕ್ತದಲ್ಲಿ ಬೆರೆತುಕೊಳ್ಳುತ್ತದೆ. ಪ್ರೆಗ್ನೆನ್ಸಿಯಲ್ಲಿ ಸಾಮಾನ್ಯವಿದ್ದು, ಮಗುವಿನ ಜನನದ ನಂತರ ಈ ಮಟ್ಟ ಸಾಕಷ್ಟು ಹೆಚ್ಚುತ್ತದೆ. ಈ ಸ್ಥಿತಿಯಲ್ಲಿ 75%ಗಿಂತ ಹೆಚ್ಚಿನ ಹೆಂಗಸರು, ಬಸುರಾಗದಿದ್ದರೂ ಹಾಲನ್ನು ಸ್ರವಿಸುತ್ತಾರೆ.
ಗಂಡಸರಲ್ಲೂ ಸಹ ಪ್ರೊಲಾಸ್ಟಿನ್ ಮಟ್ಟ ಹೆಚ್ಚುವುದರಿಂದ ಕಾಮೇಚ್ಛೆ ತಗ್ಗುತ್ತದೆ, ನಪುಂಸಕತೆ, ಶಿಶ್ನದ ನಿಮಿರುವಿಕೆ ತಗ್ಗಿ, ಸ್ತನಗಳ ಆಕಾರ ಹಿಗ್ಗುವಂಥ ಸಮಸ್ಯೆಗಳು ಕಾಡುತ್ತವೆ. ಟೆಸ್ಟೊಸ್ಟೆರಾನ್ ಮಟ್ಟ ತಗ್ಗುವುದೂ ಸಹ ಇದೇ ಸ್ಥಿತಿಯ ನಂತರದ ಒಂದು ಹಂತವಾಗಿದೆ. ಈ ಸ್ಥಿತಿಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸದಿದ್ದರೆ, ವೀರ್ಯಾಣು ಫಲಿತಗೊಳ್ಳದೆ ನಿಷ್ಕ್ರಿಯಗೊಳ್ಳುತ್ತವೆ. ಅವು ದೀರ್ಘಾವಧಿ ಕಾಲ ಬದುಕಿರುವುದೂ ಇಲ್ಲ. ಈ ಕಾರಣ ಅದರ ತಯಾರಿಯಲ್ಲಿ ಏರುಪೇರಾಗುಬಹುದು.
ಪ್ರಸವ ಯಾ ಗರ್ಭಧಾರಣೆಯ ವಯಸ್ಸಿನಲ್ಲಿ ಹೆಂಗಸರಲ್ಲಿ ಈ ಸಮಸ್ಯೆ ಹೆಚ್ಚುತ್ತದೆ. ಆದರೆ ಈ ಸ್ಥಿತಿಯಲ್ಲಿ ಹೆಂಗಸರ ಪ್ರಾಸಂಗಿಕ ಸ್ಥಿತಿ ಸಾಮಾನ್ಯವೇ ಆಗಿರುತ್ತದೆ. ಯಾವ ಹೆಂಗಸರ ಓವೇರಿಯನ್ ರಿಸರ್ವ್ ಉತ್ತಮ ಆಗಿರುತ್ತದೋ, ಅವರಿಗೂ ಸಹ ಮುಟ್ಟಿನಲ್ಲಿ ಏರುಪೇರು ತಪ್ಪಿದ್ದಲ್ಲ. ಒಂದು ವಿಧದಲ್ಲಿ ಇದು ಈ ಡಿಸ್ ಆರ್ಡರ್ ನ ಆಗಮನದ ಸಂಕೇತ ಹೌದು.
ಬಂಜೆತನಕ್ಕೆ ಕಾರಣಗಳು
ರಕ್ತದಲ್ಲಿ ಪ್ರೊಲ್ಯಾಕ್ಟಿನ್ ಮಟ್ಟ ಹೆಚ್ಚುವುದರಿಂದ, ಹೆರಿಗೆಯ ಸಾಮರ್ಥ್ಯದ ಮೇಲೆ ಪರಿಣಾಮ ಆಗುತ್ತದೆ. ಇದರಲ್ಲಿ ಒಂದೋ, ಪಿಟ್ಯುಟರಿ ಸ್ಟಾಕ್ ಕಂಪ್ರೆಸ್ ಆಗುತ್ತದೆ ಅಥವಾ ಡೊಪಾಮೈನ್ ಮಟ್ಟ ತಗ್ಗುತ್ತದೆ ಅಥವಾ ಪ್ರೊಲ್ಯಾಕ್ಟಿನೋಮಾ (ಪಿಟ್ಯುಟರಿ ಎಂಡಿನೋಮಾದ ಒಂದು ವಿಧಾನ) ಅಗತ್ಯಕ್ಕಿಂತ ಹೆಚ್ಚಾಗಿ ತಯಾರಾಗುತ್ತದೆ, ಇದು ಹೈಪೊಥಾಲಮಸ್ ನಿಂದ ಗೊನಾಡೊಟ್ರೊಪಿನ್ ರಿಲೀಸ್ ಮಾಡುವ ಹಾರ್ಮೋನ್ ನ ಸ್ರಾವವನ್ನು ನಿಲ್ಲಿಸುತ್ತದೆ.
ಗೊನಾಡೊಟ್ರೊಪಿನ್ ನ್ನು ರಿಲೀಸ್ ಮಾಡಿಸುವ ಹಾರ್ಮೋನ್ ನ ಮಟ್ಟದಲ್ಲಿ ಕೊರತೆ ಆಗುವುದರಿಂದ ಲ್ಯೂಟಿನೈಸಿಂಗ್ ಹಾರ್ಮೋನ್ ಹಾಗೂ ಫಾಲಿಕ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ನ ಸ್ರಾವದಲ್ಲೂ ಕೊರತೆ ಉಂಟಾಗುತ್ತದೆ. ಇದರ ಪರಿಣಾಮವಾಗಿ ಬಂಜೆತನ ಕಾಡಲಾರಂಭಿಸುತ್ತದೆ.
ಬಂಜೆತನದ ಸ್ಥಿತಿ
ಒಂದು ಸಲ ಪ್ರೊಲಾಕ್ಟಿನ್ ಮಟ್ಟ ಹೆಚ್ಚಿದರೆ, ಹೆಂಗಸರಲ್ಲಿ ಮುಟ್ಟಿನ ಪ್ರಕ್ರಿಯೆ ಕಡಿಮೆ ಆಗುತ್ತದೆ ಹಾಗೂ ರಕ್ತದಲ್ಲಿ ಈಸ್ಟ್ರೋಜನ್ ಮಟ್ಟ ಕುಸಿಯುವುದರಿಂದ, ಮುಟ್ಟಿನಲ್ಲಿ ಅನಿಯಮಿತತೆಯ ಜೊತೆ ಬಂಜೆತನ ಕಾಡುತ್ತದೆ. ಕೆಲವೊಂದು ಸಂದರ್ಭದಲ್ಲಿ ಮುಟ್ಟಿನ ಸ್ರಾವದಲ್ಲಿ ಬದಲಾವಣೆ ಇಮೆನೋರಿಯಾ ರೂಪದಲ್ಲೂ ಕಾಣಿಸುತ್ತದೆ, ಇದರಿಂದಾಗಿ ಹೆರಿಗೆಯ ಸಾಮರ್ಥ್ಯವಿದ್ದರೂ, ಮುಟ್ಟು ದಿನೇ ದಿನೇ ತಗ್ಗುತ್ತದೆ. ಎಷ್ಟೋ ಸಲ ಪ್ರೆಗ್ನೆಂಟ್ ಅಲ್ಲದೆಯೇ ಅಥವಾ ಮೆಡಿಕಲ್ ಹಿಸ್ಟರಿ ಕಾರಣ, ಸ್ತನದಲ್ಲಿ ಹಾಲಿನ ಸ್ರಾವ ಆಗುತ್ತದೆ. ಆಗ ಅದು ಹೆಚ್ಚು ನೋಯುತ್ತದೆ. ಏಕೆಂದರೆ ಪ್ರೋಲ್ಯಾಕ್ಟಿನ್ ಮಟ್ಟ ಹೆಚ್ಚಿ ಕಾಮಾಸಕ್ತಿ ತಗ್ಗುವುದರಿಂದ, ಯೋನಿಯಲ್ಲಿ ಶುಷ್ಕತೆ ಕಾಡುತ್ತದೆ, ಆಗ ಸ್ತನಗಳ ಟಿಶ್ಯು ಸಹ ಬದಾಲಾಗುತ್ತದೆ.