ಬಾಯಿ ಉರಿಯ ಸಮಸ್ಯೆ ಕೇವಲ ಮಸಾಲೆಯುಕ್ತ  ಪದಾರ್ಥಗಳ ಸೇವನೆಯಿಂದಷ್ಟೇ ಉಂಟಾಗುವುದಿಲ್ಲ, ಅದಕ್ಕೆ ಬೇರೆ ಕಾರಣಗಳು ಕೂಡ ಇವೆ. ಬಾಯಿ ಉರಿಗೆ ಕಾರಣಗಳು ಹಾಗೂ ಅವುಗಳಿಂದ ರಕ್ಷಿಸಿಕೊಳ್ಳುವ ಉಪಾಯಗಳ ಬಗ್ಗೆ ಅರಿತುಕೊಳ್ಳಿ!

 ಹಲ್ಲುಗಳ ಸ್ವಚ್ಛತೆ : ಹಲ್ಲುಗಳ ಸ್ವಚ್ಛತೆಯ ಬಗ್ಗೆ ಗಮನ ಕೊಡದೇ ಇರುವುದರಿಂದ ಬಾಯಿ ಉರಿ, ಬಾಯಿ ಶುಷ್ಕತೆ, ಬಾಯಿಯ ಅಲ್ಸರ್‌ನಂತಹ ಲಕ್ಷಣಗಳು ಗೋಚರಿಸುತ್ತವೆ. ಬಾಯಿ ಸ್ವಚ್ಛತೆಗಾಗಿ ನಿಯಮಿತವಾಗಿ ಬ್ರಶ್‌ ಮಾಡುವುದು ಅತ್ಯವಶ್ಯ.

ಪೋಷಕಾಂಶಗಳ ಕೊರತೆ : ದೇಹದಲ್ಲಿ ವಿಟಮಿನ್‌, ಕಬ್ಬಿಣಾಂಶ ಹಾಗೂ ಇತರೆ ಖನಿಜಾಂಶಗಳ ಕೊರತೆ ಕೂಡ ಇದಕ್ಕೆ ಕಾರಣವಾಗಿರಬಹುದು. ಮೇಲ್ಕಂಡ ಅಂಶಗಳು ಇರುವಂತಹ ಆಹಾರ ಪದಾರ್ಥಗಳಿಗೆ ಪ್ರಾಧಾನ್ಯತೆ ಕೊಡಿ.

ರೋಗ : ಮಧುಮೇಹ ಹಾಗೂ ಥೈರಾಯ್ಡ್ ತೊಂದರೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಅತಿ ಸಂವೇದನಾಶೀಲತೆ : ಅಲರ್ಜಿ ಸಮಸ್ಯೆಗೆ ತುತ್ತಾದ ಜನರಿಗೆ ಯಾವುದಾದರು ಒಂದು ಆಹಾರದಿಂದ ಈ ಸಮಸ್ಯೆ ಉತ್ಪನ್ನವಾಗಬಹುದು.

ಹಾರ್ಮೋನ್‌ ಅಸಮತೋಲನ : ಹಾರ್ಮೋನ್‌ ಸಮಸ್ಯೆಗೆ ತುತ್ತಾದವರಲ್ಲೂ ಈ ಬಗೆಯ ಲಕ್ಷಣಗಳು ಕಂಡುಬರುತ್ತವೆ. ಹಾರ್ಮೋನ್‌ ಅಸಮತೋಲನದ ಸಮಸ್ಯೆ ಮುಟ್ಟಂತ್ಯದಲ್ಲಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಲಾಲಾರಸದ ಕೊರತೆಯಿಂದ ಅವರಲ್ಲಿ ಬಾಯಿ ಒಣಗುವ ಅಂದರೆ ಶುಷ್ಕತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಔಷಧಿಗಳ ಸೇವನೆ ಹಾಗೂ ಚಿಕಿತ್ಸೆ : ರೇಡಿಯೇಶನ್‌ ಹಾಗೂ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವವರು ಈ ಬಗೆಯ ಸಮಸ್ಯೆಯಿಂದ ಬಳಲುತ್ತಾರೆ. ಹೀಗಾಗಿ ಯಾವುದೇ ಔಷಧಿ ಸೇವನೆ ಮಾಡುವ ಮುನ್ನ ವೈದ್ಯರ ಜೊತೆ ಸಮಾಲೋಚನೆ ನಡೆಸಿ.

ಅಮಲಿನ ಚಟ : ಧೂಮಪಾನದ ಚಟ ಕೂಡ ಬಾಯಿ ಒಣಗುವ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮದ್ಯ ಸೇವನೆ ಮಾಡುವವರಲ್ಲಿ ಈ ಸಮಸ್ಯೆ ಸಾಮಾನ್ಯ ಎಂಬಂತಿರುತ್ತದೆ. ಇಂತಹ ಜನರಲ್ಲಿ ಬಾಯಿ ಶುಷ್ಕಗೊಳ್ಳುವ ಸಮಸ್ಯೆಯ ಜೊತೆಗೆ ಹೊಟ್ಟೆ ಹಾಗೂ ಎದೆ ಉರಿಯ ಸಮಸ್ಯೆ ಕೂಡ ಉಂಟಾಗುತ್ತದೆ.

ಬಾಯಿ ಉರಿಗೆ ಚಿಕಿತ್ಸೆ : ಬಾಯಿ ಉರಿಯ ಸಮಸ್ಯೆಯನ್ನು ಹಗುರವಾಗಿ ಭಾವಿಸಬೇಡಿ. ತಕ್ಷಣವೇ ವೈದ್ಯರ ಜೊತೆ ಸಮಾಲೋಚನೆ ನಡೆಸಿ ಈ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಿ :

- ಧೂಮಪಾನದ ಚಟದಿಂದ ದೂರ ಇರಿ.

- ಆಮ್ಲ ಪೇಯ ಮತ್ತು ಮದ್ಯದ ಚಟದಿಂದಲೂ ದೂರ ಇರಿ.

- ನಿಮ್ಮ ಆಹಾರದಲ್ಲಿ ಪೌಷ್ಟಿಕಾಂಶಗಳಾದ ಬೇಳೆ ಕಾಳುಗಳು, ನಾರುಯುಕ್ತ ಹಣ್ಣು ತರಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಿ.

- ದ್ರವ ಪದಾರ್ಥಗಳನ್ನು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ. ಆದರೆ ಒಂದು ಸಂಗತಿ ಗಮನದಲ್ಲಿರಲಿ, ದ್ರವ ಪದಾರ್ಥಗಳು ಹೆಚ್ಚು ಕೋಲ್ಡ್ ಆಗಿರಬಾರದು.

- ಸರಿಯಾಗಿ ಬ್ರಶ್‌ ಮಾಡುವ ವಿಧಾನವನ್ನು ತಿಳಿದುಕೊಳ್ಳಿ.

- ರುಚಿ ರಹಿತ ಟೂಥ್‌ ಪೇಸ್ಟ್ ಬಳಸಿ.

- ನಿಮ್ಮ ಡೆಂಚರ್‌ ಫಿಕ್ಸ್ ಮಾಡಿಟ್ಟುಕೊಳ್ಳಿ.

- ಅತಿಯಾದ ಮಸಾಲೆಯುಕ್ತ ಹಾಗೂ ಹೆಚ್ಚು ಬಿಸಿ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.

- ರಾತ್ರಿ ಹೊತ್ತು ಮಸಾಲೆಯುಕ್ತ ಆಹಾರ ಪದಾರ್ಥವನ್ನು ಸೇವಿಸಬೇಡಿ.

- ಜೀವನವಿಡೀ ರುಚಿಕರ ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳ ಆನಂದ ಪಡೆಯಬೇಕೆಂದಿದ್ದರೆ, ಬಾಯಿಯ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಈ ಸಂಗತಿಗಳನ್ನು ಚಾಚೂ ತಪ್ಪದೇ ಅನುಸರಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ