ಸುಡು ಬಿಸಿಲಿನಲ್ಲಿ ತ್ವಚೆಗೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ದೊಡ್ಡ ಸಮಸ್ಯೆ ಬೆವರು ಬರುವುದು. ಅತ್ಯಂತ ಹೆಚ್ಚು ಬೆವರು ತೋಳುಗಳ ಕೆಳಗೆ ಅಂದರೆ ಕಂಕುಳು, ಅಂಗಾಲು ಮತ್ತು ಅಂಗೈಗಳಲ್ಲಿ ಬರುತ್ತದೆ. ಆದಾಗ್ಯೂ ಹೆಚ್ಚಿನ ಜನಕ್ಕೆ ಸ್ವಲ್ಪವೇ ಬೆವರು ಬರುತ್ತದೆ. ಕೆಲವರಿಗೆ ಬಹಳ ಹೆಚ್ಚು ಬೆವರು ಬರುತ್ತದೆ. ಕೆಲವರಿಗೆ ಸೆಖೆಯೊಂದಿಗೆ ಬೆವರು ಗ್ರಂಥಿಗಳು ಓವರ್‌ ಆ್ಯಕ್ಟಿವ್ ‌ಆಗಿರುವುದರಿಂದ ಹೆಚ್ಚು ಬೆವರು ಬರುತ್ತದೆ. ಅದನ್ನು ಹೈಪರ್ ಹೈಡ್ರೋಸಿಸ್‌ ಸಿಂಡ್ರೋಮ್ ಎನ್ನುತ್ತಾರೆ. ಹೆಚ್ಚು ಬೆವರುವುದರಿಂದ ಶರೀರದಲ್ಲಿ ಅಸಹಜತೆಯ ಅನುಭವವಾಗುತ್ತದೆ. ಬೆವರಿನ ದುರ್ಗಂಧ ಹೆಚ್ಚುತ್ತದೆ. ಅದರಿಂದ ಆ ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗುತ್ತದೆ.

ಅಂತಾರಾಷ್ಟ್ರೀಯ ಹೈಪರ್‌ ಹೈಡ್ರೋಸಿಸ್‌ ಸೊಸೈಟಿಯ ಪ್ರಕಾರ ನಮ್ಮ ಇಡೀ ಶರೀರದಲ್ಲಿ 3 ರಿಂದ 4 ಮಿಲಿಯನ್‌ ಬೆವರಿನ ಗ್ರಂಥಿಗಳಿವೆ. ಇವುಗಳಲ್ಲಿ ಹೆಚ್ಚಾಗಿ ಎನ್‌ಕೈನ್‌ ಗ್ರಂಥಿಗಳಿದ್ದು, ಹೆಚ್ಚಾಗಿ ಅಂಗಾಲುಗಳು, ಅಂಗೈಗಳು, ಹಣೆ, ಕೆನ್ನೆ ಮತ್ತು ತೋಳುಗಳ ಕೆಳಗಿನ ಭಾಗ ಅಂದರೆ ಕಂಕುಳಲ್ಲಿ ಬರುತ್ತದೆ. ಎನ್‌ಕೈನ್‌ ಗ್ರಂಥಿಗಳು ಸ್ವಚ್ಛ ಹಾಗೂ ದುರ್ಗಂಧರಹಿತ ದ್ರವ ಬಿಡುತ್ತವೆ. ಅದರಿಂದ ಶರೀರಕ್ಕೆ ಬಾಷ್ಪೀಕರಣ ಪ್ರಕ್ರಿಯೆಯಿಂದ ತಂಪು ನೀಡುವಲ್ಲಿ ಸಹಾಯ ಸಿಗುತ್ತದೆ. ಬೇರೆ ರೀತಿಯ ಬೆವರು ಗ್ರಂಥಿಗಳಿಗೆ ಎಪೋನ್‌ಕೈನ್‌ ಎನ್ನುತ್ತಾರೆ. ಈ ಗ್ರಂಥಿಗಳು ಕಂಕುಳು ಹಾಗೂ ಜನನಾಂಗಗಳ ಸುತ್ತಮುತ್ತ ಇರುತ್ತವೆ. ಈ ಗ್ರಂಥಿಗಳು ಗಾಢವಾದ ದ್ರವವನ್ನು ತಯಾರಿಸುತ್ತವೆ. ಈ ದ್ರವ ತ್ವಚೆಯ ಪದರದಲ್ಲಿರುವ ಬ್ಯಾಕ್ಟೀರಿಯಾದೊಂದಿಗೆ ಬೆರೆತಾಗ ದುರ್ಗಂಧ ಉತ್ಪನ್ನವಾಗುತ್ತದೆ.

ಬೆವರಿನ ದುರ್ಗಂಧವನ್ನು ನಿಯಂತ್ರಿಸಿ ಸ್ವಚ್ಛತೆಯ ಬಗ್ಗೆ ವಿಶೇಷ ಗಮನವಿಡಿ : ಬೆವರು ದುರ್ಗಂಧಕ್ಕೆ ಕಾರಣವಲ್ಲ. ಬೆವರು ಬಾಕ್ಟೀರಿಯಾದೊಂದಿಗೆ ಸೇರಿದಾಗ ಶರೀರದಿಂದ ದುರ್ಗಂಧ ಬರುತ್ತದೆ. ಸ್ನಾನ ಮಾಡಿದ ತಕ್ಷಣ ಬೆವರು ಬಂದರೆ ಅದರಲ್ಲಿ ದುರ್ಗಂಧ ಇರುವುದಿಲ್ಲ. ಪದೇ ಪದೇ ಬೆವರಿದಾಗ, ಒಣಗಿದಾಗ ದುರ್ಗಂಧ ಬರಲು ಆರಂಭವಾಗುತ್ತದೆ. ಬೆವರಿನಿಂದಾಗಿ ತ್ವಚೆ ಒದ್ದೆಯಾಗಿರುತ್ತದೆ. ಹೀಗಿರುವಾಗ ಅದರ ಮೇಲೆ ಬ್ಯಾಕ್ಟೀರಿಯಾ ಉತ್ಪನ್ನವಾಗಲು ಅನುಕೂಲವಾದ ಪರಿಸ್ಥಿತಿ ಉಂಟಾಗುತ್ತದೆ.  ನಿಮ್ಮ ತ್ವಚೆಯನ್ನು ಸ್ವಚ್ಛವಾಗಿ ಹಾಗೂ ಒಣಗಿದಂತೆ ಇಟ್ಟುಕೊಂಡರೆ ಬೆವರಿನ ದುರ್ಗಂಧದ ಸಮಸ್ಯೆ ಸಾಧ್ಯವಾದಷ್ಟೂ ಕಡಿಮೆಯಾಗುತ್ತದೆ.

ಸ್ಟ್ರಾಂಗ್‌ ಡಿಯೋಡರೆಂಟ್‌ ಮತ್ತು ಆ್ಯಂಟಿಪವರ್‌ ಸ್ಪಿರೆಂಟ್‌ ಉಪಯೋಗಿಸಿ. ಡಿಯೋಡರೆಂಟ್‌ ಬೆವರು ಬರುವುದನ್ನು ತಡೆಯುವುದಿಲ್ಲ. ಆದರೆ ಇದು ಶರೀರದಿಂದ ಬರುವ ದುರ್ಗಂಧವನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. ಸ್ಟ್ರಾಂಗ್‌ ಪವರ್ ಸ್ಪಿರೆಂಟ್‌ ಬೆವರಿನ ರಂಧ್ರಗಳನ್ನು ಮುಚ್ಚಿಬಿಡುತ್ತದೆ. ಅದರಿಂದ ಬೆವರು ಕಡಿಮೆ ಬರುತ್ತದೆ. ಬೆವರಿನ ರಂಧ್ರಗಳು ಮುಚ್ಚಿವೆಯೆಂದು ನಿಮ್ಮ ಶರೀರದ ಇಂದ್ರಿಯಗಳಿಗೆ ಅನುಭವವಾದಾಗ ಅವು ಒಳಗಿನಿಂದಲೇ ಬೆವರು ಬಿಡುವುದನ್ನು ನಿಲ್ಲಿಸುತ್ತವೆ. ಈ ಪವರ್ ಸ್ಪಿರೆಂಟ್‌ಗಳು ಗರಿಷ್ಠ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ. ಒಂದು ವೇಳೆ ಇವನ್ನು ಉಪಯೋಗಿಸುವಾಗ ಅವುಗಳ ಮೇಲೆ ಮುದ್ರಿಸಿರುವ ಸೂಚನೆಗಳನ್ನು ಪಾಲಿಸದಿದ್ದರೆ ತ್ವಚೆಯ ಇರಿಟೇಶನ್‌ಗೆ ಕಾರಣವಾಗುತ್ತದೆ. ಆದ್ದರಿಂದ ಯಾವುದಾದರೂ ಆ್ಯಂಟಿ ಪರ್‌ಸ್ಪಿರೆಂಟ್‌ ಉಪಯೋಗಿಸುವ ಮೊದಲು ವೈದ್ಯರ ಸಲಹೆ ಅಗತ್ಯವಾಗಿ ಪಡೆಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ