ಡಾ. ಜಾಕಿಯಾ ಖಾನ್ ಮುಂಬೈನ ಏಕೈಕ ಮಹಿಳಾ ಕಾರ್ಡಿಯಾಲಜಿಸ್ಟ್ ಮತ್ತು ಕ್ಲಿನಿಕ್ ಮತ್ತು ನಾನ್ ಇನ್‌ವೇಸಿವ್ ವಿಧಾನದಿಂದ ಹಾರ್ಟ್ ಸರ್ಜರಿ ಮಾಡುವ ಡಾ. ಜಾಕಿಯಾ ಫೋರ್ಟಿಸ್ ಹಾಸ್ಪಿಟಲ್ ನ ಇಂಟರ್ ನ್ಯಾಷನ್ ಕಾರ್ಡಿಯಾಲಜಿಸ್ಟ್ ಆಗಿದ್ದಾರೆ. ಅವರೊಡನೆ ನಡೆಸಿದ ಮಾತುಕಥೆಯ ಮುಖ್ಯ ಅಂಶಗಳು :
ತೂಕವನ್ನು ಯಾವಾಗಲೂ ನಿಯಂತ್ರಿಸಿಕೊಳ್ಳಿ.
ನಿಯಮಿತವಾಗಿ ವ್ಯಾಯಾಮ ಮಾಡಿ.
30-35ರ ವಯಸ್ಸಿನಿಂದಲೇ ಸಂಪೂರ್ಣ ಹೆಲ್ತ್ ಚೆಕಪ್ ಮಾಡಿಸಿ.
ಬ್ಲಡ್ ಪ್ರೆಶರ್, ಶುಗರ್, ಕೊಲೆಸ್ಟ್ರಾಲ್ ಇತ್ಯಾದಿ ನಿಯಮಿತವಾಗಿ ಪರೀಕ್ಷೆ ಮಾಡಿಸಿ. ಏಕೆಂದರೆ ಈ ಕಾಯಿಲೆಗಳೆಲ್ಲ ಸೈಲೈಂಟ್ ಕಿಲ್ಲರ್ ಆಗಿವೆ.
ಹಾರ್ಟ್ ಡಿಸೀಸ್ ಆನುವಂಶೀಯವಾದ್ದರಿಂದ ಇದರ ಅಪಾಯ ಹೆಚ್ಚು.
ಹೆಲ್ದಿ ಡಯೆಟ್ ತೆಗೆದುಕೊಳ್ಳಿ. ಹೆಚ್ಚಿನ ಜನರಲ್ಲಿ ಹಾರ್ಟ್ ಅಟ್ಯಾಕ್ ಬಗ್ಗೆ 1 ವಾರಕ್ಕೆ ಮೊದಲೇ ಸೂಚನೆ ಸಿಗುತ್ತದೆ. ಒಮ್ಮೊಮ್ಮೆ 1 ತಿಂಗಳ ಮೊದಲು. ಜನ ಅದನ್ನು ಅಸಿಡಿಟಿ ಎಂದು ತಿಳಿಯುತ್ತಾರೆ. ಕೆಲವು ಲಕ್ಷಣಗಳು ಕೆಳಗಿನಂತಿವೆ :
ಇದ್ದಕ್ಕಿದ್ದಂತೆ ಎದೆಯಲ್ಲಿ ಉರಿ, ನೋವುಂಟಾಗುವುದು.
ಬೆವರು ಸುರಿಯುವುದು.
ಮೆಟ್ಟಿಲು ಹತ್ತುವಾಗ ಏದುಸಿರು ಬಿಡುವುದು.
ವಾಕಿಂಗ್‌ಗೆ ಹೋಗಲಾಗದಿರುವುದು.
ಎದೆ ಭಾರವಾಗುವಿಕೆ
ಈ ಎಲ್ಲ ಲಕ್ಷಣಗಳು ಅಲಾರ್ಮಿಂಗ್ ಆಗಿರುತ್ತವೆ ಮತ್ತು ಹಾರ್ಟ್ ಅಟ್ಯಾಕ್ ಆಗುವ ಬಗ್ಗೆ ಸಂಕೇತ ನೀಡುತ್ತವೆ. ಇವನ್ನು ಅಸಿಡಿಟಿ ಎಂದು ತಿಳಿದು ಸಮಯ ಹಾಳುಮಾಡಬೇಡಿ.