ಅರೇ ಇದೇನು ಇಂತಹ ಶೀರ್ಷಿಕೆ? ಸಾಮಾನ್ಯವಾಗಿ ವೈದ್ಯರು ಅನಾರೋಗ್ಯದಿಂದ ಬಳಲುತ್ತಿರುವವರಿಗೆ  ಆರೋಗ್ಯಕರವಾಗಿ ತಿನ್ನಲು ಸೂಚಿಸುವುದೇ ಇಡ್ಲಿ ಅಂತಹದ್ದರಲ್ಲಿ  ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ವಿಷಯ ಕೇಳಿ ಆಚ್ಚರಿ ಪಡುವುದರರಲ್ಲಿ ತಪ್ಪೇನಿಲ್ಲಾ. ಆದರೆ, ಇತ್ತೀಚೆಗೆ ಆಹಾರ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಹೋಟೇಲ್ ಮತ್ತು ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡುವವರಿಂದ ಇಡ್ಲಿಯನ್ನು ತೆಗೆದುಕೊಂಡು ಹೋಗಿ ಅದನ್ನು  ಪರೀಕ್ಷೆಯಲ್ಲಿ  ನಡೆಸಿದ ಸಂಧರ್ಭದಲ್ಲಿ ಈ  ವಿಚಾರ ಬಹಿರಂಗಗೊಂಡಿದ್ದು, ಇದನ್ನು ಕೇಳಿ ಇಡ್ಲಿ ಪ್ರಿಯರು ಶಾಕ್ ಆಗಿರುವುದಂತೂ ಸತ್ಯ. ಹಾಗಾಗಿ ಈ ಕುರಿತಾದ ಸವಿವರಗಳನ್ನು ತಿಳಿಯೋಣ ಬನ್ನಿ.

ಇಡ್ಲಿ ಇಂದು ಕೇವಲ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಅವಿಭಜಿತ ರಾಜ್ಯದ ಬೆಳಗಿನ ಉಪಹಾರವಾಗಿಯಷ್ಟೇ ಉಳಿಯದೇ, ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದು ವಿಶ್ವವಿಖ್ಯಾತವಾಗಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಸಹಾ ಇಡ್ಲಿ, ಸಾಂಬಾರ್, ಚೆಟ್ನಿ ಸಿಗುವಂತಾಗಿದ್ದು ಎಲ್ಲರ ಮೆಚ್ಚಿನ ಖಾದ್ಯವಾಗಿದೆ. ಹಾಗಾಗಿಯೇ ಅನೇಕರು ಇಡ್ಲಿಯನ್ನು ತಿಂಡಿಗಳ ರಾಜ ಎಂದು ಕರೆದರೆ ತಪ್ಪಾಗದು ಎನ್ನುವುದು ಸತ್ಯ ಎನಿಸುತ್ತದೆ. ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ನೆನಸಿ ಅದನ್ನು ಹದವಾಗಿ ರುಬ್ಬಿ ಒಂದು ರಾತ್ರಿ ಇಡೀ ಹಾಗೇ ಬಿಟ್ಟಲ್ಲಿ ನೈಸರ್ಗಿಕವಾಗಿ ಈಸ್ಟ್ ಉತ್ಪತ್ತಿಯಾಗಿ ಹುದುಗು ಬಂದು ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಬೇಕಾದ ಆಕಾರದ ಬಟ್ಟಲು/ತಟ್ಟೆಗಳಲ್ಲಿ ಹಾಕಿ ಇಡ್ಲೀ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ ರುಚಿ ರುಚಿಯಾದ, ಅತ್ಯಂತ ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿರುವ ಮತ್ತು ಅಷ್ಟೇ ಆರೋಗ್ಯಕರವಾದ ಇಡ್ಲಿಗಳು ಸವಿಯಲು ಸಿದ್ಧವಾಗಿರುತ್ತದೆ. ಈ ಇಡ್ಲಿಗಳನ್ನು ಅವರವರ ರುಚಿ ಮತ್ತು ಅಭಿರುಚಿಗೆ ತಕ್ಕಂತೆ, ಬಗೆ ಬಗೆಯ ಚಟ್ನಿ, ಚಟ್ನಿ ಪುಡಿ, ಬೆಣ್ಣೆ, ಸಾಂಬಾರ್ ಇಲ್ಲವೇ ಗೊಜ್ಜುಗಳೊಂದಿಗೆ ತಿನ್ನುವ ಆನಂದವನ್ನು ಇಲ್ಲಿ ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಆನಂದ.

ಇಂತಹ ವಿಶ್ವಮಾನ್ಯ ಖಾದ್ಯವಾದ ಇಡ್ಲಿಯ ಮೂಲದ ಕುರಿತಾಗಿಯೂ ಅನೇಕ ಜಿಜ್ಞಾಸೆಗಳು ಇದ್ದು, ಕರ್ನಾಟಕ, ತಮಿಳುನಾಡು, ಗುಜರಾತ್ ಅಷ್ಟೇ ಅಲ್ಲದೇ ಅನೇಕ ವಿದೇಶಿಗರೂ ಸಹಾ ಇದು ನಮ್ಮದೇ ಅವಿಷ್ಕಾರ ಎಂದು ಹೇಳಿಕೊಳ್ಳುತ್ತಾರೆ. ಕ್ರಿ.ಶ. 920ರಲ್ಲಿ ಕನ್ನಡ ಭಾಷೆಯಲ್ಲಿ ಶಿವಕೋಟಿ ಆಚಾರ್ಯರು ಬರೆದ ವಡ್ಡರಾಧನೆ ಎಂಬ ಕೃತಿಯಲ್ಲಿ ಮತ್ತು ಕ್ರಿ.ಶ. 1130ರಲ್ಲಿ ಪ್ರಕಟವಾದ ಸಂಸ್ಕೃತ ಕೃತಿ ಮಾನಸೊಲ್ಲಾಸದಲ್ಲಿಯೂ ಸಹಾ ಇಡ್ಲಿ ಬಗ್ಗೆ ಉಲ್ಲೇಖವಿರುವ ಕಾರಣ ಮತ್ತು ಕರ್ನಾಟಕದ ಮನೆಮನೆಗಳಲ್ಲಿ ಇಡ್ಲಿ ಸಾಂಪ್ರದಾಯಕ ತಿಂಡಿಯಾಗಿರುವ ಕಾರಣ ಇದು ಕರ್ನಾಟಕದ ಕೊಡುಗೆ ಎಂದರೆ,  17ನೇ ಶತಮಾನದಲ್ಲಿನ ತಮಿಳು ಕೃತಿಗಳಲ್ಲಿಯೂ ಇಡ್ಲಿಯ ಬಗ್ಗೆ ವ್ಯಾಖ್ಯಾನಗಳಿದ್ದು, ತಮಿಳುನಾಡಿನಲ್ಲಿಯೂ ಇಡ್ಲಿ ಕೇವಲ ಬೆಳಗಿನ ಉಪಹಾರವಷ್ಟೇ ಅಲ್ಲದೇ ಸಂಜೆ/ರಾತ್ರಿಯ ಉಪಹಾರ/ಊಟದಲ್ಲಿ ವ್ಯಾಪಕವಾಗಿ ಬಳಸುವ ಕಾರಣ ಇಡ್ಲಿ ನಮ್ಮ ಆವಿಷ್ಕಾರ ಎನ್ನುವುದು ತಮಿಳಿಗರ ವಾದವಾಗಿದೆ.

ಇನ್ನು 2ನೇ ಮಹಾಯುದ್ಧದ ಸಮಯದಲ್ಲಿ, ಇಡ್ಲಿಯಲ್ಲಿ ಬಳಸುವ ಪ್ರಮುಖ ವಸ್ತುವಾದ ಅಕ್ಕಿಯ ಆಮದು ಕಡಿಮೆಯಾಗಿ ಅಕ್ಕಿಯ ಬಳಕೆಯ ಮೇಲೆ ಸರ್ಕಾರವೇ ನಿರ್ಭಂಧ ಹೇರಿದಾಗ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ಸರಣಿ ಮಾವಳ್ಳಿ ಟಿಫಿನ್ ರೂಮ್ಸ್ (MTR)ನ ಮಾಲಿಕರರಾದ ಶ್ರೀ ಮಯ್ಯಾರವರು ಅಕ್ಕಿಯ ಬದಲು ರವೆ ಬಳಸಿ ಇಡ್ಲಿ ಮತ್ತಷ್ಟು ಮೃದುವಾದ ಮಗದಷ್ಟು ರುಚಿಕರವಾದ ರವೇ ಇಡ್ಲಿಯನ್ನು ಅವಿಷ್ಕರಿಸಿ, ರವೇ ಇಡ್ಲಿ, ಸಾಗು ಮತ್ತು ಚೆಟ್ನಿ, ಅದರ ಮೇಲೊಂದು ಚಮಚ ತುಪ್ಪಾ ಇಲ್ಲವೇ ಬೆಣ್ಣೆ ಯೊಂದಿಗೆ ವಿಶೇಷ ತಿಂಡಿಯನ್ನು ಕಂಡು ಹಿಡಿದ ಕಾರಣ ಇಡ್ಲಿಯ ಆವಿಷ್ಕಾರದ ಸಂಪೂರ್ಣ ಹಕ್ಕು ಕನ್ನಡಿಗರಿಗೇ ಸೇರಬೇಕು ಎನ್ನುವುದೇ ನನ್ನ ವಯಕ್ತಿಕ ಅಭಿಪ್ರಾಯ ಮತ್ತು ವಾದವಾಗಿದೆ. ಹೀಗೆ ಇಡ್ಲಿಗಳಿಗೂ  ಈಗ ವಿಶ್ವ ಮಾನ್ಯತೆ ದೊರೆತಿದ್ದು, ಪ್ರತೀ ವರ್ಷ ಮಾರ್ಚ್ 30ರಂದು ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲ್ಪಡುವಷ್ಟರ ಮಟ್ಟಿಗೆ ಅದರ ಖ್ಯಾತಿ ಬೆಳದಿದೆ.  ಹಾಗಾಗಿಯೇ ಬಹುತೇಕರ ಮನೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನ ತಿಂಡಿಗೆ  ಇಡ್ಲಿಯನ್ನು ಬಳಸುವುದರಿದ್ದರೆ, ಕೇವಲ ದಕ್ಷಿಣ ಭಾರತವೇಕೇ? ಬಹುತೇಕ ಭಾರತಾದ್ಯಂತ ಮತ್ತು ವಿದೇಶಗಳ ಆಯ್ದ ಭಾಗಗಳ ಹೋಟೆಲ್ ಮತ್ತು ರೆಸ್ಟೊರೆಂಟ್ ಗಳಲ್ಲಿ  ಇಡ್ಲಿಯದ್ದೇ ಪ್ರಾಭಲ್ಯ. ಯಾವ ತಿಂಡಿಯಿಲ್ಲದೇ ಹೋದರೂ, ಬೆಳ್ಳಂಬೆಳಿಗ್ಗೆಯಿಂದ ತಡರಾತ್ರಿಯವರೆಗೂ, ವಿವಿಧ ಆಕಾರದ, ವಿವಿಧ ಬಗೆಯ ಇಡ್ಲಿಗಳ ಲಭ್ಯ ಇದ್ದೇ  ಇರುವುದನ್ನು  ನಾವೆಲ್ಲರೂ ಗಮನಿಸಿಯೇ ಇದ್ದೇವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ