ನಾವು ಮನೆಯಲ್ಲಿಯೇ ಇರಬಹುದು, ಹೊರಗಡೆ ಹೋಗದಿರಬಹುದು, ಇಲ್ಲೆಲ್ಲ ಹಲವು ತೆರನಾದ ರೋಗಾಣು, ಬ್ಯಾಕ್ಟೀರಿಯಾ, ವೈರಸ್ ಗಳ ಸಂಪರ್ಕಕ್ಕೆ ಬಂದೇ ಬರುತ್ತೇವೆ. ಯಾವುದೊ ಒಂದು ಜಾಗವನ್ನು ಮುಟ್ಟುವುದರಿಂದ ಯಾರ ಕೈಯನ್ನಾದರೂ ಕುಲುಕುವುದರಿಂದ, ಯಾರಾದರೂ ಸೀನಿದಾಗ ಅಥವಾ ಗಾಳಿಯ ಮೂಲಕ ಗೋಡೆಗೆ ಆಸರೆಯಾಗಿ ನಿಂತಾಗ, ಯಾರನ್ನಾದರೂ ತಬ್ಬಿಕೊಂಡಾಗ ನಾವು ರೋಗಾಣುಗಳ ಸಂಪರ್ಕಕ್ಕೆ ಬರಬಹುದು. ಆ ರೋಗಾಣುಗಳು ನಮ್ಮ ಬಟ್ಟೆಗೆ ಅಂಟಿಕೊಳ್ಳುತ್ತವೆ. ಒಂದು ವೇಳೆ ಬಟ್ಟೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸದಿದ್ದರೆ, ನಾವು ಅನಾರೋಗ್ಯ ಪೀಡಿತರಾಗಬಹುದು. ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳಲು ಬಟ್ಟೆಗಳನ್ನು ಹೇಗೆ ರೋಗಾಣುಮುಕ್ತವಾಗಿ ಇಡಬೇಕೆಂದು ತಿಳಿದುಕೊಳ್ಳಿ.
ಬಟ್ಟೆಗಳನ್ನು ಒಟ್ಟಿಗೆ ಇಡಬೇಡಿ
ಬಹಳಷ್ಟು ಮನೆಗಳಲ್ಲಿ ಎರಡು ಮೂರು ದಿನಗಳಿಗೊಮ್ಮೆ ಬಟ್ಟೆಗಳನ್ನು ಒಟ್ಟುಗೂಡಿಸಿ ಒಗೆಯಲಾಗುತ್ತದೆ. ಮಳೆಗಾಲದಲ್ಲಿ ಈ ಬಟ್ಟೆಗಳಲ್ಲಿ ತೇವಾಂಶ ಉಂಟಾಗಿ ಅದು ರೋಗಾಣುಗಳು ಉತ್ಪತ್ತಿಯಾಗಲು ಅವಕಾಶ ಕೊಡುತ್ತದೆ. ಕೊರೋನಾ ಸೋಂಕಿನ ದಿನಗಳಲ್ಲಂತೂ ಇದು ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಬಹುದು.
ಕೆಲವು ಬ್ಯಾಕ್ಟೀರಿಯಾಗಳು ಅದೇ ದಿನ ಸತ್ತು ಹೋಗುತ್ತವೆ. ಆದರೆ ಇಕೋಲಿ ಮತ್ತು ಇನ್ನಿತರ ಬ್ಯಾಕ್ಟೀರಿಯಾಗಳು ಹಲವು ವಾರಗಳ ತನಕ ಜೀವಂತವಾಗಿರುತ್ತವೆ. ಅದರಲ್ಲೂ ಸ್ಟೆಪಿಯೋಕಾಕಸ್ ಬ್ಯಾಕ್ಟೀರಿಯಾ ಹಲವು ತಿಂಗಳುಗಳ ತನಕ ಉದ್ಭವಿಸುತ್ತಲೇ ಇರುತ್ತದೆ. ಹೀಗಾಗಿ ಬಟ್ಟೆಗಳುನ್ನ ಒಂದೇ ಕಡೆ ಒಟ್ಟುಗೂಡಿಸಿ ಇಡಬೇಡಿ.
ಮಕ್ಕಳ ಬಟ್ಟೆ ಪ್ರತ್ಯೇಕವಾಗಿರಲಿ
ಮಕ್ಕಳ ಬಟ್ಟೆಗಳ ಸ್ವಚ್ಛತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಏಕೆಂದರೆ ಮಕ್ಕಳು ಹೆಚ್ಚಾಗಿ ನೆಲದ ಮೇಲೆಯೇ ಆಟ ಆಡುತ್ತಿರುತ್ತಾರೆ. ಆಟಿಕೆ ಸಾಮಾನುಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ಅವರ ಬಟ್ಟೆಗಳನ್ನು ಇತರೆ ಬಟ್ಟೆಗಳೊಂದಿಗೆ ಸೇರಿಸಿ ಒಗೆದರೆ ಅದರಲ್ಲಿನ ರೋಗಾಣುಗಳು ಬೇರೆ ಬಟ್ಟೆಗಳಲ್ಲೂ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಅವರ ಬಟ್ಟೆಗಳನ್ನು ಪ್ರತ್ಯೇಕವಾಗಿಡಿ ಮತ್ತು ಅಂತಹ ಬಟ್ಟೆಗಳನ್ನು ಕಡಿಮೆ ಕೆಮಿಕಲ್ಸ್ ಬಳಸಿರುವ ಲಿಕ್ವಿಡ್ ಅಥವಾ ಪೌಡರ್ ನಿಂದ ಒಗೆಯಿರಿ. ಬಟ್ಟೆ ಒಗೆದ ಬಳಿಕ ಯಾವುದಾದರೂ ಡಿಸ್ ಇನ್ ಫೆಕ್ಟೆಂಟ್ ನಲ್ಲಿ ಅದ್ದಿರಿ.
ಹೊರಗಿನಿಂದ ಬಂದ ನಂತರ......
ನೀವು ಹೊರಗಿನಿಂದ ಬಂದ ಬಳಿಕ ತಕ್ಷಣವೇ ಬಟ್ಟೆ ಒಗೆಯಲು ಹಾಕಬೇಕು. ಒಂದು ಅಧ್ಯಯನದಿಂದ ತಿಳಿದು ಬಂದ ಸಂಗತಿಯೇನೆಂದರೆ, ಕೊರೋನಾ ವೈರಸ್ ಬಹಳ ಹೊತ್ತಿನ ತನಕ ಬಟ್ಟೆಯ ಮೇಲೆಯೇ ಅಂಟಿಕೊಂಡು ಕುಳಿತಿರುತ್ತವೆ. ಒಂದು ವೇಳೆ ಅಂತಹ ಬಟ್ಟೆಗಳನ್ನು ಒಗೆಯದ ಬೇರೆ ಬಟ್ಟೆಗಳ ಜೊತೆ ಮಿಶ್ರಣ ಮಾಡಿದರೆ, ತೇವಾಂಶದ ಲಾಭ ಪಡೆದುಕೊಂಡು ಆ ವೈರಸ್ ಮತ್ತೆ ಉದ್ಭವಿಸಬಹುದು. ಒಂದು ವೇಳೆ ಇದರ ಬಗ್ಗೆ ಗಮನ ಕೊಡದೇ ಹೋದರೆ ನಾವು ವೈರಸ್ ಸಂಪರ್ಕಕ್ಕೆ ಬಂದು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗಾಗಿ ಹೊರಗಿನಿಂದ ಬಂದಾಕ್ಷಣ ಎಷ್ಟು ಸಾಧ್ಯವೋ ಅಷ್ಟು ಬೇಗ ಬಟ್ಟೆಗಳನ್ನು ಡಿಸ್ ಇನ್ ಫೆಕ್ಟೆಂಟ್ ಮಿಶ್ರಣ ಮಾಡಿದ ನೀರಿನಲ್ಲಿ ಮುಳುಗಿಸಿ ಹಾಗೆಯೇ ಸ್ವಲ್ಪ ಹೊತ್ತು ಬಿಡಿ.
ವಾಶ್ ಮಾಡುವ ಸೂಕ್ತ ವಿಧಾನ
ನೀವು ಬಟ್ಟೆಗಳನ್ನು ಕೈಯಿಂದ ಒಗೆಯುತ್ತಿದ್ದರೆ ಬಕೆಟ್ ನಲ್ಲಿ ನೀರು ಹಾಕಿ, ಡಿಟರ್ಜೆಂಟ್ ಮಿಶ್ರಣ ಮಾಡಿ ಬಟ್ಟೆಗಳನ್ನು ಅದರಲ್ಲಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಹೀಗೆ ಮಾಡುವುದರಿಂದ ಬಟ್ಟೆಗಳಲ್ಲಿರುವ ಎಲ್ಲ ರೋಗಾಣುಗಳು ಸತ್ತು ಹೋಗುತ್ತವೆ. ಒಂದು ವೇಳೆ ನೀವು ವಾಶಿಂಗ್ ಮೆಶಿನ್ ನಲ್ಲಿ ಬಟ್ಟೆ ಸ್ವಚ್ಛಗೊಳಿಸುತ್ತಿದ್ದರೆ, ಮೊದಲು ಮೆಶಿನ್ ನ್ನು ನೀರು ಹಾಕಿ ಚೆನ್ನಾಗಿ ಸ್ವಚ್ಛಗೊಳಿಸಿ. ಬಳಿಕ 10-15 ನಿಮಿಷಗಳ ಕಾಲ ಡಿಟರ್ಜೆಂಟ್ ನೀರಿನಿಂದ ಸ್ವಚ್ಛಗೊಳಿಸಿ. ಆ ಬಳಿಕ ಸ್ವಚ್ಛ ನೀರಿನಿಂದ ಒಗೆದು ಒಣಗಿಸಿ. ಈ ರೀತಿ ಮಾಡುವುದರಿಂದ ಬಟ್ಟೆಗಳು ಒಳಗಿನ ತನಕ ಸ್ವಚ್ಛವಾಗುತ್ತವೆ.