ನಾವು ಮನೆಯಲ್ಲೇ ಇರಲಿ, ಹೊರಗೇ ಇರಲಿ, ಒಂದು ಕಪ್‌ ಕಾಫಿಯಂತೂ ಬೇಕೇ ಬೇಕು ಎನಿಸುತ್ತದೆ. ದೈನಂದಿನ ದಣಿವಿನಲ್ಲಿ ಕಾಫಿಯ ಗುಟುಕು, ಅದರ ಮಧುರ ವಾಸನೆ, ರುಚಿ ಮತ್ತು ತಾಜಾತನದ ಅನುಭೂತಿ ಯಾರಿಗಾದರೂ ಸ್ಛೂರ್ತಿ ಮತ್ತು ಆನಂದ ತುಂಬುತ್ತದೆ.

ಬಿಸಿಬಿಸಿ ಕಾಫಿಯ ಜೊತೆಗೆ ದಿನದ ಆರಂಭ ಮಾಡುವುದೆಂದರೆ, ಅದು ನಿಜಕ್ಕೂ ವಿಶಿಷ್ಟವಾಗಿರುತ್ತದೆ. ಕಾಫಿ ಕಪ್‌ನಿಂದ ಹೊರಹೊಮ್ಮುವ ಪರಿಮಳದಿಂದ ನೀವು ನಿದ್ದೆಯ ಮಂಪರಿನಿಂದ ಎದ್ದೇಳಲೇಬೇಕೆಂಬ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ದೇಶವಿದೇಶಗಳ ಬಹಳಷ್ಟು ಜನರು ತಮ್ಮ ದಿನವನ್ನು ಕಾಫಿಯಿಂದಲೇ ಆರಂಭಿಸುತ್ತಾರೆ.

ಕಾಫಿ ಪ್ರತಿಯೊಂದು ಹವಾಮಾನಕ್ಕೆ ಉತ್ತಮ ಪೇಯವಾಗಿದೆ. ಕಾಫಿಗೆ ಅನೇಕ ರುಚಿಗಳಿವೆ. ಕೆಲವರಿಗೆ ಎಸ್‌ಪ್ರೆಸ್ಸೋ ಕಾಫಿ ರುಚಿ ಹಿಡಿಸಿದರೆ, ಮತ್ತೆ ಕೆಲವರಿಗೆ ಅಮೆರಿಕನ್‌ ಕಾಫಿಯನ್ನು ಗುಟುಕರಿಸುವುದು ಇಷ್ಟವಾಗುತ್ತದೆ. ಇನ್ನು ಕೆಲವರಿಗೆ ಬ್ಲ್ಯಾಕ್‌, ವೈಟ್‌, ಹಲವರಿಗೆ ಇನ್‌ಸ್ಟೆಂಟ್‌ ಕಾಫಿ ಹೀರಲು ಇಷ್ಟವಾಗುತ್ತದೆ. ಮತ್ತೆ ಕೆಲವರಿಗೆ ತಾಜಾತನದ ಅನುಭೂತಿ ನೀಡುವ ಕೋಲ್ಡ್ ಕಾಫಿ ಬೇಕು.

ಆದರೆ ಬಹಳಷ್ಟು ಜನರಿಗೆ ಅದರ ಲಾಭ ಹಾನಿಗಳ ಕುರಿತಂತೆ ಗೊತ್ತಿರುವುದಿಲ್ಲ. ನೀವು ಕಾಫಿ ಪ್ರಿಯರಾಗಿದ್ದರೆ ಅದರ ಲಾಭ ಹಾನಿಗಳ ಬಗ್ಗೆ ತಿಳಿದುಕೊಳ್ಳಿ.

ಅರಿತುಕೊಳ್ಳಿ ನಿಮ್ಮ ಕಾಫಿಯ ಬಗ್ಗೆ.....

ವಿಜ್ಞಾನಿಗಳ ಪ್ರಕಾರ, ನೀವು ಕಾಫಿಯನ್ನು ಹಿತಮಿತವಾಗಿ (ಅಂದರೆ ದಿನಕ್ಕೆ 4-5 ರೆಗ್ಯುಲರ್‌ ಸೈಜ್‌ ಕಪ್‌) ಕುಡಿಯುತ್ತಿದ್ದರೆ ಯಾವುದೇ ಹಾನಿಯಾಗುವುದಿಲ್ಲ.

ಕಾಫಿಯಲ್ಲಿ ಕಂಡುಬರುವ `ಕೆಫಿನ್‌' ಎಂಬ ಘಟಕ ತೂಕ ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಒಂದು ವೇಳೆ ಕಾಫಿಯನ್ನು ಅನಿಯಂತ್ರಿತ ಪ್ರಮಾಣದಲ್ಲಿ ಕುಡಿಯುತ್ತಿದ್ದರೆ ಹೊಟ್ಟೆಯ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ.

ಕಾಫಿಯಲ್ಲಿ ಕಂಡುಬರುವ ಮೆಟಬಾಲಿಸಂ ಮೂಳೆಗಳ ಬೆಳವಣಿಗೆ ಮತ್ತು ಮಾಂಸಖಂಡಗಳ ಸಂಕುಚನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನಿಮ್ಮ ಸ್ಮರಣಶಕ್ತಿಯನ್ನು ಸಮರ್ಪಕಾಗಿಟ್ಟುಕೊಳ್ಳಬೇಕೆಂದರೆ ಮತ್ತು ಸೊಂಟದ ಸುತ್ತಳತೆ ಕಡಿಮೆ ಮಾಡಿಕೊಳ್ಳಲು ಇಚ್ಛಿಸಿದರೆ ಕಾಫಿ ಕುಡಿಯಿರಿ.

ಕಾಫಿಯ ಫಿಟ್ನೆಸ್ಫಾರ್ಮುಲಾ

ಕಾಫಿ ನಮ್ಮ ನರ ಮಂಡಲದ ವ್ಯವಸ್ಥೆಯನ್ನು ಸಮರ್ಪಕವಾಗಿಡುತ್ತದೆ. ಜೊತೆಗೆ ಆರ್ಗ್ಯಾನಿಕ್‌ ಸಿಸ್ಟಮ್ ನ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡದ ಸಮಸ್ಯೆ ಇರುವವರಿಗೂ ಕೂಡ ಇದು ಬಹಳ ಹಿತಕರ.

ಮೆದುಳಿಗೆ ಆಯಾಸವನ್ನುಂಟು ಮಾಡುವ ಕೆಲಸ ಕಾರ್ಯಗಳ ಸಂದರ್ಭದಲ್ಲಿ ಕಾಫಿ ಸೇವನೆ ಮಾಡಿದರೆ ಏಕಾಗ್ರತೆ ಹೆಚ್ಚುತ್ತದೆ ಮತ್ತು ಗಮನ ಅತ್ತಿತ್ತ ಚದುರದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರನ್ನು ಆ್ಯಕ್ಟಿವ್ ‌ಆಗಿಡಲು ಕಾಫಿ ಮಹತ್ವದ ಪಾತ್ರ ವಹಿಸುತ್ತದೆ.

ರಾತ್ರಿ ಹೊತ್ತು ಕಾಫಿ ಸೇವನೆ ಮಾಡುವುದರಿಂದ ನಿಮ್ಮ ಮೂಡ್‌ ಅಷ್ಟೇ ಚೆನ್ನಾಗಿರುವುದಿಲ್ಲ, ನಿಮ್ಮ ಕಾರ್ಯಸಾಮರ್ಥ್ಯ ಕೂಡ ಹೆಚ್ಚುತ್ತದೆ. ಊಟದ ನಂತರ 1 ಕಪ್‌ ಕಾಫಿ ಸೇವನೆ ನಿದ್ರೆಯನ್ನು ದೂರ ಓಡಿಸುತ್ತದೆ. ಕಾಫಿ ಆಸ್ತಮಾ ರೋಗಿಗಳಿಗೆ ಉಪಯುಕ್ತ. ಯಾರಿಗೆ ಅಲ್ಸರ್‌ ತೊಂದರೆಯಿದೆಯೋ, ರಕ್ತದೊತ್ತಡದ ಸಮಸ್ಯೆಯಿದೆಯೋ ಅವರು ಕಾಫಿಯಿಂದ ದೂರ ಇರಬೇಕು.

- ಅರ್ಪಿತಾ 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ