ಇತ್ತೀಚೆಗಂತೂ ಎಲ್ಲ ವಯಸ್ಸಿನ ಹೆಂಗಸರೂ ತಮ್ಮ ಹೇರ್‌ ಸ್ಟೈಲ್ ಕುರಿತು ಬಹಳ ಎಚ್ಚರಿಕೆ ವಹಿಸುತ್ತಾರೆ. ಅವರು ತಮ್ಮ ಉಡುಗೆಯ ಫ್ಯಾಷನ್‌ ಬದಲಿಸುವಂತೆಯೇ, ತಮ್ಮ ಮೂಡ್‌ ಹಾಗೂ ಸಮಯ ಸಂದರ್ಭ ನೋಡಿಕೊಂಡು ತಮ್ಮ ಹೇರ್‌ ಸ್ಟೈಲ್  ಕೂಡ ಬದಲಿಸುತ್ತಿರುತ್ತಾರೆ. ನೀವು ಹೊರಡಲಿರುವ ಪಾರ್ಟಿಯ ಅಗತ್ಯಕ್ಕೆ ತಕ್ಕಂತೆ ಡ್ರೆಸ್‌ ಆರಿಸಿ. ಅದಕ್ಕೆ ಹೊಂದುವಂತಹ ಹೇರ್‌ಸ್ಟೈಲ್‌ನ್ನೇ ಮಾಡಿಕೊಳ್ಳಿ. ಆಗ ನೀವು ಪಾರ್ಟಿಯಲ್ಲಿ ಬೇರೆಯವರಿಗಿಂತ ವಿಭಿನ್ನವಾಗಿ ಎದ್ದು ಕಾಣುತ್ತೀರಿ. ಜೊತೆಗೆ ನಿಮ್ಮ ಪರ್ಸನಾಲ್ಟಿಗೂ ಉತ್ತಮ ಲುಕ್ಸ್ ದೊರಕುತ್ತದೆ. ಪಾರ್ಟಿಯಲ್ಲಿ ಆಗ ನೀವು ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತೀರಿ.

ಹೇರ್‌ ಸ್ಟೈಲ್ ‌ಎಕ್ಸ್ ಪರ್ಟ್‌ಗಳು ಸಲಹೆ ನೀಡಿರುವಂತೆ ವಿವಿಧ ಹೇರ್‌ ಸ್ಟೈಲ್‌ಗಳನ್ನು ಗಮನಿಸೋಣವೇ?

ಕರ್ಲಿ ಎಕ್ಸ್ ಟೆನ್ಶನ್

ಮುಂಭಾಗದ ಕೂದಲನ್ನು ಬಿಟ್ಟು ಹಿಂಭಾಗದಲ್ಲಿ ಪೋನಿ ಕಟ್ಟಬೇಕು ಹಾಗೂ ಫುಲ್ ಹೆಡ್‌ ಎಕ್ಸ್ ಟೆನ್ಶನ್‌ ಹೇರ್‌ನ್ನು ಬಳಸಬೇಕು. ಪೋನಿಯನ್ನು ಒಳಭಾಗದ ಕಡೆ ಫಿಕ್ಸ್ ಮಾಡಿ, ಚೆನ್ನಾಗಿ ಅಟ್ಯಾಚ್‌ ಮಾಡಿಬಿಡಿ. ಮುಂಭಾಗದ ಕೂದಲನ್ನು ಮೇಲಕ್ಕೆ ಎತ್ತಿ ಹಿಂಭಾಗದಲ್ಲಿ ಪಿನ್‌ ಅಪ್‌ ಮಾಡಿ. ಆಗ ಕ್ರೌನ್‌ ಏರಿಯಾ ಎದ್ದು ಕಾಣುತ್ತದೆ. ನಂತರ ಚಿತ್ರದಲ್ಲಿರುವಂತೆ ಒಂದು ಬದಿಗೆ ತಾಜಾ ಅಥವಾ ಕೃತಕ ಹೂ ಸಿಗಿಸಿಡಿ. ಇನ್ನೊಂದು ಬದಿಯಲ್ಲೂ ಹೀಗೆ ಮಾಡಬೇಕು.

ಪರ್ಫೆಕ್ಟ್ ಬನ್

ಮುಂಭಾಗದ ಕೂದಲನ್ನು ಬಿಟ್ಟು ಹಿಂಭಾಗದ  ಕೂದಲನ್ನು ಪೋನಿ ಮಾಡಿ. ಈಗ ಮುಂಭಾಗದ ಕೂದಲಿನ ಬ್ಯಾಕ್‌ ಕೋಂಬಿಂಗ್‌ಮಾಡಿ, ಹಿಂಭಾಗಕ್ಕೆ ತುಸು ಎತ್ತರಕ್ಕಿರಲಿ. ಈಗ ಅದರ ಮೇಲೆ ಹೇರ್‌ ಸ್ಪ್ರೇ ಸಿಂಪಡಿಸಿ. ಸ್ಟಫಿಂಗ್‌ ಮಾಡದೆಯೇ ಎತ್ತರದ ಹೈಟ್ ಇರುವಂಥ ಲುಕ್ಸ್ ಕೊಡಿ. ಈಗ ಮುಂಭಾಗದಲ್ಲಿ ಉಳಿದ ಕೂದಲಿನ ಪಾರ್ಟಿಂಗ್‌ ಮಾಡಿ, ಅದನ್ನು ಹಿಡಿದು ಟ್ವಿಸ್ಟ್ ಮಾಡುತ್ತಾ ಕಿವಿಯ ಹಿಂಭಾಗಕ್ಕೆ ತಿರುಗಿಸಿ ಅಲ್ಲೇ ಪಿನ್‌ ಅಪ್‌ ಮಾಡಿ. ಈಗ ಇನ್ನೊಂದು ಬದಿಯ ಕೂದಲಿಗೂ ಹೀಗೆ ಮಾಡಿ. ಪೋನಿಯಲ್ಲಿ ಫೇಕ್‌ ಜಡೆಗೆ ರಬ್ಬರ್‌ ಬ್ಯಾಂಡ್‌ ತರಹ ಅಳವಡಿಸಿ, ಪಿನ್ನಿಂಗ್‌ ಮಾಡಿ.

ನಂತರ ಪೋನಿಯ ಕೂದಲನ್ನು ಅಲ್ಲೇ ಹೂಗಳ ತರಹ ಬೆರಳುಗಳಿಂದ ರೋಲ್ ಮಾಡಿ, ಕ್ರಾಸ್‌ಗೆ ಹಾಕಿಡಿ. ಅಂದರೆ, ಬಲಗಡೆಯ ಕೂದಲನ್ನು ಎಡಗಡೆಗೆ ಹಾಗೂ ಎಡಗಡೆಯ ಕೂದಲನ್ನು ಬಲಗಡೆಗೆ ತಿರುಗಿಸಿ ಪಿನ್‌ ಅಪ್‌ ಮಾಡಿ. ಹಾಗೂ ಒಂದು ಪಕ್ಷ ಕೂದಲು ಉಳಿದಿದ್ದರೆ ಅದನ್ನೂ ಇದೇ ತರಹ ಫಿಕ್ಸ್ ಮಾಡಿ ಬನ್‌ (ಕೊಂಡೆ) ಶೇಪ್‌ ಪಡೆದುಕೊಳ್ಳುವಂತೆ ಮಾಡಿ.

ಗಿಡ್ಡ ಕೂದಲಿನಿಂದ ಉದ್ದ ಕೂದಲಿನ ಮಜಾ

ಇತ್ತೀಚೆಗೆ ಮಹಿಳೆಯರು ಗಿಡ್ಡ ಕೂದಲಿನಿಂದಲೇ ಉದ್ದ ಕೂದಲಿನಂಥ ಹೇರ್‌ ಸ್ಟೈಲ್ ಇಷ್ಟಪಡುತ್ತಾರೆ. ಅವರು ಪಾರ್ಲರ್‌ಗಳಲ್ಲಿ ಇಂಥದೇ ಹೇರ್‌ ಸ್ಟೈಲ್ ಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಎಲ್ಲಕ್ಕೂ ಮೊದಲು ಮುಂಭಾಗದ ಕೂದಲನ್ನು ಬಿಟ್ಟು, ತಲೆಯ ಹಿಂಭಾಗ ಹಾಗೂ ಪೋನಿಯ ಮೇಲಿನ ಕೂದಲಿನಲ್ಲಿ ಬ್ಯಾಕ್‌ ಕೋಂಬಿಂಗ್‌ ಮಾಡಿ, ನಂತರ ಪೋನಿ ಫಿನಿಶ್‌ ಮಾಡಿ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿಭಿನ್ನ ಬಗೆಯ ಸ್ಟೈಲಿಶ್‌ ಎಕ್ಸ್ ಟೆನ್ಶನ್‌ ಕೂದಲು ಲಭ್ಯ. ಇಂಥದೇ ಉದ್ದ ಕೂದಲಿನ ಎಕ್ಸ್ ಟೆನ್ಶನ್ ತೆಗೆದುಕೊಂಡು ಪೋನಿಗೆ ಅಟ್ಯಾಚ್‌ ಮಾಡಿ. ಈಗ ಮುಂಭಾಗದ ಕೂದಲನ್ನು ಒಂದೇ ಸಲಕ್ಕೆ ಸೀದಾ (900) ಮೇಲೆ ತೆಗೆದುಕೊಂಡು ಬ್ಯಾಕ್‌ ಕೋಂಬಿಂಗ್‌ ಮಾಡಿ. ಉಳಿದ ಕೂದಲನ್ನು ಹಿಂಭಾಗಕ್ಕೆ ಹಾಕಿ ಚೆನ್ನಾಗಿ ಪಿನ್‌ ಅಪ್‌ ಮಾಡಿ. ಒಂದು ಬದಿಗೆ ನಿಮ್ಮ ಉಡುಗೆಗೆ ಹೊಂದುವ ಹೂ ಮುಡಿದು, ಕೂದಲನ್ನು ಹಿಂದೆ ಹಾಗೇ ಬಿಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ