ರೀ ಏಜ್, ಆರೋಗ್ಯ ಹಾಗೂ ಸೌಂದರ್ಯ ಸಂವರ್ಧನೆಗಾಗಿ ಅಹರ್ನಿಶಿ ಶ್ರಮಿಸುವ ಸಂಸ್ಥೆಯಾಗಿದ್ದು, ತನ್ನ ಗ್ರಾಹಕರಿಗೆ ಪರಿಪೂರ್ಣ ಆರೋಗ್ಯ ಒದಗಿಸಿ, ಬದುಕಿನ ಎಲ್ಲ ಹಂತದಲ್ಲೂ ಪ್ರಮಾಣಬದ್ಧವಾಗಿ ಆಕರ್ಷಕ ಮೈಕಟ್ಟನ್ನು ಹೊಂದಿರಲು ಸಹಾಯ ಮಾಡುತ್ತದೆ. ಪ್ರಮಾಣೀಕೃತ ಟೆಕ್ನಾಲಜಿ ಅನುಸರಿಸಿ ಇಲ್ಲಿ ಅತ್ಯಾಧುನಿಕ ವೈಜ್ಞಾನಿಕ ಚಿಕಿತ್ಸೆಗಳನ್ನು ಒದಗಿಸುತ್ತಾರೆ. ಇದಕ್ಕಾಗಿ ನುರಿತ ತಜ್ಞರು, ಡರ್ಮಟಾಲಜಿಸ್ಟ್, ಕಾಸ್ಮೆಟಾಲಜಿಸ್ಟ್, ಡೆಂಟಿಸ್ಟ್, ನ್ಯೂಟ್ರಿಷನಿಸ್ಟ್, ಫಿಸಿಯೋಓಥೆರಪಿಸ್ಟ್, ಏಸ್ಥಿಟಿಷಿಯನ್ಸ್ ರ ದೊಡ್ಡ ತಂಡವೇ ಇದೆ.
ತೂಕ ನಿಯಂತ್ರಣಾ ಚಿಕಿತ್ಸೆಗಳು : ವೆಯ್ಟ್ ಮ್ಯಾನೇಜ್‌ಮೆಂಟ್ ಟ್ರೀಟ್‌ಮೆಂಟ್‌ಗಾಗಿ ಇಲ್ಲಿ ವಿಶೇಷ ಸೌಲಭ್ಯಗಳಿವೆ. ದೇಹದ (ಬೇಸ್‌ಮೆಟಬಾಲಿಕ್ ರೇಟ್)ನ್ನು ಚುರುಕುಗೊಳಿಸಿ ಹೆಚ್ಚಿಸಲು, ಮಾಂಸಲ ತೂಕ ನಿಯಂತ್ರಿಸಿ, ದೀರ್ಘಾವಧಿಯ ಫ್ಯಾಟ್ ಲಾಸ್‌ಗೆ ಒತ್ತುಕೊಟ್ಟು, ಕ್ರ್ಯಾಶ್‌ಡಯೆಟಿಂಗ್ ತಪ್ಪಿಸುತ್ತದೆ. ಬೊಜ್ಜಿನ ಸಂಗ್ರಹಣೆ ನಿವಾರಿಸುತ್ತದೆ.
ಇಂಟೆನ್ಸ್ ವರ್ಕ್‌ಔಟ್‌ಗಳು ಹೆಚ್ಚುವುದರಿಂದ, ಹಲವು ತಾಸುಗಳಿಗೆ ದೇಹದ ಮೆಟಬಾಲಿಸಂ ತೀವ್ರಗೊಂಡು ಉಳಿದ ವರ್ಕ್‌ಔಟ್‌ಗಳ ಪರಿಣಾಮವಾಗಿ ಕೊಬ್ಬು ಕರಗುತ್ತದೆ. ಜೊತೆಗೆ ವೆಯ್ಟ್ ಟ್ರೇನಿಂಗ್ ಹೆಚ್ಚಿನ ಲಾಭ ನೀಡುತ್ತದೆ. ದಷ್ಟಪುಷ್ಟ ಮಾಂಸಖಂಡಗಳು ನಮ್ಮ ಪೋಸ್ಚರ್ ಸುಧಾರಿಸಿ, ಕೀಲುಗಳಿಗೆ ಅತ್ಯುತ್ತಮ ಆಧಾರ ನೀಡಿ, ರಿಸ್ಕ್ ತಗ್ಗಿಸುತ್ತ ಹಾಗೆಯೇ ರೀ ಏಜ್ 4ನೇ ತಲೆಮಾರಿನ ಅಡ್ವಾನ್ಸ್ಡ್ ಟೆಕ್ನಿಕ್ಸ್ ನಲ್ಲಿ ನುರಿತಿದ್ದು, ಗ್ರಾಹಕರ ಸೆಲ್ಯುಲೈಟ್ಸ್, ಮಸ್‌ಮಾಸ್, ಟೋನಿಂಗ್‌ಟೈಟ್‌ನಿಂಗ್ ಇತ್ಯಾದಿಗಳನ್ನು ತಿದ್ದಿತೀಡಿ ಅವರಿಗೆ ಪ್ರಮಾಣಬದ್ಧ ಹಾಗೂ ವೆಯ್ಟ್ ಹಿಪ್ ರೇಷಿಯೋ ನೀಡುತ್ತದೆ. ಈ ಎಲ್ಲಾ ಚಿಕಿತ್ಸೆಗಳೂ ಸಾಕಷ್ಟು ಸಮರ್ಥನೀಯವೆನಿಸಿದ್ದು, ಗ್ರಾಹಕರಿಗೆ ಚಿಕಿತ್ಸೆಯ ಸಮಯದಲ್ಲಿ ಅಗತ್ಯವಿರುವ ಶುದ್ಧ ವೈಜ್ಞಾನಿಕ ಹಾಗೂ ಪಾಸಿಟಿವ್ ಚೇಂಜಸ್ ಒದಗಿಸುತ್ತವೆ.
ಬಾಡಿ ಸ್ಕಲ್ಪ್ಟಿಂಗ್ ಟ್ರೀಟ್‌ಮೆಂಟ್ಸ್ : ಬಾಡಿ ಕಾಂಟ್ಯೂರಿಂಗ್ ಚಿಕಿತ್ಸೆಗಳಲ್ಲಿ ಇಡೀ ದೇಹದ ವಿವಿಧ ಭಾಗಗಳಲ್ಲಿ ಸ್ಕಲ್ಪ್ಟಿಂಗ್ ಟೆಕ್ನಿಕ್ಸ್ ಬಳಸಿ ದೇಹದ ಯಾವುದೇ ಏರಿಯಾದಲ್ಲಾದರೂ ರೀಶೇಪ್ ಮಾಡುವಲ್ಲಿ ಯಶಸ್ವಿ ಎನಿಸಿದೆ. ಈ ತರಹದ ಅತ್ಯಾಧುನಿಕ ಸ್ಕಲ್ಪ್ಟಿಂಗ್ ಟ್ರೀಟ್‌ಮೆಂಚ್ಸ್ ನಿಂದ, ಯಾರಿಗೇ ಆಗಲಿ ಹೆಚ್ಚುವರಿ ಕೊಬ್ಬನ್ನು ಪರಿಣಾಮಕಾರಿಯಾಗಿ ನಿವಾರಿಸಿ, ಚರ್ಮವನ್ನು ಟೋನ್ಡ್ ಟೈಟ್‌ಗೊಳಿಸಿ, ಡಯೆಟ್ ಹಾಗೂ ವ್ಯಾಯಾಮಕ್ಕೆ ಸ್ಪಂದಿಸುವಂತೆ ಚುರುಕುಗೊಳಿಸಲಾಗುತ್ತದೆ.
4ನೇ ತಲೆಮಾರಿನ ಉಪಕರಣಗಳಾದ ಲೇಸರ್ ಲಿಪೋ, ಕ್ರೂಲಿಪೋಲಿಸಿಸ್, ರೇಡಿಯೋ ಫ್ರೀಕ್ವೆನ್ಸಿ, ಅಲ್ಟ್ರಾಸೌಂಡ್, ಕೇವಿಯೇಷನ್, ಫೋಟೋ ಎಲೆಕ್ಟ್ರೋ, ಸ್ಕಿನ್ ಪೋರೇಷನ್ ಹಾಗೂ ಅನ್ಯ ವಿಧದ ಚಿಕಿತ್ಸೆಗಳ ಮೂಲಕ ಗ್ರಾಹಕರು ರೀ ಏಜ್‌ನಲ್ಲಿ ಸರ್ಜರಿ ಅಥವಾ ಹೆಚ್ಚಿನ ಔಷಧೋಪಚಾರ ಇಲ್ಲದೆ, ಬೇಕಾದ ಬದಲಾವಣೆಗಳನ್ನು ಪಡೆಯಬಹುದಾಗಿದೆ.
ಡರ್ಮೋ ಕಾಸ್ಮೆಟಿಕ್ ಪ್ರೋಸೀಜರ್ಸ್ : ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಯಾರಿಗೆ ತಾನೇ ತಮ್ಮ ದೇಹದ ಮೈಮಾಟ ಗ್ಲಾಮರಸ್‌ಆಗಿ ಅತ್ಯಾಕರ್ಷಕ ಎಂದು ತೋರ್ಪಡಿಸಿಕೊಳ್ಳಲು ಇಷ್ಟವಿಲ್ಲ. ಇದನ್ನು ಮನಗಂಡೇ ರೀ ಏಜ್ ನಿಮ್ಮ ಅಮೂಲ್ಯ ಸಮಯ, ಹಣ ಉಳಿಸಿ ನೀವು ಬಯಸಿದ ಅದ್ಭುತ ಮಾರ್ಪಾಡುಗಳನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಒದಗಿಸುತ್ತದೆ.
ಚರ್ಮ : ನಮ್ಮ ದೇಹದ ಈ ಅತಿ ಪ್ರದರ್ಶಿತ ಭಾಗ ಹೊರಗಿನ ಗಾಳಿ, ಧೂಳು, ಇನ್ನಿತರ ಪರಿಸರ ಮಾಲಿನ್ಯಕ್ಕೆ ಒಳಪಟ್ಟು ಎಷ್ಟೋ ಬಾಧೆ ಎದುರಿಸುತ್ತದೆ. ಹೀಗಾಗಿ ಚರ್ಮಕ್ಕೆ ಅತ್ಯಧಿಕ ಸೌಂದರ್ಯ ಒದಗಿಸಲು ರೀ ಏಜ್‌ನಲ್ಲಿ ಡರ್ವೊ ಕಾಸ್ಮೆಟಿಕ್ಸ್ ನ ಸರಣಿ ಪ್ರಕ್ರಿಯೆಗಳಿವೆ. ಇದರಿಂದ ಸದಾ ಹೊಳೆ ಹೊಳೆಯುವ ಕಾಂತಿಯುತ ಚರ್ಮ ನಿಮ್ಮದಾಗಲಿದೆ.