ಗರ್ಭಾವಸ್ಥೆ ಎಂತಹ ಒಂದು ಸಮಯವೆಂದರೆ, ಆ ಅವಧಿಯಲ್ಲಿ ಅವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಚೆನ್ನಾಗಿ ಆರೈಕೆ ಮಾಡಬೇಕಿರುತ್ತದೆ. ಗರ್ಭಿಣಿಯೊಬ್ಬಳು ಏನನ್ನು ಸೇವಿಸುತ್ತಾಳೆ, ಅವಳ ಜೀವನಶೈಲಿ ಹೇಗಿದೆ ಎನ್ನುವುದು ಆಕೆಯ ಗರ್ಭಾವಸ್ಥೆ ಹಾಗೂ ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.

ಕೋವಿಡ್‌ ಪ್ರತಿಯೊಬ್ಬ ವ್ಯಕ್ತಿಯ ಜೀವನದ ದಿಕ್ಕು ದೆಸೆಯನ್ನು ಬದಲಿಸಿಬಿಟ್ಟಿದೆ. ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಾ ಹೊರಟಿದೆ. ಗರ್ಭಿಣಿಯರಿಗೆ ಇದರ ಅಪಾಯದ ಸಾಧ್ಯತೆ ಹೆಚ್ಚು. ಅಂದಹಾಗೆ ಗರ್ಭಿಣಿಯರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕಾದ ಅಗತ್ಯ ಇರುತ್ತದೆ. ಆದರೆ ಕೊರೋನಾದ ಇಂದಿನ ದಿನಗಳಲ್ಲಿ ಅವರು ಹೊರಗೆ ಹೋಗುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ, ಗರ್ಭಿಣಿಯರು ಮನೆಯಿಂದ ಹೊರಗೆ ಹೋಗದಿರಲು ಸ್ತ್ರೀ ರೋಗ ತಜ್ಞರು ಅವರಿಗೆ ಆನ್‌ ಲೈನ್‌ ವೀಡಿಯೋ ಕನ್ಸ್ಟೀಶನ್‌ ಮುಖಾಂತರ ಸಲಹೆ ನೀಡಲಿದ್ದಾರೆ.

ಒಂದು ಒಳ್ಳೆಯ ಸುದ್ದಿಯೆಂದರೆ, ಕೊರೋನಾ ವೈರಸ್‌ ಪ್ಲಾಸೆಂಟಾ ತಲುಪುವುದಿಲ್ಲ. ಇದರರ್ಥ ಗರ್ಭ ಬೆಳೆಯುತ್ತಿರುವ ಭ್ರೂಣದ ಮೇಲೆ ವೈರಸ್‌ ನಿಂದ ಯಾವುದೇ ಅಪಾಯವಿಲ್ಲ. ಲಾಕ್‌ ಡೌನ್‌ ಅವಧಿಯಲ್ಲಿ ಕೊರೋನಾ ಪಾಸಿಟಿವ್ ‌ಮಹಿಳೊಬ್ಬಳು ಅತ್ಯಂತ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಇದರರ್ಥ ನೀವು ನಿಮ್ಮ ಆರೋಗ್ಯ ಹಾಗೂ ಗರ್ಭಾವಸ್ಥೆಯ ಕುರಿತಂತೆ ನಿರ್ಲಕ್ಷ್ಯ ತೋರಬಾರದು. ಹೀಗೆ ಮಾಡುವುದು ನಿಮಗೆ ಹಾಗೂ ನಿಮ್ಮ ಹುಟ್ಟು ಮಗುವಿಗೆ ಸರಿಯಾದುದಲ್ಲ.

IB127031-127031140932530-SM382207

ಒತ್ತಡದ ಪ್ರಮಾಣ ಹೆಚ್ಚಳ

ಹಾರ್ಮೋನ್‌ ಬದಲಾಣೆಯ ಕಾರಣದಿಂದ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುತ್ತದೆ. ಇಂತಹ ಸ್ಥಿತಿಯಲ್ಲಿ ಒತ್ತಡ, ಚಿಂತೆ, ಖಿನ್ನತೆ, ಕೋಪ, ಮೂಡ್‌ ಸ್ವಿಂಗ್ಸ್ ನಂತಹ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂತಹ ಸ್ಥಿತಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕಾದ ಅಗತ್ಯ ಇರುತ್ತದೆ. ಕೊರೋನಾದ ಅಪಾಯ ಜಾಸ್ತಿ ಎಂದು ತಿಳಿದು ಒತ್ತಡಕ್ಕೊಳಗಾಗುವುದು ಸಹಜ. ಆದರೆ ಗರ್ಭಿಣಿಯ ಮೇಲೆ ಈ ಒತ್ತಡ ಬಹಳ ದುಷ್ಪರಿಣಾಮ ಉಂಟು ಮಾಡಬಹುದು.

ಕೊರೋನಾ ವೈರಸ್‌ ನ ಸಂದರ್ಭದಲ್ಲಿ ಗರ್ಭಿಣಿಯು ಯಾವ ಯಾವ ಸಂಗತಿಗಳ ಬಗ್ಗೆ ಗಮನಹರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.

ಆರೋಗ್ಯ ಹೀಗಿರಲಿ

ಒಂದು ಒಳ್ಳೆ ರೊಟೀನ್ಮಾಡಿಕೊಳ್ಳಿ : ನೀವು ಒಂದು ಒಳ್ಳೆಯ ರೊಟೀನ್‌ ಮಾಡಿಕೊಂಡು ಅದನ್ನು ತಪ್ಪದೇ ಪಾಲಿಸಿ. `ತಾಯಿ ಮಗು`ವಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವುದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಕಂದನ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬ ಬಗ್ಗೆ ತಿಳಿದುಕೊಳ್ಳಬಹುದು. ದಿನವಿಡೀ ಸಕ್ರಿಯರಾಗಿರುವುದರ ಮೂಲಕ ಆರೋಗ್ಯದಿಂದಿರಿ.

IB125527-125527153837427-SM236457

ಅಷ್ಟಿಷ್ಟು ವ್ಯಾಯಾಮ ಮಾಡಿ : ವ್ಯಾಯಾಮ ನಿಮ್ಮನ್ನು ಕೇವಲ ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಆರೋಗ್ಯದಿಂದಿಡುತ್ತದೆ. ಹೀಗಾಗಿ ಪ್ರತಿದಿನ ಮುಂಜಾನೆ ಬೇಗನೇ ಎದ್ದು ಒಂದಿಷ್ಟು ಹಗುರ ವ್ಯಾಯಾಮ ಮಾಡಿ. ಇದರಿಂದ ಮೆದುಳಿನಲ್ಲಿ ರಕ್ತ ಪ್ರವಾಹ ಸಮರ್ಪಕವಾಗಿರುತ್ತದೆ. ಹ್ಯಾಪಿ ಹಾರ್ಮೋನ್ಸ್ ಸ್ರಾವವಾಗಿ ಆಕ್ಸಿಡೇಟಿವ್ ‌ಒತ್ತಡ ಕಡಿಮೆಯಾಗುತ್ತದೆ. ಒಂದಿಷ್ಟು ನಡಿಗೆ ಅಥವಾ ವ್ಯಾಯಾಮ ಸ್ತ್ರೀ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ