ಋತುಮಾನ ಬದಲಾಗುತ್ತಿದ್ದಂತೆ ಮಳೆ, ಚಳಿಗಳ ರಭಸಕ್ಕೆ ನಮ್ಮ ಮುಖ ಚರ್ಮ ಮಾತ್ರವಲ್ಲ, ತುಟಿಗಳು ಸಹ ಡ್ರೈ, ಒಡೆದಂತಾಗಿ, ಎಳೆಯಲ್ಪಟ್ಟಂತೆ ತೋರುತ್ತದೆ. ಇದರಿಂದ ಮುಖದ ಅಂದದ ಮೇಲೆ ತೀವ್ರ ಪರಿಣಾಮ ಆಗುತ್ತದೆ, ಜೊತೆಗೆ ಪ್ರತಿ ಕ್ಷಣ ನಮ್ಮ ಗಮನ ಈ ಒಡೆದ ತುಟಿಗಳತ್ತ ಹರಿಯುತ್ತಾ, ಅದನ್ನು ನಾಲಿಗೆಯಿಂದ ಸರಿಕೊಳ್ಳೋಣ ಅನಿಸುತ್ತಿರುತ್ತದೆ. ಬಹುತೇಕ ಹೆಂಗಸರು ಈ ಸಮಸ್ಯೆಯಿಂದ ಪಾರಾಗಲು ಮನೆಮದ್ದು ಅನುಸರಿಸುತ್ತಾರೆ. ಆದರೆ ಅದೂ ಸಹ ಒಮ್ಮೊಮ್ಮೆ ಕೈ ಕೊಡುವುದುಂಟು. ಕೆಲವು ದಿನಗಳ ನಂತರ ಸಮಸ್ಯೆ ಯಥಾಪ್ರಕಾರ ಮುಂದುವರಿದಿರುತ್ತದೆ.

ಹೀಗಾದಾಗ ಈ ಚಳಿಗಾಲಕ್ಕೆ ಲಿಪ್‌ ಬಾಮ್, ತುಟಿಗಳ ಆರ್ದ್ರತೆ ಮತ್ತು ಕೋಮಲತೆ ಉಳಿಸಲು ಬಲು ಪೂರಕ. ಬನ್ನಿ, ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.

ಲಾಭಕಾರಿ ಲಿಪ್ಬಾಮ್

ಈ ಲಿಪ್‌ ಬಾಮ್ ಮೂಲತಃ ಒಂದು ಸಾಪ್ಟ್ ವ್ಯಾಕ್ಸ್ ನಂಥ ಪದಾರ್ಥ. ಇದು ಒಡೆದ, ಶುಷ್ಕ ತುಟಿಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಚರ್ಮದ ಇನ್ನಿತರ ಭಾಗಕ್ಕಿಂತ ತುಟಿಗಳ ಚರ್ಮ ಬಲು ತೆಳು ಆಗಿರುತ್ತದೆ. ಇದರ ಮೇಲೆ ಶುಷ್ಕತೆಯ ಸಮಸ್ಯೆ ತೀವ್ರ ಆಗಿರುತ್ತದೆ ಎಂದೇ ಹೇಳಬೇಕು. ಲಿಪ್‌ ಬಾಮ್ ನಲ್ಲಿನ ಸಾಫ್ಟ್ ವ್ಯಾಕ್ಸ್ ಕಾರಣ ಇದು ತುಟಿಗಳನ್ನು ಶುಷ್ಕ ಗಾಳಿ, ಥಂಡಿ ತಾಪಮಾನದಿಂದ ಕಾಪಾಡುತ್ತದೆ. ಇದರಿಂದಾಗಿ ತುಟಿ ಬಹಳ ಸಾಪ್ಟ್. ಕೋಮಲ, ಗ್ಲಾಸಿ ಆಗುತ್ತದೆ.

ಇದು ಹೇಗೆ ಲಾಭಕರ?

ತುಟಿಗಳ ಕೋಮಲತೆ ಮರಳಿಸುತ್ತದೆ : ತುಟಿಗಳ ಸ್ಕಿನ್‌ ಸಹಜವಾಗಿಯೇ ತೆಳು ಆಗಿರುವುದರಿಂದ, ಅದು ಇತರ ಭಾಗದ ಚರ್ಮಕ್ಕಿಂತ ಬಲು ಸೂಕ್ಷ್ಮ. ಹೀಗಾಗಿ ಲಿಪ್‌ ಬಾಮ್ ಒಡೆದ, ಶುಷ್ಕ ತುಟಿಗಳನ್ನು ತಕ್ಷಣ ಹೈಡ್ರೇಟ್‌ ಗೊಳಿಸಿ, ಅದನ್ನು ಹೀಲ್ ‌ಮಾಡಿ, ನಿಮಗೆ ಆರಾಮ ತಂದುಕೊಡುತ್ತದೆ. ಆಗ ತುಟಿಗಳ ಕಾಡುವ ಸಮಸ್ಯೆಗಳು ತಂತಾನೇ ನಿವಾರಣೆ ಆಗುತ್ತವೆ. ಇದರಿಂದ ನಿಮ್ಮ ತುಟಿಗಳು ಹಿಂದಿನಂತೆಯೇ ಸುಂದರವಾಗಿ ಕಂಗೊಳಿಸುತ್ತವೆ.

ಒಡೆದ ತುಟಿಗಳಿಂದ ಮುಕ್ತಿ : ತುಟಿಗಳು ತೀವ್ರ ಶುಷ್ಕಗೊಂಡಾಗ, ಅದರ ಮೇಲ್ಭಾಗ ತಂತಾನೇ ಒಡೆದು ಪದರಗಳಾಗಿ ಬಿರುಕು ಬಿಡುತ್ತದೆ. ಇದು ನಿಮ್ಮ ತುಟಿಗಳ ಸೌಂದರ್ಯ ಹಾಳು ಮಾಡಿ, ನೀವು ಎಲ್ಲರೆದುರು ಸಂಕೋಚಕ್ಕೆ ಒಳಗಾಗುವಂತೆ ಮಾಡುತ್ತದೆ. ನೀವು ಮನೆಯಲ್ಲಿರಲಿ ಅಥವಾ ಹೊರಗಿರಲಿ, ಇರಿಟೇಶನ್‌ ಕಾರಣ ನೀವು ಅದನ್ನು ಪದೇ ಪದೇ, ಜಿಗುಟಿ ಕೀಳುವಿರಿ, ನಾಲಿಗೆಯಿಂದ ಸವರಿ ಅದಕ್ಕೆ ತಾತ್ಕಾಲಿಕ ಪರಿಹಾರ ಹುಡುಕುವಿರಿ. ಇದರ ಬದಲು ಉತ್ತಮ ಕಂಪನಿಯ ಲಿಪ್‌ ಬಾಮ್ ತೀಡುವುದರಿಂದ, ಅದು ತುಟಿಗಳನ್ನು ಕೋಮಲವಾಗಿಸಿ, ಅದರ ಡ್ರೈನೆಸ್‌ ತೊಲಗಿಸುತ್ತದೆ. ಜೊತೆಗ ಒಡೆದ ತುಟಿಗಳು ಬೇಗ ಹೀಲ್ ‌ಆಗಲು ಇದು ನೆರವಾಗುತ್ತದೆ.

ಪ್ಲಂಪ್ಯುವರ್ಲಿಪ್ಸ್ : ಶುಷ್ಕ, ಒಡೆದ ತುಟಿಗಳನ್ನು ಸಾಫ್ಟ್ ಆಗಿಸಲು ಲಿಪ್‌ ಬಾಮ್ ಗಿಂತ ಬೆಸ್ಟ್ ಬೇರೊಂದಿಲ್ಲ. ಇಂದಿನ ಮಾರುಕಟ್ಟೆಯಲ್ಲಿ ಎಷ್ಟೋ ಬಗೆಯ ಲಿಪ್‌ ಗ್ಲಾಸ್‌ ಲಭ್ಯವಿದ್ದು, ನಿಮ್ಮ ತುಟಿಗಳನ್ನು ಪ್ಲಂಪ್‌ ಆಗಿಸುವ ಪ್ರಾಮಿಸ್‌ ಮಾಡುತ್ತವೆ. ಇಂಥವಕ್ಕೆ ಮಾರುಹೋಗದಿರಿ. ಸದಾ ಅತಿ ಉತ್ತಮ ಗುಣಮಟ್ಟದ ಕಂಪನಿಯ ಪ್ರಾಡಕ್ಟ್ ಬಳಸಿರಿ, ಇದರಿಂದ ನಿಮ್ಮ ತುಟಿಗಳು ಶೈನಿಂಗ್‌ ಆಗುತ್ತವೆ, ಹೆಲ್ದಿ ಎನಿಸುತ್ತವೆ. ನಿಧಾನವಾಗಿ ಇದರಿಂದ ತುಟಿಗಳ ಶುಷ್ಕತನ ದೂರಾಗುತ್ತದೆ, ಏಕೆಂದರೆ ಇದು ತುಟಿಗಳು ಆರ್ದ್ರತೆ ಉಳಿಸಿಕೊಳ್ಳಲು ಸಹಕಾರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ