ಈ ಚಳಿಗಾಲದಲ್ಲಿ ಹಬ್ಬಗಳೂ ಹೆಚ್ಚು. ಹಬ್ಬಗಳಿಂದ ಮನೆಯಲ್ಲಿ ಖುಷಿಯ ವಾತಾವರಣ ಹೆಚ್ಚುತ್ತದೆ, ಆದರೆ ಅದು ಅವರಿಗೆ ಹೆಚ್ಚಿನ ಕೆಲಸದ ಹೊರೆಯೊಂದಿಗೆ ಸುಸ್ತನ್ನೂ ಹೆಚ್ಚಿಸುತ್ತದೆ. ಹೆಂಗಸರು ಈ ಹಬ್ಬಗಳ ಭರಾಟೆಯಲ್ಲಿ ಶಾಪಿಂಗ್‌, ಕುಕಿಂಗ್‌, ಕ್ಲೀನಿಂಗ್‌ ಗಳಲ್ಲಿ ಮುಳುಗಿಹೋಗಿ ಅತ್ಯಧಿಕ ಬಿಝಿ ಆಗಿಹೋಗುತ್ತಾರೆ. ತಮ್ಮ ಕಡೆ ಗಮನಹರಿಸಲು ಅವರಿಗೆ ಸ್ವಲ್ಪ ಪುರಸತ್ತಿರುವುದಿಲ್ಲ. ಈ ಕಾರಣ ಚಳಿಗಾಲದಲ್ಲಿ ಅವರು ಬಾಡಿಹೋದಂತೆ ಕಾಣುತ್ತಾರೆ.

ಹೀಗಾದಾಗ ನೀವು ಕೆಲವು ವಿಶೇಷ ಬಗೆಯ ಡೀಸ್ಟ್ರೆಸ್‌ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಬಳಸಿ, ಈ ಚಳಿಗಾಲದ ಸುಸ್ತನ್ನು ಓಡಿಸಬಹುದು. ಆಗ ಮುಖದಲ್ಲಿ ನ್ಯಾಚುರಲ್ ಗ್ಲೋ ಬೆಳಗುತ್ತದೆ. ಈ ಕುರಿತಾಗಿ ಸೌಂದರ್ಯ ತಜ್ಞೆಯರ ಸಲಹೆ ಗಮನಿಸೋಣವೇ....? :

ಕಾಫಿ ಕೇರ್

ಈ ವಿಧಾನದಲ್ಲಿ ಕಾಫಿಯನ್ನು ಸ್ಕ್ರಬ್‌ ಆಗಿ ಮಾತ್ರವಲ್ಲದೆ, ಮಸಾಜ್‌ ಕ್ರೀಂ ಪ್ಯಾಕ್‌ ಆಗಿಯೂ ಬಳಸಿಕೊಳ್ಳಬಹುದು. ಇದರಿಂದ ನೀವು ಮುಖ, ಕೈಕಾಲುಗಳ ಚರ್ಮದ ಕೇರ್‌ ಬಗ್ಗೆ ಕಾಳಜಿ ವಹಿಸಬಹುದು. ಇದು ಒಟ್ಟಾರೆ ನಿಮ್ಮ ಇಡೀ ದೇಹದ ಸ್ಟ್ರೆಸ್‌ ದೂರ ಮಾಡಿ, ನಿಮಗೆ ಫ್ರೆಶ್‌ ಫೀಲ್ ‌ಮೂಡಿಸುತ್ತದೆ. ಕಾಫಿಯಲ್ಲಿ ಧಾರಾಳ ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಕಾರಣ, ಇದು ಚರ್ಮವನ್ನು ಸೂರ್ಯನ UV ಕಿರಣಗಳಿಂದಲೂ ರಕ್ಷಿಸುತ್ತದೆ, ಜೊತೆಗೆ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ಇದರಿಂದ ಚರ್ಮದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ಜೊತೆಗೆ ಇದು ಚರ್ಮದ ಮೇಲೆ ಜಮೆಗೊಂಡ ಧೂಳು ಮಣ್ಣು, ಕೊಳಕನ್ನು ನಿವಾರಿಸಿ, ಚರ್ಮಕ್ಕೆ ಅಪೂರ್ವ ಗ್ಲೋ  ವೈಟ್‌ ನಿಂಗ್‌ಎಫೆಕ್ಟ್ ಸಹ ನೀಡುತ್ತದೆ. ಇದರಿಂದ ಚರ್ಮಕ್ಕೆ ಹೆಚ್ಚಿನ ಹೊಳಪು ಬರುತ್ತದೆ. ಕಾಫಿ ಕ್ರೀಮನ್ನು ಬಳಸಿದಾಗ, ಅದರಿಂದ ಸ್ಕಿನ್ ರಿಲ್ಯಾಕ್ಸ್, ರೀಜನರೇಟ್‌ ಆಗುವುದರಿಂದ ಜೊತೆ ಜೊತೆಯಲ್ಲೇ ಅದರ ಸ್ಟ್ರೆಸ್‌ ಎಷ್ಟೋ ನಿವಾರಣೆ ಆಗುತ್ತದೆ.

ಎಸೆನ್ಶಿಯಲ್ ಆಯಿಲ್ಸ್

ಚರ್ಮವನ್ನು ಡೀಸ್ಟ್ರೆಸ್‌ ಮಾಡುವಲ್ಲಿ ಎಸೆನ್ಶಿಯಲ್ ಆಯಿಲ್ಸ್ ಪ್ರಧಾನ ಪಾತ್ರ ವಹಿಸುತ್ತದೆ. ಇವುಗಳಿಂದ ಚರ್ಮವನ್ನು ಮಸಾಜ್ ಮಾಡಿದಾಗ, ಚರ್ಮ ಗ್ಲೋ ಪಡೆಯುತ್ತದೆ. ಜೊತೆಗೆ ಚರ್ಮದ ಸ್ಟ್ರೆಸ್‌ ದೂರವಾಗಿ ಚಳಿಗಾಲದಲ್ಲಿ ನೀವು ಲಕಲಕ ಮಿಂಚುವಿರಿ.

ಫೇಸೇಜ್‌ ಕನಾಡಾ ಅರ್ಬನ್‌ ಬ್ಯಾಲೆನ್ಸ್ 6 ಇನ್‌ 1 ಹೆಸರಿನ ಸ್ಕಿನ್‌ ಮಿರ್ಯಾಕಲ್ ಫೇಶಿಯಲ್ ಆಯಿಲ್ ಲಭ್ಯವಿದ್ದು, ಇದರಿಂದ ಸ್ಕಿನ್‌ ಮಸಾಜ್‌ ಮಾಡಿದಾಗ, ಅದು ಎಷ್ಟೋ ಸ್ಟ್ರೆಸ್‌ ಫ್ರೀ ಆಗಿ ಅದರಲ್ಲಿ ಅಪೂರ್ವ ಗ್ಲೋ ಮೂಡುತ್ತದೆ. ಹೀಗಾಗಿಯೇ  ಇದಕ್ಕೆ `ಮಿರ್ಯಾಕಲ್ ಫೇಶಿಯಲ್ ಆಯಿಲ್‌' ಎಂದಿರಿಸಲಾಗಿದೆ. ಕೂದಲು ಓಪನ್‌ ಆಗಿದ್ದು, ಕ್ಲೀನಾಗಿ ಅರಳಿದಂತೆ ಕಾಣುತ್ತಿರಲು, ಮುಖ ತಂತಾನೇ ಹೆಚ್ಚಿನ ಕಳೆ ತುಂಬಿಕೊಂಡಂತೆ ಅನಿಸುತ್ತದೆ. ಕೂದಲಿನ ಆರೈಕೆಗಾಗಿ ಹೇರ್‌ ಆಯಿಲ್‌ಹೇರ್‌ ಟಾನಿಕ್‌ ಬೆರೆಸಿ ಬಳಸುವುದರಿಂದ, ಕೂದಲಿನಲ್ಲಿ ಹೆಚ್ಚಿನ ಬೆಟರ್‌ ರಿಸಲ್ಟ್ ಬರುತ್ತದೆ. ಲ್ಯಾವೆಂಡರ್‌ ಆಯಿಲ್ಸ್ ನ ಉತ್ತಮಿಕೆ ನಿಮ್ಮನ್ನು ಡೀಸ್ಟ್ರೆಸ್ ಗೊಳಿಸಲು ನೆರವಾಗುತ್ತದೆ. ಹಾಗೆಯೇ ರೋಸ್‌ ಮೆರಿ ಆಯಿಲ್ ‌ನಿಮ್ಮ ಕೂದಲಿನ ಗ್ರೋಥ್‌ ಇಂಪ್ರೂವ್ ‌ಮಾಡಿ, ಒಳ್ಳೆಯ ಸುವಾಸನೆಯನ್ನೂ ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ