ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಕ್ಷಣ ಇಲಾಖೆ ದೊಡ್ಡ ಶಾಕ್ ನೀಡಿದೆ. ಫಲಿತಾಂಶ ಸುಧಾರಣೆ ದೃಷ್ಟಿಯಿಂದ ವಿದ್ಯಾರ್ಥಿಗಳ ಸ್ಟಡಿ ಹಾಲಿಡೇಗೆ ಬ್ರೇಕ್​ ಹಾಕಿದೆ. ರಜೆಯನ್ನು ರದ್ದುಗೊಳಿಸಿ ಕಾಲೇಜಿನಲ್ಲಿ ಉಪನ್ಯಾಸಕರ ಎದುರೇ ಗ್ರೂಪ್​ ಸ್ಟಡಿ ಮಾಡುವಂತೆ ಸೂಚಿಸಿ ಆದೇಶಿಸಲಾಗಿದೆ.

ಈ ಹೊಸ ಕ್ರಮದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲಿದೆ ಎಂದು ಇಲಾಖೆ ಅಭಿಪ್ರಾಯ ಪಟ್ಟಿದೆ.

ಮಹತ್ವದ ನಿರ್ಧಾರ: ಫಲಿತಾಂಶ ಸುಧಾರಣೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಸ್ಟಡಿ ಹಾಲಿಡೇಗೆ ಬ್ರೇಕ್ ಹಾಕಿ ಗ್ರೂಪ್ ಸ್ಟಡಿ ಮಾಡಿಸಲು ಮುಂದಾಗಿದೆ. ಪಿಯುಸಿ ಪರೀಕ್ಷೆ ಮುಗಿಯುವರೆಗೂ ವಿದ್ಯಾರ್ಥಿಗಳು ಕಾಲೇಜಿಗೆ ಬರಲೇಬೇಕಿದೆ. ಕಾಲೇಜಿನಲ್ಲಿಯೇ ಮುಖ್ಯ ಪರೀಕ್ಷೆಗೆ ತಯಾರಿ ಮಾಡಬೇಕು ಎನ್ನುವ ಸೂಚನೆ ನೀಡಿದೆ.

ಮನೆಯಲ್ಲಿ ಪೋಷಕರಂತೆ ಕಾಲೇಜಿನಲ್ಲಿ ಉಪನ್ಯಾಸಕರು ಕೂಡ ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ಅಭ್ಯಾಸ ಮಾಡಿಸಬೇಕಿದೆ. ಕಾಲೇಜುಗಳಲ್ಲೇ ಶಿಕ್ಷಕರ ನೇತೃತ್ವದಲ್ಲಿಯೇ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ ನಡೆಸಬೇಕು ಹಾಗೂ ಕ್ಲಾಸ್ ರೂಮ್​​ನಲ್ಲಿಯೇ ಒಟ್ಟಿಗೆ ಕುಳಿತು ಓದಬೇಕಿದೆ.

ಸ್ಟಡಿ ಹಾಲಿಡೇಗೂ ಬ್ರೇಕ್​: ಶಿಕ್ಷಕರು ಕೂಡ ಪಿಯು ಮುಖ್ಯ ಪರೀಕ್ಷೆ ಮುಗಿಯುವವರೆಗೂ ನಿತ್ಯ ಕಾಲೇಜಿಗೆ ಹಾಜರಾಗಬೇಕಿದೆ. ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಡೌಟ್ಸ್​ ಬಂದ್ರೂ ಕ್ಲಿಯರ್ ಮಾಡಬೇಕು. ಪ್ರತಿ ವರ್ಷ ಪಠ್ಯ ಪೂರ್ಣಗೊಂಡು ಪೂರ್ವ ಸಿದ್ಧತಾ ಪರೀಕ್ಷೆ ಬಳಿಕ ಒಂದು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇ ನೀಡಲಾಗುತ್ತಿತ್ತು. ಆದರೆ ಈ ವರ್ಷ ಪಿಯು ಇಲಾಖೆ ನೋ ಸ್ಟಡಿ ಹಾಲಿಡೇ ಎಂದಿದೆ.
ಪಿಯು ಫಲಿತಾಂಶ ಸುಧಾರಣೆಗಾಗಿ ಫೆಬ್ರವರಿ 26 ವರೆಗೆ ಎಲ್ಲಾ ಕಾಲೇಜುಗಳು ತೆರೆಯಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ. ಕ್ಲಾಸ್ ನಡೆಯದಿದ್ದರೂ, ಉಪನ್ಯಾಸಕರು ಇರಲಿದ್ದಾರೆ. ರಜೆ ನೀಡಿದರೆ ವಿದ್ಯಾರ್ಥಿಗಳು ಹೆಚ್ಚು ಓದುವುದಿಲ್ಲ. ಸ್ಟಡಿ ಹಾಲಿಡೇಯಲ್ಲಿ ಟೈಮ್ ಪಾಸ್ ಗೆ ಬೇರೆ ಕೆಲಸ ಮಾಡುತ್ತಾರೆ. ಹೀಗಾಗಿ ರಜೆ ನೀಡದೆ ಕಾಲೇಜಿಗೆ ಬರುವಂತೆ ಸೂಚಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ