ದೀಪಾವಳಿ, ಯುಗಾದಿ, ನವರಾತ್ರಿ ಹಬ್ಬಗಳಂಥ ಸಂದರ್ಭಗಳಲ್ಲಿ ಖರೀದಿಸುವ ಡ್ರೆಸೆಸ್ ಎಂದೂ ಔಟ್ ಆಫ್ ಫ್ಯಾಷನ್ ಆಗುವುದೇ ಇಲ್ಲ. ಇದರ ಬಗ್ಗೆ ತಿಳಿಯೋಣವೇ....?
ಪ್ರಮುಖ ಹಬ್ಬಗಳಾದ ದೀಪಾವಳಿ, ಯುಗಾದಿ, ನವರಾತ್ರಿಗಳಂಥ ಫೆಸ್ಟಿವ್ ಸೀಸನ್ ನಲ್ಲಿ ಪ್ರತಿಯೊಬ್ಬ ಹೆಂಗಸರೂ ಎಥ್ನಿಕ್ ಔಟ್ ಫಿಟ್ಸ್ ಅಂದ್ರೆ ಸಾಂಪ್ರದಾಯಿಕ ಉಡುಗೆಗಳನ್ನೇ ಬಯಸುತ್ತಾರೆ. ಯಾವುದೇ ಹೊಸ ಫ್ಯಾಷನ್ ಬಂದಾಗಲೂ ಅದನ್ನು ಕೊಳ್ಳಲು ಮಾರ್ಕೆಟ್ ನಲ್ಲಿ ಬಹಳ ಬೇಡಿಕೆ ಇರುತ್ತದೆ. ಆದರೆ ಫೆಸ್ಟಿವಲ್ ಸೀಸನ್ ಮುಗಿಯುತ್ತಿದ್ದಂತೆ ಈ ಔಟ್ ಫಿಟ್ಸ್ ಒಮ್ಮೆ ಬೀರು ಸೇರಿಬಿಟ್ಟರೆ ಮತ್ತೆ ಹೊರಬರುವುದೇ ಅಪರೂಪ.
ಇನ್ನೊಂದೆಡೆ ಯಾವುದೇ ಫಂಕ್ಷನ್, ಕಿಟಿ ಪಾರ್ಟಿಗಳಿಗೆ ಮತ್ತೆ ಮತ್ತೆ ಅವೇ ಡ್ರೆಸ್ ಧರಿಸಿ ಹೋಗಲಿಕ್ಕೂ ಮುಜುಗರ ಎನಿಸುತ್ತದೆ. ಕೆಲವರು ಇದನ್ನು ಡೌನ್ ಮಾರ್ಕೆಟ್ ಫ್ಯಾಷನ್ ಸೆನ್ಸ್ ಎಂದೂ ಆಡಿಕೊಳ್ಳುತ್ತಾರೆ. ಧರಿಸಿದ್ದನ್ನೇ ಮತ್ತೆ ಮತ್ತೆ ಧರಿಸಲು ಎಂಥವರಿಗೂ ಬೋರ್ ಆಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಏನಾದರೂ ಹೊಸತನ್ನು ಟ್ರೈ ಮಾಡಬಯಸುತ್ತಾರೆ. ಯಾರು ಅತಿ ಶ್ರೀಮಂತರೋ, ಇಂಥ ಡ್ರೆಸೆಸ್ ಧರಿಸಿ ಸಾಕಾದಾಗ, ಯಾರಾದರೂ ಬಡವರಿಗೆ ಕೊಟ್ಟು ಬಿಡುತ್ತಾರೆ.
ಈ ದುಬಾರಿ ಡ್ರೆಸೆಸ್ ಕೊಳ್ಳಲು ಖರ್ಚು ಮಾಡಿದ ಹಣಕ್ಕೆ ನಾವು ನ್ಯಾಯ ಅಂತೂ ಒದಗಿಸಬೇಕಲ್ಲವೇ? ನೀವು ಇಂಥ ಡ್ರೆಸ್ ಗಳಿಗೆ ಮಾಡಿದ ಹಣ ವಸೂಲ್ ಮಾಡಬಯಸಿದರೆ, ನೀವು ಈ ಡ್ರೆಸ್ಸುಗಳನ್ನು ಗರಿಷ್ಠ ಸಲ ಧರಿಸಿ ಸವೆಸಬೇಕಷ್ಟೆ. ಆದರೆ ಇನ್ನು 3-4 ತಿಂಗಳಲ್ಲಿ, 5-6 ಬಾರಿ ಧರಿಸಿ ಎತ್ತಿಟ್ಟರೂ, ಬೇಗ ಔಟ್ ಆಫ್ ಫ್ಯಾಷನ್ ಆಗಿಬಿಡುತ್ತವೆ. ಹೀಗಾಗಿ ಇಂಥ ಸಾಂಪ್ರದಾಯಿಕ ಉಡುಗೆಗಳಿಗೆ ಏಕ್ ದಂ ಹೊಸ ಲುಕ್ ನೀಡುವಂಥ ಏನಾದರೂ ಹೊಸ ಉಪಾಯ ಹುಡುಕಬೇಕಷ್ಟೆ.
ಇದಕ್ಕೆ ಉತ್ತಮ ವಿಧಾನ ಎಂದರೆ, ಎಥ್ನಿಕ್ ಔಟ್ ಫಿಟ್ಸ್ ಗೆ ವೆಸ್ಟರ್ನ್ ಟಚ್ ನೀಡಿ ಅವುಗಳ ಲುಕ್ ಬದಲಾಯಿಸಬೇಕು. ಇದರಿಂದ ಧರಿಸುವವರಿಗೆ ಬೋರಿಂಗ್‌ಎನಿಸುವುದಿಲ್ಲ. ಬನ್ನಿ, ಯಾವ ಉಪಾಯ ಅನುಸರಿಸಿ ಇಂಥವನ್ನು ಬದಲಾಯಿಸಬಹುದೆಂದು ತಿಳಿಯೋಣವೇ :
ಸೀರೆ ಜೊತೆ ಜೀನ್ಸ್
ಇದೇನು ವಿಚಿತ್ರ ಎಂದುಕೊಂಡಿರಾ? ತಮ್ಮ ವಾರ್ಡ್ ರೋಬ್ ಗೆ ಸೀರೆ ಬೇಡ ಎನ್ನುವ ಹೆಂಗಸರೇ ಇಲ್ಲ. ಹೀಗಾಗಿ ಸೀರೆ ಜೊತೆ ಪೆಟಿಕೋಟ್ ಯಾ ಶೇಪ್ ವೇರ್ ಚೆನ್ನಾಗಿ ಹೊಂದುತ್ತದೆ. ಈ ರೀತಿ ಒಂದೇ ತರಹ ಸೀರೆ ಉಟ್ಟು ಉಟ್ಟೂ ಬೇಸರವಾಗಿದ್ದರೆ, ಈಗ ಹೊಸತು ಟ್ರೈ ಮಾಡಬಯಸಿದರೆ, ಸೀರೆ ಜೊತೆ ಜೀನ್ಸ್ ಕಾಂಬಿನೇಶನ್ ಟ್ರೈ ಮಾಡಿ ನೋಡಿ! ಇದರಿಂದ ನಿಮಗೆ ಯುನಿಕ್ ಸ್ಟೈಲ್ ಸಿಗುತ್ತದೆ. ಇಲ್ಲಿ ನೀವು ಜೀನ್ಸ್ ನ್ನು ಲೆಗ್ಗಿಂಗ್ ಜೊತೆ ಚೇಂಜ್ ಮಾಡಿಕೊಳ್ಳಬಹುದು. ಅದೇ ತರಹ ಬ್ಲೌಸ್ ನ್ನು ಸಹ ಕ್ರಾಪ್ ಟಾಪ್ ಮಾಡಿ ಧರಿಸಬಹುದು.
ಎಕ್ಸ್ ಟ್ರಾ ಲುಕ್ ನೀಡಲು ನೀವು ಬೆಲ್ಟ್ ಸಹ ಟ್ರೈ ಮಾಡಬಹುದು. ಜ್ಯೂವೆಲರಿಗಾಗಿ ಗೋಲ್ಡನ್ ಯಾ ಆಕ್ಸಿಡೈಸ್ಡ್ ಜ್ಯೂವೆಲರಿ ಜೊತೆ ಮಾಡಿಕೊಳ್ಳಿ. ಇದರ ಜೊತೆಗೆ ಹೈ ಹೀಲ್ಸ್ ನಿಮಗೆ ಎಲಿಗೆಂಟ್ ಲುಕ್ಸ್ ನೀಡುತ್ತದೆ. ನಿಮ್ಮ ಹೈಟ್ ಉತ್ತಮ ಎನಿಸಿದರೆ, ಫ್ಲಾಟ್ ಸ್ಲಿಪರ್, ಸ್ಯಾಂಡಲ್ಸ್, ಶೂ ಸಹ ಟ್ರೈ ಮಾಡಬಹುದು.





