ಭಾರತದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, 11 ರಾಜ್ಯಗಳ 46 ಆಸ್ಪತ್ರೆಗಳಲ್ಲಿ ದಾಖಲಾದ ಶೇ.67ರಷ್ಟು ರೋಗಿಗಳಲ್ಲಿ ಡೀಪ್ ಲೇನ್ ಥ್ರಾಂಬೋಸಿಸ್ (ಡಿವಿಟಿ)ನ ಲಕ್ಷಣಗಳು ಕಂಡುಬಂದಿವೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಇಂತಹ ರೋಗಿಗಳ ಸಂಖ್ಯೆ ಹೆಚ್ಚು ಎನ್ನುವುದೂ ಕಂಡುಬಂದಿದೆ. ಸಮೀಕ್ಷೆಯಿಂದ ತಿಳಿದುಬಂದ ಸಂಗತಿಯೆಂದರೆ, ಡಿವಿಟಿಯಿಂದ ಸೋಂಕಿಗೀಡಾದ ರೋಗಿಗಳ ವಯಸ್ಸು 40-70 ವಯಸ್ಸಿನೊಳಗಿತ್ತು.
ಸಮೀಕ್ಷೆಯಲ್ಲಿ ಕಂಡುಬಂದ ಮತ್ತೊಂದು ವಿಷಯವೆಂದರೆ, ಈ ರೋಗದಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಭಾರತದಲ್ಲಿ ಕಡಿಮೆ ಎಂಬಂತೆ ಪರಿಗಣಿಸಲಾಗಿದೆ. ಏಕೆಂದರೆ ಶೇ.80ರ ತನಕ ಇದರ ಲಕ್ಷಣಗಳು ಅರಿವಿಗೇ ಬರುವುದಿಲ್ಲ. ಇದು ಗಂಭೀರ ರೂಪ ಪಡೆದುಕೊಳ್ಳಬಹುದು. ಆದರೆ ಅದು ಗುಣಪಡಿಸಲಾಗದ ರೋಗ ಏನಲ್ಲ. ಆದರೆ ಅದಕ್ಕಾಗಿ ಎಚ್ಚರದಿಂದಿರಬೇಕು ಮತ್ತು ಈ ರೋಗದ ಕುರಿತಂತೆ ಮಾಹಿತಿ ಪಡೆದುಕೊಳ್ಳಬೇಕು.
ಡೀಪ್ ಲೇನ್ ಥ್ರಾಂಬೋಸಿಸ್
ದೇಹದ ಕೆಳ ಭಾಗಗಳಾದ ಕಿಬ್ಬೊಟ್ಟೆಯ ಪಕ್ಕದ ಮೂಳೆ, ತೊಡೆ ಹಾಗೂ ಪಾದದ ಪ್ರಮುಖ ರಕ್ತನಾಳಗಳಲ್ಲಿ ಯಾವುದೋ ಕಾರಣದಿಂದ ರಕ್ತ ಗರಣೆಗಟ್ಟುವುದರಿಂದಾಗಿ ಡಿ.ವಿ.ಟಿಯ ಸಮಸ್ಯೆ ಉತ್ಪನ್ನವಾಗುತ್ತದೆ. ರಕ್ತ ಗರಣೆಗಟ್ಟುವಿಕೆಯಿಂದಾಗಿ ರಕ್ತನಾಳಗಳು ದೇಹದ ಕೆಳಭಾಗದಿಂದ ರಕ್ತವನ್ನು ಹೃದಯದ ತನಕ ತಲುಪಿಸುವುದಿಲ್ಲ. ಈ ಕಾರಣದಿಂದ ಸಾಧಾರಣ ನೋವು, ಊತ ಹಾಗೂ ಪಾದಗಳಲ್ಲಿ ಬಿಸಿಯ ಅನುಭೂತಿ ಉಂಟಾಗುತ್ತದೆ. ಒಂದುವೇಳೆ ರಕ್ತದ ಗರಣೆಗಳು ಯಾವುದೊ ಕಾರಣದಿಂದ ಒಡೆದು ಬೇರೆ ರಕ್ತನಾಳಗಳ ಮುಖಾಂತರ ಶ್ವಾಸಕೋಶದ ನಾಳದಲ್ಲಿ ಹೊರಟುಹೋಗುತ್ತವೆ. ಇದರಿಂದಾಗಿ ಸಾಕಷ್ಟು ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರಾಣಕ್ಕೆ ಕುತ್ತು ಉಂಟಾಗುವ ಸಾಧ್ಯತೆಯೂ ಇರುತ್ತದೆ.
ಡಿವಿಟಿಗೆ ಏನೇನು ಕಾರಣ?
ಈ ರೋಗದಿಂದ ಸೋಂಕಿಗೀಡಾಗಲು ಕೆಲವು ಮುಖ್ಯ ಕಾರಣಗಳೆಂದರೆ ದೇಹದ ಕೆಳಭಾಗದಲ್ಲಿ ಗಂಭೀರ ಏಟು ತಗುಲಿರುವುದು ಅಥವಾ ಫ್ರ್ಯಾಕ್ಚರ್ ಆಗಿದ್ದರೆ ರಕ್ತನಾಳಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅದರಲ್ಲಿ ರಕ್ತದಲ್ಲಿ ಗರಣೆಗಟ್ಟುವ ಸಾಧ್ಯತೆ ಹೆಚ್ಚುತ್ತ ಹೋಗುತ್ತದೆ.
ಒಂದು ವೇಳೆ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದರೆ, ಆಗಲೂ ಗರಣೆಗಟ್ಟು ಅಪಾಯ ಹೆಚ್ಚುತ್ತದೆ.
ಅಕಾಲಿಕ ಹೆರಿಗೆ ಅಥವಾ ಶಸ್ತ್ರಚಿಕಿತ್ಸೆಯ ಮುಖಾಂತರ ಮಗುವಿಗೆ ಜನನ, ಸಂತಾನ ನಿಯಂತ್ರಣ ಮಾತ್ರೆ ಸೇವನೆಯಿಂದಲೂ ರಕ್ತ ಗರಣೆಗಟ್ಟಬಹುದು.
ಡಿ.ವಿ.ಟಿ.ಯ ಲಕ್ಷಣಗಳು
60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಈ ರೋಗ ಸಾಮಾನ್ಯ ಎಂದು ಹೇಳಲಾಗುತ್ತದೆ. ಈ ಸೋಂಕಿಗೆ ತುತ್ತಾಗುವ ಜನರಲ್ಲಿ ಕೆಳಕಂಡ ಲಕ್ಷಣಗಳು ಕಂಡುಬರಬಹುದು.
ಯಾವುದೇ ಒಂದು ಕಾಲಿನ ತ್ವಚೆಯ ಬಣ್ಣ ಮೇಲಿಂದ ಮೇಲೆ ಬದಲಾಗುತ್ತಾ ಇರುತ್ತದೆ. ಅದು ಒಮ್ಮೆ ಕೆಂಪು, ನೀಲಿ ಅಥವಾ ಬಿಳಿ ಬಣ್ಣ ತಾಳಬಹುದು.
ಕಾಲಿನಲ್ಲಿ ನೋವು ಶುರುವಾದಾಗ ಅದು ಅಸಹನೀಯ ಎನಿಸತೊಡಗುತ್ತದೆ. ಕಾಲುಗಳನ್ನು ಮಡಚಿದಾಗ ಆ ನೋವಿನ ಅನುಭೂತಿ ಹೆಚ್ಚು ಅರಿವಿಗೆ ಬರುತ್ತದೆ.
ಕಾಲಿನ ಸ್ನಾಯುಗಳಲ್ಲಿ ಎಳೆತ ಹಾಗೂ ಬಿಗಿದಂತಾಗುವುದು ಮತ್ತು ರಾತ್ರಿ ಹೊತ್ತು ಈ ನೋವು ಅತಿಯಾಗಿರುವುದು.
ಯಾವ ರೀತಿಯ ಪರೀಕ್ಷೆ ಅತ್ಯಶ್ಯಕ?
ಮೇಲ್ಕಂಡ ಲಕ್ಷಣಗಳಲ್ಲಿ ನಿಮಗೆ ಯಾವುದಾದರೂ ಲಕ್ಷಣಗಳು ಗೋಚರವಾದರೆ ವೈದ್ಯರ ಸಲಹೆ ಪಡೆಯಿರಿ ಹಾಗೂ ಅಗತ್ಯ ಕಂಡಲ್ಲಿ ಕೆಳಕಂಡ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.