ಯಾವುದೇ ಒಬ್ಬ ಸ್ತ್ರೀ ಎಲ್ಲಿಯವರೆಗೆ ಸುಂದರ ಎಂದು ಹೇಳಲಾಗುದಿಲ್ಲವೆಂದರೆ, ಅವಳು ಮಾನಸಿಕವಾಗಿ ಅಥವಾ ಆಂತರಿಕವಾಗಿ ಬಲಿಷ್ಠವಾಗಿರುವತನಕ. ಹಾಲಿವುಡ್‌ ನಟಿಯರ ಜಿಮ್ ಫ್ರೀಕ್‌ ನೆಸ್‌ ಎಲ್ಲರಿಗೂ ಗೊತ್ತಿರುವುದೇ. ಹೆಸರಾಂತ ನಟಿಯರಾದ ಜೆಸ್ಸಿಕಾ ಅಲ್ಬಾ, ಜೆನಿಫರ್‌ ಗಾರ್ನರ್‌ ಮತ್ತು 76 ವರ್ಷದ ಜೆನ್‌ ಫೆಬಿದಾ ಸಾಕಷ್ಟು ಹೆವಿವೇಟ್‌ ಎಕ್ಸರ್‌ ಸೈಜ್‌ಮಾಡುತ್ತಾರೆ. ಹೀಗಾಗಿ ಅವರ ಸೌಂದರ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ.

ನಮ್ಮ ದೇಶದಲ್ಲೂ ಫ್ಯಾಷನ್‌ ಹಾಗೂ ಬಾಲಿವುಡ್‌ ಕ್ಷೇತ್ರದಲ್ಲೂ ಈ ಪರಂಪರೆ ಚಾಲ್ತಿಯಲ್ಲಿದೆ. ಪ್ರತಿಯೊಬ್ಬ ನಟಿಯರು ಟಿ.ವಿ ತಾರೆಯರು ತಮ್ಮ ದೈನಂದಿನ ದಿನಚರಿಯಲ್ಲಿ 12 ಗಂಟೆ, ಜಿಮ್ ಗಾಗಿ ವಿನಿಯೋಗಿಸುತ್ತಾರೆ. ಅದರಲ್ಲಿ ಸೈಕ್ಲಿಂಗ್‌, ಜಾಗಿಂಗ್‌, ಹಗುರ ವ್ಯಾಯಾಮಗಳಷ್ಟೆ ಸೇರಿಲ್ಲ ವೇಟ್‌ ಲಿಫ್ಟಿಂಗ್‌ ನಂತಹ ಮಸಲ್ ಬಿಲ್ಡಿಂಗ್‌ ಎಕ್ಸರ್‌ ಸೈಜ್‌ಗಳು ಕೂಡ ಸೇರಿವೆ. ಅದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ `ಪೈಯೋಕ್ಸಿಂಗ್‌' ಎಂಬ ಹೊಸ ಶಬ್ದ ಸೇರಿಕೊಂಡಿದೆ. ಇದರಲ್ಲಿ ಮಸಲ್ ಬಿಲ್ಡಿಂಗ್‌ ಎಕ್ಸರ್ ಸೈಜ್‌ ಹಾಗೂ ಬಾಕ್ಸಿಂಗ್‌ಗಳು ಸೇರಿಕೊಂಡಿವೆ.

ದೈಹಿಕ ಬಲ ಎಷ್ಟು ಅಗತ್ಯ ಹಾಗೂ ಇದು ಸೌಂದರ್ಯಕ್ಕೆ ಎಷ್ಟು ನಿಕಟತೆ ಹೊಂದಿದೆ ಎಂಬುದನ್ನು ತಿಳಿದುಕೊಳ್ಳಿ.

ಆರೋಗ್ಯ : ಆಧುನಿಕ ತಂತ್ರಜ್ಞಾನ ಮನುಷ್ಯನ ಜೀವನವನ್ನು ಇನ್ನಷ್ಟು ಆರಾಮದಾಯಕಗೊಳಿಸಿದೆ. ಮೊದಲು ಮಹಿಳೆಯರು ಎಲ್ಲ ಕೆಲಸಗಳನ್ನು ಕೈಗಳಿಂದ ಮಾಡುತ್ತಿದ್ದರು. ಈಗ ಅವೆಲ್ಲ ಕೆಲಸಗಳು ಯಂತ್ರದ ಮುಖಾಂತರ ಆಗುತ್ತಿವೆ. ಹೀಗಾಗಿ ವ್ಯಾಯಾಮ ಅತ್ಯವಶ್ಯಕವಾಗಿದೆ. ದೈಹಿಕ ಶ್ರಮದ ಕೊರತೆಯಿಂದಾಗಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿದೆ, ಅದುವೇ ಹೈ ಬ್ಲಡ್‌ ಪ್ರೆಶರ್‌ ಹಾಗೂ ಡಯಾಬಿಟಿಸ್‌ ಗಳಿಗೆ ಕಾರಣವಾಗಿವೆ.

40ನೇ ವಯಸ್ಸಿನ ಬಳಿಕ ಮುಟ್ಟಂತ್ಯದ ಸಮಯದಲ್ಲಿ ಸ್ತ್ರೀಯರಲ್ಲಿ ಆಸ್ಟೋಪೊರೊಸಿಸ್‌ನ ಸಮಸ್ಯೆ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಮೂಳೆಗಳ ಸಾಂಧ್ರತೆ ಕಡಿಮೆಯಾಗುವುದಾಗಿದೆ. ಕ್ಯಾಲ್ಸಿಯಂ ಮಾತ್ರೆಗಳು ಅಷ್ಟಿಷ್ಟು ನಿರಾಳತೆ ಕೊಡಬಹುದು. ಆದರೆ ನಿರಂತರ ಸೇವನೆಯಿಂದಾಗಿ ಅದು ಮೂತದ್ರವ ಹರಳುಗಳ ಉತ್ಪತ್ತಿಗೆ ಕಾರಣವಾಗಬಹುದು. ಅದಕ್ಕೆ ವೇಟ್‌ ಲಿಫ್ಟಿಂಗ್‌ ಒಂದು ಅತ್ಯುತ್ತಮ ಪರ್ಯಾಯವಾಗಿದೆ.

ಮಾನಸಿಕ ಆರೋಗ್ಯ : ನಿಯಮಿತ ವ್ಯಾಯಾಮದಿಂದ ದೇಹಕ್ಕೆ ಹೆಚ್ಚುವರಿ ಕ್ಯಾಲೋರಿಯ ಅವಶ್ಯಕತೆ ಹೆಚ್ಚುತ್ತದೆ. ಅದರಿಂದಾಗಿ ದೇಹದಲ್ಲಿ ರಕ್ತದ ಪ್ರವಾಹ ಹೆಚ್ಚುತ್ತದೆ ಮತ್ತು ಒಳ್ಳೆಯ ನಿದ್ರೆ ಬರುತ್ತದೆ. ಒಳ್ಳೆಯ ನಿದ್ರೆ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಒಳ್ಳೆಯ ನಿದ್ರೆಯಿಂದ ಅರ್ಧದಷ್ಟು ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ನಿಯಮಿತ ವರ್ಕ್‌ ಔಟ್‌ ಟೆನ್ಶನ್‌ ಕಡಿಮೆ ಮಾಡಲು ನೆರವಾಗುತ್ತದೆ.

ಹಾರ್ವರ್ಡ್ ಸ್ಕೂಲ್ ‌ಆಫ್‌ ಪಬ್ಲಿಕ್‌ ಹೆಲ್ಚ್ ನ ಸಂಶೋಧನೆಯ ಪ್ರಕಾರ ನಿಯಮಿತ ವ್ಯಾಯಾಮದಿಂದ ಡಿಪ್ರೆಶನ್‌ ಶೇ.26ರಷ್ಟು ಪ್ರಮಾಣದಲ್ಲಿ ಕಡಿಮೆಯಾಗಲು ನೆರವಾಗುತ್ತದೆ. ಇದು `ಅಟೆನ್ಶನ್‌ ಡೆಫಿಸಿಟಿ ಹೈಪರ್‌ ಆ್ಯಕ್ಟಿವಿಟಿ ಸಿಂಡ್ರೋಮ್' ಎಂಬ ಮಾನಸಿಕ ರೋಗದ ಚಿಕಿತ್ಸೆಯಲ್ಲಿ ಬಳಸಲ್ಪಡುವ ಔಷಧಿ ರ್ಯಾಟೆನಿ ‌ಹಾಗೂ ಎನಾಡ್ರೋಲ್ ‌ಎಂಬ ಔಷಧಿಗಳಂತೆ ಕೆಲಸ ಮಾಡುತ್ತದೆ. ಈ ರೋಗ ಮುಖ್ಯವಾಗಿ ಮಕ್ಕಳು ಹಾಗೂ ಹದಿ ವಯಸ್ಸಿನವರನ್ನು ಬಲಿಪಶುವಾಗಿಸುತ್ತದೆ. ವರ್ಕ್‌ಔಟ್‌ ನಿಂದ ಡೊಪಾಮೈನ್‌ ಮತ್ತು ಸೆರಾಟೊನಿನ್‌ ಹಾರ್ಮೋನುಗಳ ಸ್ರಾವ ಹೆಚ್ಚುತ್ತದೆ. ಅವು ವ್ಯಕ್ತಿಯನ್ನು ಖುಷಿಯಿಂದಿಡುತ್ತವೆ ಜೊತೆಗೆ ಸಕಾರಾತ್ಮಕ ಯೋಚನೆಯನ್ನು ಹೆಚ್ಚಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ