ಕೊರೋನಾದಿಂದ ದೇಶವೆಲ್ಲಾ ಲಾಕ್‌ ಡೌನ್‌ ಆಗಿ ತತ್ತರಿಸಿತ್ತು. ಎಲ್ಲರೂ ಮನೆಯಲ್ಲೇ ಇರಿ ಎಂದು ಸಾರಿ ಸಾರಿ ಹೇಳುತ್ತಿದ್ದರು. ಮನೆ ಮಂದಿಯೆಲ್ಲಾ ಮನೆಯಲ್ಲೇ ಇರುತ್ತಿದ್ದರಿಂದ ಗೃಹಿಣಿಯರಿಗೆ ಕೆಲಸ ಜಾಸ್ತಿ. ಅಂದರೆ ಅಡುಗೆಮನೆಯಲ್ಲಿ ಬಹಳ ಬಿಝಿ. ಲಾಕ್ ಡೌನ್‌ನಿಂದ ಕೆಲವರು ಹಪ್ಪಳ, ಸಂಡಿಗೆ ಮಾಡಿದರೆ ಕೆಲವರು ಮನೆಗಳಲ್ಲಿ  ವಿಧ ವಿಧದ ಅಡುಗೆಗಳು. ಹೊರಗಡೆ ಜಂಕ್‌ ತಿನ್ನಲು ಆಗದ ಕಾರಣ ಮನೆಯಲ್ಲೇ ತಯಾರಿ. ಹೀಗಾಗಿ ಮೂರು ಹೊತ್ತು ತಿನ್ನುವುದಕ್ಕೆ ಬದಲಾಗಿ ಕೆಲವು ಬಾರಿ ನಾಲ್ಕು ಹೊತ್ತು ತಿನ್ನುತ್ತಿದ್ದುದೂ ಉಂಟು. ಸಂಜೆಯಾದರೆ ಬಜ್ಜಿ, ಬೋಂಡಾ, ಮಸಾಲಾವಡೆ, ಪಾನಿಪೂರಿ, ಮಸಾಲಾ ಪೂರಿ.... ಹೀಗೆ ಹೇಳುತ್ತಾ ಹೋದರೆ ಲಿಮಿಟ್‌ ಇಲ್ಲ. ಮಹಿಳೆಯರು ತಮ್ಮ ಹೊಸ ರುಚಿಯ ಪ್ರಯೋಗ ಮಾಡಲು ಇದು ಒಳ್ಳೆಯ ಅವಕಾಶ. ಪರಿಣಾಮ ಮನೆ ಮಂದಿಯ ತೂಕ ಹೆಚ್ಚಾಗುತ್ತಿತ್ತು. ಅಂದ ಮೇಲೆ ಈಗ ನಿಜವಾಗಲೂ ನಿಮ್ಮ ಡಯೆಟ್‌ ಬದಲಾಯಿಸು ಕಾಲ ಬಂದಿದೆ ಎಂದು ಅರ್ಥ. ಆದರೆ ಡಯೆಟ್‌ ಅಂದ ತಕ್ಷಣ ಮೂಗು ಮುರಿಯಬೇಕಾಗಿಲ್ಲ. ರುಚಿ ರುಚಿಯಾದ ಜಂಕ್‌ ಫುಡ್‌ ತಿನ್ನುವುದು ಯಾರಿಗೆ ಇಷ್ಟವಿಲ್ಲ? ಆದರೆ ಸೊಂಟದ ಸುತ್ತಳತೆ ಹೆಚ್ಚಾದಾಗ, ಹಾಕಿಕೊಳ್ಳುವ ಟಿಶರ್ಟ್‌ಬಿಗಿ ಎನಿಸಿದಾಗ ಗಾಬರಿಯಾಗಿಬಿಡುತ್ತದೆ. ಇದರ ಜೊತೆಗೆ ಬಿ.ಪಿ., ಶುಗರ್‌ ಎಲ್ಲದರ ಬಗ್ಗೆ ಯೋಚಿಸಿದಾಗ ಮೈ ನಡುಕವೇ ಬಂದುಬಿಡುತ್ತದೆ. ಇವೆಲ್ಲವನ್ನೂ ಒಂದು ಪಕ್ಕಕ್ಕಿಟ್ಟರೂ ಆರೋಗ್ಯ ಎಲ್ಲರಿಗೂ ಬಹಳ ಮುಖ್ಯ. ಸರಿಯಾದ ಆಹಾರ ಸೇವನೆ ನಮ್ಮ ದೇಹವನ್ನು ನೋಡುವುದಕ್ಕಷ್ಟೇ ಚಂದವಾಗಿಡುವುದಲ್ಲದೆ,  ದೇಹ ಹಗುರವಾಗಿ ಹಾಯಾಗಿರುತ್ತದೆ. ಅದಕ್ಕೆ ನಾವು ಅಷ್ಟೇನೂ ಕಷ್ಟಪಡಬೇಕಾಗಿಲ್ಲ. ಒಳ್ಳೆಯ ಆರೋಗ್ಯಕ್ಕೆ ವ್ಯಾಯಾಮವಷ್ಟೇ ಅಲ್ಲದೆ, ನಮ್ಮ ಆಹಾರ ಸೇವನೆ ಅರ್ಥಾತ್‌ ಡಯೆಟ್‌ನ ಮಾಡಿಫಿಕೇಶನ್‌, ಬದಲಾವಣೆಯೂ ಅಷ್ಟೇ ಮುಖ್ಯ. ನಾವೆಲ್ಲ ಅಂದುಕೊಳ್ಳುವಂತೆ ಆರೋಗ್ಯಕರ ಆಹಾರ ಸೇವನೆ ಎಂದಾಕ್ಷಣ ಎಲ್ಲದಕ್ಕೂ ಅದು ಬೇಡ, ಇದು ಬೇಡ ಎನ್ನುತ್ತಾರೆ ಎನ್ನುವ ಭಯ ಬೇಡ. ಆರೋಗ್ಯಕರ ಆಹಾರ ಸೇವನೆ ಅರ್ಥಾತ್‌ ಹೆಲ್ದಿ ಡಯೆಟ್‌ ಅಂದರೆ ಬಹಳಷ್ಟು ವಿಧಾನದ ಆಹಾರ ಸೇವನೆಗೆ ಅನುವು ಮಾಡಿಕೊಡುವುದೇ ಇದರ ಮೂಲ ತತ್ವ. ಏಕೆಂದರೆ ಬೇರೆ ಬೇರೆ ಆಹಾರದಿಂದ ವಿಧ ವಿಧವಾದ ಜೀವಸತ್ವ ದೊರೆಯುತ್ತದೆ.

ನೀವು ತೆಗೆದುಕೊಳ್ಳುವ ಆಹಾರದಿಂದ ಬರುವ ಕ್ಯಾಲೋರಿಗಳನ್ನು ಖರ್ಚು ಮಾಡುವಂತಿರಬೇಕು. ಆಗಲೇ ಸರಿಯಾದ ಸಮತೋಲನ ಅಂದರೆ ಬ್ಯಾಲೆನ್ಸ್ ಆಗಲು ಸಾಧ್ಯ. ಇಲ್ಲವಾದರೆ ದುಡಿದ ಹೆಚ್ಚಿನ ಹಣ ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಜಮೆಯಾಗುವಂತೆ ನಿಮ್ಮ ಶರೀರದಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಅದಕ್ಕೆ ಕೆಲವು ವಿಧಾನಗಳನ್ನು ಅನುಸರಿಸಬೇಕಷ್ಟೆ.

ಹೆಚ್ಚಿನ ನಾರಿನಂಶ ಇರುವ ಅಂದರೆ ಹೈಫೈಬರ್‌ ಫುಡ್ಸ್, ಹಣ್ಣುಗಳು, ತರಕಾರಿ ಮತ್ತು ಬೇಳೆಕಾಳುಗಳಿರುವ ಆಹಾರ ತೆಗೆದುಕೊಳ್ಳಿ. ಇವುಗಳಲ್ಲಿ ಹೆಚ್ಚು ಜೀವಸತ್ವವಿದ್ದು ಕಡಿಮೆ ಕ್ಯಾಲೋರಿಗಳಿರುತ್ತವೆ. ವಿಟಮಿನ್ಸ್, ಮಿನರಲ್ಸ್ ಮತ್ತು ಸಸ್ಯಜನ್ಯ ಕೆಮಿಕಲ್ಸ್ ಆರೋಗ್ಯಕ್ಕೆ ಅಗತ್ಯ.

ಹಸಿರು, ಕೆಂಪು ಮತ್ತು ಹಳದಿ ಬಣ್ಣದ ತರಕಾರಿ ಹಣ್ಣುಗಳು ನಿಮ್ಮ ಊಟದಲ್ಲಿರಲಿ. ಉದಾ. ಕ್ಯಾರೆಟ್‌, ಸೊಪ್ಪು, ಸಿಟ್ರಸ್‌ ಫ್ರೂಟ್ಸ್ ಅಂದರೆ ಕಿತ್ತಳೆ, ನಿಂಬೆ, ಮೂಸಂಬಿ.... ಇವುಗಳು ನಿಮ್ಮನ್ನು ರೋಗಗಳಿಂದ ದೂರವಿರಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ