ಶಿಶುವಿನ ಆರೈಕೆ ನಿಜಕ್ಕೂ ತಾಯಿ ತಂದೆಯರಿಗೆ ಒಂದು ದೊಡ್ಡ ಸವಾಲೇ ಸರಿ. ಆದರೆ ಇದರಲ್ಲಿನ ಒಂದು ಒಳ್ಳೆಯ ವಿಚಾರ ಅಂದ್ರೆ, ನಾವಿರುವ ಈ ಆಧುನಿಕ ಯುಗದಲ್ಲಿ ಈ ಕೆಲಸಕ್ಕೆ ನೆರವಾಗುವ ಹಲವಾರು ಉಪಕರಣಗಳಿವೆ. ನಮ್ಮಮ್ಮ, ಅಜ್ಜಿಯರ ಕಾಲಕ್ಕೆ ಇದು ಇರಲಿಲ್ಲ. ಇದರಿಂದ ನಿಮ್ಮ ಪೇರೆಂಟಿಂಗ್ ಸುಲಭ ಆಗುವುದಲ್ಲದೆ, ನಿಮ್ಮ ಕಂದನೂ ಸಹ ಹೆಚ್ಚಿನ ಖುಷಿ ಪಡುವಂತಾಗುತ್ತದೆ.
ಎಲೆಕ್ಟ್ರಿಕ್ ನೇಲ್ ಟ್ರಿಮ್ಮರ್
ಸಣ್ಣ ಮಕ್ಕಳ ಉಗುರು ಬಲು ಬೇಗ ಬೆಳೆಯುತ್ತದೆ. ಅಂಥ ನಾಜೂಕಾದ ಉಗುರನ್ನು ಕತ್ತರಿಸುವುದು ನಿಜಕ್ಕೂ ಹೆತ್ತವರಿಗೆ ಕಷ್ಟದ ಕೆಲಸವೇ ಸರಿ. ಮುಖ್ಯವಾಗಿ ಮಗು ಮೊದಲ 6 ತಿಂಗಳು ತಾಯಿಯ ಎದೆಹಾಲನ್ನೇ ಅಲಂಬಿಸಿರುವುದರಿಂದ, ಅದರಲ್ಲಿನ ಧಾರಾಳ ಕ್ಯಾಲ್ಶಿಯಂನಿಂದಾಗಿ ಮಗುವಿನ ಉಗುರು ಬೇಗ ಬೆಳೆಯುತ್ತದೆ. ಅದು ತನ್ನನ್ನು ತಾನೇ ಪರಚಿ ರಂಪ ಮಾಡಿಕೊಂಡರೆ ಕಷ್ಟ.
ಹೀಗಾಗಿ ಮಾರ್ಕೆಟ್ ನಲ್ಲಿ ಲಭ್ಯವಿರುವ ನೇಲ್ ಟ್ರಿಮ್ಮರ್ ನಿಮಗೆ ಬಲು ಉಪಯುಕ್ತ. ಇದರಿಂದ ನಿಮ್ಮ ಮಗುವಿನ ಉಗುರನ್ನು ನೀಟಾಗಿ ಕತ್ತರಿಸಲು, ಅದನ್ನು ಫೈಲ್ ಮಾಡಿ ಮೊಡಾಗಿಸಲು ಅನುಕೂಲ. ಮಗುವಿಗೆ ಏನೂ ತೊಂದರೆ ಆಗದು.
ಮಗುವನ್ನು ಮಲಗಿಸುವ ಮೆಶೀನ್
ಮಗುವನ್ನು ರಾತ್ರಿ ಹೊತ್ತು ಮಲಗಿಸುವುದು ದೊಡ್ಡ ಸವಾಲೇ ಸರಿ. ಪೇರೆಂಟ್ಸ್ ಗೆ ಈ ಕಷ್ಟ ನೀಗಿಸಲು ಲೈಟ್‌ಸೌಂಡ್ ಮೆಶೀನ್ ಇದೀಗ ಲಭ್ಯ. ಇದರಲ್ಲಿ ನೀವು ನಿಮ್ಮ ಮಗುವಿನ ಆಯ್ಕೆ ಪ್ರಕಾರ ಲೈಟ್‌ಸೌಂಡ್ ಆರಿಸಬಹುದು. ಇದರಿಂದ ನಿಮ್ಮ ಮಗು ರಾತ್ರಿ ಹೊತ್ತು ಆರಾಮವಾಗಿ ನಿದ್ರಿಸುತ್ತದೆ. ಇದರಲ್ಲಿ ಜಂಗಲ್ ಥೀಂನಿಂದ ಹಿಡಿದು ಎಷ್ಟೋ ಬಗೆಯ ಲೈಟ್‌ಸೌಂಡ್ ಥೀಂ ಲಭ್ಯ, ಇದರಿಂದ ನೀವು ಮನೆಯ 4 ಗೋಡೆಗಳ ಮಧ್ಯೆ ಪ್ರಕೃತಿಯ ರಮ್ಯ ವಾತಾವರಣ ಸೃಷ್ಟಿಸಬಹುದು.
ಫ್ರೆಶ್ ಫ್ರೂಟ್ ಫೀಡರ್
ನಿಮ್ಮ ಮಗುವಿಗೆ ಹಲ್ಲು ಮೂಡುತ್ತಿರುವ ಸಂದರ್ಭದಲ್ಲಿ, ಈ ಸಮಯ ನಿಮಗೂ, ಮಗುವಿಗೂ ತುಸು ಕಷ್ಟಕರ ಎನ್ನಬಹುದು. ಈ ಸಮಯದಲ್ಲಿ ಕಂಡದ್ದನ್ನು ಕಚ್ಚುವ ಮಗುವಿಗೆ ವಾಂತಿ, ಭೇದಿಯ ಕಾಟ ತಪ್ಪಿದ್ದಲ್ಲ. ಈ ಪ್ರಕ್ರಿಯೆ ಆರಾಮದಾಯಕ ಆಗಿರಲು, ಇದಕ್ಕಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಬಗೆಯ ಸಿಲಿಕಾನ್ ಟೀಥರ್ ಲಭ್ಯವಿವೆ. ಆದರೆ ಅದರಿಂದ ಇನ್ ಫೆಕ್ಷನ್ ಆದರೇನು ಗತಿ ಎಂದು ಹಿರಿಯರು ಚಿಂತಿಸುತ್ತಾರೆ. ಹೀಗಾಗಿ ಫ್ರೂಟ್ ಫೀಡರ್ ಈ ಸಂದರ್ಭಕ್ಕೆ ಉತ್ತಮ. ಇದು ಒಂದು ಉತ್ತಮ ಗ್ಯಾಜೆಟ್ ಆಗಿದ್ದು, ಮಗುವಿನ ಟೀಥಿಂಗ್ ಗೆ ನೆರವಾಗುವುದಲ್ಲದೆ, ಹಣ್ಣಿನ ಹೋಳು ಮಗು ಗಂಟಲಿಗೆ ಸಿಕ್ಕದಂತೆ ತಾಯಿ ಆರಾಮವಾಗಿ ತಿನ್ನಿಸಬಹುದು. ಹೀಗಾಗಿ ಇದು ಒಂದೇ ಕಲ್ಲಿಗೆ 2 ಹಕ್ಕಿ ಎಂಬಂತಾಯಿತು.
ಹಿಪ್ ಸೀಟ್ ಬೇಬಿ ಕ್ಯಾರಿಯರ್
ನೀವು ಹೊಸ ತಾಯಿ, ಜೊತೆಗೆ ಮಗು ಶೈಶಾವಸ್ಥೆಯಿಂದ ಬಾಲ್ಯಕ್ಕೆ ಇದೀಗ ಕಾಲಿಡುತ್ತಿದೆ ಎಂದಾಗ, ಈ ಸ್ಟೇಜ್ ನಲ್ಲಿ `ಹಿಪ್‌ಸೀಟ್ ಬೇಬಿ ಕ್ಯಾರಿಯರ್' ನಿಮಗೆ ಬಲು ಉಪಕಾರಿ. ನಾವು ಮಗುವನ್ನು ಮಡಿಲಿಗೆ ಹಾಕಿಕೊಂಡಾಗೆಲ್ಲ, ನಾವು ಸರಿಯಾದ ಪೋಸ್ಚರ್ ನಲ್ಲಿ ಕುಳಿತಿದ್ದೇವೋ ಇಲ್ಲವೋ ಎಂಬುದನ್ನೇ ಮರೆಯುತ್ತೇವೆ. ಎಷ್ಟೋ ಸಲ ತಾಯಿ, ಅಜ್ಜಿ ಮಗುವನ್ನು 1-2 ಗಂಟೆ ಕಾಲ ಮಡಿಲಲ್ಲಿ ಮಲಗಿಸಿಕೊಳ್ಳ ಬೇಕಾಗುತ್ತದೆ.