ಕೆಲವು ತಿಂಗಳ ಹಿಂದೆ 34 ವರ್ಷದ ಚೈತ್ರಾ ಹಾಗೂ 36 ವರ್ಷದ ರಾಜೇಶ್‌ದಂಪತಿಗಳು ಬಂಜೆತನ ನಿವಾರಣಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು. ಮದುವೆಯಾಗಿ 5 ವರ್ಷವಾದರೂ ಮಗು ಆಗದೇ ಇರುವುದು ಅವರಿಗೆ ಚಿಂತೆಯನ್ನು ಉಂಟು ಮಾಡಿತ್ತು.

ದಂಪತಿಗಳ ಜೊತೆ ಮಾತುಕತೆ ನಡೆಸಿದಾಗ, ಅವರು ಐಟಿ ಪ್ರೊಫೆಶನಿಸ್ಟ್ ಆಗಿದ್ದು, ತಮ್ಮ ವ್ಯಸ್ತ ದಿನಚರಿಯಿಂದಾಗಿ ಸಮರ್ಪಕ ಸಮಾಗಮ ಏರ್ಪಡದೇ ಇದ್ದುದರಿಂದ ಅವರು ಮಗುವಿನ ಸುಖದಿಂದ ವಂಚಿತರಾಗಿದ್ದರು. ವೈದ್ಯರು ಇನ್ನು ತಡಮಾಡುವುದು ಬೇಡವೆಂದು ಅವರಿಗೆ ಪರ್ಯಾಯ ಮಾರ್ಗದಲ್ಲಿ ಮಗುವನ್ನು ಪಡೆಯುವ ಬಗ್ಗೆ ವಿವರಿಸಿದರು.

ಕೃತಕ ಗರ್ಭಧಾರಣೆಯಿಂದ ಮಗು ಪಡೆಯಲು ದಂಪತಿಗಳು ಒಪ್ಪಿಗೆ ಸೂಚಿಸಿದರು. ವೈದ್ಯರು ಆಧುನಿಕ ತಂತ್ರಜ್ಞಾನದ ಮೂಲಕ ಆಕೆ ಗರ್ಭ ಧರಿಸುವಂತೆ ಮಾಡಿದರು. 3ನೇ ಋತುಚಕ್ರದಲ್ಲೇ ಆಕೆ ಗರ್ಭ ಧರಿಸಿದಳು. ಈಗ ಆಕೆ ಒಂದು ವರ್ಷದ ಆರೋಗ್ಯವಂತ ಮಗುವಿನ ತಾಯಿ.

ವಿಳಂಬ ವಿವಾಹ

ಚೈತ್ರಾಳಂತಹ ಅನೇಕ ಮಹಿಳೆಯರು ಮಗುವಿಗಾಗಿ ಪರಿತಪಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, 10ರಲ್ಲಿ 1 ಜೋಡಿ ಗರ್ಭಧಾರಣೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಾನಗರಗಳಲ್ಲಿ ಈ ಸಮಸ್ಯೆ ಗಂಭೀರ ರೂಪ ಪಡೆದುಕೊಳ್ಳುತ್ತ ಹೊರಟಿದೆ. ಇಬ್ಬರೂ ಉದ್ಯೋಗಸ್ಥರಾಗಿದ್ದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು.

ಈ ಸಮಸ್ಯೆಗೆ ಬೇರೆ ಬೇರೆ ಕಾರಣಗಳಿವೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಹಿಳೆಯರು ಉದ್ಯೋಗದ ಬಗ್ಗೆ ಅತಿಯಾದ ಕಾಳಜಿ ಹೊಂದಿದವರಾಗಿದ್ದಾರೆ. ತಮ್ಮನ್ನು ತಾವು ಉದ್ಯೋಗದಲ್ಲಿ ತೊಡಗಿಸಿಕೊಂಡು, ಒಂದು ಹಂತಕ್ಕೆ ತಲುಪಿದ ಬಳಿಕವೇ ಮದುವೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾರೆ. ಈ ಕಾರಣದಿಂದ ಅವರ ಮದುವೆ ತಡವಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಮಹಿಳೆಯರು ಮದುವೆ ಮಾಡಿಕೊಳ್ಳುವ ಹೊತ್ತಿಗೆ 30 ತಲುಪಿರುತ್ತಾರೆ.

ಮಹಿಳೆಯರ ದೇಹ ಯಾವ ರೀತಿ ರೂಪುಗೊಂಡಿರುತ್ತದೆ ಎಂದರೆ, ಸಂತಾನೋತ್ಪತ್ತಿಗೆ ಅರ್ಹ ಅಂಡಾಣುಗಳ ಸಾಮರ್ಥ್ಯ 30ರ ಬಳಿಕ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಲು ಮುಖ್ಯ ಕಾರಣವೇನೆಂದರೆ, ಆರಂಭಿಕ ಹಂತದಲ್ಲಿ ಮಹಿಳೆಯ ದೇಹದಲ್ಲಿ 3 ರಿಂದ 5 ಲಕ್ಷದವರೆಗೆ ಅಂಡಾಣುಗಳಿರುತ್ತವೆ. ಮುಟ್ಟಂತ್ಯ ತಲುಪುವಷ್ಟರ ಹೊತ್ತಿಗೆ ಎಲ್ಲ ಅಂಡಾಣುಗಳು ಕ್ರಮೇಣ ನಾಶವಾಗುತ್ತವೆ. 35ನೇ ವಯಸ್ಸಿನ ಹೊತ್ತಿಗೆ ಸಂತಾನೋತ್ಪತ್ತಿಯ ಸಾಮರ್ಥ್ಯ ಭಾರಿ ವೇಗದಲ್ಲಿ ಕುಸಿಯುತ್ತದೆ. ಇಂತಹ ಸ್ಥಿತಿಯಲ್ಲಿ ಅಂಡಾಣುಗಳ ಗುಣಮಟ್ಟ ಕುಸಿಯುವುದರಿಂದ ಬಹಳಷ್ಟು ಮಹಿಳೆಯರ ಗರ್ಭಧಾರಣೆಯಲ್ಲಿ ಸಮಸ್ಯೆ ಉಂಟಾಗುತ್ತದೆ.

ಜೀವನಶೈಲಿಯಲ್ಲಿ ಬದಲಾವಣೆ

ಈ ಶ್ರೇಣಿಯಲ್ಲಿ ಬರುವ ಹೆಚ್ಚಿನ ಜೋಡಿಗಳು `ಟೈಪ್‌ಎ' ವ್ಯಕ್ತಿತ್ವದವರಾಗಿರುತ್ತಾರೆ. ಅವರಲ್ಲಿ ಕೆಲವು ಮಹತ್ವದ ವಿಶೇಷತೆಗಳನ್ನು ಕಾಣಬಹುದಾಗಿದೆ. ಅಂತಹ ಕೆಲವು ವಿಶೇಷತೆಗಳೆಂದರೆ, ಅವರು ವರ್ಕೋಹಾಲಿಕ್‌ಆಗಿರುತ್ತಾರೆ. ಅತಿಯಾದ ಮಹತ್ವಾಕಾಂಕ್ಷೆ ಉಳ್ಳವರಾಗಿರುತ್ತಾರೆ. ಅವರು ಅಷ್ಟೇ ಬೇಗನೆ ದಿಗಿಲುಗೊಳ್ಳುತ್ತಾರೆ, ಒತ್ತಡಕ್ಕೊಳಗಾಗುತ್ತಾರೆ. ಯಶಸ್ವಿ ಗರ್ಭಧಾರಣೆಗಾಗಿ ದಂಪತಿಗಳು ಒತ್ತಡಮುಕ್ತರಾಗಿರುವುದು ಹಾಗೂ ನಿಯಮಿತವಾಗಿ ದೈಹಿಕ ಸಂಬಂಧ ಹೊಂದುವುದು ಅತ್ಯವಶ್ಯಕ.

ನಿಮ್ಮ ಕೆಲಸಕ್ಕೆ ಸಂಬಂಧಪಟ್ಟ ಜವಾಬ್ದಾರಿಗಳು ಮತ್ತು ಒತ್ತಡದ ಕಾರಣದಿಂದಾಗಿ ಇದು ಬಹುಶಃ ಸಾಧ್ಯವಾಗುವುದಿಲ್ಲ. ಇಂತಹ ಒತ್ತಡಮಯ ಜೀವನಶೈಲಿ ಬಹಳಷ್ಟು ಜನರನ್ನು ಧೂಮಪಾನ ಹಾಗೂ ಆಲ್ಕೋಹಾಲ್‌ನಂತಹ ಚಟಗಳಿಗೆ ತುತ್ತಾಗಿಸುತ್ತವೆ. ಇವು ಅವರ ವೀರ್ಯಾಣು ಮತ್ತು ಅಂಡಾಣುಗಳ ಗುಣಮಟ್ಟದಲ್ಲಿ ಕುಸಿತವನ್ನುಂಟು ಮಾಡಿ, ಸಂತಾನೋತ್ಪತ್ತಿಯನ್ನು ಇನ್ನೂ ಕಠಿಣಗೊಳಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ