ಪ್ರತಿ ಸಲ ನಾವು ಮಳೆಗಾಲದಲ್ಲಿ ಹೊಸ ಕರಿದ ವ್ಯಂಜನಗಳ ಮಜಾ ಪಡೆಯುತ್ತೇವೆ. ಈ ಬಾರಿ ಮಳೆಗಾಲದಲ್ಲಿ ನಮ್ಮ ಪರ್ಸನಾಲಿಟಿಯ ಬದಲಾವಣೆ ಬಗ್ಗೆ ಒಂದಿಷ್ಟು ಗಮನಹರಿಸೋಣವೇ? ನಿಮ್ಮ ಪರ್ಸನಾಲಿಟಿಗೆ ಹೊಸ ಆಯಾಮ ಕೊಡಲು, ನಿಮ್ಮ ಕೂದಲಿಗೆ ಡಿಫರೆಂಟ್‌ ಸ್ಟೈಲ್‌ನಲ್ಲಿ ಕಲರಿಂಗ್‌ ಮಾಡಿ.

ಸ್ಲೈಸಿಂಗ್‌ : ಕೂದಲನ್ನು ತೆಳ್ಳಗಿನ 12 ಲೇಯರ್ಸ್‌ ಆಗಿ ತೆಗೆದುಕೊಂಡು ಕಲರ್‌ ಮಾಡಿ. ಹೀಗೆ ಮಾಡುವುದರಿಂದ ಕಲರಿಂಗ್ ಕ್ವಾಲಿಟಿ ಚೆನ್ನಾಗಿರುವುದಲ್ಲದೆ, ಲುಕ್ಸ್ ಕೂಡ ಪೂರ್ತಿ ಬದಲಾದಂತೆ ತೋರುತ್ತದೆ.

ಚಂಕ್ಸ್ : ಚಂಕ್ಸ್ ಹೇರ್‌ ಆ್ಯಕ್ಸೆಸರೀಸ್‌ ಆಗಿ ಬಳಸುವುದು ಇತ್ತೀಚೆಗೆ ಫ್ಯಾಷನ್‌ ಆಗಿದೆ. ಇದರಲ್ಲಿ ಕೂದಲಿನ ಒಂದು ದಪ್ಪ ಭಾಗದಲ್ಲಿ ಅಡಗಿರುವ ಜಾಗದಲ್ಲಿ ಕಲರಿಂಗ್‌ ಮಾಡಬಹುದು. ಇದರಿಂದ ಕಲರ್‌ ಒಳಭಾಗದಿಂದ ಹೈಲೈಟ್‌ ಆಗುತ್ತದೆ. ನೀವು ನಿಮ್ಮನ್ನು ಬೋಲ್ಡ್ ಕಾನ್ಛಿಡೆಂಟ್‌ ಲುಕ್‌ನಲ್ಲಿ ನೋಡಬಯಸಿದರೆ, ಚಂಕ್ಸ್ ನಿಮ್ಮ ಸೂಕ್ತ ಆಯ್ಕೆ ಆಗಲಿದೆ.

ಫೆದರ್ಬ್ಲಾಕ್‌ : ಇದರಲ್ಲಿ ಒಳ ಕೂದಲಿನ ತುದಿಯ ಭಾಗಕ್ಕೆ ಕಲರ್‌ ಮಾಡಲಾಗುತ್ತದೆ. ಈ ಕಾರಣದಿಂದ ಇದು ಸ್ಟೈಲ್ ಲೇಯರ್ಸ್‌ನಲ್ಲಿ ಕಟ್‌ ಆದ ಕೂದಲಿಗೆ ಹೆಚ್ಚು ಶೋಭಿಸುತ್ತದೆ.

ಆಂಬ್ರೆ : ಯಾವ ಮಹಿಳೆಯರು ನ್ಯಾಚುರಲ್ ಲುಕ್ಸ್ ಜೊತೆ ಗ್ಲಾಮರ್‌ ಸಹ ಬಯಸುತ್ತಾರೋ ಅಂಥವರಿಗೆ ಈ ಟೆಕ್ನಿಕ್‌ ಚೆನ್ನಾಗಿ ಸೂಟ್‌ ಆಗುತ್ತದೆ. ಇದರಲ್ಲಿ ಮೇಲ್ಭಾಗದ ಕೂದಲಿಗೆ ಡಾರ್ಕ್‌ ಕಲರ್‌ ಇದ್ದು, ಕೆಳಗೆ ಇಳಿಯುತ್ತಿದ್ದಂತೆ ಲೈಟ್‌ ಆಗುತ್ತದೆ. ಎಷ್ಟೋ ಸಲ ಕೆಲವು ಮಹಿಳೆಯರು ತಮ್ಮ ಪ್ರೊಫೆಶನಲ್ ಕಾರಣ ತಮಗಾಗಿ ಬೋಲ್ಡ್ ಕಲರ್ಸ್‌ ಆರಿಸಲು ಆಗುವುದಿಲ್ಲ ಅಂಥವರಿಗೆ ಕಲರಿಂಗ್‌ನ ಈ ಟೆಕ್ನಿಕ್‌ ಬೆಸ್ಟ್ ಆಗುತ್ತದೆ.

ಹೇರ್ಕಲರ್ಸ್‌ : ಇಂಡಿಯನ್‌ ಟೋನ್‌ಗೆ ಸೂಟ್‌ ಆಗುವ ಮರ್ಸಾಲಾ ಟೋನ್‌ ಇಂದಿನ ಫ್ಯಾಷನ್‌ನಲ್ಲಿ ಇನ್‌ ಆಗಿದೆ. ಹೀಗಾಗಿ ಈ ಟೋನ್‌ನ್ನು ಹೇರ್‌ ಕಲರಿಂಗ್‌ಗಾಗಿ ಸಾಕಷ್ಟು ಬಳಸಲಾಗುತ್ತದೆ. ಮರ್ಸಾಲಾ ಮಾತ್ರವಲ್ಲದೆ ರೆಡ್‌, ಪಿಂಕ್‌, ಪರ್ಪಲ್ ಟೋನ್‌ ಸಹ ಇನ್‌ ಎನಿಸಿದೆ. ಬ್ರೌನ್‌ ಅಂತೂ ಎವರ್‌ ಗ್ರೀನ್‌ ಟೋನ್‌ ಎನಿಸಿದೆ. ಇತ್ತೀಚೆಗೆ ಈ ಟೋನ್‌ನಲ್ಲಿ ಡಾರ್ಕ್‌ ಚಾಕಲೇಟ್‌ ಬ್ರೌನ್ ಹಾಗೂ ಕ್ಯಾರೆಮಲ್ ಬ್ರೌನ್‌ ಶೇಡ್ಸ್ ಹೆಚ್ಚು ಜನಪ್ರಿಯ ಎನಿಸಿದೆ. ಹಾಗೆಯೇ ಪರ್ಮನೆಂಟ್‌ ಕಲರ್ಸ್‌ ಮಾತ್ರವಲ್ಲದೆ, ನೀವು ಟೆಂಪರರಿ ಹೇರ್‌ ಚಾಕ್ಸ್ ನಿಂದಲೂ ಕೂದಲನ್ನು ಕಲರ್‌ಫುಲ್ ಮಾಡಬಹುದು. ಈ ಚಾಕ್ಸ್ ಮಲ್ಟಿಪಲ್ ಕಲರ್‌ನಲ್ಲಿ ಸಿಗುತ್ತದೆ ಹಾಗೂ 3-4 ವಾಶ್‌ವರೆಗೂ ತಡೆಯುತ್ತದೆ.

ಬ್ಯಾಂಡ್‌ ಹೇರ್‌ ಕಲರಿಂಗ್‌ನ ಅಭಿಮಾನಿಗಳು ಸದಾ ಬ್ರಾಂಡೆಡ್‌ ಹೇರ್‌ ಕಲರನ್ನೇ ಬಳಸಬೇಕು. ಏಕೆಂದರೆ ಕೂದಲಿಗೆ ಸ್ಟೈಲಿಶ್ ಲುಕ್‌ ಕೊಡುವ ಜೊತೆಗೆ ಅದರ ಶಕ್ತಿ ಹಾಗೂ ನೈಸರ್ಗಿಕ ಹೊಳಪಿನತ್ತಲೂ ಗಮನ ಹರಿಸಬೇಕು.

ಪ್ರಮೀಳಾ

ಕಲರ್‌ಗೊಂಡ ಕೂದಲಿನ ಆರೈಕೆ ಕೂದಲಿಗೆ ಕಲರ್‌ ಹಚ್ಚಿದ ನಂತರ ತಿಂಗಳಲ್ಲಿ 2 ಸಲ ಒಂದು ಉತ್ತಮ ಹೇರ್‌ ಸೆಲೂನ್‌ಗೆ ಹೋಗಿ ಅಗತ್ಯ ಹೇರ್‌ಸ್ಪಾ ಮಾಡಿಸಿ. ಸ್ಪಾದಿಂದ ಕೂದಲು ಕೆಮಿಕಲಿ ಸ್ಟ್ರಾಂಗ್‌ ಆಗುತ್ತದೆ. ಇಷ್ಟು ಮಾತ್ರವಲ್ಲದೆ, ಕೂದಲನ್ನು ತೊಳೆಯಲು ಮೈಲ್ಡ್ ಶ್ಯಾಂಪೂ ಕಂಡೀಶನರ್‌ ಬಳಸಬೇಕು. ಇದು ಕೂದಲಿನ ಬಣ್ಣಕ್ಕೆ ಹಾನಿ ಮಾಡದಂತಿರಬೇಕು. ಜೊತೆಗೆ ಕಲರ್ಡ್‌ ಕೂದಲನ್ನು ಅತಿಯಾದ ಬಿಸಿಲು, ಮಾಲಿನ್ಯ ಇತ್ಯಾದಿಗಳಿಂದ ರಕ್ಷಿಸಬೇಕು. ಆಗ್ಗಾಗ್ಗೆ ಕೂದಲಿನ ಬಣ್ಣ ಬದಲಾಯಿಸಬಾರದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ